ನವದೆಹಲಿ(ಡಿ.20): ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಇದೀಗ ಬಜೆಟ್(budget ) ಮಂಡನೆಗೆ ತಯಾರಿ ನಡೆಸುತ್ತಿದೆ. ಕೊರೋನಾ ಹೊಡೆತೆ, ಓಮಿಕ್ರಾನ್ ಆತಂಕ, ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಅಡೆ ತಡೆ ಎದುರಿಸಿರುವ ಭಾರತಕ್ಕೆ ಹೊಸ ಚೈತನ್ಯ ಹಾಗೂ ಅಭಿವೃದ್ಧಿ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೆಲ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನಕ್ಕೂ ಮುನ್ನ ಖಾಸಗಿ ವಲಯದಿಂದ ಮಹತ್ವದ ಸಲಹೆ ಪಡೆಯಲು ಪ್ರಧಾನಿ ಮೋದಿ ಖಾಸಗಿ ವಲಯದ ಪ್ರಮುಖ ಕಂಪನಿಗಳು ಸಿಇಒ(leading CEOs of companies), ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಸೇರಿದಂತೆ ಪ್ರಮುಖರ ಜೊತೆ ಸತತ 2 ಗಂಟೆ ಸಂವಾದ ನಡೆಸಿದ್ದಾರೆ.
ಖಾಸಗಿ ವಲಯದ ಹಲವು ಕ್ಷೇತ್ರದ ಕಂಪನಿಗಳ ಸಿಇಓ ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಿದ್ದಾರೆ. ಆಟೋಮೊಬೈಲ್, ಟೆಲಿಕಾಂ, ಜವಳಿ, ಬ್ಯಾಕಿಂಗ್, ಮೂಲಸೌಕರ್ಯ, ತಂತ್ರಜ್ಞಾನ, ಆರೋಗ್ಯ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಕ್ಷೇತ್ರದ ಕಂಪನಿಗಳ ಪ್ರಮುಖರು ಮೋದಿ ಜೊತೆ ಚರ್ಚಿಸಿದ್ದಾರೆ. ಕಂಪನಿಗಳ ಪ್ರಮುಖರು ನೀಡಿದ ಸಲಹೆ ಸೂಚನೆಗಳನ್ನು(budget Inputs) ಆಧರಿಸಿ ಬಜೆಟ್ ತಯಾರಿಗೆ ಕೇಂದ್ರ ಮುಂದಾಗಿದೆ.
undefined
Government Stake in PSU Banks: ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿಗೆ ಮೋದಿ ಪ್ಲಾನ್: ಸರ್ಕಾರದ ಪಾಲು 26%?
ಪ್ರಧಾನಿ ಮೋದಿ ಜೊತೆಗೆ ಸಚಿವ ಪಿಯೂಷ್ ಗೊಯೆಲ್(piyush goyal) ಕೂಡ ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂವಾದಲ್ಲಿ ಕಳೆದೆರಡು ವರ್ಷದಲ್ಲಿ ಭಾರತದಲ್ಲಿನ ಕಂಪನಿಗಳು ಎದುರಿಸಿದ ಸವಾಲು ಹಾಗೂ ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಹೆಚ್ಚಳ, ವ್ಯಾಪಾರ ವಹಿವಾಟು ಹೆಚ್ಚಳಕ್ಕೆ ಸರ್ಕಾರದಿಂದ ಆಗಬೇಕಿರುವ ಕೆಲ ಕಾರ್ಯಗಳ ಕುರಿತು ಬೆಳಕು ಚೆಲ್ಲಲಾಗಿದೆ.
ಪ್ರಧಾನಿ ಮೋದಿ ಜೊತೆಗಿನ ಸಂವಾದದಲ್ಲಿ ಟಿಸಿಎಸ್ ಸಿಇಒ ಹಾಗೂ ಎಂಡಿ ರಾಜೇಶ್ ಗೋಪಿನಾಥ್, ಮಾರುತಿ ಸುಜುಕಿ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯುಕವಾ, ಟ್ರಾಕ್ಟರ್ಸ್ ಹಾಗೂ ಫಾರ್ಮ್ ಲಿಮಿಟೆಡ್ ಎಂಡಿ ಮಲ್ಲಿಕಾ ಶ್ರೀನಿವಾಸ್, ರಿನ್ಯೂ ಪವರ್ ಎಂಡಿ ಸುಮಂತ್ ಸಿನ್ಹಾ, ಅವಾಡ ಗ್ರೂಪ್ ಅಧ್ಯಕ್ಷ ವಿನೀತ್ ಮಿತ್ತಲ್, ಕೋಟಕ್ ಮಹೀಂದ್ರ ಬ್ಯಾಂಕ್ ಸಿಇಒ ಉದಯ್ ಕೋಟಕ್, ಸ್ಯಾಮ್ಸಂಗ್ ಸಿಇಒ ಮನು ಕಪೂರ್, ಒಯೋ ಸಿಇಒ ರಿತೇಶ್ ಅಗರ್ವಾಲ್ ಸೇರಿದಂತೆ ಪ್ರಮುಖ ಕಂಪನಿಗಳು ಸಿಇಒ, ವ್ಯವಸ್ಥಾಪಕ ನಿರ್ದೇಶಕರು ಪಾಲ್ಗೊಂಡಿದ್ದರು.
Ganga Expressway:36,230 ಕೋಟಿ ರೂ. ಮೌಲ್ಯದ ಯೋಜನೆಗೆ ಮೋದಿ ಶಿಲಾನ್ಯಾಸ!
ಸಭೆ ಬಳಿಕ ಕಂಪನಿಗಳ ಸಿಇಒ ಹಾಗೂ ಇತರ ಪ್ರಮುಖರು ಮಾಧ್ಯಮದ ಜೊತೆ ಸಂವಾದದ ಪ್ರಮುಖ ಅಂಶಗಳನ್ನು ತೆರೆದಿಟ್ಟರು. ಭಾರತದಲ್ಲಿನ ಸಂಶೋಧನೆ, ಅವಿಷ್ಕಾರಗಳಲ್ಲಿ ಭಾರತ ಇತರ ದೇಶಗಳನ್ನು ಮೀರಿಸಬೇಕು. ಯಾವುದೇ ಕ್ಷೇತ್ರದಲ್ಲಿನ ಕಂಪನಿಯಾಗಿರಬಹುದು, ಆದರೆ ವಿಶ್ವದ ರ್ಯಾಕಿಂಗ್‌ನಲ್ಲಿ ಟಾಪ್ 5 ಬರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದಕ್ಕಾಗಿ ಸರ್ಕಾರ ಎನು ಮಾಡಬೇಕು, ಖಾಸಗಿ ಕಂಪನಿಯಾಗಿ ಏನು ಮಾಡಬಹುದು ಅನ್ನೋದನ್ನೂ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಟಿಸಿಎಸ್ ಸಂಸ್ಥೆಯ ಸಿಇಒ ರಾಜೇಶ್ ಗೋಪಿನಾಥ್ ಹೇಳಿದ್ದಾರೆ.
ಪ್ರಧಾನಿ ಮೋದಿ ಜೊತೆಗಿನ ಸಂವಾದ ಅತ್ಯಂತ ಫಲಪ್ರದವಾಗಿದೆ. ಎಲ್ಲಾ ಕಂಪನಿಗಳ ಪ್ರಶ್ನೆ, ಸಮಸ್ಯೆ, ಮುಂದಿನ ವಿಷನ್ ಕುರಿತು ಮೋದಿ ತಾಳ್ಮೆಯಿಂದ ಕೇಳಿದ್ದಾರೆ. ಕಾರ್ಪೋರೇಟ್ ಇಂಡಿಯಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬರಬೇಕು. ಇದಕ್ಕಾಗಿ ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ. ಈ ಕುರಿತು ನಮ್ಮ ಸಲಹೆಗಳನ್ನು ಮೋದಿ ಪಡೆದುಕೊಂಡಿದ್ದಾರೆ ಎಂದು ಸಭೆಯ ಬಳಿಕ ರಿನ್ಯೂ ಪವರ್ ಎಂಡಿ ಸುಮಂತ್ ಸಿನ್ಹ ಹೇಳಿದ್ದಾರೆ.
ವಿಶ್ವದಲ್ಲಿನ ಟಾಪ್ ಕಂಪನಿಗಳಲ್ಲಿ ಭಾರತದ ಕಂಪನಿಗಳು ಸ್ಥಾನ ಪಡೆಯಬೇಕು. ಇದಕ್ಕಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ. ಕೈಗಾರಿಕೆ, ಭಾರತ ಖಾಸಗಿ ಕಂಪನಿಗಳು ವಿಶ್ವದಲ್ಲಿ ಅಗ್ರ ರ್ಯಾಂಕಿಂಗ್ ಪಡೆಯಲು ಸರ್ಕಾರದಿಂದ ಆಗಬೇಕಿರುವ ನೆರವಿನ ಕುರಿತು ಮೋದಿ ಮಾತನಾಡಿದ್ದಾರೆ. ನಮ್ಮ ಸಲಹೆಗಳನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ್ದಾರೆ ಎಂದು ಅವಾಡಾ ಗ್ರೂಪ್ ಚೇರ್ಮೆನ್ ವಿನೀತ್ ಮಿತ್ತಲ್ ಹೇಳಿದ್ದಾರೆ.