ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಭಾರತಕ್ಕೆ ರಷ್ಯಾದಿಂದ ಬಿಗ್ ಆಫರ್!

By Santosh NaikFirst Published Jun 23, 2022, 10:02 PM IST
Highlights

ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ತೆರೆಯುವ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಸೂಚನೆ ನೀಡಿದ್ದಾರೆ. ರಷ್ಯಾದ ಮಾರುಕಟ್ಟೆಯಲ್ಲಿ ಚೀನಾದ ಕಾರುಗಳು, ಉಪಕರಣಗಳು ಮತ್ತು ಹಾರ್ಡ್‌ವೇರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತರಲು ಸಹ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
 

ನವದೆಹಲಿ (ಜೂನ್ 23):  ಚೀನಾ (China) ಆಯೋಜಿಸಿರುವ ಎರಡು ದಿನಗಳ ಬ್ರಿಕ್ಸ್ (BRICS) ಶೃಂಗಸಭೆ  ಬುಧವಾರ ಆರಂಭವಾಗಿದೆ. ವರ್ಚುವಲ್ ಆಗಿ ನಡೆಯುತ್ತಿರುವ 14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin ) ದೊಡ್ಡ ಘೋಷಣೆಯನ್ನು ಮಾಡಿದ್ದಾರೆ. ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು (Indian Stores) ತೆರೆಯುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಪುಟಿನ್ ಹೇಳಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಪುಟಿನ್, ರಷ್ಯಾ ಮತ್ತು ಬ್ರಿಕ್ಸ್ ದೇಶಗಳ ವ್ಯಾಪಾರ ವ್ಯವಹಾರಗಳ (Trades) ನಡುವಿನ ಸಂಪರ್ಕಗಳು ಗಮನಾರ್ಹವಾಗಿ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ರಷ್ಯಾದಲ್ಲಿ ಭಾರತೀಯ ಮಳಿಗೆಗಳನ್ನು ತೆರೆಯುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಹಾಗಿದ್ದರೂ,  ರಷ್ಯಾದಲ್ಲಿ ಯಾವ ಭಾರತೀಯ ಮಳಿಗೆಗಳು ತೆರೆಯಲ್ಪಡುತ್ತವೆ ಎಂಬುದನ್ನು ಪುಟಿನ್ ಸ್ಪಷ್ಟವಾಗಿ ಹೇಳಿಲ್ಲ. ಇದರೊಂದಿಗೆ ಚೀನಾದ ಕಾರುಗಳು, ಉಪಕರಣಗಳು ಮತ್ತು ಹಾರ್ಡ್‌ವೇರ್‌ಗಳನ್ನು ರಷ್ಯಾದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಲು ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದರು. ಇದರೊಂದಿಗೆ ಬ್ರಿಕ್ಸ್ ರಾಷ್ಟ್ರಗಳಲ್ಲಿ ರಷ್ಯಾದ ಅಸ್ತಿತ್ವ ಹೆಚ್ಚುತ್ತಿದೆ.

ಬ್ರಿಕ್ಸ್ ದೇಶಗಳ ನಡುವಿನ ವ್ಯವಹಾರ ಶೇ.38ರಷ್ಟು ಹೆಚ್ಚಳ: 2022 ರ ಮೊದಲ ಮೂರು ತಿಂಗಳಲ್ಲಿ ರಷ್ಯಾ ಮತ್ತು ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರವು ಶೇಕಡಾ 38 ರಷ್ಟು ಹೆಚ್ಚಾಗಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಬ್ರಿಕ್ಸ್ ದೇಶಗಳೊಂದಿಗೆ ರಷ್ಯಾದ ವ್ಯಾಪಾರವು $ 45 ಶತಕೋಟಿಗೆ ಏರಿದೆ.

ರಷ್ಯಾದಿಂದ ಭಾರತ ಖರೀದಿ ಮಾಡುವ ತೈಲ ಆಮದಿನ (oil from Russia) ಪಾಲು ಒಟ್ಟು ಖರೀದಿಗಿಂತ ಎರಡು ಪ್ರತಿಶತಕ್ಕಿಂತ ಹೆಚ್ಚಿಲ್ಲದೆ ಇದ್ದ ನಡುವೆಯೂ, ರಷ್ಯಾದಿಂದ ಹೆಚ್ಚಿನ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ಅಮೆರಿಕ (USA) ಸೇರಿದಂತೆ ಪಾಶ್ಚಿಮಾತ್ಯ ದೇಶಗಳೊಂದಿಗಿನ ಅದರ ಸಂಬಂಧದ ಮೇಲೆ ಪರಿಣಾಮ ಬೀರಿದೆ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದಿಂದ ತೈಲ ಖರೀದಿ ನಿರ್ಧಾರವನ್ನು ಭಾರತವೂ ಸಮರ್ಥಿಸಿಕೊಂಡಿದೆ. ನಿರ್ಬಂಧಗಳ ಹೊರತಾಗಿಯೂ ಯುರೋಪ್ ರಷ್ಯಾದಿಂದ ತೈಲ ಮತ್ತು ಅನಿಲವನ್ನು ರಫ್ತು ಮಾಡುತ್ತಿದೆ ಎಂದು ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉತ್ತರ ನೀಡಿತ್ತು.

ರಷ್ಯಾ ಕೂಡ ಬ್ರಿಕ್ಸ್ ರಾಷ್ಟ್ರಗಳಿಗೆ ಗಮನಾರ್ಹ ಪ್ರಮಾಣದ ರಸಗೊಬ್ಬರವನ್ನು ರಫ್ತು ಮಾಡುತ್ತದೆ. ರಷ್ಯಾದ ಐಟಿ ಕಂಪನಿಗಳು ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸುತ್ತಿವೆ ಎಂದು ಪುಟಿನ್  ಹೇಳಿದ್ದಾರೆ.

ಪುಟಿನ್ ಮಲಮೂರ್ತ ವಿಸರ್ಜಿಸಿದ ಬೆನ್ನಲ್ಲೇ ಸೂಟ್‌ಕೇಸ್‌ನಲ್ಲಿ ಶೇಖರಣೆ, ಜೊತೆಗೆ ಒಯ್ಯುತ್ತಾರೆ 1,2!

ಬ್ರಿಕ್ಸ್  ದೇಶಗಳ ಅಂತಾರಾಷ್ಟ್ರೀಯ ಕರೆನ್ಸಿ?: ಬ್ರಿಕ್ಸ್ ರಾಷ್ಟ್ರಗಳ ಜೊತೆಗೂಡಿ ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ಕಾರ್ಯವಿಧಾನಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಪುಟಿನ್ ತಿಳಿಸಿದ್ದಾರೆ. ನಾವು ಬ್ರಿಕ್ಸ್ ರಾಷ್ಟ್ರಗಳ ಬ್ಯಾಂಕ್‌ಗಳೊಂದಿಗೆ ರಷ್ಯಾದ ಹಣಕಾಸು ಸಂದೇಶ ಕಳುಹಿಸುವ ವ್ಯವಸ್ಥೆಯನ್ನು ಟೈ-ಅಪ್ ಮಾಡಲು ಸಹ ತಯಾರಿ ನಡೆಸುತ್ತಿದ್ದೇವೆ. ಬ್ರಿಕ್ಸ್ ದೇಶಗಳ ಕರೆನ್ಸಿಗಳ ಆಧಾರದ ಮೇಲೆ ಅಂತರರಾಷ್ಟ್ರೀಯ ಕರೆನ್ಸಿಯನ್ನು ರಚಿಸುವ ಸಾಧ್ಯತೆಯನ್ನು ನಾವು ಅನ್ವೇಷಿಸುತ್ತಿದ್ದೇವೆ. ಬ್ರಿಕ್ಸ್ ರಷ್ಯಾ, ಭಾರತ, ಚೀನಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಐದು ದೇಶಗಳ ಸಂಘಟನೆಯಾಗಿದೆ. ಈ ವರ್ಷ ಬ್ರಿಕ್ಸ್ ಶೃಂಗಸಭೆಯನ್ನು ಚೀನಾ ಆಯೋಜಿಸುತ್ತಿದೆ.

ಉಕ್ರೇನ್ ಯುದ್ಧಕ್ಕೆ ಟ್ವಿಸ್ಟ್, ಪುಟಿನ್ ಹೊಸ ಪ್ಲಾನ್‌ಗೆ ಜಗತ್ತಿಗೆ ಶುರುವಾಯ್ತು ನಡುಕ!

ರಷ್ಯಾವನ್ನು ತೊರೆದ ನೈಕ್: ಖ್ಯಾತ ಕ್ರೀಡಾ ಉತ್ಪನ್ನ ಕಂಪನಿ ನೈಕ್ (Nike) ರಷ್ಯಾವನ್ನು ತೊರೆಯುವ ಯೋಜನೆಯನ್ನು ಪ್ರಕಟಿಸಿದೆ, ಫೆಬ್ರವರಿಯಲ್ಲಿ ಉಕ್ರೇನ್ ಆಕ್ರಮಣದ ನಂತರ ದೇಶವನ್ನು ತೊರೆಯುವ ಇತ್ತೀಚಿನ ಪಾಶ್ಚಿಮಾತ್ಯ ಬ್ರ್ಯಾಂಡ್ ಆಗಿದೆ. ಅಮೆರಿಕದ ಕ್ರೀಡಾ ಉಡುಪುಗಳ ದೈತ್ಯ ಆನ್‌ಲೈನ್ ಆರ್ಡರ್‌ಗಳನ್ನು ಈಗಾಗಲೇ ಸ್ಥಗಿತ ಮಾಡಿತ್ತು. ಕಳೆದ ಮಾರ್ಚ್‌ನಲ್ಲಿ ದೇಶದಲ್ಲಿ ತನ್ನ ಮಾಲೀಕತ್ವದ ಮಳಿಗೆಗಳನ್ನು ಮುಚ್ಚಲು ಆರಂಭಿಸಿತ್ತು. ಆದರೆ, ಸ್ಥಳೀಯ ಪಾಲುದಾರರಿಂದ ನಡೆಸಲ್ಪಡುವ ಅಂಗಡಿಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದ್ದವು, ಆದರೆ ಸಂಸ್ಥೆಯು ಆ ಒಪ್ಪಂದಗಳನ್ನು ಕಂಪನಿ ಈಗ ಮುಕ್ತಾಯಗೊಳಿಸುತ್ತಿದೆ. ನೆಟ್‌ವರ್ಕಿಂಗ್ ದೈತ್ಯ ಸಿಸ್ಕೋ ರಷ್ಯಾ ಮತ್ತು ಬೆಲಾರಸ್‌ನಲ್ಲಿ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಪ್ರಾರಂಭಿಸುವುದಾಗಿ ಹೇಳಿದೆ.

click me!