ಮುದ್ರಾ ಲೋನ್ ಹೆಸರಲ್ಲಿ ಹೀಗೂ ವಂಚಿಸಬಹುದು, ಯಾವುದಕ್ಕೂ ಹುಷಾರಾಗಿರಿ!

By Chethan Kumar  |  First Published Dec 10, 2024, 12:11 PM IST

ಯುವಕನೊಬ್ಬ ಮುದ್ರಾ ಯೋಜನೆಯಡಿ ಸಾಲ ಪಡೆಯಲು ಬಯಸಿದ್ದಾನೆ. ಇಷ್ಟೇ ನೋಡಿ, ಇದೇ ಸಂದರ್ಭ ಬಳಸಿಕೊಂಡಿರುವ ವಂಚಕರು, ಯವಕನಿಗೆ ವಂಚಿಸಿದ್ದಾರೆ. ನೀವು ಮುದ್ರಾ ಸಾಲ ಪಡೆಯುವಾಗ ಹೀಗೂ ಮೋಸ ಮಾಡಬಹುದು, ಎಚ್ಚರವಾಗಿರಿ.


ಕೋಝಿಕ್ಕೋಡ್(ಡಿ.10) ದೇಶದ ಯುವಜನತೆ ಸ್ವಾವಲಂಬಿಯಾಗಬೇಕು, ಸ್ವಂತ ಉದ್ಯೋಗ ಆರಂಭಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು, ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಈ ಪೈಕಿ ಮುದ್ರಾ ಸಾಲ ಯೋಜನೆ ಅತ್ಯಂತ ಜನಪ್ರಿಯವಾಗಿದೆ. ಹಲವು ಯುವ ಸಮೂಹ ಈ ಸಾಲ ಪಡೆದು ಉದ್ಯಮ ಕಟ್ಟಿಕೊಂಡಿದ್ದಾರೆ. ಆದರೆ ಮುದ್ರಾ ಸಾಲ ಪಡೆಯುವಾಗ ಅತೀವ ಎಚ್ಚರವಾಗಿರಬೇಕು. ಕೆಲ ವಂಚಕರು ಮೋಸದ ಜಾಲಕ್ಕಿ ಬೀಳಿಸಿ ಅಪಾರ ಹಣ ವಂಚನೆ ಮಾಡುತ್ತಾರೆ. ಹೀಗೆ ಯುವಕನೊಬ್ಬ ಮುದ್ರಾ ಲೋನ್ ಹೆಸರಿನಲ್ಲಿ ಆನ್‌ಲೈನ್ ವಂಚನೆ ಜಾಲಕ್ಕೆ ಗುರಿಯಾದ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ.

ಕೆ ಶಾಜಿ ಅನ್ನೋ ಯುವಕ ಸ್ವಂತ ಉದ್ಯಮ ಆರಂಭಿಸಲು ಬಯಸಿದ್ದಾನೆ. ಇದಕ್ಕಾಗಿ ತಯಾರಿಗಳು ಆರಂಭಿಸಿದ್ದಾನೆ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಮೂಲಕ ಸಾಲ ಪಡೆದು ಉದ್ಯಮ ಆರಂಭಿಸಲು ಮುಂದಾಗಿದ್ದಾನೆ. ಇದೇ ವೇಳೆ ಶಾಜಿಗೆ ಕೆಲ ಮೇಸೇಜ್, ಫೋನ್ ಕರೆಗಳು ಬಂದಿದೆ. ಈ ಪೈಕಿ ಮುದ್ರಾ ಸಾಲಕ್ಕೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಅನ್ನೋ ಲಿಂಕ್ ಕೂಡ ಇತ್ತು. ಕೇಂದ್ರ ಸರ್ಕಾರ ಎಲ್ಲವನ್ನೂ ಡಿಜಿಟಲೀಕರಣ ಮಾಡಿದೆ ಅನ್ನೋದು ಶಾಜಿ ತಲೆಗೆ ಹೊಳೆದಿದೆ. ಹೀಗಾಗಿ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿದರೆ ಸುಲಭವಾಗಿ ಸಾಲ ಸಿಗಲಿದೆ ಎಂದು ಶಾಜಿ ವಂಚಕರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದ್ದಾನೆ.

Tap to resize

Latest Videos

ಪಾನ್ ಕಾರ್ಡ್ 2.0 ಟಾರ್ಗೆಟ್ ಮಾಡಿದ ಸೈಬರ್ ವಂಚಕರು, ಮೋಸ ಹೋಗುವ ಮುನ್ನ ಇರಲಿ ಎಚ್ಚರ!

ಮುದ್ರಾ ಸಾಲಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ ತನ್ನ ಹೆಸರು, ವಿಳಾಸ, ಫೋನ್ ನಂಬರ್, ಆಧಾರ್ ಸಂಖ್ಯೆ, ಪಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆ ಸಲ್ಲಿಸಿದ್ದಾನೆ. ಅರ್ಜಿ ಸಲ್ಲಿಸಿದ ಬಳಿಕ ಶಾಜಿ ನಿರಾಳನಾಗಿದ್ದಾನೆ. ಕಾರಣ ಸುಲಭವಾಗಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಬ್ಯಾಂಕ್‌ಗೆ ತೆರಳುವ ತಾಪತ್ರಯ ಇಲ್ಲ ಎಂದು ಖುಷಿ ಪಟ್ಟಿದ್ದಾನೆ. ಅರ್ಜಿ ಸಲ್ಲಿಸಿದ ಕೆಲ ಹೊತ್ತಲ್ಲೆ ಕರೆಯೊಂದು ಬಂದಿದೆ. ಮುದ್ರಾ ಸಾಲಕ್ಕೆ ಅರ್ಜಿ ಸಲ್ಲೀಸಿದ್ದೀರಿ. ನಿಮ್ಮ ಪ್ರಾಥಮಿಕ ದಾಖಲೆ ಆಧರಿಸಿ 50,000 ರೂಪಾಯಿ ಸಾಲ ಅಪ್ರೂವ್ ಆಗಿದೆ ಎಂದು ಕರೆಯಲ್ಲಿ ತಿಳಿಸಲಾಗಿತ್ತು. 

ಸಾಲದ ಪ್ರೊಸೆಸಿಂಗ್ ಚಾರ್ಜ್ 3,750 ರೂಪಾಯಿ ಆಗಿದೆ. ಪೇಪರ್ ವರ್ಕ್ ಸೇರಿದಂತೆ ಇತರ ಪ್ರೊಸೆಸಿಂಗ್ ಫೀಸ್ ಕಟ್ಟಿದ ಬೆನ್ನಲ್ಲೇ ನಿಮಗೆ ಸಾಲದ ಮೊತ್ತ ಖಾತೆಗೆ ಮಂಜೂರಾಗಲಿದೆ ಎಂದಿದ್ದಾರೆ. ಇದರಂತೆ ಕೆ ಶಾಜಿ 3,750 ರೂಪಾಯಿ ಪಾವತಿಸಿದ್ದಾನೆ. ಈ ಮೊತ್ತ ಪಾವತಿಸಿದ ಕೆಲ ಹೊತ್ತಲ್ಲೇ ಕೆ ಶಾಜಿಗೆ ಮೆಸೇಜ್ ಒಂದು ಬಂದಿದೆ. 50,000 ರೂಪಾಯಿ ನಿಮ್ಮ ಖಾತೆಗೆ ಜಮೆ ಆಗಿದೆ. ಮುದ್ರಾ ಲೋನ್ ಮೊತ್ತ ಖಾತೆಗೆ ಜಮೆ ಮಾಡಲಾಗಿದೆ ಅನ್ನೋ ಸಂದೇಶ ಇದಾಗಿತ್ತು. ಶಾಜಿ ಹಿರಿ ಹಿರಿ ಹಿಗ್ಗಿದ್ದಾನೆ. ಕಾರಣ ಮನೆಯಲ್ಲೇ ಕುಳಿತು, ಯಾರ ಸಹಾಯವೂ ಇಲ್ಲದೆ, ಯಾರನ್ನೂ ಬೇಡದ 50,000 ರೂಪಾಯಿ ಸಾಲ ಖಾತೆಗೆ ಜಮೆ ಆಗಿದೆ ಅನ್ನೋ ಸಂಭ್ರಮ ಇತ್ತು.

ಆದರೂ ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟಿದೆ ಎಂದು ಮೊಬೈಲ್ ಬ್ಯಾಂಕಿಂಗ್ ಮೂಲಕ ನೋಡಿದಾಗ ಅಚ್ಚರಿಯಾಗಿತ್ತು. ಕಾರಣ ಯಾವುದೇ ಮೊತ್ತ ಕ್ರೆಡಿಟ್ ಆಗಿರಲಿಲ್ಲ. 50,000 ರೂಪಾಯಿ ಕ್ರೆಡಿಟ್ ಆಗಿದೆ ಅನ್ನೋ ಸಂದೇಶ ನಕಲಿಯಾಗಿತ್ತು. ಕರೆ ಬಂದ ನಂಬರ್‌ಗೆ ಶಾಜಿ ಕರೆ ಮಾಡಿ ವಿಚಾರಿಸಿದ್ದಾನೆ. ಈ ವೇಳೆ ನಿಮ್ಮ ಡಾಕ್ಯುಮೆಂಟ್‌ಗಳಲ್ಲಿ ಕೆಲ ತೊಡಕುಗಳಿವೆ. ಮುದ್ರಾ ಸಾಲದ ವಿವರ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರ ಸಮರ್ಪಕವಾಗಿಲ್ಲ. ಹೀಗಾಗಿ ಕೆಲ ಅಫಿಡವಿತ್ ತಯಾರಿ ಮಾಡಬೇಕಿದೆ. ಈ ಅಫಿಡವಿತ್ ನಾವು ತಯಾರಿಸಿ ಸಲ್ಲಿಕೆ ಮಾಡುತ್ತೇವೆ. ನೀವು 9,000 ರೂಪಾಯಿ ಪಾವತಿಸಿ ಎಂದು ಸೂಚಿಸಿದ್ದಾರೆ.

9,000 ರೂಪಾಯಿ ಪಾವತಿಸಿದರೆ ನಿಮ್ಮ 50,000 ರೂಪಾಯಿ ಸಾಲ ಹಾಗೂ ಜೊತೆಗೆ ನೀವು ಕಟ್ಟಿದ 9,000 ರೂಪಾಯಿ ಒಟ್ಟು 59,000 ರೂಪಾಯಿ ಖಾತೆಗೆ ಜಮೆ ಆಗಲಿದೆ ಎಂದಿದ್ದಾರೆ.  ನಿಮ್ಮ ಸಾಲ ಬೇಡ, ಏನೂ ಬೇಡ, ನಾನು ಕಟ್ಟಿದ 3750 ರೂಪಾಯಿ ವಾಪಸ್ ಕೊಡಿ ಎಂದು ಬೆದರಿಸಿದ್ದಾನೆ. ಸಾಲ ರದ್ದು ಮಾಡಲು 1,000 ರೂಪಾಯಿ ಪಾವತಿಸಲು ತಾಕೀತು ಮಾಡಿದ್ದಾರೆ. ಇಲ್ಲದಿದ್ದರೆ ನಿಮ್ಮ ಫೋಟೋಗಳನ್ನು ಎಡಿಟ್ ಮಾಡಿ ಹರಿಬಿಡಲಾಗುತ್ತದೆ ಎಂದು ಬೆದರಿಸಿದ್ದಾರೆ. ಇದರ ಬೆನ್ನಲ್ಲೇ ಶಾಜಿ ಪೊಲೀಸರಿಗೆ ದೂರು ನೀಡಿದ್ದಾನೆ. 
 

click me!