ದೇಶದಲ್ಲಿ ಹೆಚ್ಚಾಯ್ತು ಕೋಟ್ಯಾಧಿಪತಿಗಳ ಸಂಖ್ಯೆ, ಅದಕ್ಕೆ ಕಾರಣ ಏನು?

By Roopa Hegde  |  First Published Dec 9, 2024, 11:10 AM IST

ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗ್ತಿದೆ. ಶ್ರೀಮಂತರ ಖಾತೆಗೆ ಹಣ ಸೇರ್ತಿದೆ. ಕೋಟಿ, ಶತ ಕೋಟಿಯಲ್ಲಿ ಜನರ ಆದಾಯ ಹೆಚ್ಚಾಗಲು ಕಾರಣವೇನು, ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ. 
 


ದೇಶದಲ್ಲಿ ಕೋಟ್ಯಾಧಿಪತಿ (Billionaire)ಗಳು ಹಾಗೂ ಅವರ ಸಂಪತ್ತು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಕೋಟ್ಯಾಧಿಪತಿಗಳ ಸಂಪತ್ತಿ (wealth)ನಲ್ಲಿ ವೇಗದ ಹೆಚ್ಚಳ ಕಂಡು ಬಂದಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ಬಿಲಿಯನೇರ್‌ಗಳ ಸಂಪತ್ತು ಶೇಕಡಾ 42ರಷ್ಟು ಏರಿಕೆಯಾಗಿದೆ. ಅಂದ್ರೆ  905 ಶತಕೋಟಿ ಡಾಲರ್ (dollars)ಗಿಂತ ಹೆಚ್ಚಾಗಿದೆ ಎಂದು ಸ್ವಿಸ್ ಬ್ಯಾಂಕ್ ಯುಬಿಎಸ್ (UBS) ವರದಿ ಮಾಡಿದೆ. ಈ ಪಟ್ಟಿಯಲ್ಲಿ ಅಮೆರಿಕಾ ಮತ್ತು ಚೀನಾ ನಂತ್ರದ ಸ್ಥಾನ ಭಾರತ ಪಡೆದುಕೊಂಡಿದೆ. 

ಭಾರತ (India)ದಲ್ಲಿ ಬಿಲಿಯನೇರ್ಗಳ ಸಂಖ್ಯೆಯಲ್ಲಿ ಏರಿಕೆ : ಯುಬಿಎಸ್ ಬಿಲಿಯನೇರ್ ವರದಿ ಪ್ರಕಾರ, ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಎರಡಕ್ಕಿಂತ ಹೆಚ್ಚು ಪಟ್ಟು ಏರಿಕೆಯಾಗಿದೆ. ಈಗ ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ 185ರಷ್ಟಿದೆ. ಏಪ್ರಿಲ್ 2024 ರ ಅಂತ್ಯದ ವೇಳೆಗೆ ಕೋಟ್ಯಾಧಿಪತಿಗಳ ಸಂಪತ್ತು ಶೇಕಡಾ 263 ರಷ್ಟು ಹೆಚ್ಚಾಗಿದೆ. 

Tap to resize

Latest Videos

ಇಂಟೆಲ್‌ನಿಂದ ಹೊರದಬ್ಬಲ್ಪಟ್ಟ ಸಿಇಒಗೆ 101 ಕೋಟಿ ರೂಪಾಯಿ ಪರಿಹಾರ!

ಎಲ್ಲಿ ಬಿಲಿಯನರ್ ಸಂಖ್ಯೆ ಹೆಚ್ಚಳ : ವರದಿ ಪ್ರಕಾರ, ಜಾಗತಿಕ ಆರ್ಥಿಕತೆಯಲ್ಲಿ ಭಾರತ ಉನ್ನತ ಶ್ರೇಣಿಯನ್ನು ತಲುಪುತ್ತಿದೆ. ಇದ್ರಿಂದ ಫ್ಯಾಮಿಲಿ ಬ್ಯುಸಿನೆಸ್ ವೇಗವಾಗಿ ಬೆಳೆಯುತ್ತಿದೆ. ಷೇರು ಮಾರುಕಟ್ಟೆಗೆ ಬರ್ತಿರುವ ಕಂಪನಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ದಶಕದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಫ್ಯಾಮಿಲಿ ಬ್ಯುಸಿನೆಸ್ ಎನ್ನಲಾಗ್ತಿದೆ. ಔಷಧ, ಶಿಕ್ಷಣ, ತಂತ್ರಜ್ಞಾನ, ಹಣಕಾಸು ತಂತ್ರಜ್ಞಾನ, ಆಹಾರ ವಿತರಣೆ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಕಂಡು ಬರ್ತಿದೆ. ಬಿಲಿಯನೇರ್ ಗಳ ಸಂಖ್ಯೆ ಕೂಡ ಈ ಕ್ಷೇತ್ರದಲ್ಲಿ ಹೆಚ್ಚಿದೆ. 

ಹಿಂದೆ ಬಿದ್ದ ದೇಶಗಳು : ಒಂದ್ಕಡೆ ಭಾರತದಲ್ಲಿ ಶತಕೋಟ್ಯಾಧಿಪತಿಗಳ ಸಂಪತ್ತು ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಜಾಗತಿಕ ಮಟ್ಟದಲ್ಲಿ ಬಿಲಿಯನೇರ್‌ಗಳ ಸಂಪತ್ತು ನಿಧಾನಗತಿಯಲ್ಲಿದೆ. ಕೆಲವು ಕಡೆ ಬೆಳವಣಿಗೆ ಕುಂಠಿತವಾಗ್ತಿದೆ. ಭಾರತೀಯ ಉದ್ಯಮಿಗಳ ನಿರಂತರ ಕ್ರಿಯಾಶೀಲತೆ ಮತ್ತು ದೇಶದ ಅನುಕೂಲಕರ ಆರ್ಥಿಕ ವಾತಾವಣ, ಭಾರತದಲ್ಲಿ ಶ್ರೀಮಂತರ ಸಂಖ್ಯೆ ಹಾಗೂ ಅವರ ಸಂಪತ್ತನ್ನು ಹೆಚ್ಚಿಸಲು ಕಾರಣವಾಗಿದೆ.  

ಕೋಟ್ಯಾಧಿಪತಿಗಳ ಸಂಖ್ಯೆ ಎಷ್ಟು ಹೆಚ್ಚಾಗಿದೆ? : 2015ಋಂದ 2024ರವರೆಗೆ ಕೋಟ್ಯಾಧಿಪತಿಗಳ ಸಂಖ್ಯೆ 1757 ರಿಂದ 2682 ಕ್ಕೆ ಏರಿಕೆ ಕಂಡಿದೆ.  2021 ರಲ್ಲಿ ಬಿಲಿಯನೇರ್‌ಗಳ ಸಂಖ್ಯೆ 2686 ಆಗಿತ್ತು. ಇನ್ನು ಜಾಗತಿಕ ಬಿಲಿಯನೇರ್‌ಗಳ ಸಂಪತ್ತು 2015 ಮತ್ತು 2024 ರ ನಡುವೆ 14 ಟ್ರಿಲಿಯನ್‌ಗೆ ಡಾಲರ್ ಅಂದ್ರೆ ಶೇಕಡಾ 121 ರಷ್ಟು ಏರಿಕೆಯಾಗಿದೆ. ಇದು MSCI AC ವರ್ಲ್ಡ್ ಇಂಡೆಕ್ಸ್‌ನಲ್ಲಿನ ಶೇಕಡಾ 73ರಷ್ಟು ಹೆಚ್ಚಳವನ್ನು ಮೀರಿಸುತ್ತದೆ. ಜಾಗತಿಕವಾಗಿ ಬಿಲಿಯನೇರ್‌ಗಳ ಸಂಪತ್ತು ವಾರ್ಷಿಕವಾಗಿ ಶೇಕಡಾ 1ರಷ್ಟು ಹೆಚ್ಚಳವಾಗ್ತಿದೆ.  

ಮದುವೆಯಾದ ಹೆಂಗಸರು ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು? ಇದಕ್ಕಿಂತ ಜಾಸ್ತಿ ಇದ್ರೆ ಏನಾಗುತ್ತೆ?

ಚೀನಾದಲ್ಲಿ ನೀರಸ ಬೆಳವಣಿಗೆ : ಚೀನಾದಲ್ಲಿ ಕೋಟ್ಯಾಧಿಪತಿಗಳ ಸಂಪತ್ತು ಕುಸಿದಿದೆ. ಚೀನಾದ ಬಿಲಿಯನೇರ್‌ಗಳ ಸಂಪತ್ತು 2020 ರ  2.1 ಟ್ರಿಲಿಯನ್‌ ಡಾಲರ್ ಇದ್ದ ಸಂಪತ್ತು ಈಗ ಶೇಕಡಾ 16ರಷ್ಟು ಕುಸಿದಿದೆ. ಚೀನಾದ ಕ್ಸಿ ಜಿನ್‌ಪಿಂಗ್ ಸರ್ಕಾರದ ಆಡಳಿತ ಇದಕ್ಕೆ ಮುಖ್ಯ ಕಾರಣವಾಗಿದೆ. 

ಅದೇ ಭಾರತದಲ್ಲಿ ಕೇಂದ್ರ ಸರ್ಕಾರದ ಆಡಳಿತ ಕೋಟ್ಯಾಧಿಪತಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ನರೇಂದ್ರ ಮೋದಿ ಸರ್ಕಾರ  ರಚನಾತ್ಮಕ ಸುಧಾರಣೆಗಳನ್ನು ಪರಿಚಯಿಸಿದೆ. ಇದು ದೇಶದ ಆರ್ಥಿಕತೆಯು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲು ಸಹಾಯ ಮಾಡಿದೆ.

click me!