
ಮಾಲ್ ಅಥವಾ ಶೋರೂಮ್ ಗೆ ಹೋದಾಗ ಕ್ಯಾಶ್ ಕೌಂಟರ್ ನಲ್ಲಿ ಕ್ಯಾರಿ ಬ್ಯಾಗ್ ಬೇಕಾ ಅಂತ ಕೇಳ್ತಾರೆ. ಕೆಲ ಸ್ಥಳಗಳಲ್ಲಿ ಕ್ಯಾರಿ ಬ್ಯಾಗ್ ಫ್ರೀ ಆಗಿ ಸಿಕ್ಕಿದ್ರೆ ಮತ್ತೆ ಕೆಲ ಕಂಪನಿ, ಮಾಲ್ ಅದಕ್ಕೆ ಶುಲ್ಕ ವಿಧಿಸುತ್ತೆ. ನಿಮಗೆ ಕ್ಯಾರಿ ಬ್ಯಾಗ್ ಅಗತ್ಯ ಇದ್ರೆ ನೀವು ಹಣಕೊಟ್ಟು ಕೊಂಡ್ಕೊಳ್ಬೇಕು. ಆದ್ರೆ ಈ ಪೇಪರ್ ಕ್ಯಾರಿ ಬ್ಯಾಗ್ ವಿಷ್ಯದಲ್ಲಿ ಪಾದರಕ್ಷೆ ಕಂಪನಿ ಬಾಟಾಗೆ 10 ಸಾವಿರ ರೂಪಾಯಿ ದಂಡ ಕಟ್ಟುವ ಸ್ಥಿತಿ ಬಂದಿದೆ.
6 ರೂಪಾಯಿ ಬೆಲೆಯ ಪೇಪರ್ ಕ್ಯಾರಿ ಬ್ಯಾಗ್ಗಾಗಿ ಗ್ರಾಹಕರ ವಿವಾದದಿಂದಾಗಿ, ಬಾಟಾ ಇಂಡಿಯಾ ಗ್ರಾಹಕರಿಗೆ ಪರಿಹಾರ ಮತ್ತು ಮೊಕದ್ದಮೆ ವೆಚ್ಚವಾಗಿ 10,000 ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಈ ಘಟನೆ ನಡೆದಿದ್ದು 2023ರಲ್ಲಿ. ದಕ್ಷಿಣ ದೆಹಲಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ (DCDRC) ದೆಹಲಿ ನಿವಾಸಿ ಪ್ರೀತಿ ಅಗರ್ವಾಲ್ ಅವರ ಪರವಾಗಿ ತೀರ್ಪು ನೀಡಿದೆ. ಮೇ 2023 ರಲ್ಲಿ ಬಾಟಾ ಅಂಗಡಿಯಿಂದ ಅವರು1,499 ಮೌಲ್ಯದ ಶೂಗಳನ್ನು ಖರೀದಿಸಿದ್ದರು. ಆಗ ಅವರಿಗೆ ತಿಳಿಯದೆ ಕ್ಯಾರಿ ಬ್ಯಾಗ್ ಶುಲ್ಕವನ್ನೂ ಕಂಪನಿ ವಸೂಲಿ ಮಾಡಿತ್ತು. ಇದನ್ನು ವಿರೋಧಿಸಿ ಅವರು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
E20 ಪೆಟ್ರೋಲ್ ಹಾಕಿಸಿದ್ರೆ ಇನ್ಶೂರೆನ್ಸ್ ಕ್ಲೈಮ್ ರಿಜೆಕ್ಟ್ ಆಗುತ್ತಾ?: ICICI ಲೊಂಬಾರ್ಡ್ ಹೇಳಿಕೆಗೆ ಸರ್ಕಾ
ದೂರಿನ ಪ್ರಕಾರ, ಪ್ರೀತಿ ಅಗರ್ವಾಲ್ ಬಿಲ್ಲಿಂಗ್ ಕೌಂಟರ್ ತಲುಪಿದ ನಂತರವೇ 6 ರೂಪಾಯಿ ಹೆಚ್ಚುವರಿ ಶುಲ್ಕದ ಬಗ್ಗೆ ತಿಳಿದ್ರು. ಅಂಗಡಿಯ ಒಳಗೆ ಎಲ್ಲಿಯೂ ಗ್ರಾಹಕರು ಕ್ಯಾರಿ ಬ್ಯಾಗ್ಗಳಿಗೆ ಪ್ರತ್ಯೇಕ ಹಣ ಪಾವತಿಸಬೇಕು ಎನ್ನುವ ಮಾಹಿತಿ ಇರಲಿಲ್ಲ. ಯಾವುದೇ ಸೂಚನಾ ಫಲಕ ಇರಲಿಲ್ಲ. ಶೂ ಖರೀದಿ ಮಾಡಿದ್ಮೇಲೆ ಬ್ಯಾಗ್ ಇಲ್ದೆ ಬಾಕ್ಸ್ ತೆಗೆದುಕೊಂಡು ಹೋಗೋದು ಕಷ್ಟ.
ಈ ಪ್ರಕರಣದಲ್ಲಿ, ಅಧ್ಯಕ್ಷೆ ಮೋನಿಕಾ ಎ. ಶ್ರೀವಾಸ್ತವ ಮತ್ತು ಸದಸ್ಯ ಕಿರಣ್ ಕೌಶಾ ನೇತೃತ್ವದ ಆಯೋಗ, ಚಿಲ್ಲರೆ ವ್ಯಾಪಾರಿಗಳು ಸರಳ, ಬ್ರಾಂಡ್ ಮಾಡದ ಕ್ಯಾರಿ ಬ್ಯಾಗ್ಗಳಿಗೆ ಗ್ರಾಹಕರಿಂದ ಶುಲ್ಕ ವಿಧಿಸಲು ಕಾನೂನುಬದ್ಧವಾಗಿ ಅನುಮತಿ ಹೊಂದಿದ್ದಾರೆ ಎಂದಿದ್ದಾರೆ. ಆದ್ರೆ ಅಂಗಡಿಯೊಳಗೆ ಪ್ರಮುಖ ಸೂಚನೆಯನ್ನು ಪ್ರದರ್ಶಿಸುವ ಮೂಲಕ ಗ್ರಾಹಕರಿಗೆ ಮುಂಚಿತವಾಗಿ ತಿಳಿಸಬೇಕು. ದೂರುದಾರರು ಸಲ್ಲಿಸಿದ ಫೋಟೋ ಪರಿಶೀಲಿಸಿದ ನಂತರ, ಆಯೋಗವು ಅಂಗಡಿಯಲ್ಲಿ ಯಾವುದೇ ನೊಟೀಸ್ ಇರಲಿಲ್ಲ ಎಂಬುದನ್ನು ಪತ್ತೆ ಮಾಡಿದೆ.
ರೈತರಿಗೆ ಗುಡ್ ನ್ಯೂಸ್: ಈ ದಿನದಂದು ಬರಲಿದೆ PM Kisan ಯೋಜನೆಯ 2
ನೊಟೀಸ್ ಇಲ್ಲದ ಕಾರಣ, ಖರೀದಿ ಬಗ್ಗೆ ಮುಂಚಿತವಾಗಿ ನಿರ್ಧಾರ ತೆಗೆದುಕೊಳ್ಳಲು ಗ್ರಾಹಕರಿಗೆ ಸಮಸ್ಯೆ ಆಯ್ತು. ಬಾಟಾ ಕ್ಯಾರಿ ಬ್ಯಾಗ್ಗಳನ್ನು ಉಚಿತವಾಗಿ ನೀಡ್ಬೇಕು ಎಂದು ಆಯೋಗ ಹೇಳಿಲ್ಲ. ಆದ್ರೆ NCDRC ಯ ನಿರ್ದೇಶನವನ್ನು ಪಾಲಿಸಲು ವಿಫಲವಾಗಿದೆ, ಯಾವುದೇ ನೋಟಿಸ್ ಹಾಕಿಲ್ಲ ಎಂದು ಆಯೋಗ ಹೇಳಿದೆ.
ಹಿಂದೆಯೂ ನಡೆದಿತ್ತು ಘಟನೆ
ವರದಿಗಳ ಪ್ರಕಾರ, ಇದು ಮೊದಲ ಪ್ರಕರಣವಲ್ಲ. ಚಂಡೀಗಢ ಮತ್ತು ಜೈಪುರದಲ್ಲಿನ ಗ್ರಾಹಕ ವೇದಿಕೆಗಳು ಕಂಪನಿ, ಬ್ರ್ಯಾಂಡಿಂಗ್ ಹೊಂದಿರುವ ಬ್ಯಾಗ್ಗಳಿಗೆ ಗ್ರಾಹಕರಿಂದ ಶುಲ್ಕ ವಿಧಿಸುತ್ತಿರೋದನ್ನು ವಿರೋಧಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.