* ಇ-ಇಂಡೆಂಟ್ ಸಮಸ್ಯೆಯಿಂದಾಗಿ ಜುಲೈ 1ರಿಂದ ಸಂಪೂರ್ಣ ಹದಗೆಟ್ಟ ಮದ್ಯ ಖರೀದಿ ವ್ಯವಸ್ಥೆ
* ಮದ್ಯ ಖರೀದಿ ವ್ಯವಸ್ಥೆ ಸರಿಪಡಿಸದಿದ್ದರೆ ಶನಿವಾರದಿಂದ ಮದ್ಯದಂಗಡಿ ಬಂದ್
* ಮದ್ಯ ಖರೀದಿಗೆ ದಿನಗಟ್ಟಲೆ ಕಾಯವಂತಹ ಪರಿಸ್ಥಿತಿ ನಿರ್ಮಾಣ
ಚಿತ್ರದುರ್ಗ(ಜು.08): ಮದ್ಯ ಖರೀದಿಗೆ ಸಂಬಂಧಿಸಿ ಇ-ಇಂಡೆಂಟಿಗ್(ಬೇಡಿಕೆ) ವ್ಯವಸ್ಥೆಯಲ್ಲಿನ ಸಮಸ್ಯೆ ತಕ್ಷಣ ಬಗೆಹರಿಸದಿದ್ದರೆ ಶನಿವಾರದಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್ ಮಾಡಲಾಗುವುದೆಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಗುರುಸ್ವಾಮಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಇ-ಇಂಡೆಂಟಿಂಗ್ ಸಾಫ್ಟ್‌ವೇರ್‌ನಿಂದಾಗಿ ಸಮಸ್ಯೆ ಉಲ್ಬಣವಾಗಿದೆ. ಮದ್ಯ ಖರೀದಿಗೆ ದಿನಗಟ್ಟಲೆ ಕಾಯವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್ 4ರಿಂದ ಹೊಸ ಇ-ಇಂಡೆಂಟಿಂಗ್ ವ್ಯವಸ್ಥೆ ಜಾರಿಗೆ ಬಂದಿದ್ದರೂ ಉಂಟಾಗುತ್ತಿರುವ ಸಮಸ್ಯೆ ನಿವಾರಣೆಗೆ ಗಂಭೀರವಾಗಿ ಯತ್ನಿಸಿಲ್ಲವೆಂದು ದೂರಿದರು.
ಸಾಫ್ಟ್‌ವೇರ್ ದೋಷದಿಂದ ಸಿಗದ ಎಣ್ಣೆ: ಚಡಪಡಿಸಿದ ಮದ್ಯ ಪ್ರಿಯರು
ಇ-ಇಂಡೆಂಟ್ ಸಮಸ್ಯೆಯಿಂದಾಗಿ ಜುಲೈ 1ರಿಂದ ಮದ್ಯ ಖರೀದಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರ ಬರೀ ತೆರಿಗೆ ಸಂಗ್ರಹ ಹಾಗೂ ಮದ್ಯ ಮಾರಾಟದ ಗುರಿ ಬಗ್ಗೆ ಮಾತನಾಡುತ್ತದೆಯೇ ವಿನಃ ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಲೋಚಿಸುತ್ತಿಲ್ಲ. ಮದ್ಯ ಖರೀದಿ ವ್ಯವಸ್ಥೆ ಸರಿಪಡಿಸದಿದ್ದರೆ ಶನಿವಾರದಿಂದ ಮದ್ಯದಂಗಡಿ ಬಂದ್ ಮಾಡುವುದು ಅನಿವಾರ್ಯವೆಂದು ಗುರುಸ್ವಾಮಿ ಹೇಳಿದರು.