IndiGo Pilot Salary:ವಿಮಾನ ಹಾರಾಟ ವಿಳಂಬವಾದ ಬೆನ್ನಲ್ಲೇ ಪೈಲಟ್ ಗಳ ವೇತನ ಹೆಚ್ಚಿಸಿದ ಇಂಡಿಗೋ

By Suvarna NewsFirst Published Jul 7, 2022, 9:27 PM IST
Highlights

*ಪೈಲಟ್ ಗಳ ವೇತನದಲ್ಲಿ ಶೇ.8ರಷ್ಟು ಹೆಚ್ಚಳ
*ವೇತನ ಹೆಚ್ಚಳ ಆಗಸ್ಟ್ 1ರಿಂದ ಜಾರಿಗೆ
*ಪೈಲಟ್ ಗಳಿಗೆ ಕೋವಿಡ್ ಪೂರ್ವದ ಮಟ್ಟದಲ್ಲೇ ಹೆಚ್ಚುವರಿ ಭತ್ಯೆ
 

ನವದೆಹಲಿ (ಜು.7):  ಸಿಬ್ಬಂದಿ ಕೊರತೆಯಿಂದ 900 ಕ್ಕೂ ಹೆಚ್ಚು ವಿಮಾನ ಹಾರಾಟಗಳಲ್ಲಿ ( flights) ವಿಳಂಬವಾದ ಕೆಲವು ದಿನಗಳ ಬಳಿಕ ಪೈಲಟ್ ಗಳ ( Pilots) ವೇತನದಲ್ಲಿ (Salary) ಮತ್ತೆ ಹೆಚ್ಚಳ ಮಾಡೋದಾಗಿ ಭಾರತದ (India) ಅತೀದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ (IndiGo) ಘೋಷಿಸಿದೆ. ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಪೈಲಟ್ ಗಳ ( Pilots) ವೇತನದಲ್ಲಿ ಶೇ.8ರಷ್ಟು ಏರಿಕೆ ಮಾಡೋದಾಗಿ ಹೇಳಿದೆ. ಅಲ್ಲದೆ, ಪೈಲಟ್ ಗಳಿಗೆ ಕೋವಿಡ್ ಪೂರ್ವದ ಮಟ್ಟದಲ್ಲೇ ಹೆಚ್ಚುವರಿ ಭತ್ಯೆ (allowance) ನೀಡೋದಾಗಿಯೂ ತಿಳಿಸಿದೆ.

ಪೈಲಟ್ ಗಳ ವೇತನದಲ್ಲಿ ಶೇ.8ರಷ್ಟು ಹೆಚ್ಚಳ ಮಾಡೋದಾಗಿ ಈ ಹಿಂದೆ ಮಾರ್ಚ್ 31ರಂದು ಇಂಡಿಗೋ ಘೋಷಿಸಿತ್ತು. ನಿರಂತರ ವಿಮಾನ ಹಾರಾಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುತ್ತಿರೋದಾಗಿಯೂ ತಿಳಿಸಿತ್ತು. 'ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಮ್ಮ ಎಲ್ಲ ಪೈಲಟ್ ಗಳ ವೇತನದಲ್ಲಿ ಶೇ.8ರಷ್ಟು ಹೆಚ್ಚಳ ಮಾಡೋದಾಗಿ ಘೋಷಿಸಲು ನನಗೆ ಸಂತಸವಾಗುತ್ತಿದೆ' ಎಂದು ಇಂಡಿಗೋ ಹಿರಿಯ ಉಪಾಧ್ಯಕ್ಷ ಅಶಿಂ ಮಿತ್ರ ತಿಳಿಸಿದ್ದರು.

Jayshree Ullal: ಭಾರತೀಯ ಮೂಲದ ಜಯಶ್ರೀ ಉಲ್ಲಾಳ್ ಅಮೆರಿಕದ ಸೆಲ್ಫ್ ಮೇಡ್ ಶ್ರೀಮಂತ ಮಹಿಳೆ; ಇವರ ಆಸ್ತಿ ಎಷ್ಟು?

2020ರಲ್ಲಿ ಪೈಲಟ್ ಗಳ (Pilots) ವೇತನದಲ್ಲಿ ಶೇ. 28ರಷ್ಟು ಕಡಿತ ಮಾಡಿದ ಸುಮಾರು 2 ವರ್ಷಗಳ ಬಳಿಕ ಇಂಡಿಗೋ ಅವರ ವೇತನದಲ್ಲಿ ಹೆಚ್ಚಳ ಮಾಡಿದೆ. ಗುರುವಾರ ವೇತನದಲ್ಲಿ ಶೇ.8ರಷ್ಟು ಹೆಚ್ಚಳ ಘೋಷಿಸಿದ ಬಳಿಕವೂ ಪೈಲಟ್ ಗಳ ವೇತನವು ಕೋವಿಡ್ ಪೂರ್ವ ಮಟ್ಟಕ್ಕೆ ಹೋಲಿಸಿದ್ರೆ ಇನ್ನೂ ಶೇ.16ರಷ್ಟು ಕಡಿಮೆ ಇದೆ. 
ವಿಮಾನ ಹಾರಾಟದ ಯೋಜನೆಯಲ್ಲಿ ಪೈಲಟ್ ಗಳ ಕೆಲಸಕ್ಕೆ ಸಂಬಂಧಿಸಿಯೂ ವಿನ್ಯಾಸ (Pattern)  ಸಿದ್ಧಪಡಿಸಲಾಗಿದೆ. ವಿಮಾನಗಳ ಬಳಕೆಯನ್ನು ಉತ್ತೇಜಿಸುವ  (Boost) ನಿಟ್ಟಿನಲ್ಲಿ ಪೈಲಟ್ ಗಳ ಕೆಲಸದ ವಿನ್ಯಾಸ ರೂಪಿಸಲಾಗಿದೆ. ಇದರಲ್ಲಿ ಪೈಲಟ್ ಗಳಿಗೆ ಹೆಚ್ಚು ಗಳಿಸುವ ಅವಕಾಶವನ್ನೂ ನೀಡಲಾಗಿದೆ. ಆದರೆ, ರಜೆಗಳನ್ನು (Leaves) ಕಡಿಮೆ ನೀಡಲಾಗಿದೆ. ಈ ತಿಂಗಳಿನಲ್ಲಿ ಇಂಡಿಗೋ ಪ್ರತಿದಿನ ಅಂದಾಜು 1,550 ವಿಮಾನ ಹಾರಾಟಕ್ಕೆ ಬಜೆಟ್ (Budget) ಸಿದ್ಧಪಡಿಸಿದೆ. ಇದರ ಅನ್ವಯ ವಿಮಾನವನ್ನು ಸುಮಾರು 13 ಗಂಟೆಗಳ ಕಾಲ ಬಳಸಿಕೊಳ್ಳಲಿದೆಯಂತೆ.

ಜು.2ರಂದು ಸಿಬ್ಬಂದಿ ದಿಢೀರ್ ರಜೆ ಹಾಕಿದ್ದ ಹಿನ್ನೆಲೆಯಲ್ಲಿ 900ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ವಿಳಂಬವಾಗಿತ್ತು. ಇಂಡಿಗೋ ಸಿಬ್ಬಂದಿ  ಏರ್ ಇಂಡಿಯಾ  (Air India) ವಿಮಾನ ಸಂಸ್ಥೆ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ರಜೆ ಹಾಕಿದ್ದರು ಎಂದು ಹೇಳಲಾಗಿತ್ತು. ಅಂದು ನಿಗದಿತ ಸಮಯದಲ್ಲಿ ಟೇಕ್ ಆಫ್ (Take off) ಆಗಬೇಕಿದ್ದ ಇಂಡಿಗೋ ವಿಮಾನಗಳು ಸಿಬ್ಬಂದಿ ಕೊರತೆಯಿಂದ ಹಾರಾಟ ನಡೆಸಿಲ್ಲ. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್(DGCA) ಈ ಪ್ರಕರಣದ ಕುರಿತು ತನಿಖೆಗೆ ಕೂಡ ಆದೇಶಿಸಿತ್ತು. 

ಈ ಪ್ರಕರಣ ಗಂಭೀರವಾಗಿದೆ. ವಿಮಾನ ನಿಗದಿತ ಸಮಯಕ್ಕೆ ಹಾರಾಟ ನಡೆಸಬೇಕು.ಕೊಂಚ ವಿಳಂಬವಾದರೂ ಪ್ರಯಾಣಿಕರಿಗೆ ಅನನುಕೂಲ ಮಾತ್ರವಲ್ಲ, ಅಪಾಯದ ಸಾಧ್ಯತೆ ಹೆಚ್ಚು. ಹೀಗಾಗಿ ಏಕಾಏಕಿ ಶೇಕಡಾ 50ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿರುವುದು ಇದೇ ಮೊದಲು. ಪ್ರಕರಣದ ತನಿಖೆಗೆ ಕೋರಲಾಗಿದೆ ಎಂದು DGCA ಮುಖ್ಯಸ್ಥ ಅರುಣ್ ಕುಮಾರ್ ಹೇಳಿದ್ದರು.

Senior Citizens Savings Scheme: 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಬೆಸ್ಟ್; ಅಧಿಕ ಬಡ್ಡಿ ಜೊತೆಗೆ ತೆರಿಗೆ ಉಳಿತಾಯ

ಕೆಲವು ತಿಂಗಳ ಹಿಂದೆ ಅಂಗವಿಕಲ ಮಗುವನ್ನು ವಿಮಾನಕ್ಕೆ ಹತ್ತಿಸಲು ಹಿಂದೇಟು ಹಾಕಿದ ಇಂಡಿಗೋ ಏರ್‌ಲೈನ್ಸ್‌ಗೆ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ‘ಡಿಜಿಸಿಎ’,5 ಲಕ್ಷ ರೂ. ದಂಡ ವಿಧಿಸಿತ್ತು. ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಮಗುವಿಗೆ ಇಂಡಿಗೋ ಏರ್‌ಲೈನ್ಸ್‌ ವಿಮಾನ ಏರಲು ಅವಕಾಶ ಕೊಡದೇ ಇರುವುದು ಭಾರೀ ಟೀಕೆಗೆ ಗುರಿಯಾಗಿತ್ತು.

click me!