ಕೆಲ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಸಿದ್ಧವಾಗಿದೆ ಸರ್ಕಾರ
ಐಡಿಬಿಐ ಬ್ಯಾಂಕ್ ಹೂಡಿಕೆ ಹಿಂಪಡೆಯುವಿಕೆ ಪ್ರಮುಖ ಅಜೆಂಡಾ
ಬ್ಯಾಂಕಿಂಗ್ ನಿಯಮಗಳ (ತಿದ್ದುಪಡಿ) ಮಸೂದೆ ಮಂಡನೆಗೆ ತಯಾರಿ
ನವದೆಹಲಿ (ಡಿ. 26): ಬ್ಯಾಂಕಿಂಗ್ ಕ್ಷೇತ್ರದ (Banking Sector ಪಾಲಿಗೆ ಉತ್ತಮವಾಗಿದ್ದ 2021ರ ವರ್ಷ ಮುಕ್ತಾಯದ ಸನಿಹದಲ್ಲಿದ್ದರೆ, 2022ರಲ್ಲಿ ಹೊಸ ಗಮನಾರ್ಹ ಬದಲಾವಣೆಗೆ ಈ ಕ್ಷೇತ್ರ ಸಿದ್ಧವಾಗಬೇಕಿದೆ. ಮುಂಬರುವ ಬಜೆಟ್ ನಲ್ಲಿಯೂ ಕೇಂದ್ರ ಸರ್ಕಾರ (Central Government) ಹೊಸ ಹೊಸ ಯೋಜನೆಗಳೊಂದಿಗೆ ಕೆಲವೊಂದು ಬದಲಾವಣೆಗಳನ್ನು ತರಲು ನಿರ್ಧಾರ ಮಾಡಿದ್ದು ಈ ವರ್ಷ ಕಾರ್ಯರೂಪಕ್ಕೆ ಬರದ ಕೆಲವೊಂದು ಯೋಜನೆಗಳನ್ನು ಸೇರಿಸಿಕೊಂಡು ಸುಧಾರಣೆಗೆ ಸಾಕ್ಷಿಯಾಗಲಿದೆ. ಸಾರ್ವಜನಿಕ ವಲಯದ ಬ್ಯಾಂಕಗಳ ಖಾಸಗೀಕರಣ ಹಾಗೂ ಐಡಿಬಿಐ ಬ್ಯಾಂಕ್ ನಲ್ಲಿ(IDBI Bank) ಕಾರ್ಯತಂತ್ರದ ಹೂಡಿಕೆ ಹಿಂಪಡೆಯುವಿಕೆ ಇದರಲ್ಲಿ ಪ್ರಮುಖವಾದವುಗಳಾಗಿವೆ. ಆದರೆ, ದೇಶದಲ್ಲಿನ ಕರೋನಾ ವೈರಸ್ ಪರಿಸ್ಥಿತಿ ಅದರಲ್ಲೂ ವಿಶೇಷವಾಗಿ ಒಮಿಕ್ರಾನ್ ರೂಪಾಂತರ ವೈರಸ್ ನ ಆತಂಕಗಳಲು ಬ್ಯಾಂಕಿಂಗ್ ವಲಯದ ಸುಧಾರಣೆಯ ವೇಗಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಿ ಉಂಟುಮಾಡಬಹುದು.
ಕೋವಿಡ್-19ನ ಮಾರಣಾಂತಿಕ 2ನೇ ಅಲೆಯ ನಡುವೆಯೂ 2021ರಲ್ಲಿ ಬ್ಯಾಂಕಿಂಗ್ ವಲಯವೂ ಉತ್ತಮ ನಿರ್ವಹಣೆಯನ್ನು ತೋರಿರುವುದು ಕೇಂದ್ರದ ಸಮಾಧಾನಕ್ಕೆ ಕಾರಣವಾಗಿದೆ. ರೆಕಗ್ನಿಶನ್ (ಗುರುತಿಸುವಿಕೆ), ರೆಸಲ್ಯೂಶನ್ (ನಿರ್ಣಯ), ರಿಕ್ಯಾಪಿಟಲೈಜೇಷನ್ (ಮರುಬಂಡವಾಳೀಕರಣ) ಹಾಗೂ ರಿಫಾರ್ಮ್ಸ್ (ಸುಧಾರಣೆ) ಸರ್ಕಾರದ 4R ಕಾರ್ಯತಂತ್ರದ ಅನುಸಾರವಾಗಿ ಬ್ಯಾಂಕಿಂಗ್ ವಲಯದ ಅನುತ್ಪಾದಕ (ಎನ್ ಪಿಎ) ಆಸ್ತಿಗಳು 2021ರ ಮಾರ್ಚ್ 21ರ ಅನ್ವಯ 8,35,051 ಕೋಟಿ ರೂಪಾಯಿಗೆ ಇಳಿದಿದೆ. 2021ರ ಜುಲೈನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India)ಬಿಡುಗಡೆ ಮಾಡಿದ ಫೈನಾನ್ಶಿಯಲ್ ಸ್ಟೆಬಿಲಿಟಿ ರಿಪೋರ್ಟ್ ಅನುಸಾರ ದೇಶದ ಶೆಡ್ಯುಲ್ಡ್ ಬ್ಯಾಂಕ್ ಗಳ ಒಟ್ಟು ಅನುತ್ಪಾದಕ ಆಸ್ತಿ 2021ರಲ್ಲಿ ಶೇ. 7.48 ಇದ್ದರೆ, 2022ರ ಮಾರ್ಚ್ ನಲ್ಲಿ ಶೇ. 9.80ಕ್ಕೆ ಏರಿಕೆಯಾಗಬಹುದು ಎಂದಿದೆ.
ಈ ವರ್ಷದ ಮೊದಲ ಕ್ವಾರ್ಟರ್ ನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್ ಬಿ) ನಿವ್ವಳ ಲಾಭವು 14,012 ಕೋಟಿಗೆ ಏರಿದ್ದರೆ, ಸೆಪ್ಟೆಂಬರ್ ನಲ್ಲಿ ಮುಗಿದ 2ನೇ ಕ್ವಾರ್ಟರ್ ನಲ್ಲಿಇದು 17,132 ಕೋಟಿಗೆ ಏರಿಕೆಯಾಗಿತ್ತು. ಹಾಲಿ ಹಣಕಾಸು ವರ್ಷದ ಮೊದಲಾರ್ಧದ ಒಟ್ಟು ನಿವ್ವಳ ಲಾಭ (31,114 ಕೋಟಿ), ಬಹುತೇಕವಾಗಿ 2020-21ರ ಹಣಕಾಸು ವರ್ಷ ಪೂರ್ತಿ ಇದ್ದ ಒಟ್ಟಾರೆ (31,820 ಕೋಟಿ) ಲಾಭದ ಸನಿಹದಲ್ಲಿದೆ. ಅದರೊಂದಿಗೆ ಖಾಸಗೀ ವಲಯದ ಪ್ರಮುಖ ಬ್ಯಾಂಕ್ ಗಳಾದ ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಆರೋಗ್ಯಕರವಾದ ಲಾಭ ಗಳಿಸಿದ್ದು ಮಾತ್ರವಲ್ಲದೆ ಬ್ಯಾಡ್ ಲೋನ್ಸ್ ಗಳಲ್ಲೂ ಸಾಕಷ್ಟು ಇಳಿಕೆ ಕಂಡಿದೆ. ದೇಶದಲ್ಲಿ ಆರ್ಥಿಕ ಆರೋಗ್ಯ ಸುಧಾರಣೆ ಕಂಡಿದ್ದರಿಂದ ಸಾರ್ವಜನಿಕ ವಲಯದ ಉದ್ಯಮ (ಪಿಎಸ್ ಇ) ನೀತಿಯೂ ಕೂಡ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಬಲವಾದ ನೆಲೆಯನ್ನು ಸಿದ್ಧ ಮಾಡಿದೆ. ಇವೆಲ್ಲವೂ ದೀರ್ಘಕಾಲದಿಂದ ಬಾಲಿ ಉಳಿದಿರುವ ಹಣಕಾಸು ವಲಯದ ಪ್ರಮುಖ ಸುಧಾರಣೆಗಳಾಗಿವೆ. ಅನೇಕ ಸರ್ಕಾರಿ ವಲಯದ ಅಧಿಕಾರಿಗಳು ಕೇಂದ್ರ ಸರ್ಕಾರದ ಹೊಸ ಪಿಎಸ್ ಇ ನೀತ, 1991ರಲ್ಲಿ ಅಂದಿನ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಮೈಲಿಗಲ್ಲಿನ ಬ್ಯಾಂಕಿಂಗ್ ಸುಧಾರಣೆಗಳಿಗೆ ಹೋಲಿಕೆ ಮಾಡಿದ್ದಾರೆ.
Price Hike: ಹೊಸ ವರ್ಷಕ್ಕೆ ಮತ್ತಷ್ಟು ಬೆಲೆ ಏರಿಕೆ ಶಾಕ್: 4ನೇ ಬಾರಿಗೆ ಹೊಡೆತ!
2021-22ರ ಬಜೆಟ್ ನಲ್ಲಿ ಕೆಂದ್ರ ಸರ್ಕಾರದ ಪಿಎಸ್ಇ ನೀತಿಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ್ದ ಹಣಕಾಸು ಸಚಿವೆ (Finance Minister ) ನಿರ್ಮಲಾ ಸೀತಾರಾಮನ್ (Nirmala Sitharaman), ದೇಶದ ಅಗತ್ಯ ನಾಲ್ಕು ಕಾರ್ಯತಂತ್ರದ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡುವುದಾಗಿ ಹೇಳಿದ್ದಾರೆ. ಪರಮಾಣು ಶಕ್ತಿ, ಬಾಹ್ಯಾಕಾಶ ಮತ್ತು ರಕ್ಷಣೆ, ಸಾರಿಗೆ ಮತ್ತು ದೂರಸಂಪರ್ಕ ಹಾಗೂ ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರದ ಪಿಎಸ್ ಇ ಅಲ್ಲಿ ಹಂತಹಂತವಾಗಿ ಸರ್ಕಾರ ಹೂಡಿಕೆ ಹಿಂಪಡೆಯಲಿದೆ ಎಂದಿದ್ದರು.
Bank Account:ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರೋ ಹಣ ಯಾರಿಗೆ ಸೇರುತ್ತೆ? ಇಲ್ಲಿದೆ ಮಾಹಿತಿ
ಬ್ಯಾಂಕಿಂಗ್, ವಿಂಎ ಹಾಗೂ ಹಣಕಾಸು ಸೇವೆಗಳು ಈ ವ್ಯಾಪ್ತಿಯಲ್ಲಿ ಬರದ ಕಾರಣ ಮತ್ತಷ್ಟು ಸುಧಾರಣೆಗಳು ಇದರಲ್ಲಿ ಆಗಲಿವೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲಾಗುವ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆಯು ಅಡಿಯಲ್ಲಿ ಪಿಎಸ್ ಬಿ ಗಳಲ್ಲಿ ಸರ್ಕಾರದ ಕನಿಷ್ಠ ಹೂಡಿಕೆಯನ್ನು 51% ರಿಂದ 26% ಕ್ಕೆ ಇಳಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಐಡಿಬಿಐ ಬ್ಯಾಂಕ್ ಬಳಿಕ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಕೂಡ ಮುಂಬರುವ ದಿನಗಳಲ್ಲಿ ಖಾಸಗೀಕರಣ ಆಗುವ ಹಾದಿಯಲ್ಲಿದೆ.