*'ಗ್ರಾಮ್ ಸುರಕ್ಷಾ ಯೋಜನೆ'ಯಲ್ಲಿ ಹೂಡಿಕೆ ಮಾಡಿದ್ರೆ ಅಪಾಯ ಕಡಿಮೆ ರಿಟರ್ನ್ಸ್ ಹೆಚ್ಚು
*ಪ್ರತಿ ತಿಂಗಳು 1500ರೂ. ಜಮೆ ಮಾಡೋದು ಕಡ್ಡಾಯ.
*31ಲಕ್ಷ ರೂ.ನಿಂದ 35ಲಕ್ಷ ರೂ. ತನಕ ರಿಟರ್ನ್ಸ್
ನವದೆಹಲಿ (ಡಿ.25): ಅಂಚೆ ಕಚೇರಿಯಲ್ಲಿ(post office) ಹೂಡಿಕೆ(Invest) ಮಾಡೋದು ಅತ್ಯಂತ ಸುರಕ್ಷಿತ (Safe)ಎಂಬ ಭಾವನೆ ಇಂದಿಗೂ ಭಾರತೀಯರಲ್ಲಿದೆ.ಯಾವುದೇ ಹೂಡಿಕೆಯಾದ್ರೂ ಅದ್ರಲ್ಲಿ ಒಂದಿಷ್ಟು ರಿಸ್ಕ್ ಇದ್ದೇಇರುತ್ತದೆ. ಆದ್ರೆ ಮಧ್ಯಮ ವರ್ಗದವರು ಹೂಡಿಕೆ ಮಾಡೋವಾಗ ಸಾಕಷ್ಟು ಯೋಚಿಸುತ್ತಾರೆ. ಕಷ್ಟಪಟ್ಟು ಉಳಿಸಿದ ಹಣವನ್ನು ಎಲ್ಲೋ ಹೂಡಿಕೆ ಮಾಡಿ ಕೈಸುಟ್ಟುಕೊಳ್ಳೋದಕ್ಕೆ ಅವರು ಸಿದ್ಧರಿರೋದಿಲ್ಲ. ಹೀಗಾಗಿ ಜಾಸ್ತಿ ರಿಟರ್ನ್ಸ್ ಗಿಂತ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಈ ಹಿನ್ನಲೆಯಲ್ಲಿ ಅಂಚೆ ಕಚೇರಿಯಲ್ಲಿನ ಹೂಡಿಕೆ ಯೋಜನೆಗಳು ಅತ್ಯಂತ ಸುರಕ್ಷಿತ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ರಿರ್ಟನ್ಸ್ ಕೂಡ ಸಿಗುತ್ತದೆ. ಅಲ್ಲದೆ, ಪ್ರೀಮಿಯಂ ಕೂಡ ಕಡಿಮೆಯಿರೋ ಕಾರಣ ಪ್ರತಿ ತಿಂಗಳು ಹಣವನ್ನು ಸುಲಭವಾಗಿ ಪಾವತಿಸಬಹುದು. ಇನ್ನು ಅಂಚೆ ಕಚೇರಿಯ ಕೆಲವು ಯೋಜನೆಗಳಲ್ಲಿ ಮಧ್ಯದಲ್ಲಿ ಹೂಡಿಕೆಯನ್ನು ಹಿಂತೆಗೆಯೋ ಅವಕಾಶವೂ ಇದೆ.
ಸಣ್ಣ ಉಳಿತಾಯ ಯೋಜನೆಗಳು
ನೀವು ಸುರಕ್ಷಿತ ಹಾಗೂ ಉತ್ತಮ ರಿಟರ್ನ್ಸ್(Returns)ನೀಡೋ ಯೋಜನೆಗಳಲ್ಲಿ ಹೂಡಿಕೆ(Invest) ಮಾಡಲು ಬಯಸಿದ್ರೆ ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳು ಬೆಸ್ಟ್ . ಈ ಯೋಜನೆಗಳಲ್ಲಿ ಹೂಡಿಕೆ ಮಾಡೋದ್ರಿಂದ ಅಪಾಯವೂ ಕಡಿಮೆ, ರಿಟರ್ನ್ಸ್ ಕೂಡ ಅಧಿಕ. ಅಂಚೆ ಕಚೇರಿಯ 'ಗ್ರಾಮ್ ಸುರಕ್ಷಾ ಯೋಜನೆ'(Gram Suraksha Scheme)ಕೂಡ ಇದೇ ಸಾಲಿಗೆ ಸೇರುತ್ತದೆ. ಇದು ವಿಮಾ ಯೋಜನೆಯಾಗಿದೆ. ಭಾರತೀಯ ಅಂಚೆ ಇಲಾಖೆಯ ಈ ಸುರಕ್ಷತಾ ಯೋಜನೆ ಕಡಿಮೆ ಅಪಾಯದ ಹಾಗೂ ಹೆಚ್ಚಿನ ಲಾಭ ತರೋ ಹೂಡಿಕೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
undefined
ESIC social security scheme: ಇಎಸ್ಐಸಿ ಯೋಜನೆಗೆ ಅಕ್ಟೋಬರ್ ನಲ್ಲಿ 12.19ಲಕ್ಷ ಹೊಸ ಸದಸ್ಯರ ಸೇರ್ಪಡೆ
ಮಾಸಿಕ ಎಷ್ಟು ಹಣ ಜಮೆ ಮಾಡಬೇಕು?
ಗ್ರಾಮ್ ಸುರಕ್ಷಾ ಯೋಜನೆ ಖಾತೆಗೆ(Account) ನೀವು ಪ್ರತಿ ತಿಂಗಳು 1500ರೂ. ಜಮೆ ಮಾಡೋದು ಕಡ್ಡಾಯ. ನೀವು ನಿರ್ದಿಷ್ಟ ಅವಧಿಗೆ ನಿರಂತರವಾಗಿ ಇಷ್ಟು ಮೊತ್ತವನ್ನು ಜಮೆ ಮಾಡಿದ್ರೆ 31ಲಕ್ಷ ರೂ.ನಿಂದ 35ಲಕ್ಷ ರೂ. ತನಕ ರಿಟರ್ನ್ಸ್ ಗಳಿಸಬಹುದು.
ಹೂಡಿಕೆ ನಿಯಮಗಳು ಹೀಗಿವೆ
-ಈ ಯೋಜನೆಯಲ್ಲಿ 19-55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕ ಹೂಡಿಕೆ ಮಾಡಬಹುದು.
-ಈ ಯೋಜನೆಯಲ್ಲಿಕನಿಷ್ಠ 10,000 ರೂ.ನಿಂದ ಗರಿಷ್ಠ 10ಲಕ್ಷ ರೂ. ಮೊತ್ತದ ಪಾಲಿಸಿ ಖರೀದಿಸಲು ಅವಕಾಶವಿದೆ.
_ಈ ಯೋಜನೆಯ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು.
-ಪ್ರೀಮಿಯಂ ಪಾವತಿಗೆ 30 ದಿನಗಳ ಹೆಚ್ಚುವರಿ ಕಾಲಾವಕಾಶ ಕೂಡ ನೀಡಲಾಗುತ್ತದೆ.
-ಈ ಯೋಜನೆಯಡಿ ನಿಮಗೆ ಸಾಲ ತೆಗೆಯಲು ಕೂಡ ಅವಕಾಶವಿದೆ.
-ಈ ಯೋಜನೆಯಲ್ಲಿ ಮೂರು ವರ್ಷಗಳ ತನಕ ಹೂಡಿಕೆ ಮಾಡಿದ ಬಳಿಕ ಅದ್ರಿಂದ ಹೊರಬರಬಹುದು. ಆದ್ರೆ ಇದ್ರಿಂದ ನಿಮಗೆ ಈ ಯೋಜನೆಯ ಹೆಚ್ಚಿನ ಪ್ರಯೋಜನಗಳು ಸಿಗೋದಿಲ್ಲ.
Bank Holidays: ಜನವರಿಯಲ್ಲಿ 16 ದಿನ ಬ್ಯಾಂಕಿಗೆ ರಜೆ; ಇಲ್ಲಿದೆ RBI ಹಾಲಿಡೇ ಕ್ಯಾಲೆಂಡರ್
35ಲಕ್ಷ ರೂ. ಗಳಿಸೋದು ಹೇಗೆ?
ಒಬ್ಬ ವ್ಯಕ್ತಿ ಈ ಯೋಜನೆಯಲ್ಲಿ 19ನೇ ವಯಸ್ಸಿಗೆ ಹೂಡಿಕೆ ಮಾಡಲು ಪ್ರಾರಂಭಿಸುತ್ತಾನೆ ಎಂದು ಭಾವಿಸಿ. ಆತ 10ಲಕ್ಷ ರೂಪಾಯಿ ಪಾಲಿಸಿ ಕೊಳ್ಳುತ್ತಾನೆ. ಈ ಪಾಲಿಸಿಯ ಮಾಸಿಕ ಪ್ರೀಮಿಯಂ 55ವರ್ಷಕ್ಕೆ 1515ರೂ., 58 ವರ್ಷಕ್ಕೆ 1463ರೂ. ಹಾಗೂ 60 ವರ್ಷಕ್ಕೆ 1411ರೂ. ಆಗಿದೆ. ಈ ರೀತಿ ನೀವು ಹೂಡಿಕೆ ಮಾಡಿದ್ರೆ 55ನೇ ವಯಸ್ಸಿನಲ್ಲಿ ನಿಮಗೆ 31.60ಲಕ್ಷ ರೂ. ಸಿಗುತ್ತದೆ. 58 ವಯಸ್ಸಿನಲ್ಲಿ 33.40ಲಕ್ಷ ರೂ. ಹಾಗೂ 60ನೇ ವಯಸ್ಸಿನಲ್ಲಿ 34.60ಲಕ್ಷ ರೂ. ಸಿಗುತ್ತದೆ. ಅಂದ್ರೆ ದಿನಕ್ಕೆ ಬರೀ 50ರೂ. ಹೂಡಿಕೆ ಮಾಡಿದ್ರೆ ನಿಮಗೆ 34.60ಲಕ್ಷ ರೂ. ಸಿಗುತ್ತದೆ.