
ಬೆಂಗಳೂರು: ಇದು ಸೋಶಿಯಲ್ ಮೀಡಿಯಾ ಯುಗ. ಪ್ರತಿ ಮನೆಯಲ್ಲೊಬ್ಬರು ಯೂಟ್ಯೂಬರ್‌ಗಳು ಹುಟ್ಟಿಕೊಂಡಿದ್ದು, ಎಲ್ಲಿ ತಿಂದಿದ್ದು ಉಂಡಿದ್ದರಿಂದ ಶುರುವಾಗಿ ಜೀವನದ ಪ್ರತಿ ದಿನಚರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡ್ತಿರ್ತಾರೆ. ಅನೇಕರು ವೃತ್ತಿಯ ಜೊತೆ ಪ್ರವೃತ್ತಿಯಾಗಿ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಕೆಲವರು ಅದರಲ್ಲಿ ಕ್ಲಿಕ್ ಆಗಿದ್ದರೆ ಮತ್ತೆ ಕೆಲವರು ಯಶಸ್ಸಿಗಾಗಿ ಸೈಕಲ್ ತುಳಿಯುತ್ತಿದ್ದಾರೆ. ಒಂದು ಲೈಕ್ ಒಂದು ಕಾಮೆಂಟ್ ಒಂದು ವೀವ್ಸ್‌ಗಾಗಿ ಯೂಟ್ಯೂಬರ್‌ಗಳು ಸೇರಿದಂತೆ ಬಹುತೇಕ ಸೋಶಿಯಲ್ ಮಿಡಿಯಾ ಸ್ಟಾರ್‌ಗಳು ಇನ್ನಿಲ್ಲದ ಶ್ರಮ ಪಡುತ್ತಾರೆ. ಹಾಗೆಯೇ ಅನೇಕರ ಬಳಿ ನನ್ನದೊಂದು ಯೂಟ್ಯೂಬ್ ಚಾನೆಲ್ ಇದೆ ಪ್ಲೀಸ್ ಲೈಕ್ ಮಾಡಿ ಸಬ್‌ಸ್ಕ್ರೈಬ್ ಮಾಡಿ ಎಂದು ಸ್ನೆಹಿತರು, ನೆರೆಹೊರೆಯವರೊಂದಿಗೆ ಹೇಳುತ್ತಾ ಪ್ರಚಾರ ನೀಡಬೇಕಿದೆ. ಹಾಗೆಯೇ ಇಲ್ಲೊಬ್ಬರು ಆಟೋಚಾಲಕರು ತಮ್ಮ ಯೂಟ್ಯೂಬ್ ಚಾನಲ್‌ಗಾಗಿ ವಿಭಿನ್ನ ಪ್ರಚಾರ ನೀಡಿದ್ದು, ಆ ವಿಡಿಯೋ ಆ ಪ್ರಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ನಾವು ಒಂದು ಉತ್ಪನ್ನದ ಉದ್ಯಮ ಆರಂಭಿಸುವಾಗ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಪ್ರಚಾರ, ನಂತರ ಗುಣಮಟ್ಟ, ದೊಡ್ದದಾದ ಉದ್ಯಮ ಆರಂಭಿಸಿ ಪ್ರಚಾರವಿಲ್ಲದೇ ಹೋದರೆ ಯಶಸ್ಸು ಕಷ್ಟಸಾಧ್ಯ. ಹೀಗಾಗಿ ನಾವು ಸೆಲ್ಪ್ ಪ್ರಮೋಷನ್ ಮಾಡಬೇಕಾಗಿರುವುದ ಇತ್ತೀಚಿನ ಅಗತ್ಯ. ಅದೇ ದೊಡ್ಡ ದೊಡ್ಡ ಸಂಸ್ಥೆಗಳು ಬಂಟಿಗ್ಸ್, ಬೋರ್ಡಿಂಗ್ಸ್ ಹೋಲ್ಡಿಂಗ್ಸ್‌ಗಳನ್ನು ಹಾಕಿ ಪ್ರಮೋಷನ್ ನೀಡ್ತಾರೆ. ಟಿವಿ ಸೇರಿದಂತೆ ಮಾಧ್ಯಮಗಳಲ್ಲಿ ಜಾಹೀರಾತು ಕೊಡ್ತಾರೆ. ಆದರೆ ಕೈಲಿ ಕಾಸಿಲ್ಲದ ಬಡವರೇನು ಮಾಡೋದು ಹೇಳಿ, ಏನಾದರೂ ಸಣ್ಣ ಮಟ್ಟದ ಉಪಾಯವನ್ನು ಹುಡುಕ್ಬೇಕಾಗುತ್ತೆ. ಹಾಗೆಯೇ ಇಲ್ಲಿ ಆಟೋ ಚಾಲಕರೊಬ್ಬರು ಯೂಟ್ಯೂಬ್ ಚಾನೆಲ್ ಒಂದನ್ನು ಸ್ಥಾಪಿಸಿದ್ದು, ಅದಕ್ಕಾಗಿ ತಮ್ಮ ಆಟೋದಲ್ಲಿಯೇ ಪೋಸ್ಟರ್ ಅಂಟಿಸಿ ಪ್ರಮೋಷನ್ ನೀಡಿದ್ದಾರೆ.
ಮಿಸ್ ಆಗಿ 10 ಸಾವಿರ ರೂಪಾಯಿ ಕಳಿಸಿದ ಪ್ರಯಾಣಿಕ, ವಾಪಾಸ್ ಕಳಿಸಿದ ಆಟೋ ಚಾಲಕ!
ಈ ವಿಚಾರವನ್ನು ಆಟೋದಲ್ಲಿ ಪ್ರಯಾಣಿಸಿದ ಚಾಲಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. Sushant Koshy ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಬರೆದುಕೊಂಡಿದ್ದು, ಇವತ್ತಿನ ನನ್ನ ಉಬರ್ ಆಟೋ ಡ್ರೈವರ್ ಓರ್ವ ಯೂಟ್ಯೂಬ್ ಇನ್‌ಫ್ಲುಯೆನ್ಸರ್, ಅವರು ವಿಶೇಷವಾಗಿ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುವುದಕ್ಕಾಗಿ ಯೂಟ್ಯೂಬ್ ಚಾನೆಲ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಆಟೋ ಚಾಲಕರು ತನ್ನ ಸೀಟಿನ ಹಿಂದೆ ಪ್ರಯಾಣಿಕರು ಕೂರುವ ಸ್ಥಳಕ್ಕಿಂತ ಮುಂದೆ ಪೋಸ್ಟರ್ ಅನ್ನು ಅಂಟಿಸಿದ್ದು, ದಯವಿಟ್ಟು ನನ್ನ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ ಎಂದು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಬರೆದುಕೊಂಡಿದ್ದಾರೆ. ಗೋಲ್ಡ್ ಜನಾರ್ಧನ್ ಇನ್‌ವೆಸ್ಟರ್ ಎಂಬ ಹೆಸರಿನಲ್ಲಿ ಈ ಯೂಟ್ಯೂಬ್ ಚಾನೆಲ್ ಇದ್ದು, ಇಲ್ಲಿ ಹಣಕಾಸಿನ ಸಲಹೆಗಳನ್ನು ನೀವು ಕೇಳಬಹುದಾಗಿದೆ.
ಹೀಗೆ ಹಣಕಾಸಿನ ಚಾನೆಲ್ ಆರಂಭಿಸಿದ ಈ 29 ವರ್ಷದ ಆಟೋ ಚಾಲಕನ ಹೆಸರು ಜನಾರ್ಧನ್, ಇವರಿಗೆ ಈಗ ಯೂಟ್ಯೂಬ್‌ನಲ್ಲಿ ಮೂರು ಲಕ್ಷದ 77 ಸಾವಿರ ಸಬ್‌ಸ್ಕ್ರೈಬರ್‌ಗಳಿದ್ದು, ಸಾವಿರಾರು ಜನ ಇವರ ವೀಡಿಯೋಗಳನ್ನು ವೀಕ್ಷಿಸಿದ್ದಾರೆ. ಅನೇಕರು ಇವರ ವೀಡಿಯೋಗಳಿಗೆ ಕಾಮೆಂಟ್ ಮಾಡಿದ್ದು, ಅವರ ಬ್ಯುಸಿನೆಸ್ ಐಡಿಯಾಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
Viral Post: ಪ್ರಯಾಣಿಕರಿಗೆ ಉಚಿತ ಬಿಸ್ಕತ್, ವಾಟರ್ ಬಾಟಲ್ ಫ್ರೀ ನೀಡೋ ಚಾಲಕ!
ಆಟೋ ಚಾಲನೆಯ ಜೊತೆ ಜೊತೆಗೆ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಆಟೋ ಚಾಲಕ ಜನಾರ್ದನ್ ಅವರು ಅದರಲ್ಲಿ ಯಶಸ್ವಿಯೂ ಆಗಿದ್ದು, ಪ್ರವೃತ್ತಿಯಾಗಿ ಆರಂಭಿಸಿದ ಯೂಟ್ಯೂಬ್ ಚಾನೆಲ್ ಅವರ ಬ್ಯುಸಿನೆಸ್ ಐಡಿಯಾಗಳಂತೆ ಯಶಸ್ವಿಯೂ ಆಗಿದೆ. ಇವರು 10 ರೂಪಾಯಿ ದುಡಿಯುತ್ತಿದ್ದಾರೆ ಅದರಲ್ಲಿ 3 ರೂಪಾಯಿಯನ್ನು ಇನ್‌ವೆಸ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಇಂದು ಪ್ರಪಂಚದಾದ್ಯಂತ ಕೋಟ್ಯಾಂತರ ಕಂಟೆಂಟ್ ಕ್ರಿಯೇಟರ್‌ಗಳು ಹುಟ್ಟಿಕೊಂಡಿದ್ದು, ವೆರೈಟಿ ವೆರೈಟಿಯಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ವೃತ್ತಿಯ ಜೊತೆ ಪ್ರವೃತ್ತಿಯನ್ನು ಕೂಡ ಹೀಗೆ ಸಮಯದ ಹೊಂದಾಣಿಕೆಯೊಂದಿಗೆ ನಡೆಸಬಹುದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.