Personal Finance : ಈ ಬಾರಿ ಸಂಬಳದಲ್ಲಾಗಲಿದೆ ಬಂಪರ್ ಹೈಕ್ ..!?

Published : Apr 27, 2023, 11:57 AM IST
Personal Finance : ಈ ಬಾರಿ ಸಂಬಳದಲ್ಲಾಗಲಿದೆ ಬಂಪರ್ ಹೈಕ್ ..!?

ಸಾರಾಂಶ

ತಿಂಗಳಿಗೊಮ್ಮೆ ಸಂಬಳ ಸಿಕ್ಕಿಲ್ಲವೆಂದ್ರೆ ಜೀವನ ನಿರ್ವಹಣೆ ಕಷ್ಟವಾಗುತ್ತೆ. ದುಡಿಯೋದು ಒಂದು ಕೈ, ತಿನ್ನೋದು ನಾಲ್ಕೈದು ಬಾಯಿ ಅಂದಾಗ ಜೀವನ ಮತ್ತಷ್ಟು ಕಷ್ಟವಾಗುತ್ತೆ. ಈಗಿನ ಪರಿಸ್ಥಿತಿಯಲ್ಲಿ ಸಂಬಳ ಹೆಚ್ಚಳ ಮಾಡೋದು ಅನಿವಾರ್ಯ ಎನ್ನುತ್ತಾರೆ ತಜ್ಞರು.  

ಸಂಬಳ ಹೆಚ್ಚಾಗ್ಬೇಕು ಎಂಬುದು ಪ್ರತಿಯೊಬ್ಬ ಉದ್ಯೋಗಿ ಆಸೆ. ಕೆಲಸ ಮಾಡೋದೇ ಸಂಬಳಕ್ಕೆ ಅಂದ್ಮೇಲೆ, ಪ್ರತಿ ವರ್ಷ ಹೈಕ್ ಸಿಗ್ಬೇಕು, ಪ್ರಮೋಷನ್ ಸಿಗಬೇಕು ಎಂದು ಎಲ್ಲ ಉದ್ಯೋಗಿಗಳು ಬಯಸ್ತಾರೆ. ತಮ್ಮ ಅರ್ಹತೆಗಿಂತ ಹೆಚ್ಚಿನ ಸಂಬಳ ಬಯಸುವವರೇ ಹೆಚ್ಚು. ಈ ಬಾರಿ ಭಾರತೀಯ ಉದ್ಯೋಗಿಗಳ ನಿರೀಕ್ಷೆ ಹೆಚ್ಚಿದೆ.

ಕೊರೊನಾ (Corona) ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದರು. ಮತ್ತೆ ಕೆಲವರ ಸಂಬಳ (Salary) ದಲ್ಲಿ ಇಳಕೆಯಾಗಿತ್ತು. ಕೊರೊನಾ ನಂತ್ರ ಆರ್ಥಿಕ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಹೆಚ್ಚಿನ ಸಂಬಳ ಪಡೆದು ನೆಮ್ಮದಿ ಜೀವನ ನಡೆಸಬೇಕು ಎನ್ನುವವರ ಸಂಖ್ಯೆ ಹೆಚ್ಚಿದೆ. ಈ ಮಧ್ಯೆ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದಂತೆ ಖುಷಿ ಸುದ್ದಿಯೊಂದಿದೆ. ಹಿಂದಿನ ವರ್ಷದಂತೆ ಈ ವರ್ಷವೂ ಭಾರತದಲ್ಲಿ ಕಾರ್ಮಿಕರ ವೇತನ ಹೆಚ್ಚಳವಾಗುವ ನಿರೀಕ್ಷೆ (Expectation) ಇದೆ. 

Income Tax Refund: ಹೆಚ್ಚುವರಿ ಆದಾಯ ತೆರಿಗೆ ಪಾವತಿಸಿದ್ದೀರಾ? ರೀಫಂಡ್ ಕ್ಲೇಮ್ ಮಾಡಲು ಹೀಗೆ ಮಾಡಿ

ಈ ವರ್ಷ ಶೇಕಡಾ 90 ರಷ್ಟು ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಎಡಿಪಿ ಸಂಶೋಧನಾ ಸಂಸ್ಥೆಯ  ಪೀಪಲ್ ಅಟ್ ವರ್ಕ್ 2023 : ಎ ಗ್ಲೋಬಲ್ ವರ್ಕ್‌ಫೋರ್ಸ್ ವ್ಯೂ ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಈ ಸಮೀಕ್ಷೆಯಲ್ಲಿ ಭಾರತದ 2000 ಸಿಬ್ಬಂದಿ ಪಾಲ್ಗೊಂಡಿದ್ದರಂತೆ.  17 ದೇಶಗಳ 32 ಕಾರ್ಮಿಕರನ್ನು ಈ ಸಮೀಕ್ಷೆಯಲ್ಲಿ ಸೇರಿಸಲಾಗಿದೆ. 

ಎಡಿಪಿ ರಿಸರ್ಚ್‌ನ ವರದಿ ಪ್ರಕಾರ, ಭಾರತದಲ್ಲಿ ಶೇಕಡಾ 90 ರಷ್ಟು ಉದ್ಯೋಗಿಗಳು ಈ ವರ್ಷ ಸಂಬಳ ಹೆಚ್ಚಳದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸುಮಾರು ಶೇಕಡಾ 20 ರಷ್ಟು ಉದ್ಯೋಗಿಗಳು ಶೇಕಡಾ 4 ರಿಂದ 6 ರಷ್ಟು ವೇತನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಮತ್ತೊಂದೆಡೆ  ಶೇಕಡಾ 19 ರಷ್ಟು ಉದ್ಯೋಗಿಗಳು ಸಂಬಳದಲ್ಲಿ ಶೇಕಡಾ 10 ರಿಂದ 12 ರಷ್ಟು ಸಂಬಳ ಹೆಚ್ಚಳವನ್ನು ನಿರೀಕ್ಷಿಸುತ್ತಾರೆ.

ಹಿಂದಿನ ವರ್ಷವೂ ಹೆಚ್ಚಾಗಿತ್ತು ವೇತನ : ಕಳೆದ ವರ್ಷ ಭಾರತದಲ್ಲಿ ಕಾರ್ಮಿಕರ ವೇತನದಲ್ಲಿ ಹೆಚ್ಚಳವಾಗಿತ್ತು. ವೇತನ ಶೇಕಡಾ 78 ರಷ್ಟು ಹೆಚ್ಚಳವಾಗಿತ್ತು. ಅಂದ್ರೆ ಸರಾಸರಿ ಶೇಕಡಾ 4ರಿಂದ 6ರಷ್ಟು ವೇತನ ಹೆಚ್ಚಳವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.  

ಸಂಬಳ ಹೆಚ್ಚಳದ ಬದಲು ಈ ಸೌಲಭ್ಯ : ಈ ಬಾರಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಸಂಬಳದ ಬದಲು ಬೇರೆ ನಿರೀಕ್ಷೆಯಲ್ಲಿದ್ದಾರೆ. ಶೇಕಡಾ 65ರಷ್ಟು ಮಂದಿ, ಈ ವರ್ಷ ಸಂಬಳ ಹೆಚ್ಚಳವಾಗದೆ ಹೋದ್ರೂ ಪಾವತಿಸಿದ ರಜಾದಿನಗಳು ಅಥವಾ ಪ್ರಯಾಣ ಭತ್ಯೆ ರೂಪದಲ್ಲಿ ಮೆರಿಟ್ ಬೋನಸ್ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. 

ಮಕ್ಕಳ ಭವಿಷ್ಯಕ್ಕೆ ಯಾವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡೋದು ಬೆಸ್ಟ್? ಇಲ್ಲಿದೆ ಮಾಹಿತಿ

ಸಂಬಳ ಹೆಚ್ಚಳ ಈಗ ಅನಿವಾರ್ಯ : ಸಂಬಳ ಏರಿಕೆ ಈಗ ಅನಿವಾರ್ಯವಾಗಿದೆ ಎನ್ನುತ್ತಾರೆ ತಜ್ಞರು. ಈಗ ಜೀವನ ವೆಚ್ಚ ಹೆಚ್ಚಾಗ್ತಿದೆ. ಆದ್ರೆ ಈಗ ಸಿಗ್ತಿರುವ ಸಂಬಳ ಜೀವನ ನಿರ್ವಹಣೆಗೆ ಸಾಕಾಗ್ತಿಲ್ಲ. ಖರ್ಚು ಹೆಚ್ಚಾಗ್ತಿದ್ದು, ಗಳಿಕೆ ಕಡಿಮೆಯಿದೆ. ಈ ಸಂದರ್ಭದಲ್ಲಿ ಮಧ್ಯಮ ಹಾಗೂ ಕೆಳ ವರ್ಗದ ಜನರಿಗೆ ಸಂಬಳ ಹೆಚ್ಚಳ ಅನಿವಾರ್ಯವಾಗಿದೆ. ಸಂಬಳ ಕಡಿಮೆ ಇರುವ ಕಾರಣ ಜನರು ಕೈಬಿಚ್ಚಿ ಖರ್ಚು ಮಾಡ್ತಿಲ್ಲ. ಈ ಪರಿಣಾಮವನ್ನು ಹೆಚ್ಚು ಆದಾಯ ಗಳಿಸುತ್ತಿರುವವರೂ ಅನುಭವಿಸುತ್ತಿದ್ದಾರೆ. ಅವರಿಗೂ ಸಂಬಳ ಸಾಲ್ತಿಲ್ಲ ಎನ್ನುತ್ತಾರೆ ತಜ್ಞರು. ಅಗತ್ಯ ವೆಚ್ಚಗಳನ್ನು ಪೂರೈಸಲು ಜನರು ಪರದಾಡುತ್ತಿದ್ದಾರೆ. ಹೆಚ್ಚುತ್ತಿರುವ ಬಡ್ಡಿದರಗಳು, ಹೆಚ್ಚುತ್ತಿರುವ ಬಾಡಿಗೆ ಮತ್ತು ಆಹಾರ ಮತ್ತು ಪಾನೀಯಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗಿದೆ. ಹಾಗಾಗಿ ಜನರ ಐಷಾರಾಮಿ ಖರ್ಚು ಕಡಿಮೆಯಾಗಿ ಆರ್ಥಿಕ ಸಮಸ್ಯೆ ಎದುರಾಗಿದೆ. ಹಣದುಬ್ಬರ ಗರಿಷ್ಠ ಮಟ್ಟ ತಲುಪಿದ್ದರೂ ಜನರು ಅದನ್ನು ಸರಿಯಾಗಿ ನಿರ್ವಹಿಸಲು ಇನ್ನೂ ಸಮಯಬೇಕು ಎಂದು ತಜ್ಞರು ಹೇಳಿದ್ದಾರೆ.  
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!