ಬೋಳು ತಲೆಯಿಂದ ಬಾಳು ಬೆಳಕಾಯ್ತು: ತಲೆಯಲ್ಲೇ ಜಾಹೀರಾತಿಗೆ ಜಾಗ ಕೊಟ್ಟ ಕೇರಳ ಯುವಕ

Published : Mar 01, 2025, 02:24 PM ISTUpdated : Mar 01, 2025, 02:25 PM IST
ಬೋಳು ತಲೆಯಿಂದ ಬಾಳು ಬೆಳಕಾಯ್ತು: ತಲೆಯಲ್ಲೇ ಜಾಹೀರಾತಿಗೆ  ಜಾಗ ಕೊಟ್ಟ ಕೇರಳ ಯುವಕ

ಸಾರಾಂಶ

ಕೇರಳದ ಯೂಟ್ಯೂಬರ್ ಶಫೀಕ್ ಹಸಿಮ್ ತಮ್ಮ ಬೋಳು ತಲೆಯನ್ನು ಜಾಹೀರಾತಿಗಾಗಿ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಕೂದಲು ಕಸಿ ಮಾಡುವ ಸಂಸ್ಥೆಯೊಂದು ಇವರ ತಲೆಯ ಮೇಲೆ ಜಾಹೀರಾತು ಹಾಕುವುದಕ್ಕೆ 50 ಸಾವಿರ ರೂಪಾಯಿ ನೀಡಿದೆ.

ಹೊಸ ಕ್ರಿಯೇಟಿವಿ, ಚಿಂತನೆ, ವಿಭಿನ್ನವಾದ ಆಲೋಚನೆ, ಸೃಜನಶೀಲತೆಯಿಂದ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಜೇನು ನೊಣದಂತೆ ಕಸದಲ್ಲಿ ರಸ ಹುಡುಕಿ ಯಶಸ್ವಿಯಾದ ಅನೇಕರು ನಮ್ಮ ನಡುವೆ ಇದ್ದಾರೆ. ಅದೇ ರೀತಿ ಇಲ್ಲೊಬ್ಬರು ತಮ್ಮ ಬೋಳು ತಲೆಯಿಂದಲೇ ಈಗ ಸಾವಿರಾರು ರೂಪಾಯಿ ಸಂಪಾದನೆ ಮಾಡಿದ್ದಾರೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.

ಸಾಮಾನ್ಯವಾಗಿ ಈಗಿನ ಯುವ ಸಮೂಹದ ಅನೇಕರು ತಲೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅನೇಕರು ವಯಸ್ಸಿಗಿಂತಲೂ ದೊಡ್ಡವರಂತೆ ಕಾಣುತ್ತಾರೆ. ತಲೆ ಕೂದಲು ಉದರೋದ್ರಿಂದ ಬ್ರೇಕಾಫ್‌ ಆದಾಗ ಆಗುವುದಕ್ಕಿಂತಲೂ ಹೆಚ್ಚು ಡಿಫ್ರೆಶನ್ ಆಗುತ್ತದೆ ಎಂಬುದು ಕೆಲವರ ಮಾತು ಹೀಗಿರುವಾಗ ತಲೆ ಕೂದಲು ಉದುರುತ್ತಿದೆ ಎಂದು ಕೊರಗುತ್ತಾ ಕೂರುವ ಬದಲು ಕೇರಳದ ಈ ಯುವಕರೊಬ್ಬರು ಈ ಬೋಳು ತಲೆಯನ್ನೇ ಸಂಪಾದನೆಗೆ ದಾರಿಯಾಗಿಸಿದ್ದಾರೆ. 

ಜಾಹೀರಾತು ನೀಡಿದ ಸಂಸ್ಥೆ

ಕೇರಳದ ಟ್ರಾವೆಲ್ ಯೂಟ್ಯೂಬರ್ ಆಗಿರುವ ಶಫೀಕ್ ಹಸಿಮ್‌ ಎಂಬುವವರೇ ಹೀಗೆ ವಿಭಿನ್ನವಾದ ಆಲೋಚನೆಯಿಂದ ಮನೆ ಬಾಗಿಲಿಗೆ ಲಕ್ಷ್ಮಿಯನ್ನು ಬರ ಮಾಡಿಕೊಂಡವರು. ಇವರು ತಮ್ಮ ಬೋಳು ತಲೆಯಲ್ಲಿರುವ ಖಾಲಿ ಜಾಗವನ್ನೇ ಜಾಹೀರಾತು ನೀಡುವುದಕ್ಕೆ ಸಂಸ್ಥೆಯೊಂದಕ್ಕೆ ನೀಡಿದ್ದಾರೆ. ಇವರು ತಮ್ಮ ಈ ವಿಚಿತ್ರ ಐಡಿಯಾವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇವರ ಈ ಮಾತಿನಿಂದ ಪ್ರೇರಣೆಗೊಂಡ ಕೂದಲು ಕಸಿ ಮಾಡುವ ಸಂಸ್ಥೆ (ಲಾ ಡೆನ್ಸಿಟೇ) La Densitae ಇವರಿಗೆ ತಮ್ಮ ತಲೆಯ ಮೇಲೆಯೇ ಜಾಹೀರಾತು ನೀಡುವುದಕ್ಕೆ ಮುಂದೆ ಬಂದಿದ್ದು, ಇದಕ್ಕಾಗಿ ಅವರಿಗೆ 50 ಸಾವಿರ ರೂಪಾಯಿಯನ್ನು ಪಾವತಿ ಮಾಡಿದೆ. 

ಈ ಮೂಲಕ ತಲೆಯನ್ನೇ ಜಾಹೀರಾತು ಫಲಕವಾಗಿಸಿದ ಇವರ ಕೌಶಲ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ. ಈ ಮೂಲಕ ಎಲ್ಲರ ಗಮನ ಸೆಳೆದ ಈ ಯೂಟ್ಯೂಬರ್, ತಾತ್ಕಾಲಿಕವಾಗಿ ಈಗ ತಮ್ಮ ತಲೆಯ ಮೇಲೆ ಲಾ ಡೆನ್ಸಿಟೇ ಲೋಗೋದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಹಿಂದೆ ಶಫೀಕ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಮಾಡುವ ಮೂಲಕ ತನ್ನ 'ಬೋಳು ತಲೆಯ' ಮೇಲೆ ಜಾಹೀರಾತು ನೀಡಲು ಕಂಪನಿಗಳನ್ನು ಆಹ್ವಾನಿಸುವ ಮುಕ್ತ ಆಹ್ವಾನವನ್ನು ಪೋಸ್ಟ್ ಮಾಡಿದರು. ಇವರ ಮಾರ್ಕೆಟಿಂಗ್‌ನ ಈ ವಿಶಿಷ್ಟ ಪ್ರಯತ್ನವು ಕೊಚ್ಚಿ ಮೂಲದ ಲಾ ಡೆನ್ಸಿಟೇ ಕಂಪನಿಯ ಗಮನ ಸೆಳೆಯಿತು. ಹೀಗಾಗಿ ಶಫೀಕ್‌ಗೆ ಈಗ ಬೋಳು ತಲೆಯ ಆದಾಯವನ್ನು ನೀಡುವ ಮೂಲವಾಗಿದೆ. 

ಒಂದೇ ವಾರದಲ್ಲಿ ಬೋಳು ತಲೆ; 3 ಗ್ರಾಮದ ಜನರಲ್ಲಿ ಶುರುವಾಯ್ತು ಆತಂಕ, ತನಿಖೆ ಆರಂಭ!

ಮೂರು ತಿಂಗಳಲ್ಲಿ ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಕನಿಷ್ಠ ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಲಾಗುವುದು. ನಾನು ವೀಡಿಯೊಗಳನ್ನು ರೆಕಾರ್ಡ್ ಮಾಡುವಾಗ, ವೀಕ್ಷಕರ ಗಮನವನ್ನು ಸೆಳೆಯಲು ನನ್ನ ತಲೆಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ಉತ್ತಮ ಕೊಡುಗೆಗಳನ್ನು ನಾನು ನಿರೀಕ್ಷಿಸುತ್ತೇನೆ. ಜಗತ್ತಿನಲ್ಲಿ ಒಬ್ಬ ವ್ಯಕ್ತಿ ತನ್ನ ತಲೆಯನ್ನು ಜಾಹೀರಾತು ಫಲಕವಾಗಿ ನೀಡುತ್ತಿರುವುದು ಇದೇ ಮೊದಲು ಎಂದು ಅವರು ಹಾಸ್ಯಮಯವಾಗಿ ಹೇಳಿಕೊಂಡಿದ್ದಾರೆ. 

ಬೋಲ್ಡ್ ಅಲ್ಲ ಬಾಲ್ಡ್ ಇಸ್ ಬ್ಯೂಟಿಫುಲ್ : ಅಲೋಪೆಸಿಯಾದಿಂದ ಬಳಲುತ್ತಿರುವ ವಧುವಿನ ದಿಟ್ಟ ಹೆಜ್ಜೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಪ್ರಯತ್ನದಲ್ಲಿ ಅವರು ತಮ್ಮ ಬೋಳುತಲೆಯನ್ನು ಸಾಮಾನ್ಯಗೊಳಿಸಲು ಯತ್ನಿಸಿದ್ದು, ಇದು ಈಗ ಅವರಿಗೆ ಹೊಸ ಕೊಡುಗೆಯನ್ನೇ ನೀಡಿದೆ. ಬಹುಶಃ ಅವರು ಈ ರೀತಿ ಸಂಸ್ಥೆಯೊಂದು ಮುಂದೆ ಬಂದು ಅವರಿಗೆ ಜಾಹೀರಾತು ನೀಡುವುದು ಎಂದು ಊಹಿಸಿದ್ದರೋ ಇಲ್ಲವೋ ಗೊತ್ತಿಲ್ಲ,ಾದರೆ ಅವರ ಈ ಹೊಸತನ ಅವರಿಗೆ ಹೊಸದೊಂದು ಅವಕಾಶವನ್ನು ತೆರೆದಿಟ್ಟಿರುವುದಂತು ನಿಜ. ಅಲ್ಲದೇ ಅವರು ಈಗ ಎಲ್ಲೆಡೆ ಉತ್ತಮ ಖ್ಯಾತಿಯನ್ನು ಗಳಿಸಲು ಆರಂಭಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ತಾನು ಸ್ವಲ್ಪ ಆಳವಾದ ಚಿಂತನೆಯ ನಂತರ, ಬೋಳುತಲೆಯು ನೈಸರ್ಗಿಕವಾಗಿದೆ ಮತ್ತು ಅದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ನಾಚಿಕೆಗೇಡಿನ ಸಂಗತಿ ಇಲ್ಲ ಎಂದು ನಾನು ಅರಿತುಕೊಂಡೆ ಬಾಲ್ಡ್ ಇಸ್ ಬ್ಯೂಟಿಫುಲ್, ಜನರು ತಮ್ಮ ಸ್ವಂತಿಕೆಯಲ್ಲಿ ಮಾತ್ರ ಹಾಯಾಗಿರಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ.

ದೇಹದ ಬಗೆಗೆ ಸಕಾರಾತ್ಮಕತೆ ಹಾಗೂ ವಿಭಿನ್ನವಾದ ಮಾರ್ಕೆಟಿಂಗ್‌ನಿಂದಾಗಿ ಬಿಲ್‌ಬೋರ್ಡ್‌ ಅಲ್ಲ ಬಾಲ್ಡ್‌ಬೋರ್ಡ್ ಅವರು ಈಗ ಎಲ್ಲರನ್ನು ಸೆಳೆಯುತ್ತಿದ್ದಾರೆ. ಶಫೀಕ್ ಅವವರ ಈ ಹೊಸ ಚಿಂತನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!