ಕೊರೋನಾ ಇಡೀ ಜಗತ್ತಿಗೆ ಕಷ್ಟದ ಸಮಯ. ಅದಕ್ಕಿಂತ ಹೆಚ್ಚಾಗಿ ಪ್ರೀತಿಪಾತ್ರರನ್ನು ವೈರಸ್‌ನಿಂದ ಕಳೆದುಕೊಂಡ ಜನರಿಗೆ ಇದು ಅತ್ಯಂತ ಕಷ್ಟದ ಸಮಯ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಕಂಪನಿಗಳು ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡಲು ಮಾದರಿ ಕ್ರಮಗಳನ್ನು ಅನುಸರಿಸಿವೆ.
ಬಜಾಜ್ ಆಟೋ ಕಂಪನಿಯು COVID-19 ಗೆ ಬಲಿಯಾಗುವ ನೌಕರರ ಕುಟುಂಬಗಳಿಗೆ ಎರಡು ವರ್ಷಗಳವರೆಗೆ ಸಂಬಳವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ನೋವಿನಲ್ಲಿರುವ ಉದ್ಯೋಗಿ ಕುಟುಂಬಗಳನ್ನು ಬೆಂಬಲಿಸುವ ಕಂಪನಿಯ ಪ್ರಯತ್ನ ಇಲ್ಲಿಗೇ ಮುಗಿಯುವುದಿಲ್ಲ.
ಅಕ್ಷಯ ತೃತೀಯ: ರಿಲಯನ್ಸ್ ಜ್ಯುವೆಲ್ಸ್‌ನಿಂದ ಆನ್‌ಲೈನ್ ಚಿನ್ನ ಖರೀದಿಗೆ ಅವಕಾಶ!
ಕೊರೋನಾದಿಂದ ಸಾವನ್ನಪ್ಪಿದ ನೌಕರರ ಮಕ್ಕಳ ಶಿಕ್ಷಣಕ್ಕೂ ಧನಸಹಾಯ ನೀಡಲಿದೆ. ಬಜಾಜ್ ಆಟೋ ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ನಿರ್ಧಾರವನ್ನು ಪ್ರಕಟಿಸಿದ್ದು, ಕಂಪನಿಯು ಒದಗಿಸುವ ವೈದ್ಯಕೀಯ ವಿಮೆಯನ್ನು ಸಹ ಮೃತರ ಅವಲಂಬಿತರಿಗೆ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
ನಿರ್ಧಾರವನ್ನು ಪ್ರಕಟಿಸಿದ ಲಿಂಕ್‌ಡಿನ್ ಪೋಸ್ಟ್‌ನಲ್ಲಿ, ಬಜಾಜ್ ಆಟೋ, ಮಾಸಿಕ ವೇತನವನ್ನು ತಿಂಗಳಿಗೆ 2 ಲಕ್ಷ ರೂ.ವರೆಗೆ 24 ತಿಂಗಳವರೆಗೆ ಪಾವತಿಸುವುದು, 12 ನೇ ತರಗತಿಯವರೆಗೆ ಪ್ರತಿ ಮಗುವಿಗೆ ಗರಿಷ್ಠ 1 ಲಕ್ಷ ರೂ.ಗಳ ನೆರವು ಮತ್ತು ಗರಿಷ್ಠ ಎರಡು ಮಕ್ಕಳಿಗೆ ಶಿಕ್ಷಣ ನೆರವು, ಪದವಿಗಾಗಿ ಪ್ರತಿ ಮಗುವಿಗೆ ವರ್ಷಕ್ಕೆ 5 ಲಕ್ಷ ರೂ. ನೆರವು ನೀಡಲಾಗುವುದು ಎಂದಿದೆ.
ಕೊರೋನಾ ಆರ್ಭಟ ಮಧ್ಯೆಯೂ ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್, ಡಬಲ್ ಹೈಕ್!
ಉದ್ಯೋಗಿ-ಕೇಂದ್ರಿತ ಸಂಘಟನೆಯಾಗಿ, ನಾವು ಕೋವಿಡ್ ಆರೈಕೆ ಸೌಲಭ್ಯಗಳು, ಪೂರ್ವಭಾವಿ ಪರೀಕ್ಷೆ, ಆಸ್ಪತ್ರೆಗೆ ದಾಖಲಾತಿ ನೆರವು, ವ್ಯಾಕ್ಸಿನೇಷನ್ ಶಿಬಿರಗಳು ಸೇರಿದಂತೆ ನಮ್ಮ ಎಲ್ಲ ಉದ್ಯೋಗಿಗಳಿಗೆ ನಿರಂತರ ಬೆಂಬಲವನ್ನು ನೀಡುತ್ತೇವೆ ಎಂದಿದ್ದಾರೆ.