ಆದಾಯ ತೆರಿಗೆ ಫೈಲ್ ಮಾಡಲು ಈವರೆಗೂ ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಕಂಡು ಬರದ ಹಿನ್ನೆಲೆಯಲ್ಲಿ ಈ ಬಾರಿ ಅವಧಿ ಮುಂದೂಡುವ ಸಾಧ್ಯತೆಗಳು ಇಲ್ಲ. ಅಲ್ಲದೇ ಅಂತಿಮ ದಿನಾಂಕ ಹತ್ತಿರವಾಗುತ್ತಿರುವುದರಿಂದ ಕೊನೆ ಕ್ಷಣದ ನೂಕುನುಗ್ಗಲು ತಪ್ಪಿಸಲು ಸಾಧ್ಯವಾದಷ್ಟು ಬೇಗ ಫೈಲ್ ಮಾಡುವಂತೆ ಇಲಾಖೆ ಸೂಚಿಸಿದೆ.
ನವದೆಹಲಿ (ಜುಲೈ 29, 2023): 2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಕೊನೆಯ ದಿನವಾಗಿದ್ದು, ಇನ್ನು 3 ದಿನ ಮಾತ್ರ ಬಾಕಿ ಉಳಿದಿದೆ. ಈ ಬಾರಿ ಯಾವುದೇ ಕಾರಣಕ್ಕೂ ಈ ದಿನಾಂಕವನ್ನು ಮುಂದೂಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿರುವುದರಿಂದ ನಿಗದಿತ ದಿನಾಂಕದೊಳಗೆ ಫೈಲ್ ಮಾಡದೇ ಇದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ.
ಆದಾಯ ತೆರಿಗೆ ಫೈಲ್ ಮಾಡಲು ಈವರೆಗೂ ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಕಂಡು ಬರದ ಹಿನ್ನೆಲೆಯಲ್ಲಿ ಈ ಬಾರಿ ಅವಧಿ ಮುಂದೂಡುವ ಸಾಧ್ಯತೆಗಳು ಇಲ್ಲ. ಅಲ್ಲದೇ ಅಂತಿಮ ದಿನಾಂಕ ಹತ್ತಿರವಾಗುತ್ತಿರುವುದರಿಂದ ಕೊನೆ ಕ್ಷಣದ ನೂಕುನುಗ್ಗಲು ತಪ್ಪಿಸಲು ಸಾಧ್ಯವಾದಷ್ಟು ಬೇಗ ಫೈಲ್ ಮಾಡುವಂತೆ ಇಲಾಖೆ ಸೂಚಿಸಿದೆ.
ಇದನ್ನು ಓದಿ: ಭಾರತ ಸೆಮಿಕಂಡಕ್ಟರ್‌ನ ‘ಕಂಡಕ್ಟರ್’; ಚಿಪ್ ಉತ್ಪಾದನಾ ಘಟಕ ಸ್ಥಾಪಿಸಿದರೆ ಶೇ.50 ಸಹಾಯಧನ: ಮೋದಿ ಘೋಷಣೆ
Avoid last day rush.
3 days left to file your
The due date to file your ITR for AY 2023-24 is 31st July, 2023.
Remember to e-verify after filing.
Pl visit https://t.co/GYvO3mRVUH pic.twitter.com/RLKwQwGCUR
ಒಂದು ವೇಳೆ ಜುಲೈ 31ರೊಳಗೆ ಫೈಲ್ ಮಾಡಲು ಸಾಧ್ಯವಾಗದಿದ್ದರೆ, ದಂಡ ಶುಲ್ಕದೊಂದಿಗೆ ಡಿಸೆಂಬರ್ 31ರವರೆಗೂ ಫೈಲ್ ಮಾಡಬಹುದಾಗಿದೆ. ಆದರೆ ಹೀಗೆ ಮಾಡುವುದರಿಂದ ಹೆಚ್ಚಿನ ತೆರಿಗೆ ಹೊರೆ, ಮರುಪಾವತಿಯಲ್ಲಿ ಸಮಸ್ಯೆ, ನಷ್ಟವನ್ನು ಮುಂದಕ್ಕೊಯ್ಯುವುದು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಒಂದೇ ಕಂಪನಿ ಷೇರಿನ ಮೂಲಕ 2 ತಿಂಗಳಲ್ಲಿ 2400 ಕೋಟಿ ಲಾಭ ಗಳಿಸಿದ ರೇಖಾ ಜುಂಜುನ್ವಾಲಾ: ಇವರ ಆಸ್ತಿ ಮೌಲ್ಯ ಎಷ್ಟು ನೋಡಿ..
ಅಲ್ಲದೇ ಜುಲೈ 31ರ ಬಳಿಕ ಫೈಲ್ ಮಾಡುವವರು 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಆದಾಯ 5 ಲಕ್ಷ ರೂ. ಮೀರದಿದ್ದರೆ ದಂಡದ ಪ್ರಮಾಣ 1 ಸಾವಿರ ರೂ. ನಷ್ಟಿದೆ.
ಇದನ್ನೂ ಓದಿ: ದೃಷ್ಟಿ ಇಲ್ಲದಿದ್ರೂ ಸ್ವಾವಲಂಬಿ ಬದುಕು: ಸ್ಪರ್ಶದ ಮೂಲಕವೇ ಸುಲಭವಾಗಿ ಮಿಕ್ಸಿ, ಫ್ರಿಡ್ಜ್ ರಿಪೇರಿ!
ಇದನ್ನೂ ಓದಿ; ದೇಸಿ ವಿಸ್ಕಿ ಮೇಲೆ ಪ್ರೇಮ ಮೆರೆದ ಭಾರತೀಯರು: ಹುಡ್ಗೀರ ಬ್ರ್ಯಾಂಡ್ ವೋಡ್ಕಾ ಸೇವನೆಯಲ್ಲೂ ಹೆಚ್ಚಳ!