17ರ ಹರೆಯದ ವಿದ್ಯಾರ್ಥಿಯ ಪ್ರೀತಿಯಲ್ಲಿ ಬಿದ್ದ ಉದ್ಯಮಿ ಆನಂದ್ ಮಹೀಂದ್ರಾ, ಈಗ ಆಕೆ ಯಶಸ್ವಿ ಪತ್ರಕರ್ತೆ

By Gowthami K  |  First Published Jul 29, 2023, 11:23 AM IST

ಆನಂದ್ ಮಹೀಂದ್ರಾ ಮತ್ತು ಅನುರಾಧಾ ಅವರ ಲವ್ ಸ್ಟೋರಿ ತುಂಬಾ ರೋಚಕವಾಗಿದೆ.  ಅನುರಾಧಾ ಅವರನ್ನು ಮೊದಲು ಭೇಟಿಯಾದಾಗ ಆನಂದ್ ಸ್ಟೂಡೆಂಟ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅನುರಾಧ ಕೇವಲ 17 ವರ್ಷ ವಯಸ್ಸಿನವರಾಗಿದ್ದರು.


ಅನುರಾಧಾ ಮಹೀಂದ್ರಾ ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರಾ ಅವರ ಪತ್ನಿಯಾಗಿದ್ದಾರೆ.  ಆನಂದ್ ಮಹೀಂದ್ರಾ ಬಹಳ ಜನಪ್ರಿಯ ಹೆಸರಾಗಿದ್ದರೂ, ಅನುರಾಧಾ ಮಹೀಂದ್ರಾ ಅವರು ಐಷಾರಾಮಿ ಮತ್ತು ಜೀವನಶೈಲಿಯ ಜಗತ್ತಿನಲ್ಲಿ ತನ್ನದೇ ಸಾಧನೆ ಮೂಲಕ ಗುರುತಿಸಿಕೊಳ್ಳುವಿಕೆಯಲ್ಲಿ ಯಶಸ್ವಿಯಾಗಿದ್ದಾರೆ. ಅನುರಾಧಾ ಮಹೀಂದ್ರಾ ಅವರು ಮ್ಯಾನ್ಸ್ ವರ್ಲ್ಡ್ ನಿಯತಕಾಲಿಕೆ ಮತ್ತು ಐಷಾರಾಮಿ ಜೀವನಶೈಲಿ ನಿಯತಕಾಲಿಕ ವರ್ವ್ ಸಂಸ್ಥಾಪಕರು. ಇವರು ಮಹೀಂದ್ರಾ ಮುಂಬೈನಲ್ಲಿ ಧಾರ್ಮಿಕ ಹಿಂದೂ ಕುಟುಂಬದಲ್ಲಿ ಜನಿಸಿದರು. ಅನುರಾಧಾ ಸೋಫಿಯಾ ಕಾಲೇಜಿನಲ್ಲಿ ಓದುತ್ತಿದ್ದಾಗ ಆನಂದ್ ಮಹೀಂದ್ರಾ ಮತ್ತು ಅನುರಾಧಾ ಮಹೀಂದ್ರಾ ಮೊದಲು ಪರಸ್ಪರ ಭೇಟಿಯಾದರು.

ಆನಂದ್ ಮಹೀಂದ್ರಾ ಮತ್ತು ಅನುರಾಧಾ ಮಹೀಂದ್ರಾ ಅವರ ಲವ್ ಸ್ಟೋರಿ ತುಂಬಾ ರೋಚಕವಾಗಿದೆ.  ಅನುರಾಧಾ ಅವರನ್ನು ಮೊದಲು ಭೇಟಿಯಾದಾಗ ಆನಂದ್ ಸ್ಟೂಡೆಂಟ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅನುರಾಧ ಕೇವಲ 17 ವರ್ಷ ವಯಸ್ಸಿನವರಾಗಿದ್ದರು  ಆನಂದ್ ಮಹೀಂದ್ರಾ ಅನುರಾಧಾಳ ಬುದ್ಧಿಶಕ್ತಿ ಮತ್ತು ವರ್ತನೆಗೆ ಪ್ರೀತಿಯಲ್ಲಿ ಬಿದ್ದರು. ಕೆಲವು ವರ್ಷಗಳ ನಂತರ, ಆನಂದ್ ಅವರು ಅನುರಾಧಾ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ನಿರ್ಧರಿಸಿದರು. ಇದಕ್ಕಾಗಿ ಅವರು ತಮ್ಮ ಅಜ್ಜಿಯ ಉಂಗುರದೊಂದಿಗೆ ಪ್ರೀತಿ ನಿವೇಧನೆ ಮಾಡಿಕೊಂಡರು. ಅನುರಾಧಾ ಮಹೀಂದ್ರಾ ಅವರ ಪ್ರಕಾರ, ಆನಂದ್ ಮಹೀಂದ್ರಾ ಅವರಿಗೆ ಉಡುಗೊರೆಯಾಗಿ ನೀಡಿದ ಉಂಗುರವು ಅವರ ಅತ್ಯಂತ ಪ್ರೀತಿಯ ಆಸ್ತಿಯಾಗಿದೆ.

Tap to resize

Latest Videos

ಶಾರುಖ್ ಜೊತೆ ಒಂದೇ ಸಿನೆಮಾ ಮಾಡಿ ಎಲ್ಲವನ್ನೂ ತೊರೆದು ಫೋರ್ಬ್ಸ್ ಶ್ರೀಮಂತನ ಮದುವೆಯಾದ ಜನಪ್ರಿಯ ಮಾಡೆಲ್‌

ಅನುರಾಧಾಳನ್ನು ಮದುವೆಯಾಗುವ ಸಲುವಾಗಿ ಆನಂದ್ ಮಹೀಂದ್ರಾ ತನ್ನ ಒಂದು ಸೆಮಿಸ್ಟರ್ ಬರೆಯದಿರಲು ನಿರ್ಧರಿಸಿದರು. ಆನಂದ್ ಮಹೀಂದ್ರಾ ಮತ್ತು ಅನುರಾಧಾ ಮಹೀಂದ್ರಾ ಜೂನ್ 17, 1985 ರಂದು ವಿವಾಹವಾದರು. ಮದುವೆಯ ಬಳಿಕ ದಂಪತಿಗಳು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಅಮೆರಿಕಾಗೆ ತೆರಳಿದರು. ಪ್ರಸ್ತುತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  ಅಮೆರಿಕಾದಿಂದ ಹಿಂದಿರುಗಿದ ನಂತರ, ಅನುರಾಧಾ ಮಹೀಂದ್ರಾ 'ಮ್ಯಾನ್ಸ್ ವರ್ಲ್ಡ್' ನಿಯತಕಾಲಿಕೆಯನ್ನು  ಸ್ಥಾಪಿಸಿದರು. 

ಮ್ಯಾನ್ಸ್ ವರ್ಲ್ಡ್ ಮ್ಯಾಗಜೀನ್‌ನೊಂದಿಗೆ ಯಶಸ್ಸನ್ನು ಗಳಿಸಿದ ನಂತರ, ಅನುರಾಧಾ ಮಹೀಂದ್ರಾ ಐಷಾರಾಮಿ ಜೀವನಶೈಲಿಯ  'ವರ್ವ್' ನಿಯತಕಾಲಿಕವನ್ನು ಪ್ರಾರಂಭಿಸಿದರು. ಅನುರಾಧಾ ಅವರಿಗೆ ಪುಸ್ತಕವೆಂದರೆ ಪ್ರೀತಿ ಹೀಗಾಗಿ ಅವರು ಜನಪ್ರಿಯ ಬರಹಗಾರರಾದ ಹರುಕಿ ಮುರಕಾಮಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಮತ್ತು ವಿಎಸ್ ನೈಪಾಲ್ ಅವರ ಕೃತಿಗಳನ್ನು ಓದಲು ಇಷ್ಟಪಡುತ್ತಾರೆ. ಅನುರಾಧಾ ಮಹೀಂದ್ರಾ ಅವರು ವೃತ್ತಿಯಲ್ಲಿ ಪತ್ರಕರ್ತೆ ಮತ್ತು ಅವರು ಭಾರತದ ಅತ್ಯಂತ ಯಶಸ್ವಿ ಪತ್ರಕರ್ತರಲ್ಲಿ ಒಬ್ಬರು ಎಂದರೆ ತಪ್ಪಾಗುವುದಿಲ್ಲ.

ಒಂದು ಕಾಲದ ಆಗರ್ಭ ಶ್ರೀಮಂತ ನಟಿ, ಉದ್ಯಮಿಯನ್ನು ಮದುವೆಯಾಗಲು ಚಿತ್ರರಂಗ

ಯಶಸ್ವಿ ಉದ್ಯಮಿಯಾಗುವುದರ ಜೊತೆಗೆ, ಅನುರಾಧಾ ಮಹೀಂದ್ರಾ ಒಬ್ಬ ಲೋಕೋಪಕಾರಿ ಕೂಡ. ಅವರು K. C. ಮಹೀಂದ್ರಾ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಒಬ್ಬರು ಮತ್ತು ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ನೆರವು ನೀಡುವಲ್ಲಿ ಸಕ್ರಿಯ ಆಸಕ್ತಿಯನ್ನು ಹೊಂದಿದ್ದಾರೆ. ಆನಂದ್ ಮಹೀಂದ್ರಾ ಅವರು ಭಾರತದ ಉನ್ನತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು ಮತ್ತು ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯ ಸುಮಾರು  2.3 ಬಿಲಿಯನ್ ಡಾಲರ್ (19000 ಕೋಟಿ ಮೌಲ್ಯ) ಆಗಿದೆ. 

click me!