ಬೊಮ್ಮಾಯಿ ಜಿಎಸ್‌ಟಿ ವರದಿಗೆ ಮೆಚ್ಚುಗೆ: ಚರ್ಚೆ ನಡೆಸದೇ ಸರ್ವಾನುಮತದಿಂದ ಅಂಗೀಕಾರ..!

By Kannadaprabha News  |  First Published Jun 29, 2022, 1:30 AM IST

*  ತೆರಿಗೆ ಸುಧಾರಣೆ ಕುರಿತ ಶಿಫಾರಸು ಚರ್ಚೆಯಿಲ್ಲದೆ ಅಂಗೀಕರಿಸಿದ ಮಂಡಳಿ
*  ಎಲ್ಲ ರಾಜ್ಯಗಳ ಸದಸ್ಯರುಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಕೃತಜ್ಞತೆ
*   ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆ 


ಬೆಂಗಳೂರು(ಜೂ.29):  ಕೆಳಮುಖ ತೆರಿಗೆ ರಚನೆಯಲ್ಲಿ ತಿದ್ದುಪಡಿ ಮತ್ತು ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವ ಶಿಫಾರಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಸಚಿವರ ಸಮಿತಿಯು ಮಂಗಳವಾರ ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಮಂಡಿಸಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಅಪರೂಪಕ್ಕೆಂಬಂತೆ ಚರ್ಚೆ ನಡೆಸದೇ ಈ ವರದಿಯನ್ನು ಸರ್ವಾನುಮತದಿಂದ ಸಭೆ ಅಂಗೀಕರಿಸಿದೆ.
ಬಸವರಾಜ ಬೊಮ್ಮಾಯಿ ಸಮಿತಿಯ ಅಧ್ಯಕ್ಷರಾಗಿದ್ದು, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ರಾಜಸ್ತಾನ, ಉತ್ತರಪ್ರದೇಶ ಮತ್ತು ಗೋವಾ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿದ್ದಾರೆ.

ಕೌನ್ಸಿಲ್‌ ಸಭೆಯಲ್ಲಿ ಸಚಿವರ ಸಮಿತಿಯು ತೆರಿಗೆ ದರಗಳಲ್ಲಿನ ಪರಾಮರ್ಶೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ಸಲ್ಲಿಸಲಾಗಿದೆ. ಕೆಳಮುಖ ತೆರಿಗೆ ರಚನೆಯಲ್ಲಿ ತಿದ್ದುಪಡಿ, ತೆರಿಗೆ ವಿನಾಯಿತಿಯನ್ನು ಕಡಿಮೆ ಮಾಡುವಂತಹ ಎರಡು ಒತ್ತಾಯದ ಶಿಫಾರಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಕೌನ್ಸಿಲ್‌ ಮುಂದೆ ಮಂಡಿಸಿದರು. ಸಚಿವರ ಸಮಿತಿಯು ತನ್ನ ವರದಿಯಲ್ಲಿ ಮಂಡಿಸಿರುವ ವಿವರವಾದ ವಿಶ್ಲೇಷಣೆ ಕುರಿತು ಕೌನ್ಸಿಲ್‌ನ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು.

Tap to resize

Latest Videos

ಜಿಎಸ್‌ಟಿ ಸ್ತರ, ದರ ಬದಲಿಗೆ ಒಮ್ಮತವಿಲ್ಲ: ಬೊಮ್ಮಾಯಿ ನೇತೃತ್ವದಲ್ಲಿ ಹಣಕಾಸು ಸಚಿವರ ಸಭೆ ವಿಫಲ

ಸಮಿತಿಯ ಸಂಚಾಲಕರ ಪರಿಶ್ರಮವನ್ನು ಶ್ಲಾಘಿಸಿದ ದೆಹಲಿಯ ಸದಸ್ಯ ಮನೀಶ್‌ ಸಿಸೋಡಿಯಾ ಅವರು, ವರದಿಯಲ್ಲಿನ ಅಂಶಗಳ ವಿವರಗಳನ್ನು ಚರ್ಚಿಸದೆ, ವರದಿಯನ್ನು ಯಥಾವತ್ತಾಗಿ ಅಳವಡಿಸಬೇಕು ಎಂದು ಶಿಫಾರಸ್ಸು ಮಾಡಿದರು. ಸಮತೋಲನದ ದೃಷ್ಟಿಕೋನವನ್ನು ಪ್ರದರ್ಶಿಸುತ್ತ ಗ್ರಾಹಕರ ಸೂಕ್ಷ್ಮತೆಗಳಿಗೆ ಸಂವೇದಿಸುವ ವರದಿಯನ್ನು ಕರ್ನಾಟಕ ಮುಖ್ಯಮಂತ್ರಿಗಳ ನೇತೃತ್ವದ ಸಚಿವರ ಸಮಿತಿಯು ಹೊರತಂದಿರುತ್ತದೆ ಎಂದು ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳ ಸದಸ್ಯರು ಹೇಳಿದರು.

ಅಪರೂಪದ ನಡೆಯಲ್ಲಿ ಪ್ರತ್ಯೇಕ ಅಂಶಗಳನ್ನು ಚರ್ಚಿಸದೆ ಸಚಿವರ ಸಮಿತಿಯ ಈ ವರದಿಯನ್ನು ಸಂಪೂರ್ಣವಾಗಿ ಜಿಎಸ್‌ಟಿ ಕೌನ್ಸಿಲ್‌ ಸರ್ವಾನುಮತದಿಂದ ಅಂಗೀಕರಿಸಿತು. ವರದಿಯ ಸಿದ್ದಪಡಿಸುವಲ್ಲಿ ಮುಖ್ಯವಾದ ಮತ್ತು ಪ್ರಸ್ತುತವಾದ ಅಂಶಗಳನ್ನು ಒದಗಿಸಿದಕ್ಕಾಗಿ ಎಲ್ಲಾ ರಾಜ್ಯಗಳ ಸದಸ್ಯರುಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದರು.
 

click me!