
ಮುಂಬೈ (ಜೂನ್ 28): ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ವಿಭಾಗವಾದ ಜಿಯೋ ಘಟಕದ ನಿರ್ದೇಶಕ ಹಾಗೂ ಚೇರ್ಮನ್ ಸ್ಥಾನದಿಂದ ಕೆಳಗಿಳಿಯುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ಮಂಗಳವಾರ ಕಂಪನಿ ಈ ಪ್ರಕಟಣೆಯನ್ನು ಹೊರಡಿಸಿದ್ದು,ಜಿಯೋ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಮುಖೇಶ್ ಅವರ ಪುತ್ರ ಆಕಾಶ್ ಅಂಬಾನಿ ಅವರನ್ನು ಹೊಸ ಮಂಡಳಿಯ ಅಧ್ಯಕ್ಷರನ್ನಾಗಿ ಸಂಸ್ಥೆ ಘೋಷಣೆ ಮಾಡಿದೆ.
ಮುಕೇಶ್ ಅಂಬಾನಿ ಜೂನ್ 27 ರಿಂದ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೂನ್ 27, 2022 ರಂದು ಸೋಮವಾರ ನಡೆದ ಜಿಯೋ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಪ್ರಕಾರ ಪಂಕಜ್ ಮೋಹನ್ ಪವಾರ್ ಅವರು ಜೂನ್ 27 ರಿಂದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅಜ್ಜನಾದ ನಂ.1 ಶ್ರೀಮಂಂತ ಮುಕೇಶ್ ಅಂಬಾನಿ : ಮೊಮ್ಮಗು ಜನನ
ಈ ಕುರಿತಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್, ರೆಗುಲೇಟರಿ ಫಿಲ್ಲಿಂಗ್‌ನಲ್ಲಿ ಈ ವಿಚಾರ ತಿಳಿಸಿದ್ದು, "ಈವರೆಗೂ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದ ಆಕಾಶ್ ಎಂ ಅಂಬಾನಿ ಅವರನ್ನು ಕಂಒನಿ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲು ಮಂಡಳಿಯು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ' ಎಂದು ಹೇಳಿದೆ. ಜೂನ್ 27ರಂದು ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ನಿರ್ದೇಶಕ ಹಾಗೂ ಚೇಮರ್ನ್ ಆಗಿ ಕೊನೆಯ ದಿನವಾಗಿದ್ದು, ಅದೇ ದಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಸಿಂಪಲ್ ಆದ್ರೂ ಗ್ಲಾಮರಸ್ ಆಗಿದ್ದಾರೆ ಅಂಬಾನಿ ಸೊಸೆ ಶ್ಲೋಕಾ, ಇಲ್ಲಿವೆ ವಿಶೇಷ ಚಿತ್ರಗಳು!
ಪಂಕಜ್ ಮೋಹನ್ ಪವಾರ್ ಸೇರಿದಂತೆ ಇತರ ಆಯ್ಕೆಗಳನ್ನೂ ಸಭೆಯಲ್ಲಿ ಮಾಡಲಾಗಿದೆ. ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕರಾಗಿ ಅವರ ಐದು ವರ್ಷಗಳ ಅವಧಿಯು ಜೂನ್ 27 ರಂದು ಪ್ರಾರಂಭವಾಗಿದೆ. ಕೆವಿ ಚೌದರಿ ಮತ್ತು ರಮೀಂದರ್ ಸಿಂಗ್ ಗುಜ್ರಾಲ್ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ನೇಮಿಸಲಾಯಿತು. ರಿಲಯನ್ಸ್ ಜಿಯೋ ಚೇರ್ಮನ್ ಸ್ಥಾನದಿಂದ ಮುಖೇಶ್ ಅಂಬಾನಿ ಕೆಳಗಿಳಿದು, ಈ ಜವಾಬ್ದಾರಿಯನ್ನು ಹಿರಿಯ ಮಗ ಆಕಾಶ್‌ಗೆ ವಹಿಸಿರುವ ಹಿಂದೆ, 65 ವರ್ಷದ ಮುಖೇಶ್ ಅಂಬಾನಿ ಅವರ ಉತ್ತರಾಧಿಕಾರದ ಯೋಜನೆ ಇದೆ ಎಂದು ಹೇಳಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.