ಬ್ಯಾಂಕ್ ಖಾತೆಗೆ ಎಷ್ಟು ನಗದು ಹಾಣ ಡೆಪಾಸಿಟ್ ಮಾಡಲು ಸಾಧ್ಯವಿದೆ? ಸ್ವಲ್ಪ ಹೆಚ್ಚು ಕಡಿಮೆ ಆದರೂ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಲಿದೆ. ದಾಖಲೆ ಇಲ್ಲದಿದ್ದರೆ ಸಂಕಷ್ಟ ಖಚಿತ.
ನವದೆಹಲಿ(ನ.8) ಭಾರತದಲ್ಲಿ ಇದೀಗ ಬ್ಯಾಂಕ್ ಖಾತೆ ತೆರೆಯುವುದು ಸವಾಲಿನ ಕೆಲಸವಲ್ಲ. ಇವೆಲ್ಲವೂ ಸರಳ ಹಾಗೂ ಸುಲಭವಾಗಿದೆ. ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ಒದಗಿಸಲು ಜನಧನ ಖಾತೆ ಆರಂಭಿಸುವ ಮೂಲಕ ಹೊಸ ಕ್ರಾಂತಿ ಮಾಡಿತ್ತು. ಇದರಿಂದ ದೇಶದ ಬಹುಪಾಲ ಜನರಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿವೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಲು ಅವಕಾಶವೂ ಇದೆ. ಆಧರೆ ಉಳಿತಾಯ ಖಾತೆಗೆ ನಗದು ಹಣ ಜಮೆ ಮಾಡಲು ಕೆಲ ನಿಯಮಗಳಿವೆ. ಇಷ್ಟೇ ಅಲ್ಲ ಕೈಯಲ್ಲಿ ದುಡ್ದಿದೆ ಎಂದು ಬ್ಯಾಂಕ್ ಖಾತೆಗೆ ಜಮೆ ಮಾಡಿದರೆ ಐಟಿ ಇಲಾಖೆಯಿಂದ ನೋಟಿಸ್ ಬರಲಿದೆ.
ನಿಮಯದ ಪ್ರಕಾರ 50,000 ರೂಪಾಯಿ ಅಥವಾ ಅದಕ್ಕಿಂತ ಮೇಲ್ಪಟ್ಟ ನಗದು ಹಣವನ್ನು ನಿಮ್ಮದೇ ಬ್ಯಾಂಕ್ ಖಾತೆ ಅಥವಾ ಇತರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಪಾನ್ ಕಾರ್ಡ್ ನೀಡಬೇಕು. 50 ಸಾವಿಕ್ಕಿಂತ ಒಳಗಿನ ನಗದು ಮೊತ್ತ ಜಮೆ ಮಾಡಲು ಪಾನ್ ಕಾರ್ಡ್ ಅವಶ್ಯಕತೆ ಇಲ್ಲ. ಒಂದು ಗರಿಷ್ಠ 1 ಲಕ್ಷ ರೂಪಾಯಿ ಮಾತ್ರ ನಗದು ಮೊತ್ತ ಜಮೆ ಮಾಡಲು ಸಾಧ್ಯವಿದೆ. ಹಾಗಂತ ಪ್ರತಿ ದಿನ ಅಥವಾ ಸತತವಾಗಿ 1 ಲಕ್ಷ ರೂಪಾಯಿ ನಗದು ಹಣವನ್ನು ಖಾತೆಗೆ ಜಮೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ವಾರ್ಷಿಕವಾಗಿ ಗರಿಷ್ಟ 10 ಲಕ್ಷ ರೂಪಾಯಿ ನಗದು ಹಣವನ್ನು ಮಾತ್ರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಸಾಧ್ಯವಿದೆ. 10 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರೆ, ಬ್ಯಾಂಕ್ ಐಟಿ ಇಲಾಖೆಗೆ ನೀಡುವ ಪಟ್ಟಿಯಲ್ಲಿ ಹೆಸರು ಹಾಗೂ ವಿವರಗಳು ದಾಖಲಿಸಲಿದೆ.
undefined
100 ರೂನಿಂದ ಆರಂಭಿಸಿ ಅಟಲ್ ಪೆನ್ಶನ್ ಮೂಲಕ ಪಡೆಯಿರಿ ಮಾಸಿಕ 5,000 ರೂ ಪಿಂಚಣಿ!
ಒಬ್ಬ ವ್ಯಕ್ತಿ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಹಣವನ್ನು ಒಂದು ವರ್ಷದಲ್ಲಿ ಜಮೆ ಮಾಡಿದ್ದರೆ ಐಟಿ ಇಲಾಖೆ ನೋಟಿಸ್ ನೀಡುವ ಸಾಧ್ಯತೆ ಇದೆ. ನಿಯಮದ ಪ್ರಕಾರ ಬ್ಯಾಂಕ್ ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಲಿದೆ. ಈ ಮಾಹಿತಿ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಲಿದೆ. ಈ ನೋಟಿಸ್‌ಗೆ ಉತ್ತರ ನೀಡಬೇಕಿದೆ. ಕೇವಲ ಉತ್ತರವಲ್ಲ, ನೀವು ಜಮೆ ಮಾಡಿದ ನಗದು ಹಣದ ಮೂಲ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು. ನಿಮ್ಮ ಉತ್ತರ ಹಾಗೂ ದಾಖಲೆ ಸರಿಯಾಗಿದ್ದರೆ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಆದರೆ ಹಣದ ಮೂಲ ಹಾಗೂ ಇತರ ದಾಖಲೆ ಅನುಮಾನ ಹುಟ್ಟಿಸಿದರೆ ತನಿಖೆ ನಡೆಯಲಿದೆ. ಈ ವೇಳೆ ಹಣದ ಮೂಲ ಪತ್ತೆಯಾಗದಿದ್ದರೆ ಅಥವಾ ಕಪ್ಪು ಹಣ ಸೇರದಂತೆ ಅಕ್ರಮ ಹಣವಾಗಿದ್ದರೆ ವರ್ಷದಲ್ಲಿ ಜಮೆ ಮಾಡಿದ ಒಟ್ಟು ಮೊತ್ತದ ಮೇಲೆ ಶೇಕಡಾ 60 ರಷ್ಟು ತೆರಿಗೆ, ಶೇಕಡಾ 25ರಷ್ಟು ಸರ್ಚಾರ್ಜ್ ಹಾಗೂ ಶೇಕಡಾ 4ರಷ್ಟು ಸೆಸ್ ವಿಧಿಸಲಾಗುತ್ತದೆ. ಇದು ದಂಡದ ರೂಪದಲ್ಲಿ ವಿಧಿಸಲಾಗುತ್ತದೆ.
ಹಾಗಂತ 10 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಹಣ ಜಮೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಈ ಆದಾಯದ ದಾಖಲೆ ಇರಬೇಕು. ಹಣ ಎಲ್ಲಿಂದ ಬಂತು ಅನ್ನೋ ದಾಖಲೆ ಇರಬೇಕು. ಕೋಟಿ ಕೋಟಿ ರೂಪಾಯಿ ನಗದ ಹಣ ಜಮೆ ಮಾಡಲು ಸಾಧ್ಯವಿದೆ. ಆದರೆ ಆದಾಯ ಎಲ್ಲಿಂದ ಬಂತು ಹಣ ದಾಖಲೆ ಇರಲೇಬೇಕು. ಇನ್ನು ಆದಾಯ ತೆರಿಗೆ ಪಾವತಿ, ಐಟಿಐರ್ ಫೈಲಿಂಗ್‌ನಲ್ಲಿ ಯಾವುದೇ ವ್ಯತ್ಯಯ ಇರಬಾರದು.
UAN ನಂಬರ್ ಇಲ್ಲದೆ PF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಮಿಸ್‌ಕಾಲ್, ಮೆಸೇಜ್ ಸಾಕು!