ಕ್ಲೈಮಾವೆನೆಟಾ ಕ್ಲೈಮೇಟ್ ಟೆಕ್ನಾಲಜೀಸ್, ಕೋಲಾರ ಜಿಲ್ಲೆಯ ನರಸಾಪುರದಲ್ಲಿ ₹400 ಕೋಟಿ ಹೂಡಿಕೆ ಮಾಡಲಿದೆ. ಈ ಹೂಡಿಕೆಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಸುಮಾರು 500 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಬೆಂಗಳೂರು (ನ.7): ಜಪಾನಿನ ಬಹುರಾಷ್ಟ್ರೀಯ ಮಿತ್ಸುಬಿಷಿ ಎಲೆಕ್ಟ್ರಿಕ್‌ನ ಬೆಂಗಳೂರಿನ ಪ್ರಧಾನ ಕಛೇರಿಯ ಸಮೂಹ ಕಂಪನಿಯಾದ ಕ್ಲೈಮಾವೆನೆಟಾ ಕ್ಲೈಮೇಟ್ ಟೆಕ್ನಾಲಜೀಸ್, ಬೆಂಗಳೂರಿನಿಂದ ಸುಮಾರು 50 ಕಿಮೀ ದೂರದಲ್ಲಿರುವ ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 2.5 ಲಕ್ಷ ಚದರ ಅಡಿ ಉತ್ಪಾದನಾ ಘಟಕದಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡುವ ನಿರ್ಧಾರ ಘೋಷಿಸಿದೆ. "ಕ್ಲೈಮಾವೆನೆಟಾ ಹೆಚ್ಚಿನ ದಕ್ಷತೆಯ ಕೂಲಿಂಗ್ ಉಪಕರಣಗಳು, ನಿಖರವಾದ ಕೂಲಿಂಗ್ ವ್ಯವಸ್ಥೆಗಳು ಮತ್ತು ಡೇಟಾ ಸೆಂಟರ್ ಕೂಲಿಂಗ್ ಪರಿಹಾರಗಳನ್ನು ತಯಾರಿಸುತ್ತದೆ. 500 ಕೋಟಿಗೂ ಹೆಚ್ಚು ಆರ್ಡರ್ ಬುಕ್‌ನೊಂದಿಗೆ, ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕ ಆರ್ಡರ್ ಇನ್‌ಟೇಕ್‌ಅನ್ನು ದ್ವಿಗುಣಗೊಳಿಸುವ ಗುರಿಯನ್ನು ಕಂಪನಿ ಹೊಂದಿದೆ' ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
“ಭಾರತದ ತ್ವರಿತ ಡಿಜಿಟಲೀಕರಣ, ಇ-ಕಾಮರ್ಸ್ ವಿಸ್ತರಣೆ, ಕ್ಲೌಡ್ ಅಳವಡಿಕೆ ಮತ್ತು AI ಬೆಳವಣಿಗೆಗೆ ದೃಢವಾದ ಡೇಟಾ ಸೆಂಟರ್ ಮೂಲಸೌಕರ್ಯ ಅಗತ್ಯವಿದೆ. ದತ್ತಾಂಶ ಕೇಂದ್ರಗಳಲ್ಲಿ ಉಪಕರಣಗಳ ವೈಫಲ್ಯಗಳನ್ನು ತಡೆಗಟ್ಟಲು ವಿಶ್ವಾಸಾರ್ಹ ಕೂಲಿಂಗ್ ವ್ಯವಸ್ಥೆಗಳು ಅತ್ಯಗತ್ಯ,” ಎಂದು ಭಾರತದ ಕ್ಲೈಮಾವೆನೆಟಾ ಕ್ಲೈಮೇಟ್ ಟೆಕ್ನಾಲಜೀಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ದೇವ್ ಹೇಳಿದ್ದಾರೆ.\
'ದಿ ಜಾಯ್ ಆಫ್ ಫ್ಲೈಯಿಂಗ್' ಇನ್ನು ನೆನಪು ಮಾತ್ರ, ಜೆಟ್ ಏರ್‌ವೇಸ್ ಆಸ್ತಿ ಹರಾಜಿಗೆ ಸುಪ್ರೀಂ ಅಸ್ತು!
“ಬೆಂಗಳೂರು ಹಾಗೂ ಇಲ್ಲಿನ ನುರಿತ ಪ್ರತಿಭೆ ಮತ್ತು ಸ್ಥಾಪಿತ ಕೈಗಾರಿಕೆಗಳನ್ನು ಹೊಂದಿದ್ದು, ನಮ್ಮ ಸೌಲಭ್ಯಕ್ಕೆ ಸೂಕ್ತವಾಗಿದೆ, ಇದು ಸುಮಾರು 500 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಸ್ಥಾವರವು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೇಂದ್ರೀಯ ಹವಾನಿಯಂತ್ರಣ ಸಾಧನಗಳ ಶ್ರೇಣಿಯನ್ನು ಸಹ ತಯಾರಿಸುತ್ತದೆ. ಭಾರತೀಯ ಮಾರುಕಟ್ಟೆಗೆ ಸಮರ್ಥ ತಂತ್ರಜ್ಞಾನಗಳನ್ನು ತರಲು ಮತ್ತು ನೈತಿಕ ಬೆಳವಣಿಗೆಯನ್ನು ಅನುಸರಿಸಲು ನಾವು ಬದ್ಧರಾಗಿದ್ದೇವೆ, ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತೇವೆ ಎಂದು ದೇವ್ ಹೇಳಿದ್ದಾರೆ.
ಒರಿಜಿನಲ್ ಚಾಯ್ಸ್ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್!
ಈ ಪ್ಲ್ಯಾಂಟ್ ಸ್ಕ್ರೂ ಚಿಲ್ಲರ್‌ಗಳು, ಮ್ಯಾಗ್ನೆಟಿಕ್ ಲೆವಿಟೇಶನ್ ಟೆಕ್ನಾಲಜಿ ಚಿಲ್ಲರ್‌ಗಳು, ಸ್ಕ್ರಾಲ್ ಚಿಲ್ಲರ್‌ಗಳು, ಸಾಂಪ್ರದಾಯಿಕ ಕೇಂದ್ರಾಪಗಾಮಿ ಚಿಲ್ಲರ್‌ಗಳು, ಹೈ ಪ್ರಿಸಿಶನ್ ಎಸಿ ಘಟಕಗಳು, ಹೀಟ್ ಪಂಪ್‌ಗಳಂತಹ ಕೇಂದ್ರೀಯ ಹವಾನಿಯಂತ್ರಣ ಸಾಧನಗಳನ್ನು ಎಚ್‌ವಿಎಸಿ ಅಪ್ಲಿಕೇಶನ್‌ಗಾಗಿ ತಯಾರಿಸುತ್ತದೆ' ಎಂದು ತಿಳಿಸಿದ್ದಾರೆ. ಪ್ರಸ್ತುತ ಕಂಪನಿಯು 300 ಉದ್ಯೋಗಿಗಳನ್ನು ಹೊಂದಿದ್ದು, ಮುಂದಿನ ಐದು ವರ್ಷದಲ್ಲಿ ಇದು ಡಬಲ್ ಆಗಲಿದೆ ಎಂದುಅನಿಲ್ ದೇವ್ ತಿಳಿಸಿದ್ದಾರೆ.