15 ಸಾವಿರ ಕೋಟಿ ರೂಪಾಯಿ ಬೆಲೆಯ ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯಲ್ಲಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಯಾವ ಮಹಡಿಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಮಹಡಿಯ ವಿಶೇಷತೆ ಏನು?
ಮುಂಬೈ(ಅ.06) ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಮನೆ ಆ್ಯಂಟಿಲಿಯಾ ವಿಶ್ವದ ಅತೀ ದುಬಾರಿ ಮನೆ ಎಂದೇ ಜನಪ್ರಿಯಗೊಂಡಿದೆ. ಆ್ಯಂಟಿಲಿಯಾ ಮನೆಯ ಮೌಲ್ಯ ಸರಿಸುಮಾರು 15,000 ಕೋಟಿ ರೂಪಾಯಿ. ಮುಕೇಶ್ ಅಂಬಾನಿಯ ಇಡೀ ಕುಟುಂಬ ಇದೇ ಮನೆಯಲ್ಲಿ ವಾಸವಿದೆ. ಒಟ್ಟು 27 ಮಹಡಿಯ ಈ ಮನೆಯಲ್ಲಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ವಾಸ ಮಾಡುತ್ತಿರುವುದು 27ನೇ ಮಹಡಿಯಲ್ಲಿ ಅನ್ನೋದು ವಿಶೇಷ.
ಆ್ಯಂಟಿಲಿಯಾದ 25ನೇ ಮಹಡಿಯಲ್ಲಿ ನೀತಾ ಅಂಬಾನಿ, ಮುಕೇಶ್ ಅಂಬಾನಿ ಹಾಗೂ ಮಕ್ಕಳು ವಾಸವಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಎಲ್ಲರೂ 27ನೇ ಮಹಡಿಗೆ ಸ್ಥಳಾಂತರಗೊಂಡಿದ್ದಾರೆ. 27ನೇ ಮಹಡಿಯಲ್ಲಿ ಮುಕೇಶ್-ನಿತಾ ಮಾತ್ರವಲ್ಲ, ಪುತ್ರ ಆಕಾಶ್ ಅಂಬಾನಿ ಹಾಗೂ ಸೊಸೆ ಶ್ಲೋಕಾ ಮೆಹ್ತಾ, ಇವರ ಇಬ್ಬರು ಮಕ್ಕಳು, ಮತ್ತೊರ್ವ ಪುತ್ರ ಅನಂತ್ ಅಂಬಾನಿ ಹಾಗೂ ಸೊಸೆ ರಾಧಿಕಾ ಮರ್ಚೆಂಟ್ ಎಲ್ಲರೂ 27ನೇ ಮಹಡಿಯಲ್ಲೇ ವಾಸ.
undefined
ಅಂಬಾನಿ ಮನೆ ಅಡುಗೆ ಕೆಲಸಗಾರನ ಸಂಬಳ ಎಷ್ಟಿದೆ? ಖಾಸಗಿ ಕಂಪನಿ ಉದ್ಯೋಗಿಗಳಿಗಿಂತ ಡಬಲ್
27ನೇ ಮಹಡಿಯಲ್ಲಿ ಎಲ್ಲರಿಗೂ ಪ್ರತ್ಯೇಕ ಫ್ಲಾಟ್ ರೀತಿ ಮನೆ ಇದೆ. ವಿಶಾಲವಾದ ಕೊಠಡಿಗಳನ್ನು ಹೊಂದಿರುವ 27ನೇ ಮಹಡಿಯಲ್ಲಿ ಅಂಬಾನಿ ಕುಟುಂಬ ವಾಸಿಸಲು ಕಾರಣವೂ ಇದೆ. ಪ್ರಮುಖವಾಗಿ 27ನೇ ಮಹಡಿಯಲ್ಲಿ ನೈಸರ್ಗಿಕವಾಗಿ ಗಾಳಿ ಬೆಳಕು ಹೆಚ್ಚು. ಇದು ಮೊದಲ ಹಾಗೂ ಪ್ರಮುಖ ಕಾರಣ. ಇದರ ಜೊತಗೆ ಭದ್ರತೆ ದೃಷ್ಟಿಯಿಂದ 27ನೇ ಮಹಡಿ ಆಯ್ಕೆ ಮಾಡಿಕೊಂಡಿದ್ದಾರೆ.
27ನೇ ಮಹಡಿಗೆ ಎಲ್ಲರಿಗೂ ಪ್ರವೇಶವಿಲ್ಲ. ಅಂಬಾನಿ ಮನೆ ಒಳಗೆ ಪ್ರವೇಶಿಸುವ ಅವಕಾಶ ಸಿಕ್ಕರೂ 27ನೇ ಮಹಡಿಗೆ ಹೋಗುವ ಅವಕಾಶ ಕೆಲವೇ ಕೆಲವು ಮಂದಿಗೆ ಮಾತ್ರ. ಒಟ್ಟು 4 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಆ್ಯಂಟಿಲಿಯಾದಲ್ಲಿ ಎಲ್ಲಾ ಐಷಾರಾಮಿತನ ಇದೆ. ಎಲ್ಲಾ ವ್ಯವಸ್ಥೆಗಳೂ ಇವೆ. ಕೆಲ ಮಹಡಿಗಳು ಕಾರು ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. ಇನ್ನು ಮನೆಯೊಳಗೆ 9 ಹೈಸ್ಪೀಡ್ ಲಿಫ್ಟ್(ಎಲಿವೇಟರ್) ಕಾರ್ಯನಿರ್ವಹಿಸುತ್ತಿದೆ.
ಆ್ಯಂಟಿಲಿಯಾ ಮನೆಯಲ್ಲಿ ಸ್ವಮ್ಮಿಂಗ್ ಪೂಲ್, ಸ್ಪಾ, ಯೋಗಾ ಸ್ಟುಡಿಯೋ ಸೇರಿದಂತೆ ಹಲವು ವ್ಯವಸ್ಥೆಗಳಿವೆ. ಒಟ್ಟು 600 ಸಿಬ್ಬಂದಿಗಳು ಆ್ಯಂಟಿಲಿಯಾ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸಗಾರರಿಗೆ ಉಳಿದುಕೊಳ್ಳಲು ವ್ಯವಸ್ಥೆಗಳಿವೆ. ಹೆಲಿಕಾಪ್ಟರ್ ಇಳಿಯಲು 3 ಹೆಲಿಪ್ಯಾಡ್ ವ್ಯವಸ್ಥೆಗಳಿವೆ. 2008ರಲ್ಲಿ ಆ್ಯಂಟಿಲಿಯಾ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. 2010ರಲ್ಲಿ ಅಂದರೆ 2 ವರ್ಷದಲ್ಲಿ ಮನೆ ಪೂರ್ಣಗೊಂಡಿತ್ತು. ಅಟ್ಲಾಂಟಿಕ್ ಸಾಗರದಲ್ಲಿರುವ ದ್ವೀಪದ ಹೆಸರನ್ನೇ ಮುಕೇಶ್ ಅಂಬಾನಿ ತಮ್ಮ ಮನಗೆ ಇಟ್ಟಿದ್ದಾರೆ.
ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಸ್ಟರ್‌ಸ್ಟ್ರೋಕ್, ಕೇವಲ 13 ಸಾವಿರ ಇಎಂಐನಲ್ಲಿ ಐಫೋನ್ 16 !