ಬ್ಯಾಂಕ್ ಖಾತೆಯಲ್ಲಿ ಲಕ್ಷ ಲಕ್ಷ ಹಣ ಇದ್ರೂ ದಿನಕ್ಕೆ ಎಷ್ಟು ಡ್ರಾ ಮಾಡಬಹುದು?

By Mahmad RafikFirst Published Oct 6, 2024, 5:44 PM IST
Highlights

ಬ್ಯಾಂಕ್‌ಗಳಲ್ಲಿ ಹಣ ಜಮಾ ಮಾಡುವುದು ಸುರಕ್ಷಿತ, ಆದರೆ ದೊಡ್ಡ ಮೊತ್ತವನ್ನು ಹಿಂಪಡೆಯಲು ನಿಯಮಗಳಿವೆ. ಐಟಿಆರ್ ಫೈಲಿಂಗ್ ಮತ್ತು ಟಿಡಿಎಸ್ ಕಡಿತದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಬೆಂಗಳೂರು: ಬ್ಯಾಂಕ್‌ನಲ್ಲಿ ಹಣ ಜಮೆ ಮಾಡಿದ್ರೆ ಅದು ಸುರಕ್ಷಿತವಾಗಿರುತ್ತೆ ಎಂಬುವುದು ಜನಸಾಮಾನ್ಯರ ನಂಬಿಕೆಯಾಗಿದೆ. ಬ್ಯಾಂಕ್‌ಗಳಲ್ಲಿ ಜಮೆ ಮಾಡಿರುವ ಹಣಕ್ಕೆ ಬಡ್ಡಿ ಸಹ ನೀಡಲಾಗುತ್ತದೆ. ಕೆಲ ಸಣ್ಣಪುಟ್ಟ ವ್ಯಾಪಾರಿಗಳು ತಮ್ಮ ಆದಾಯದ ಲಾಭದ ಪ್ರಮಾಣವನ್ನು ಪ್ರತಿನಿತ್ಯ ಬ್ಯಾಂಕ್‌ಗಳಿಗೆ ತೆರಳಿ ಹಣ ಜಮೆ ಮಾಡುತ್ತಿರುತ್ತಾರೆ. ಹಣದ ಅವಶ್ಯಕತೆ ಬಂದ್ರೆ ಸಮೀಪದ ಎಟಿಎಂಗೆ ತೆರಳಿ ಅಥವಾ ನಿಮ್ಮ ಶಾಖೆಗೆ ಹೋಗಿ ಹಣ ಡ್ರಾ ಮಾಡಿಕೊಳ್ಳಬಹುದು.  ಎಟಿಎಂನಲ್ಲಿ ಒಂದು ದಿನಕ್ಕೆ ಇಂತಿಷ್ಟು ಹಣ ಡ್ರಾ ಮಾಡಬೇಕು ಎಂಬ ನಿಯಮ ಇರುತ್ತದೆ. ಈ ಮಿತಿ ಬ್ಯಾಂಕ್‌ಗಳಿಂದ ಬ್ಯಾಂಕ್‌ಗೆ ಬೇರೆ ಬೇರೆಯಾಗಿರುತ್ತದೆ. 

ಕೆಲವು ಬ್ಯಾಂಕ್‌ಗಳು ಹಣ ಹಿಂಪಡೆಯುವ ಮಿತಿಯನ್ನು 40 ಸಾವಿರ ಅಥವಾ 50 ಸಾವಿರಕ್ಕೆ ನಿಗಧಿ ಮಾಡಿವೆ. ಬ್ಯಾಂಕ್ ಶಾಖೆಗೂ ತೆರಳಿಯೂ ನೀವು ಹಣ ಹಿಂಪಡೆಯಬಹುದಾಗಿದೆ. ನೀವು ಮಿತಿಗಿಂತ ಹೆಚ್ಚು ಹಣ ಹಿಂಪಡೆಯಲು ಬಯಸುತ್ತದ್ದರೆ ಶಾಖೆಯ ಸಿಬ್ಬಂದಿಗೆ ಒಂದು ದಿನ ಮುಂಚೆಯೇ ಮಾಹಿತಿ ನೀಡಬೇಕಾಗುತ್ತದೆ. ಒಂದು ವೇಳೆ ತುರ್ತು ಹಣ ಬೇಕಿದ್ದರೆ ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ.

Latest Videos

ಉದಾಹರಣೆಗೆ ನಿಮಗೆ ನಿಮ್ಮ ಖಾತೆಯಲ್ಲಿರುವ 20 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡಬೇಕಿದೆ. ನೀವು ಮೂರು ವರ್ಷದಿಂದ ಮೂರು ವರ್ಷದಿಂದ ಐಟಿಆರ್ ಫೈಲ್ ಮಾಡದಿದ್ದರೆ ನೀವು ಟಿಡಿಎಸ್ ಪಾವತಿಸಬೇಕಾಗುತ್ತದೆ. ಡ್ರಾ ಮಾಡುವ 20 ಲಕ್ಷಕ್ಕಿಂತ ಅಧಿಕವಾಗಿದ್ರೆ ಶೇ.2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಹಿಂಪಡೆಯುವ ಮೊತ್ತ 1 ಕೋಟಿಗೂ ಅಧಿಕವಾಗಿದ್ದರೆ ಶ.5ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ಸೂ*ಡ್ ನೋಟ್ ಹಿಡ್ಕೊಂಡು ಬಂದು 40 ಲಕ್ಷ ತೊಗೊಂಡು ಹೋದ; ನೋಡ್ತಿದ್ದವರು ನೋಡುತ್ತಲೇ ನಿಂತ್ರು!

ನೀವು ಪ್ರತಿ ವರ್ಷ ತಪ್ಪದೇ ಐಟಿಆರ್ ಪಾವತಿ ಮಾಡುತ್ತಿದ್ದರೆ ಯಾವುದೇ ಟಿಡಿಎಸ್ ಕಡಿತಗೊಳಿಸದೇ ನಿಮ್ಮ ಹಣವನ್ನು ನಿಮಗೆ ನೀಡಲಾಗುತ್ತದೆ. ಹಣ ಹಿಂಪಡೆಯುವ ಮಿತಿ ಬಗ್ಗೆ ನೋಡೋದಾದ್ರೆ ಕೆಲವು ಬ್ಯಾಂಕ್‌ಗಳು ಒಂದು ದಿನ ಓರ್ವ ಗ್ರಾಹಕರಿಗೆ 1 ಲಕ್ಷ ರೂಪಾಯಿ ಮಾತ್ರ ನೀಡುತ್ತಿವೆ. ಒಂದಿಷ್ಟು ಬ್ಯಾಂಕ್‌ಗಳು ಈ ಮಿತಿಯನ್ನು 5 ಲಕ್ಷಕ್ಕೆ ನಿಗಧಿ ಮಾಡಿವೆ.

ಇಂದು ಹಣವನ್ನು ಕ್ಯಾಶ್ ಡೆಪಾಟಿಸ್ ಮಷೀನ್ ಮೂಲಕವೂ ಜಮೆ ಮಾಡಬಹುದು. ಆಟೋಮೆಟೆಡ್ ಡೆಪಾಸಿಟ್ ಕಮ್ ವಿಥ್ ಡ್ರಾವೆಲ್ ಮಷೀನ್ (ADWM-Automated Deposit cum Withdrawal Machine) ಒಂದು ರೀತಿಯ ಎಟಿಎಂ ಆಗಿದೆ. ಇಲ್ಲಿ ಹಣ ಡ್ರಾ ಮತ್ತು ಜಮೆ ಮಾಡಬಹುದು. ಜಮೆ ಮಾಡುವ ಮಿತಿ ಬ್ಯಾಂಕ್‌ಗಳಿಂದ ಬ್ಯಾಂಕ್‌ಗೆ ಬೇರೆಯಾಗಿರುತ್ತದೆ. ಒಂದು ಬಾರಿ ಗರಿಷ್ಠ 200 ನೋಟುಗಳನ್ನು ಜಮೆ ಮಾಡಬಹುದು.

ಉಳಿತಾಯ ಖಾತೆಯಲ್ಲಿ ಕನಿಷ್ಠ ಎಷ್ಟು ಹಣ ಇರಬೇಕು? ಅಕ್ಟೋಬರ್ 15ರಿಂದಲೇ ಹೊಸ ನಿಯಮ

click me!