ಅನಂತ್ ಅಂಬಾನಿ ಫಿಟ್ನೆಸ್ ಟ್ರೈನರ್: ಒಂದು ಸೆಷನ್‌ಗೆ ಇವರು ಮಾಡೋ ಚಾರ್ಜ್‌ ಎಷ್ಟು ಗೊತ್ತಾ..?

By Anusha Kb  |  First Published Sep 24, 2023, 12:49 PM IST

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರು ಕೇವಲ 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದು, ಬಹುತೇಕರಿಗೆ ಗೊತ್ತೆ ಇದೆ. ಅವರ ಈ ತೂಕ ಇಳಿಕೆಗೆ ಸಹಾಯ ಮಾಡಿದ್ದು, ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ವಿನೋದ್ ಛನ್ನಾ. ಹಾಗಿದ್ರೆ ಇವರು ಒಂದು ತಿಂಗಳಿಗೆ ಒಬ್ಬರಿಗೆ ಟ್ರೈನ್‌ ಮಾಡಲು ಪಡೆಯುವ ಚಾರ್ಜ್‌ ಎಷ್ಟು ಗೊತ್ತಾ?


ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರು ಕೇವಲ 18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದು, ಬಹುತೇಕರಿಗೆ ಗೊತ್ತೆ ಇದೆ. ಅವರ ಈ ತೂಕ ಇಳಿಕೆಗೆ ಸಹಾಯ ಮಾಡಿದ್ದು, ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ವಿನೋದ್ ಛನ್ನಾ. ಹಾಗಿದ್ರೆ ಇವರು ಒಂದು ತಿಂಗಳಿಗೆ ಒಬ್ಬರಿಗೆ ಟ್ರೈನ್‌ ಮಾಡಲು ಪಡೆಯುವ ಚಾರ್ಜ್‌ ಎಷ್ಟು ಗೊತ್ತಾ?

ಫಿಟ್‌ನೆಸ್ ಟ್ರೈನರ್ ವಿನೋದ್ ಛನ್ನಾ ಅವರ ಬಗ್ಗೆ ಸಾಮಾಜಿಕ ಜಾಲತಾಣ ಮಾಡುವ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ತೋರುವ ಬಹುತೇಕರಿಗೆ ಗೊತ್ತು. ಅನಂತ್ ಅಂಬಾನಿ ಅವರ ವೈಯಕ್ತಿಕ ಟ್ರೈನರ್ ಆಗಿದ್ದ ಇವರು ಈ ರೀತಿ ಸೆಲೆಬ್ರಿಟಿ ಟ್ರೈನರ್‌  ಆಗುವ ಮೊದಲು ಹೌಸ್‌ ಕೀಪಿಂಗ್ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್  ಸೇರಿದಂತೆ ಹಲವು ಸಣ್ಣಪುಟ್ಟ ಕೆಲಸವನ್ನು ಮಾಡಿದ್ದರು.

Tap to resize

Latest Videos

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

ಮುಂಬೈ ಮೂಲದ ಫಿಟ್‌ನೆಸ್ ತರಬೇತುದಾರರಾಗಿರುವ ಈ ವಿನೋದ್ ಛನ್ನಾ ಅವರು, ದೇಶದ ಅತೀ ಹೆಚ್ಚು ಬೇಡಿಕೆಯಲ್ಲಿರುವ ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಲ್ಲಿ (celebrity fitness trainers) ಒಬ್ಬರು. ಇವರ ಸಾರಥ್ಯದಲ್ಲೇ ಅನಂತ್ ಅಂಬಾನಿ ತಮ್ಮ ಧಡೂತಿ ದೇಹದ 108 ಕೆಜಿ ತೂಕವನ್ನು ಕೇವಲ 18 ತಿಂಗಳಲ್ಲಿ ಇಳಿಸಿದ್ದರು. ಅನಂತ್ ಅಂಬಾನಿಗೆ ವೈಯಕ್ತಿಕ ಫಿಟ್‌ನೆಸ್ ಟ್ರೈನರ್ ಆದ ಬಳಿಕ ವಿನೋದ್‌ ಛನ್ನಾ ಮತ್ತಷ್ಟು ಫೇಮಸ್ ಆಗಿದ್ದು, ಇಂದು ಅವರ ತಿಂಗಳ ಆದಾಯ ಕೇಳಿದರೆ ನಿಮ್ಮ ತಲೆ ತಿರುಗುವುದು ಗ್ಯಾರಂಟಿ.  

ಆದರೆ ಈಗ ಟ್ರೈನರ್ ಆಗಿರುವ ವಿನೋದ್ ಛನ್ನಾ ಒಂದು ಕಾಲದಲ್ಲಿ ತಾವು ಕೂಡ ತುಂಬಾ ದಪ್ಪಗೆ ಇದ್ದರಂತೆ ಜನ ಇವರನ್ನು ದಪ್ಪದ ಕಾರಣಕ್ಕೆ ಹಂಗಿಸುತ್ತಿದ್ದರು. ಹೀಗಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದರೂ ಊಟವನ್ನು ಬಿಡುತ್ತಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರ ಒಂದು ಒಳ್ಳೆ ದಿನ ಅವರು ತಾನು ಹೀಗೆಯೇ ಇದ್ದರೆ ಸರಿ ಹೋಗುವುದಿಲ್ಲ ಎಂದು ಜಿಮ್‌ಗೆ ಸೇರಲು ನಿರ್ಧರಿಸಿದರು.  ಆದಾದ ನಂತರ ನಡೆದಿದ್ದೆಲ್ಲವೂ ಈಗ ಇತಿಹಾಸ..!

ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು

ಬ್ಯುಸಿನೆಸ್ ಇನ್‌ಸೈಡರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅನಂತ್ ಅಂಬಾನಿ (Anant Ambani) ಬಗ್ಗೆ ಮಾತನಾಡಿದ್ದ ವಿನೋದ್ ಛನ್ನಾ (Vinod Channa), ಅನಂತ್ ಅಂಬಾನಿ ಒಮ್ಮೆ ತೂಕದ ಇಳಿಕೆಗೆ ನಿರ್ಧಾರ ಮಾಡಿದ ಮೇಲೆ ಆ ಬಗ್ಗೆ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದರು. ಆದರೆ ಜಂಕ್‌ಫುಡ್‌ನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದ ಅನಂತ್ ಅಂಬಾನಿ ಅವರಿಗೆ ಈ ತೂಕ ಇಳಿಕೆಯ ಕೆಲಸ ದೊಡ್ಡ ಸಾಹಸವೇ ಆಗಿತ್ತು. ಹೀಗಾಗಿ ಪ್ರೋಟೀನ್ ಹಾಗೂ ಕಡಿಮೆ ಕಾರ್ಬೋಹೈಡ್ರೆಟ್ ಹಾಗೂ ಫೈಬರ್ ಒಳಗೊಂಡಿರುವ ಆಹಾರವನ್ನೇ ಅನಂತ್ ಅಂಬಾನಿಗೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ ವಿನೋದ್. 

ಪುಸ್ತಕದೊಳಗೆ ಫೋನ್‌: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು

ಇಂದು ವಿನೋದ್ ಛನ್ನಾ ಅವರು ಕೇವಲ ಅನಂತ್ ಅಂಬಾನಿ ಮಾತ್ರವಲ್ಲದೇ ಇತರ ಉದ್ಯಮಿಗಳಾದ ನೀತಾ ಅಂಬಾನಿ, ಕುಮಾರ್ ಮಂಗಲಮ್‌ ಬಿರ್ಲಾ(Kumar Mangalam Birla), ಅನನ್ಯಾ ಬಿರ್ಲಾ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳಾದ ಜಾನ್ ಅಬ್ರಹಾಂ (John Abraham),  ಶಿಲ್ಪಾ ಶೆಟ್ಟಿ,  ಹರ್ಷವರ್ಧನ್ ರಾಣೆ, ವಿವೇಕ್ ಒಬೇರಾಯ್ (Vivek Oberoi), ಅರ್ಜುನ್ ರಾಮ್‌ಪಾಲ್‌ (Arjun Rampal) ಮುಂತಾದವರಿಗೆ  ಫಿಟ್‌ನೆಸ್‌ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದು, ಇವರ ಫಿಟ್‌ನೆಸ್‌ನ 12 ಸೆಷನ್‌ಗಾಗಿ ಇವರು 1.5  ಲಕ್ಷ ರೂಪಾಯಿ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಅಂದರೆ ಒಂದು ಸೆಷನ್‌ಗೆ 12,500 ರೂ ಶುಲ್ಕ ವಿಧಿಸುತ್ತಾರೆ.

ಮಲಗೋದು ಭಾರತದಲ್ಲಿ ತಿನ್ನೋದು ಫಾರಿನ್‌ನಲ್ಲಿ: ಬಾರ್ಡರ್‌ನಲ್ಲಿರುವ ವಿಶೇಷ ಮನೆ ಇದು...!

click me!