ಚೀನಾಕ್ಕೆ ಭಾರತೀಯ ಪತ್ರಕರ್ತರ ಮೇಲೇಕೆ ಕೋಪ?

Published : Apr 05, 2023, 04:25 PM ISTUpdated : Apr 05, 2023, 04:33 PM IST
ಚೀನಾಕ್ಕೆ ಭಾರತೀಯ ಪತ್ರಕರ್ತರ ಮೇಲೇಕೆ ಕೋಪ?

ಸಾರಾಂಶ

ಭಾರತದ ಇಬ್ಬರು ಪತ್ರಕರ್ತರ ವೀಸಾಗಳನ್ನು ಚೀನಾ ತಡೆಹಿಡಿದಿದೆ. ಈ ಮೂಲಕ ಭಾರತದಲ್ಲಿರುವ ಚೀನಾದ ಪತ್ರಕರ್ತರಿಗೆ ದೆಹಲಿ ಸರ್ಕಾರ ಬದಲಿ ವೀಸಾ ಹಾಗೂ ಅವಧಿ ಷರತ್ತುಗಳನ್ನು ನೀಡದಿದ್ರೆ ಇನ್ನಷ್ಟು ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಚೀನಾದ ಪತ್ರಕರ್ತರ ವಿರುದ್ಧ ಭಾರತ ಈ ಹಿಂದೆ ಕ್ರಮ ಕೈಗೊಂಡಿದೆ ಎಂಬ ಆರೋಪವನ್ನು ಭಾರತ ನಿರಾಕರಿಸಿದೆ. 

ಬೀಜಿಂಗ್ (ಏ.5): ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಎಫ್ ಎ) ಬೀಜಿಂಗ್ ನಲ್ಲಿರುವ ಇಬ್ಬರು ಭಾರತೀಯ ಪತ್ರಕರ್ತರ ವೀಸಾಗಳನ್ನು ತಡೆಹಿಡಿದಿದೆ. ಈ ಮೂಲಕ ಭಾರತದಲ್ಲಿರುವ ಚೀನಾದ ಪತ್ರಕರ್ತರಿಗೆ ದೆಹಲಿ ಸರ್ಕಾರ ಬದಲಿ ವೀಸಾ ಹಾಗೂ ಅವಧಿ ಷರತ್ತುಗಳನ್ನು ನೀಡದಿದ್ರೆ ಇನ್ನಷ್ಟು ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಮಂಗಳವಾರ 'ದಿ ಹಿಂದೂ' ಬೀಜಿಂಗ್ ಪ್ರತಿನಿಧಿ ಅನಂತ್ ಕೃಷ್ಣನ್ ಹಾಗೂ ಪ್ರಸಾರ ಭಾರತಿ ಪ್ರತಿನಿಧಿ ಅಂಶುಮನ್ ಮಿಶ್ರಾ ಅವರಿಗೆ ಕರೆ ಮಾಡಿ ಅವರಿಬ್ಬರ ವೀಸಾವನ್ನು ತಡೆಹಿಡಿದಿರೋದಾಗಿ ತಿಳಿಸಿದ್ದಾರೆ. ಪ್ರಸ್ತುತ ಇವರಿಬ್ಬರೂ ಭಾರತದಲ್ಲಿದ್ದು, ಚೀನಾಕ್ಕೆ ಹಿಂತಿರುಗದಂತೆ ಸೂಚಿಸಲಾಗಿದೆ. ಚೀನಾದ ಪತ್ರಕರ್ತರ ಜೊತೆಗಿನ ಭಾರತದ ಅನ್ಯಾಯದ ನಡೆ ವಿರುದ್ಧ ಪ್ರತೀಕಾರದ ಕ್ರಮಗಳ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಪ್ರಸ್ತುತ ಚೀನಾದಲ್ಲಿರುವ ಪಿಟಿಐ ನ್ಯೂಸ್ ಏಜೆನ್ಸಿ ಹಾಗೂ ಹಿಂದೂಸ್ತಾನ್ ಟೈಮ್ಸ್ ನ ಇಬ್ಬರು ಪತ್ರಕರ್ತರಿಗೆ  ಎಎಫ್ ಎ ಮಾಹಿತಿ ನೀಡಿದೆ. ಭಾರತದ ಸುದ್ದಿಗಳನ್ನು ಹೆಚ್ಚು ಕವರ್ ಮಾಡಲು ತನ್ನ ಪತ್ರಿಕಾ ಪ್ರತಿನಿಧಿಗಳಿಗೆ ಹೆಚ್ಚಿನ ವೀಸಾ ಒದಗಿಸುವಂತೆ ಚೀನಾ ನಿರಂತರವಾಗಿ ಬೇಡಿಕೆ ಇಡುತ್ತಲೇ ಬಂದಿದೆ. 

ಚೀನಾ ತನ್ನ ಪತ್ರಕರ್ತರಿಗೆ ಭಾರತ ಹೆಚ್ಚಿನ ಸಂಖ್ಯೆಯಲ್ಲಿ ವೀಸಾ ನೀಡುವಂತೆ ಆಗ್ರಹಿಸುತ್ತಿರುವ ಜೊತೆಗೆ ಪ್ರಸ್ತುತ ಪತ್ರಕರ್ತರಿಗೆ ನೀಡುತ್ತಿರುವ ವೀಸಾದ ಅವಧಿ ಹೆಚ್ಚಿಸುವಂತೆಯೂ ಕೋರಿದೆ. ಪ್ರಸ್ತುತ ಭಾರತ ಚೀನಾದ ಪತ್ರಕರ್ತರಿಗೆ ನೀಡುತ್ತಿರುವ ವೀಸಾವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನವೀಕರಿಸೋದು ಅಗತ್ಯ. ಈ ಅವಧಿಯನ್ನು 12 ತಿಂಗಳಿಗೆ ಹೆಚ್ಚಿಸಬೇಕು ಎಂಬುದು ಚೀನಾದ ಬೇಡಿಕೆ. ಏಕೆಂದರೆ ಚೀನಾದ ಎಂಎಫ್ ಎ ಭಾರತದ ಪತ್ರಕರ್ತರಿಗೆ ಒಂದು ವರ್ಷ ಅವಧಿಯ ವೀಸಾಗಳನ್ನು ನೀಡುತ್ತಿದೆ. 

ಭಾರತದ ಜಿಡಿಪಿ ನಿರೀಕ್ಷಿತ ದರ ಕಡಿತಗೊಳಿಸಿದ ವಿಶ್ವ ಬ್ಯಾಂಕ್; ಶೇ.6.6ರಿಂದ ಶೇ.6.3ಕ್ಕೆ ಇಳಿಕೆ

ಭಾರತದ ಪತ್ರಕರ್ತರ ವೀಸಾಗಳನ್ನು ಚೀನಾ ಹಿಂತೆಗೆದುಕೊಂಡಿರುವ ಕ್ರಮದ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಆದರೆ,  ಚೀನಾದ ಪತ್ರಕರ್ತರ ವಿರುದ್ಧ ಭಾರತ ಈ ಹಿಂದೆ ಕ್ರಮ ಕೈಗೊಂಡಿದೆ ಎಂಬ ಆರೋಪವನ್ನು ಮೂಲಗಳು ನಿರಾಕರಿಸಿವೆ.  ದೆಹಲಿಯಲ್ಲಿದ್ದ ಚೀನಾದ ಅನೇಕ ಪತ್ರಕರ್ತರು ಕೋವಿಡ್ ಸಮಯದಲ್ಲಿ ಸ್ವದೇಶಕ್ಕೆ ಹಿಂತಿರುಗಿದ್ದು, ಮರಳಿ ಬಂದಿಲ್ಲ. ಹೀಗಾಗಿ ಚೀನಾದ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುದು ತಪ್ಪಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಚೀನಾದ ಕೆಲವು ಪತ್ರಕರ್ತರ ಬಳಿ ಇನ್ನೂ ಭಾರತದ ವೀಸಾವಿದೆ. ಹೀಗಾಗಿ ಅವರು ಬಯಸಿದರೆ ಭಾರತದಿಂದ ವರದಿ ಮಾಡಬಹುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ದೆಹಲಿಯಲ್ಲಿ ನಡೆದ ಜಿ-20 ವಿದೇಶಾಂಗ ಸಚಿವರ ಸಭೆ ಹಾಗೂ ವಾರಣಾಸಿಯಲ್ಲಿ ನಡೆದ ಶಾಂಘೈ ಸೌಹಾರ್ದ ಸಂಸ್ಥೆ ಸಭೆಯ ಸುದ್ದಿಗಳನ್ನು ಪ್ರಸಾರ ಮಾಡಲು ಚೀನಾದ ಪತ್ರಕರ್ತರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?

ದಶಕದ ಹಿಂದೆ ಭಾರತದಲ್ಲಿ ಚೀನಾದ ಸುಮಾರು 12ರಷ್ಟು ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದರು. ಆದರೆ, 2022ರ ಕೊನೆಯಲ್ಲಿ ಭಾರತದಲ್ಲಿ ಚೀನಾದ ಕೇವಲ 4 ಪತ್ರಕರ್ತರು ಮಾತ್ರ ಇದ್ದಾರೆ. ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ ಕ್ಸಿನ್ ಹುವಾ ಸಂಸ್ಥೆಗೆ ಸೇರಿದ ಮೂವರು ಪತ್ರಕರ್ತರು ಪತ್ರಿಕಾ ಕಾರ್ಯದ ಹೊರತಾಗಿ ಭಾರತದಲ್ಲಿ ಇತರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಭದ್ರತಾ ಸಂಸ್ಥೆ ಆರೋಪಿಸಿದ ಹಿನ್ನೆಲೆಯಲ್ಲಿ ಅವರನ್ನು 2016ರಲ್ಲಿ ಭಾರತದಿಂದ ಹೊರಗೆ ಕಳುಹಿಸಲಾಗಿತ್ತು. ಇದಾದ ಬಳಿಕ ಭಾರತ ಹಾಗೂ ಚೀನಾದ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಿರುಕು 2020ರ ಏಪ್ರಿಲ್ ನಲ್ಲಿ ಎಲ್ ಒಸಿ ಬಳಿ ಚೀನಾದ ಸೇನೆ ಜಮಾವಣೆಗೊಂಡ ಬಳಿಕ ಎರಡೂ ರಾಷ್ಟ್ರಗಳ ಸೇನೆಗಳ ನಡುವೆ ಜಟಾಪಟಿ ಹೆಚ್ಚಿದ ಬಳಿಕ ಇನ್ನಷ್ಟು ಹೆಚ್ಚಿತು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ