
ನವದೆಹಲಿ (ಜ.24): ಟೆಕ್ ಲೋಕದಲ್ಲಿ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿರುವ ಎಲಾನ್ ಮಸ್ಕ್ ಅವರ ಉಪಗ್ರಹದ ಮೂಲಕ ಇಂಟರ್‌ನೆಟ್ ಸೌಲಭ್ಯ ಕಲ್ಪಿಸುವ ‘ಸ್ಟಾರ್‌ಲಿಂಕ್ ಯೋಜನೆ’ ಭಾರತದಲ್ಲಿ ಕಾರ್ಯರೂಪಕ್ಕೆ ಬರುವ ಮೊದಲೇ, ಸ್ವದೇಶಿ ಕಂಪನಿ ಏರ್‌ಟೆಲ್ ಆ ಸಾಧನೆ ಮಾಡಲು ಸಜ್ಜಾಗಿದೆ ಎಂದು ವರದಿಗಳು ಹೇಳಿವೆ.
ಏರ್‌ಟೆಲ್‌ನ ಮಾತೃಸಂಸ್ಥೆಯಾದ ಭಾರತಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ರಂಜನ್ ಮಿತ್ತಲ್ ಸಂದರ್ಶನವೊಂದರಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ‘ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಕೇಂದ್ರಗಳಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳು ಮುಗಿದಿದ್ದು, ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವುದಷ್ಟೇ ಬಾಕಿ ಇದೆ’ ಎಂದಿದ್ದಾರೆ. ಈಗಾಗಲೇ 635 ಉಪಗ್ರಹಗಳನ್ನು ಉಡಾವಣೆ ಮಾಡಿರುವ ಏರ್‌ಟೆಲ್, ಗ್ರಾಮೀಣ ಪ್ರದೇಶಗಳಿಗೂ ಕೈಗೆಟಕುವ ದರದಲ್ಲಿ ಇಂಟರ್‌ನೆಟ್ ಸೇವೆ ಒದಗಿಸುವ ಗುರಿ ಹೊಂದಿದೆ ಎಂದು ಮಿತ್ತಲ್ ತಿಳಿಸಿದ್ದಾರೆ. ಅತ್ತ ಭಾರತದಲ್ಲಿ ತನ್ನ ಸೇವೆಯನ್ನು ಆರಂಭಿಸಲು ಕೇಂದ್ರದ ಅನುಮತಿಗೆ ಕಾಯುತ್ತಿರುವ ಸ್ಟಾರ್‌ಲಿಂಕ್‌ಗೆ ಈ ಬೆಳವಣಿಗೆ ಸವಾಲಾಗಿ ಪರಿಣಮಿಸಲಿದೆ.
ದುಬಾರಿ ದುನಿಯಾಗೆ ಟ್ರಾಯ್ ಬ್ರೇಕ್; ವಾಯ್ಸ್-ಎಸ್‌ಎಂಎಸ್‌ಗೆ ಮಾತ್ರವೇ ಇರುವ ಪ್ರೀಪೇಯ್ಡ್ ಪ್ಲ್ಯಾನ್
ವೆಲ್‌ಡನ್ ಏರ್‌ಟೆಲ್: ಏರ್‌ಟೆಲ್ ಒಳ್ಳೆಯ ಕೆಲಸ ಮಾಡುತ್ತಿದೆ. ಭಾರತದ ಟೆಕ್ ಕಂಪನಿಗಳು ವಿಶ್ವದ ಅತ್ಯುತ್ತಮ ಕಂಪನಿಗಳಾಗುವ ಶಕ್ತಿ ಹೊಂದಿವೆ ಹಾಗೂ ಸ್ಪರ್ಧಿಸುವ ಸಾಮರ್ಥ್ಯ ಹೊಂದಿವೆ.
- ರಾಜೀವ್ ಚಂದ್ರಶೇಖರ್, ಮಾಜಿ ಕೇಂದ್ರ ಐಟಿ ಸಚಿವ
ಬಿಎಸ್ಸೆನ್ನೆಲ್‌ನ ದೇಸಿ 4ಜಿ ನೆಟ್ವರ್ಕ್ ಸಿದ್ಧ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.ನ (ಬಿಎಸ್‌ಎನ್‌ಎಲ್) ಸ್ವದೇಶಿ 4ಜಿ ಸಂಪರ್ಕಜಾಲ ಸಿದ್ಧವಾಗಿದ್ದು, ಸದ್ಯದಲ್ಲೇ ಗ್ರಾಹಕರ ಬಳಕೆಗೆ ಸಿಗಲಿದೆ ಎಂದು ಕೇಂದ್ರ ಸಂಹವನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಅಲ್ಲದೆ, ಬಿಎಸ್‌ಎನ್‌ಎಲ್‌ನ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಿದೆ ಎಂದೂ ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆತ್ಮನಿರ್ಭರ ಭಾರತ ಯೋಜನೆಯಡಿ ಸ್ವದೇಶಿ ತಂತ್ರಜ್ಞಾನದೊಂದಿಗೆ 4ಜಿ ತಂತ್ರಜ್ಞಾನ ಸಿದ್ಧವಾಗಿದೆ.
ಕಡಿಮೆ ಬೆಲೆಯಲ್ಲಿ 6 ತಿಂಗಳ ಪ್ಲಾನ್; ಏರ್‌ಟೆಲ್, ಜಿಯೋ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿಸಿದ ಬಿಎಸ್‌ಎನ್‌ಎಲ್
ಕೆಲವೇ ತಿಂಗಳಲ್ಲಿ ಅದನ್ನು ದೇಶಾದ್ಯಂತ ಗ್ರಾಹಕರಿಗೆ ಬಿಡುಗಡೆ ಮಾಡಲಾಗುತ್ತದೆ. ಜಿಯೋ, ಏರ್‌ಟೆಲ್‌ನವರು 5ಜಿಯಲ್ಲಿರುವಾಗ ನೀವು ಇನ್ನೂ 4ಜಿ ಕೂಡ ಕೊಟ್ಟಿಲ್ಲ ಏಕೆ ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರಿ ಸ್ವಾಮ್ಯದ ಕಂಪನಿಯು ಚೀನಾ ಅಥವಾ ಬೇರೆ ದೇಶದ ಉಪಕರಣ ಹಾಗೂ ತಂತ್ರಜ್ಞಾನ ಬಳಸಿ ಸೇವೆ ನೀಡಬಾರದು, ತನ್ನದೇ ತಂತ್ರಜ್ಞಾನ ಹೊಂದಿರಬೇಕು ಎಂದು ಹೇಳಿದ್ದರು. ಅದರಂತೆ ಸ್ವದೇಶಿ ತಂತ್ರಜ್ಞಾನ ಸಿದ್ಧಪಡಿಸಲಾಗಿದೆ’ ಎಂದು ಬಿಎಸ್ಸೆನ್ನೆಲ್ 4ಜಿ ವಿಳಂಬಕ್ಕೆ ಆದ ಕಾರಣ ನೀಡಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.