ಆಂಡ್ರಾಯ್ಡ್‌, ಐಫೋನ್‌ಗಳಲ್ಲಿ ದರ ವ್ಯತ್ಯಾಸ; ಓಲಾ, ಉಬರ್‌ಗೆ ನೋಟಿಸ್‌ ನೀಡಿದ ಕೇಂದ್ರ ಸರ್ಕಾರ!

Published : Jan 23, 2025, 04:33 PM ISTUpdated : Jan 23, 2025, 04:42 PM IST
ಆಂಡ್ರಾಯ್ಡ್‌, ಐಫೋನ್‌ಗಳಲ್ಲಿ ದರ ವ್ಯತ್ಯಾಸ; ಓಲಾ, ಉಬರ್‌ಗೆ ನೋಟಿಸ್‌ ನೀಡಿದ ಕೇಂದ್ರ ಸರ್ಕಾರ!

ಸಾರಾಂಶ

ಓಲಾ ಮತ್ತು ಉಬರ್‌ಗೆ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್ ಜಾರಿ ಮಾಡಿದೆ. ಗ್ರಾಹಕರು ಬಳಸುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಧಾರದ ಮೇಲೆ ಭಿನ್ನ ದರ ವಿಧಿಸುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಕ್ರಮವನ್ನು ದೃಢಪಡಿಸಿದ್ದಾರೆ.

ನವದೆಹಲಿ (ಜ.23): ದೇಶದ ಪ್ರಮುಖ ಕ್ಯಾಬ್‌ ಅಗ್ರಿಗೇಟರ್‌ ಕಂಪನಿಗಳಾದ ಓಲಾ ಹಾಗೂ ಉಬರ್‌ಗೆ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ನೋಟಿಸ್‌ ಜಾರಿ ಮಾಡಿದೆ. ಗ್ರಾಹಕರು ಯಾವ ರೀತಿಯ ಮೊಬೈಲ್‌ ಆಪರೇಟಿಂಗ್‌ ಸ್ಟಿಸಮ್‌ ಬಳಸುತ್ತಿದ್ದಾರೆ ಎನ್ನುವ ಆಧಾರದ ಮೇಲೆ ಭಿನ್ನ ದರಗಳನ್ನು ಹೇರುತ್ತಿದ್ದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಓಲಾ ಹಾಗೂ ಉಬರ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.  ಗ್ರಾಹಕ ವ್ಯವಹಾರಗಳ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಗುರುವಾರ ಎಕ್ಸ್‌ ಪೋಸ್ಟ್‌ನಲ್ಲಿ ಈ ಎರಡು ಕಂಪನಿಗಳಿಗೆ ಸಿಸಿಪಿಎ ನೋಟಿಸ್‌ ಜಾರಿ ಮಾಡಿದ್ದನ್ನು ಖಚಿತಪಡಿಸಿದ್ದಾರೆ.

"ಗ್ರಾಹಕರು ಬಳಸುವ ವಿವಿಧ ಮಾದರಿಯ ಮೊಬೈಲ್‌ಗಳ (#ಐಫೋನ್‌ಗಳು/ #ಆಂಡ್ರಾಯ್ಡ್) ಆಧಾರದ ಮೇಲೆ ಭಿನ್ನ ಬೆಲೆ ನಿಗದಿಯ ಹಿಂದಿನ ಫಾಲೋಅಪ್‌  ಭಾಗವಾಗಿ, ಗ್ರಾಹಕ ವ್ಯವಹಾರಗಳ ಇಲಾಖೆಯು CCPA ಮೂಲಕ ಪ್ರಮುಖ ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ ಮತ್ತು ಉಬರ್‌ಗಳಿಗೆ ಪ್ರತಿಕ್ರಿಯೆಗಳನ್ನು ಕೋರಿ ನೋಟಿಸ್‌ಗಳನ್ನು ನೀಡಿದೆ" ಎಂದು ಅವರು ಬರೆದಿದ್ದಾರೆ.

ಆಂಡ್ರಾಯ್ಡ್‌ ಫೋನ್‌ ಗಿಂತ ಐಫೋನ್‌ ಉಬರ್ ಕ್ಯಾಬ್‌ ಬುಕ್‌ ಮಾಡೋದು ದುಬಾರಿ! ಎಂದಾದ್ರೂ ಗಮನಿಸಿದ್ದೀರಾ?

ಕಳೆದ ತಿಂಗಳು "ಗ್ರಾಹಕ ಶೋಷಣೆಗೆ ಶೂನ್ಯ ಸಹಿಷ್ಣುತೆ" ಇರುತ್ತದೆ ಎಂದು ಜೋಶಿ ಹೇಳಿದ ನಂತರ ಈ ನೋಟಿಸ್‌ ಜಾರಿಯಾಗಿದೆ. ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ CCPA ಯನ್ನು ಕೇಳಿದೆ ಎಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.

ಓಲಾ ಆಟೋ ರೈಡ್‌ಗೆ ಇನ್ನು ಸಿಗಲಿದೆ ಬಿಲ್‌, ರೀಫಂಡ್‌ಗೆ ಇರಲಿದೆ ಆಯ್ಕೆಗಳು!

ಹಾಗೇನಾದರೂ ಈ ಕಂಪನಿಗಳು ಈ ರೀತಿ ಮಾಡುತ್ತಿದ್ದರೆ ಮೊದಲ ನೋಟಕ್ಕೆ ಅನ್ಯಾಯದ ವ್ಯಾಪಾರ ಪದ್ಧತಿ ಇದಾಗಿದೆ ಎಂದು ಹೇಳಿದ್ದಲ್ಲದೆ,  ಗ್ರಾಹಕರ ಪಾರದರ್ಶಕತೆಯ ಹಕ್ಕನ್ನು "ಸ್ಪಷ್ಟವಾಗಿ ಕಡೆಗಣಿಸುವುದು" ಎಂದು ತಿಳಿಸಿದ್ದರು.

ಗ್ರಾಹಕರು ಐಫೋನ್ ಬಳಸುತ್ತಿದ್ದಾರೆಯೇ ಅಥವಾ ಆಂಡ್ರಾಯ್ಡ್ ಸಾಧನ ಬಳಸುತ್ತಿದ್ದಾರೆಯೇ ಎಂಬುದರ ಆಧಾರದ ಮೇಲೆ ಎರಡೂ ಕಂಪನಿಗಳು ಒಂದೇ ಸೇವೆಗೆ ವಿಭಿನ್ನ ದರಗಳನ್ನು ವಿಧಿಸುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮ ಕೈಗೊಂಡಿದೆ. CCPA ತನ್ನ ಸೂಚನೆಯಲ್ಲಿ, ಕಂಪನಿಗಳು ತಾವು ಬಳಸುವ ಬೆಲೆ ವಿಧಾನಗಳ ವಿವರವಾದ ವಿವರಣೆಗಳನ್ನು ಕೇಳಿದೆ ಮತ್ತು ಈಗಾಗಲೇ ಇರುವ ಬೆಲೆ ವ್ಯತ್ಯಾಸದ ಕಳವಳಗಳನ್ನು ಪರಿಹರಿಸುವ ನಿರ್ದೇಶನ ನೀಡಿದೆ.

ಈ ಸಮಸ್ಯೆಯನ್ನು "ಸ್ಪಷ್ಟವಾದ ವಿಭಿನ್ನ ಬೆಲೆ ನಿಗದಿ" ಎಂದು ಹೇಳಿರುವ ಮಾಡಿದ ಸಚಿವಾಲಯ, ರೈಡ್‌ ದರದ ಲೆಕ್ಕಾಚಾರಗಳಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದಿದೆ. ದೆಹಲಿ ಮೂಲದ ಉದ್ಯಮಿಯೊಬ್ಬರು ಎಕ್ಸ್‌ನಲ್ಲಿ ಈ ಬಗ್ಗೆ ಆರೋಪ ಮಾಡಿದ ನಂತರ ಸರ್ಕಾರ ಈ ಕ್ರಮ ಕೈಗೊಡಿದೆ. ವಿಭಿನ್ನ ಸಾಧನಗಳು ಹಾಗೂ ಬ್ಯಾಟರಿ ಮಟ್ಟದ ಆಧಾರದ ಮೇಲೆ ಎರಡೂ ಕಂಪನಿಗಳಲ್ಲಿ ಒಂದೇ ದೂರದ ರೈಡ್‌ಗೆ ಇರುವ ಬೆಲೆ ವ್ಯತ್ಯಾಸವನ್ನು ತೋರಿಸಿದ್ದರು.

ಉಬರ್‌ ಆಪ್‌ನಲ್ಲಿ ಒಂದೇ ರೀತಿಯ ಟ್ರಿಪ್‌ಗೆ ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಒಂದು ದರ ಹಾಗೂ ಐಫೋನ್‌ನಲ್ಲಿ ಒಂದು ದರ ತೋರಿಸುತ್ತಿರುವ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ಗ್ರಾಹಕರೊಬ್ಬರು ಗಮನಸೆಳೆದಿದ್ದರು. ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಉಬರ್ ಆರೋಪಗಳನ್ನು ತಳ್ಳಿಹಾಕಿತು, ಬಳಸಿದ ಫೋನ್ ಪ್ರಕಾರದಿಂದ ಅದರ ಬೆಲೆ ನಿರ್ಧರಿಸಲ್ಪಡುವುದಿಲ್ಲ ಎಂದು ತಿಳಿಸಿತ್ತು. ಪಿಕ್-ಅಪ್ ಸ್ಥಳಗಳು, ಅಂದಾಜು ಆಗಮನದ ಸಮಯ (ETA) ಮತ್ತು ಡ್ರಾಪ್-ಆಫ್ ಪಾಯಿಂಟ್‌ಗಳಂತಹ ಅಂಶಗಳಿಂದಾಗಿ ದರ ವ್ಯತ್ಯಾಸಗಳು ಉಂಟಾಗಿವೆ ಎಂದು ಉಬರ್ ಸ್ಪಷ್ಟಪಡಿಸಿದೆ ಮತ್ತು ಸವಾರರ ಮೊಬೈಲ್ ಫೋನ್ ತಯಾರಕರನ್ನು ಆಧರಿಸಿ ಟ್ರಿಪ್ ಬೆಲೆಯನ್ನು ವೈಯಕ್ತೀಕರಿಸುವುದಿಲ್ಲ ಎಂದು ಹೇಳಿತ್ತು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!