
ನವದೆಹಲಿ: ಟೆಲಿಕಾಂ ಅಪರೇಟರ್ ಕಂಪನಿ ಏರ್‌ಟೆಲ್ ಅಧಿಕೃತವಾಗಿ ದೇಶದ 2,000 ನಗರಗಳಲ್ಲಿ IPTV ಸರ್ವಿಸ್ ಆರಂಭಿಸಿದೆ. ಈ ಸೇವೆಯಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಅತ್ಯಧಿಕ ಪ್ರಯೋಜನಗಳು ಸಿಗಲಿವೆ. ಈ ಆಫರ್‌ನಲ್ಲಿ ನೆಟ್‌ಫ್ಲಿಕ್ಸ್, ಆಪಲ್ ಟಿವಿ +, ಅಮೆಜಾನ್ ಪ್ರೈಮ್, ಸೋನಿ ಲಿವ್, ಜೀ 5 ಸೇರಿದಂತೆ 29 ಪ್ರಮುಖ ಸ್ಟ್ರೀಮಿಂಗ್ ಆಪ್‌ಗಳ ಸಬ್‌ಸ್ಕ್ರಿಪ್ಷನ್ ಸಿಗಲಿದೆ. IPTV (Internet Protocol television) ಸೇವೆಯಲ್ಲಿ ಬಳಕೆದಾರರು 350ಕ್ಕೂ ಅಧಿಕ ಚಾನೆಲ್‌ಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಏರ್‌ಟೆಲ್‌ನ IPTV ಸರ್ವಿಸ್ ಬೆಲೆಗಳು 699 ರೂ.ಗಳಿಂದ ಆರಂಭವಾಗುತ್ತದೆ. ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಐಪಿಟಿವಿ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ ಮೊದಲ 30 ದಿನ ಉಚಿತ ಆಕ್ಸೆಸ್ ಲಭ್ಯವಾಗಲಿದೆ.
ಏರ್‌ಟೆಲ್ ನೀಡುತ್ತಿರುವ ಈ ಸೇವೆ ದೇಶದ ಬಹುತೇಕ ನಗರಗಳಲ್ಲಿ ಲಭ್ಯವಿದೆ. ಶೀಘ್ರದಲ್ಲಿಯೇ ದೆಹಲಿ, ರಾಜಸ್ಥಾನ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ರೋಲ್ಔಟ್ ನಿರೀಕ್ಷಿಸಲಾಗಿದೆ. ಹೊಸ ಗ್ರಾಹಕರು ಏರ್‌ಟೆಲ್ ವೈ-ಫೈ ಯೋಜನೆಗಳನ್ನು ಆನ್‌ಲೈನ್‌ನಲ್ಲಿ airtel.in ಅಥವಾ ಏರ್‌ಟೆಲ್ ಸ್ಟೋರ್ ಮುಖಾಂತರ IPTV ಸರ್ವಿಸ್ ಆಕ್ಟಿವೇಟ್ ಮಾಡಿಕೊಳ್ಳಬಹದಾಗಿದೆ . ಅಸ್ತಿತ್ವದಲ್ಲಿರುವ ವೈ-ಫೈ ಬಳಕೆದಾರರು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಅಥವಾ ಏರ್‌ಟೆಲ್ ರಿಟೇಲ್ ಸ್ಥಳಗಳಲ್ಲಿ ತಮ್ಮ ಯೋಜನೆಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದು.
| ಬೆಲೆ | Wi-Fi ಸ್ಪೀಡ್ | ಸ್ಟ್ರೀಮಿಂಗ್ ಆಪ್ಸ್ | ಟಿವಿ ಚಾನೆಲ್ |
| 699 ರೂಪಾಯಿ | 40 Mbps | 26 ಸ್ಟ್ರೀಮಿಂಗ್ ಆಪ್ಸ್ | 350 ಟಿವಿ ಚಾನೆಲ್ |
| 899 ರೂಪಾಯಿ | 100 Mbps | 26 ಸ್ಟ್ರೀಮಿಂಗ್ ಆಪ್ಸ್ | 350 ಟಿವಿ ಚಾನೆಲ್ |
| 1099 ರೂಪಾಯಿ | 200 Mbps | ಆಪಲ್ ಟಿವಿ+, ಅಮೆಜಾನ್ ಪ್ರೈಮ್ ಸೇರಿದಂತೆ 28 ಸ್ಟ್ರೀಮಿಂಗ್ ಆಪ್ಸ್ | 350 ಟಿವಿ ಚಾನೆಲ್ |
| 1599 ರೂಪಾಯಿ | 300 Mbps | ನೆಟ್‌ಫ್ಲಿಕ್ಸ್, ಆಪಲ್ ಟಿವಿ+, ಅಮೆಜಾನ್ ಪ್ರೈಮ್ ಸೇರಿದಂತೆ 29 ಸ್ಟ್ರೀಮಿಂಗ್ ಆಪ್ಸ್ | 350 ಟಿವಿ ಚಾನೆಲ್ |
| 3999 ರೂಪಾಯಿ | 1 Gbps | ಆಪಲ್ ಟಿವಿ+, ಅಮೆಜಾನ್ ಪ್ರೈಮ್ ಸೇರಿದಂತೆ 29 ಸ್ಟ್ರೀಮಿಂಗ್ ಆಪ್ಸ್ | 350 ಟಿವಿ ಚಾನೆಲ್ |
ಇದನ್ನೂ ಓದಿ: ಏರ್‌ಟೆಲ್ To ಇನ್ಪೋಸಿಸ್: ಟಾಪ್ 10 ಬುಲ್ಲಿಶ್ ಸ್ಟಾಕ್ ಸೆಲೆಕ್ಷನ್‌ಗಳು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.