ನಾವು ಸ್ಪಷ್ಟವಾಗಿ ಕೆಲವು ಪಾಠ ಕಲಿಯಬೇಕು: ಸಿಬ್ಬಂದಿಗೆ ಏರ್‌ ಇಂಡಿಯಾ ಸಿಇಒ ಕ್ಲಾಸ್‌..!

By BK AshwinFirst Published Jan 7, 2023, 5:19 PM IST
Highlights

ಈ ಘಟನೆಯು ವರದಿಯಾಗಿರುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದ್ದರೂ, ನಾವು ಕೆಲವು ಪಾಠಗಳನ್ನು ಸ್ಪಷ್ಟವಾಗಿ ಕಲಿಯಬಹುದು ಮತ್ತು ಕಲಿಯಬೇಕಾಗಿದೆ ಎಂದು ಏರ್‌ ಇಂಡಿಯಾ ಸಿಇಒ ಹೇಳಿದ್ದಾರೆ.

ಏರ್‌ ಇಂಡಿಯಾ ವಿಮಾನದಲ್ಲಿ (Air India Flight) 2022ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕುಡಿದ ಮತ್ತಲ್ಲಿ (Drunk) ಪ್ರಯಾಣಿಕರು ಮತ್ತೊಬ್ಬರು ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ (Urinated) ಮಾಡಿದ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ  ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆ ವಿಮಾನದಲ್ಲಿ ಯಾವುದೇ ಅಸಮರ್ಪಕ ನಡವಳಿಕೆ ನಡೆದರೂ, ವಿಷಯವು ಇತ್ಯರ್ಥಗೊಂಡಂತೆ ಕಂಡುಬಂದರೂ ಸಹ ಅಧಿಕಾರಿಗಳಿಗೆ ತಿಳಿಸುವಂತೆ ಏರ್‌ಲೈನ್ ಸಿಬ್ಬಂದಿಗೆ ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ (Campbell Wilson) ತಿಳಿಸಿದ್ದಾರೆ. 

ಏರ್‌ಲೈನ್ಸ್ ಉದ್ಯೋಗಿಗಳಿಗೆ ಆಂತರಿಕ ಸಂವಹನದಲ್ಲಿ, ಮೂತ್ರ ವಿಸರ್ಜನೆಯ ಘಟನೆಯನ್ನು ಪ್ರಸ್ತಾಪಿಸಿದ ಸಿಇಒ, ಪೀಡಿತ ಪ್ರಯಾಣಿಕರು ಅನುಭವಿಸಿದ ಹೇಸಿಗೆಯು ಸಂಪೂರ್ಣವಾಗಿ ಅರ್ಥವಾಗುವಂತಹದ್ದಾಗಿದೆ ಮತ್ತು ನಾವು ಅವರ ದುಃಖವನ್ನು ಹಂಚಿಕೊಳ್ಳುತ್ತೇವೆ. ಈ ಘಟನೆಯು ವರದಿಯಾಗಿರುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿದ್ದರೂ, ನಾವು ಕೆಲವು ಪಾಠಗಳನ್ನು ಸ್ಪಷ್ಟವಾಗಿ ಕಲಿಯಬಹುದು ಮತ್ತು ಕಲಿಯಬೇಕಾಗಿದೆ ಎಂದೂ ಅವರು ಹೇಳಿದ್ದಾರೆ.

ಇದನ್ನು ಓದಿ: Air India ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್‌: ಜೈಲುಪಾಲಾದ ಶಂಕರ್‌ ಮಿಶ್ರಾ

ಅತ್ಯಂತ ಮುಖ್ಯವಾಗಿ, ನಮ್ಮ ವಿಮಾನದಲ್ಲಿನ ಘಟನೆಯು ಅಂತಹ ಪ್ರಮಾಣದ ಅಸಮರ್ಪಕ ನಡವಳಿಕೆಯನ್ನು ಒಳಗೊಂಡಿದ್ದರೆ, ಎರಡೂ ಕಡೆಯವರ ನಡುವೆ ವಿಷಯವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ನಾವು ಪ್ರಾಮಾಣಿಕವಾಗಿ ನಂಬಿದ್ದರೂ ಸಹ, ನಾವು ಅದನ್ನು ಆದಷ್ಟು ಬೇಗನೇ ಅಧಿಕಾರಿಗಳಿಗೆ ವರದಿ ಮಾಡಬೇಕು. ಅನಿಯಂತ್ರಿತ ಮಿತಿಯನ್ನು ಪೂರೈಸಲು ಪರಿಗಣಿಸಲಾದ ಪ್ರಯಾಣಿಕರ ವಿಷಯದಲ್ಲೂ ಇದು ಅನ್ವಯಿಸುತ್ತದೆ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ಹೇಳಿದರು.

ನವೆಂಬರ್ 26 ರಂದು ನ್ಯೂಯಾರ್ಕ್ - ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆಯ ಆಘಾತಕಾರಿ ಘಟನೆಯ 10 ದಿನಗಳ ನಂತರ, ಪ್ಯಾರಿಸ್-ದೆಹಲಿ ವಿಮಾನದಲ್ಲೂ ಅಂತದ್ದೇ ಘಟನೆ ವರದಿಯಾಗಿತ್ತು. ಇಲ್ಲಿ, ಪಾನಮತ್ತ ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರ ಹೊದಿಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ವರದಿಯಾಗಿದೆ. ಆದರೆ ಪುರುಷ ಪ್ರಯಾಣಿಕ ಲಿಖಿತ ಕ್ಷಮೆಯಾಚನೆ ನೀಡಿದ ನಂತರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದೂ ಅಧಿಕಾರಿಗಳು ಗುರುವಾರ ಹೇಳಿದ್ದರು.

ಇದನ್ನೂ ಓದಿ: Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!

ಈ ಘಟನೆಯು ಡಿಸೆಂಬರ್ 6 ರಂದು ಏರ್ ಇಂಡಿಯಾ ಫ್ಲೈಟ್ 142 ನಲ್ಲಿ ಸಂಭವಿಸಿದೆ ಮತ್ತು ವಿಮಾನದ ಪೈಲಟ್ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ನಂತರ ಪುರುಷ ಪ್ರಯಾಣಿಕರನ್ನು ವಶಕ್ಕೆ ಪಡೆದು ಬಿಟ್ಟು ಕಳಿಸಲಾಗಿತ್ತು ಎಂದು ತಿಳಿದುಬಂದಿದೆ. 

ಉದ್ಯಮಿ ಶಂಕರ್‌ ಮಿಶ್ರಾ ಜೈಲು ಪಾಲು..!

ಇನ್ನೊಂದೆಡೆ ನವೆಂಬರ್ 2022 ರಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬೈ ಮೂಲದ ಮಾಜಿ ಉದ್ಯಮಿ ಶಂಕರ್ ಮಿಶ್ರಾ ಅವರನ್ನು ಶುಕ್ರವಾರ ತಡರಾತ್ರಿ ದೆಹಲಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿ ರಾಷ್ಟ್ರ ರಾಜಧಾನಿ ದೆಹಲಿಗೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ಮುಂಬೈನಿಂದ ಪರಾರಿಯಾಗಿದ್ದ ಕಾರಣ ಆತನ ಪತ್ತೆಗೆ ಲುಕ್‌ಔಟ್‌ ನೋಟಿಸ್‌ ಜಾರಿಗಳಿಸಲಾಗಿತ್ತು ಅಥವಾ ಏರ್‌ಪೋರ್ಟ್ ಅಲರ್ಟ್ ಹಾಕಲಾಗಿತ್ತು ಎಂದು ತಿಳಿದುಬಂದಿದೆ. ಶಂಕರ್ ಮಿಶ್ರಾ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇರುವಿಕೆಯ ಬಗ್ಗೆ ಸುಳಿವುಗಳನ್ನು ಪಡೆದ ನಂತರ ದೆಹಲಿ ಪೊಲೀಸರು ಆತನನ್ನು ಹಿಡಿಯಲು ಬೆಂಗಳೂರಿನಲ್ಲಿ ತಂಡವನ್ನು ನಿಯೋಜಿಸಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ದೆಹಲಿ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು, ಹೆಚ್ಚಿನ ತನಿಖೆಗೆ ಯಾವುದೇ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಒಂದೇ ಸಲ 500 ವಿಮಾನ ಖರೀದಿಗೆ Air India ರೆಡಿ..! ಇದು ಜಗತ್ತಿನ ಅತಿದೊಡ್ಡ ವಿಮಾನ ಖರೀದಿ ಡೀಲ್

click me!