
Business Desk:ವಿಮೆ ಎಂದ ತಕ್ಷಣ ಮೊದಲಿಗೆ ನೆನಪಾಗೋದೇ ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ). ಇದಕ್ಕೆ ಕಾರಣ ಹಲವು ವರ್ಷಗಳಿಂದ ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಎಲ್ಐಸಿ ಕಾಪಾಡಿಕೊಂಡು ಬಂದಿರೋದು. ಅಲ್ಲದೆ, ಎಲ್ಐಸಿ ಸರ್ಕಾರಿ ಬೆಂಬಲಿತ ಸಂಸ್ಥೆಯಾಗಿರುವ ಕಾರಣ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ. ಇದೇ ಕಾರಣಕ್ಕೆ ಬಹುತೇಕ ಜನರು ಇಂದಿಗೂ ಎಲ್ಐಸಿ ಪಾಲಿಸಿಗಳನ್ನು ಖರೀದಿಸಲು ಜಾಸ್ತಿ ಯೋಚಿಸೋದಿಲ್ಲ. ಎಲ್ಐಸಿ ಸುರಕ್ಷತೆಯ ಜೊತೆಗೆ ಉತ್ತಮ ರಿಟರ್ನ್ ನೀಡುವ ಯೋಜನೆಗಳನ್ನು ರೂಪಿಸುತ್ತದೆ. ಅಲ್ಲದೆ, ವಯೋಮಾನ, ಆದಾಯದ ಆಧಾರದಲ್ಲಿ ಎಲ್ಲ ವರ್ಗದವರಿಗೂ ಸರಿ ಹೊಂದುವ ಪಾಲಿಸಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತದೆ. ನಿವೃತ್ತಿ ಬದುಕಿಗಾಗಿ ಹೂಡಿಕೆ ಮಾಡಲು ಬಯಸೋರಿಗೆ ಕೂಡ ಎಲ್ಐಸಿ ಕೆಲವು ಪಾಲಿಸಿಗಳನ್ನು ರೂಪಿಸಿದೆ. ಅವುಗಳಲ್ಲಿ ಜೀವನ್ ಸರಳ್ ಪಾಲಿಸಿ ಕೂಡ ಒಂದು. ನಿವೃತ್ತಿ ಬದುಕಿಗೆ ಹಾಗೂ ನಿಯಮಿತ ಆದಾಯಕ್ಕೆ ಎಲ್ಐಸಿಯ ಜೀವನ್ ಸರಳ್ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಆದರೆ, ಇದಕ್ಕೆ ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು. ಹಾಗಾದ್ರೆ ಎಲ್ಐಸಿ ಜೀವನ್ ಸರಳ್ ಪಾಲಿಸಿಯಲ್ಲಿ ಯಾರು ಹೂಡಿಕೆ ಮಾಡಬಹುದು? ವಿಶೇಷತೆಯೇನು?
ಎಲ್ಐಸಿ ಜೀವನ್ ಸರಳ್ ಪಾಲಿಸಿ ನಿಮಗೆ ಸ್ಥಿರ ಆದಾಯ ನೀಡುತ್ತದೆ. ಪಿಂಚಣಿಯನ್ನು ನೀವು ವಾರ್ಷಿಕ, ಅರ್ಧವಾರ್ಷಿಕ ಹಾಗೂ ತ್ರೈಮಾಸಿಕಕ್ಕೆ ಪಡೆಯಬಹುದು. ಪ್ರೀಮಿಯಂ ಪಾವತಿಗೆ ಕೂಡ ಅನೇಕ ಪಾವತಿ ಆಯ್ಕೆಗಳಿವೆ. 40 ಹಾಗೂ 80 ವಯಸ್ಸಿನ ನಡುವಿನ ಯಾವುದೇ ಭಾರತೀಯ ನಾಗರಿಕ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಐಆರ್ ಡಿಎ ನಿರ್ದೇಶನಗಳ ಅಡಿಯಲ್ಲಿ ಈ ಪಾಲಿಸಿ ರೂಪಿಸಲಾಗಿದೆ. ಈ ಪಾಲಿಸಿಯನ್ನು LICIndia.in website ಮೂಲಕ ಕೂಡ ಖರೀದಿಸಬಹುದು. ಆಪ್ ಲೈನ್ ಖರೀದಿಗೆ ಕೂಡ ಅವಕಾಶವಿದೆ. ಪಾಲಿಸಿ ಪ್ರಾರಂಭವಾದ ಆರು ತಿಂಗಳ ಬಳಿಕ ಸಾಲ ಸೌಲಭ್ಯ ಕೂಡ ಪಡೆಯಬಹುದು.
ಅಪ್ರಾಪ್ತ ವಯಸ್ಕರು ಪ್ಯಾನ್ ಕಾರ್ಡ್ ಪಡೆಯಬಹುದಾ? ಅರ್ಜಿ ಸಲ್ಲಿಕೆ ಹೇಗೆ?
52,000 ರೂ. ಪಿಂಚಣಿ ಪಡೆಯೋದು ಹೇಗೆ?
ಎಲ್ಐಸಿ ಜೀವನ್ ಸರಳ್ ಪಾಲಿಸಿಗೆ ನೀವು ಒಂದೇ ಬಾರಿಗೆ ದೊಡ್ಡ ಮೊತ್ತದ ಪ್ರೀಮಿಯಂ ಪಾವತಿಸಬೇಕು. ಒಬ್ಬ ವ್ಯಕ್ತಿ ಈ ಪಾಲಿಸಿಯಲ್ಲಿ 10ಲಕ್ಷ ರೂ. ಹೂಡಿಕೆ ಮಾಡಿದ್ರೆ ಆತ ಅಥವಾ ಆಕೆ ವಾರ್ಷಿಕ 52,000 ರೂ. ಪಿಂಚಣಿ ಪಡೆಯುತ್ತಾರೆ. ಹಾಗೆಯೇ 12,000 ರೂ. ತನಕ ಮಾಸಿಕ ಪಿಂಚಣಿ ಕೂಡ ಪಡೆಯಬಹುದು. ಜೀವನ್ ಸರಳ್ ಪಾಲಿಸಿಯಲ್ಲಿ ನೀವು ಕನಿಷ್ಠ 1,000ರೂ. ಪಿಂಚಣಿ ಪಡೆಯೋದು ಕಡ್ಡಾಯ.
ಆದಾಯ ತೆರಿಗೆ ವಿನಾಯ್ತಿ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ 1,50,000ರೂ. ತನಕ ತೆರಿಗೆ ವಿನಾಯ್ತಿ ಪ್ರಯೋಜನ ಪಡೆಯಬಹುದು.
ವೈದ್ಯಕೀಯ ಪರೀಕ್ಷೆ ಅಗತ್ಯ
ಎಲ್ಐಸಿ ಜೀವನ್ ಸರಳ್ ಪಾಲಿಸಿ ಪಡೆಯಲು ನೀವು ವೈದ್ಯಕೀಯ ಪರೀಕ್ಷೆ ಮಾಡಿಸೋದು ಕಡ್ಡಾಯ. ನೀವು ವೈದ್ಯಕೀಯ ಪ್ರಮಾಣಪತ್ರ ನೀಡಿದ ಬಳಿಕವಷ್ಟೇ ನಿಮಗೆ ಪಾಲಿಸಿ ನೀಡಲಾಗುತ್ತದೆ.
ಆನ್ ಲೈನ್ ನಲ್ಲೇ KYC ನವೀಕರಿಸಬಹುದು, ಬ್ಯಾಂಕಿಗೆ ಭೇಟಿ ನೀಡೋದು ಕಡ್ಡಾಯವಲ್ಲ: ಆರ್ ಬಿಐ
ವಾಟ್ಸ್ಆ್ಯಪ್ ಸೇವೆ
ನೀವು ಮೊಬೈಲ್ (Mobile) ಮುಖಾಂತರ ಎಲ್ಐಸಿ ವಾಟ್ಸ್ಆ್ಯಪ್ (Whatsapp) ಸೇವೆಗಳನ್ನು ಪಡೆಯಲು ಎಲ್ಐಸಿ ಪೋರ್ಟಲ್ ನಲ್ಲಿ ಎಲ್ ಐಸಿ (LIC) ಪಾಲಿಸಿ ನೋಂದಣಿ ಮಾಡಿಸೋದು ಅಗತ್ಯ. ಆ ಬಳಿಕ ನೀವು ನಿಮ್ಮ ವಾಟ್ಸ್ಆ್ಯಪ್ ನಿಂದ 8976862090 ಸಂಖ್ಯೆಗೆ "Hi" ಎಂದು ಮೆಸೇಜ್ ಕಳುಹಿಸಬೇಕು. ಆ ಬಳಿಕ ನಿಮಗೆ ಯಾವೆಲ್ಲ ಸೇವೆಗಳು (Services) ಲಭ್ಯವಿವೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿ ಆಯಾ ಸೇವೆಗೆ ಸಂಬಂಧಿಸಿದ ಸಂಖ್ಯೆ ಆಯ್ಕೆ ಮಾಡಿದರೆ ಅಗತ್ಯವಿರುವ ಮಾಹಿತಿ ಲಭಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.