ದೇಶಿಯ ವಿಮಾನಗಳಲ್ಲಿ ಹೊಸ ಸೇವೆ ಪರಿಚಯಿಸಿ ದಾಖಲೆ ಮಾಡಿದ ಏರ್‌ ಇಂಡಿಯಾ, ಇದು ಉಚಿತ!

By Santosh Naik  |  First Published Jan 1, 2025, 3:04 PM IST

ಏರ್‌ಇಂಡಿಯಾ ತನ್ನ ದೇಶೀಯ ವಿಮಾನಗಳಲ್ಲಿ ಇನ್‌ಫ್ಲೈಟ್‌ ವೈಫೈ ಸೇವೆಯನ್ನು ಪರಿಚಯಿಸಿದೆ. ಈ ಸೇವೆಯನ್ನು ಪರಿಚಯಿಸಿದ ಭಾರತದ ಮೊದಲ ಏರ್‌ಲೈನ್‌ ಎಂಬ ಹೆಗ್ಗಳಿಕೆಗೆ ಏರ್‌ಇಂಡಿಯಾ ಪಾತ್ರವಾಗಿದೆ.


ಬೆಂಗಳೂರು (ಜ.1): ಟಾಟಾ ಗ್ರೂಪ್‌ ತೆಕ್ಕೆಗೆ ಏರ್‌ಇಂಡಿಯಾ ಬಂದ ಬಳಿಕ ದೇಶದ ಅತಿದೊಡ್ಡ ವಿಮಾನಯಾನ ಕಂಪನಿಯಲ್ಲಿ ಭಾರೀ ಪ್ರಮಾಣದಲ್ಲಿ ಬದಲಾವಣೆಗಳು ಆಗುತ್ತಿವೆ. ಈ ನಡುವೆ ಏರ್‌ ಇಂಡಿಯಾ ಹೊಸ ಸೇವೆಯನ್ನು ಪರಿಚಯ ಮಾಡುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಏರ್‌ಲೈನ್‌ ಕಂಪನಿ ಎನಿಸಿಕೊಂಡಿದೆ. ಹೌದು, ಇನ್ನು ಮುಂದೆ ಏರ್‌ಇಂಡಿಯಾದ ದೇಶೀಯ ಮಾರ್ಗಗಳ ವಿಮಾನದಲ್ಲೂ ವಿಮಾನದೊಳಗೆ ಇಂಟರ್ನೆಟ್‌ ಸೇವೆ ಸಿಗಲಿದೆ. ದೇಶೀಯ ಮಾರ್ಗಗಳ ವಿಮಾನದಲ್ಲಿ ಇನ್‌ಫ್ಲೈಟ್‌ ವೈಫೈ ಸೇವೆ ಆರಂಭಿಸಿದ ಭಾರತದ ಮೊಟ್ಟಮೊದಲ ಏರ್‌ಲೈನ್‌ ಎನ್ನುವ ಕೀರ್ತಿಗೆ ಏರ್‌ಇಂಡಿಯಾ ಪಾತ್ರವಾಗಿದೆ. ಪ್ರಯಾಣಿಕ ಅನುಭವ ಸುಧಾರಿಸುವುದೇ ನಮ್ಮ ಬದ್ಧತೆ ಎಂದು ಏರ್‌ಲೈನ್‌ ತಿಳಿಸಿದ್ದು, ಏವಿಯೇಷನ್‌ ಇಂಡಸ್ಟ್ರಿಯಲ್ಲಿ ಆಗುತ್ತಿರುವ ಡಿಜಿಟಲ್‌ ಟ್ರಾನ್ಸ್‌ಫಾರ್ಮೇಷನ್‌ ಜೊತೆಯಲ್ಲಿ ನಾವೂ ಸಾಗುತ್ತಿದ್ದೇವೆ ಎಂದಿದೆ.

ಜನವರಿ 1 ರಿಂದ ಏರ್‌ಇಂಡಿಯಾದ ಎಲ್ಲಾ ದೇಶೀಯ ರೂಟ್‌ಗಳ ವಿಮಾನದಲ್ಲಿ ಇನ್‌ ಫ್ಲೈಟ್‌ ವೈಫೈ ಸೇವೆ ಇರಲಿದೆ ಎಂದು ತಿಳಿಸಿದೆ. 2025ರ ಜನವರಿ 1 ರಿಂದ ಏರ್‌ಇಂಡಿಯಾದ ಏರ್‌ಬಸ್‌ ಎ350, ಬೋಯಿಂಗ್‌ 787-9 ಹಾಗೂ ಆಯ್ದ ಏರ್‌ಬಸ್‌ ಎ321ನಿಯೋ ವಿಮಾನಗಳಲ್ಲಿ ಇನ್‌ಫ್ಲೈಟ್‌ ವೈಫೈ ಸೇವೆ ಇರಲಿದೆ. ಇದು ಪ್ರಾರಂಭಿಕ ಅವಧಿಯಾಗಿರುವ ಕಾರಣ ಪ್ರಯಾಣಿಕರಿಗೆ ವೈಫೈ ಉಚಿತವಾಗಿರಲಿದೆ ಎಂದು ಹೇಳಿದೆ.

Tap to resize

Latest Videos

ಪ್ರಯಾಣದ ವೇಳೆ ಪ್ರಯಾಣಿಕರು ಮನರಂಜನೆಯೊಂದಿಗೆ ಕನೆಕ್ಟ್‌ ಆಗಿರಬೇಕು ಎನ್ನುವ ಉದ್ದೇಶದಲ್ಲಿ ಈ ಸೇವೆ ನೀಡಲಾಗಿದೆ. ಇದನ್ನು ವಿರಾಮಕ್ಕಾಗಿಯೂ ಬಳಸಿಕೊಳ್ಳಬಹುದು. ಅಥವಾ ವಾಣಿಜ್ಯ ಉದ್ದೇಶಕ್ಕೆ ಆದರೂ ಬಳಸಿಕೊಳ್ಳಬಹುದು. ಪ್ರಯಾಣಿಕರು, ಇಂಟರ್ನೆಂಟ್‌ ಬ್ರೌಸ್‌ ಮಾಡಬಹುದು, ಸೋಶಿಯಲ್‌ ಮೀಡಿಯಾ ಚೆಕ್‌ ಮಾಡಬಹುದು, ದೈನಂದಿನ ಕೆಲಸಗಳನ್ನು ಮಾಡಬಹುದು. ಅದರೊಂದಿಗೆ ಸ್ನೇಹಿತರು ಹಾಗೂ ಕುಟುಂಬಕ್ಕೆ ಮೆಸೇಜ್‌ ಕೂಡ ಕಳಿಸಬಹುದು. ಇವೆಲ್ಲವೂ ವಿಮಾನದಲ್ಲಿಯೇ ಸಿಗಲಿದೆ ಎಂದು ಏರ್‌ಇಂಡಿಯಾ ತಿಳಿಸಿದೆ.

ಆಧುನಿಕ ಪ್ರಯಾಣದಲ್ಲಿ ಕನೆಕ್ಟಿವಿಟಿ ಅನ್ನೋದು ಪ್ರಮುಖ ಅಂಶ. ಕೆಲವೊಂದು ಸಂಗತಿಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ರಿಯಲ್‌ಟೈಮ್‌ನಲ್ಲಿ ಶೇರ್‌ ಮಾಡಿಕೊಳ್ಳಲು ಇಚ್ಛೆ ಪಡುತ್ತಾರೆ. ಪ್ರಯಾಣದ ವೇಳೆ ವೈಫೈ ಬಳಸೋದನ್ನ ನಮ್ಮ ಗ್ರಾಹಕರು ಇಷ್ಟಪಡುತ್ತಾರೆ ಅನ್ನೋ ಭರವಸೆ ಇದೆ ಎಂದು ಏರ್‌ ಇಂಡಿಯಾದ ಕಸ್ಟಮರ್‌ ಎಕ್ಸ್‌ಪೀರಿಯನ್ಸ್‌ ಮುಖ್ಯಸ್ಥೆ ರಾಜೇಶ್‌ ಡೋಗ್ರಾ ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ಫೋನ್‌ಗಳಲ್ಲಿ ವೈಫೈ ಸೇವೆ ಬಳಸಬಹುದು. ಏರ್‌ಕ್ರಾಫ್ಟ್‌ 10 ಸಾವಿರ ಫೀಟ್‌ ಮೇಲೆ ಏರಿದ ಬಳಿ, ಪ್ರಯಾಣಿಕರು ಏಕಕಾಲದಲ್ಲಿ ತಮ್ಮ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಿಕೊಳ್ಳಬಹುದು ಎಂದಿ ತಿಳಿಸಿದ್ದಾರೆ. ಈಗಾಗಳೇ ವಿದೇಶ ಮಾರ್ಗದ ವಿಮಾನಳಲ್ಲಿ ಏರ್‌ ಇಂಡಿಯಾ ಈ ಸೇವೆ ನೀಡುತ್ತಿದೆ. ಪ್ರಾರಂಭಿಕ ಅವಧಿಯಲ್ಲಿ ಇದು ಉಚಿತವಾಗಿರಲಿದೆ ಎಂದು ತಿಳಿಸಿದೆ.

Bengaluru: ಏರ್‌ಪೋರ್ಟ್‌ ಸಿಟಿಯಲ್ಲಿ ವಿಮಾನ ನಿರ್ವಹಣೆ ತರಬೇತಿ ಸಂಸ್ಥೆ ಆರಂಭಿಸಲಿರುವ ಏರ್‌ಇಂಡಿಯಾ!

ವೈಫೈ ಬಳಸಲು ಏನು ಮಾಡಬೇಕು: ಏರ್‌ ಇಂಡಿಯಾ ವಿಮಾನದಲ್ಲಿ ವೈಫೈ ಅನ್ನು ಸಿಂಪಲ್‌ ವಿಧಾನದಲ್ಲಿ ಬಳಸಬಹುದುದಾಗಿದೆ. ವೈಫೈ ಅನ್ನು ಆನ್‌ ಮಾಡಿದ ಬಳಿಕ, ಏರ್‌ ಇಂಡಿಯಾ ವೈಫೈ (Air India Wi-Fi) ನೆಟ್‌ವರ್ಕ್‌ಅನ್ನು ಕ್ಲಿಕ್‌ ಮಾಡಬೇಕು. ಕ್ಲಿಕ್‌ ಮಾಡಿದ ಬಳಿಕ ಏರ್‌ನೈನ್‌ನ ಪೋರ್ಟಲ್‌ಗೆ ಇದು ಹೋಗುತ್ತದೆ. ಇಲ್ಲಿ ನಿಮ್ಮ ಪಿಎನ್‌ಆರ್‌ ನಂಬರ್‌ ಹಾಗೂ ಲಾಸ್ಟ್‌ ನೇಮ್‌ ಹಾಕುವ ಮೂಲಕ ಇಂಟರ್ನೆಟ್‌ಅನ್ನು ಬಳಸಬಹುದಾಗಿದೆ.

ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದ ಡಿಜಿಸಿಎ, 140 ಪ್ರಯಾಣಿಕರಿದ್ದ ವಿಮಾನ ಸೇಫ್‌ ಆಗಿ ಸಾಮಾನ್ಯ ಲ್ಯಾಂಡಿಂಗ್‌


 

click me!