ಶುಕ್ರವಾರ ಈ ಕಂಪನಿಯ ಷೇರುಗಳಲ್ಲಿ ಶೇ.14ರಷ್ಟು ಏರಿಕೆಯಾಗಿದೆ. ಇದೀಗ ಹೂಡಿಕೆದಾರು ಈ ಕಂಪನಿಯ ಷೇರುಗಳ ಖರೀದಿಗೆ ಮುಂದಾಗಿದ್ದಾರೆ. ಖ್ಯಾತ ನಟನ ಮಗಳ ಬಳಿ ಈ ಕಂಪನಿಯ 1,84,33,254 ಷೇರುಗಳಿವೆ.
ಮುಂಬೈ: ಏಕ್ತಾ ಕಪೂರ್ ಅವರ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿಫಿಲಂಸ್ ಷೇರುಗಳ ಮೌಲ್ಯ ಶುಕ್ರವಾರ ಶೇ.14ರಷ್ಟು ಏರಿಕೆಯಾಗಿತ್ತು. ಶುಕ್ರವಾರದ ಮಾರುಕಟ್ಟೆಯ ಅಂತ್ಯಕ್ಕೆ ಬಾಲಾಜಿ ಟೆಲಿಫಿಲಂಸ್ ಷೇರು ಮೌಲ್ಯ 72.45 ರೂಪಾಯಿಗೆ ಅಂತ್ಯವಾಗಿದೆ. ಈ ಷೇರು ಬೆಲೆ ಏರಿಕೆ ಹಿಂದೆ ವಿಶೇಷ ಕಾರಣವಿದೆ. ಬಾಲಾಜಿ ಟೆಲಿಫಿಲಂಸ್ ನಿರ್ಮಾಣದ 'ದಿ ಸಾಬರಮತಿ ರಿಪೋರ್ಟ್' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಹಲವು ರಾಜ್ಯಗಳಲ್ಲಿ ಟ್ಯಾಕ್ಸ್ ಪ್ರೀ ಸಹ ಘೋಷಣೆ ಮಾಡಲಾಗಿದೆ. ಸಿನಿಮಾ ಯಶಸ್ಸಿನ ಬಳಿಕ ಚಿತ್ರದ ನಿರ್ಮಾಣ ಸಂಸ್ಥೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಯಶಸ್ಸಿನ ಸಂಪೂರ್ಣ ಕ್ರೆಡಿಟ್‌ನ್ನು ಏಕ್ತಾ ಕಪೂರ್ ಮತ್ತು ಕಪೂರ್ ಫ್ಯಾಮಿಲಿಗೆ ನೀಡಲಾಗಿದೆ. ಹಾಗಾಗಿ ಷೇರುಗಳ ಬೆಲೆ ಹೆಚ್ಚಳವಾಗಿದೆ.
ಚಿತ್ರದ ಯಶಸ್ಸು ಕಪೂರ್ ಕುಟುಂಬಕ್ಕೆ ಸಿಗುತ್ತಿದ್ದಂತೆ ಬಾಲಾಜಿ ಟೆಲಿಫಿಲಂಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಏರಿಕೆ ಕಾಣಲಾರಂಭಿಸಿತು. ಏಕ್ತಾ ಕಪೂರ್ ಬಳಿ ಬಾಲಾಜಿ ಟೆಲಿಫಿಲಂಸ್ ಸಂಸ್ಥೆಯ 1,84,33,254 ಷೇರುಗಳಿವೆ. ಇದು ಶೇ.18.16ರಷ್ಟು ಸ್ಟಾಕ್‌ಗೆ ಸಮವಾಗಿದೆ. ಶೋಭಾ ಕಪೂರ್, ತುಷಾರ್ ಕಪೂರ್ ಮತ್ತು ಜಿತೇಂದ್ರ ಕುಮಾರ್ ಬಳಿಯಲ್ಲಿಯೂ ಬಾಲಾಜಿ ಟೆಲಿಫಿಲಂಸ್ ಸಂಸ್ಥೆಯ ಷೇರುಗಳಿವೆ.
ಕಂಪನಿ ಷೇರು ಮಾರುಕಟ್ಟೆಗೆ ಬರೆದ ಪತ್ರದಲ್ಲಿ ಏನಿದೆ?
ಬಾಲಿವುಡ್‌ನ ದೊಡ್ಡ ಪ್ರೊಡಕ್ಷನ್ ಹೌಸ್ ಮತ್ತು ಪ್ರಾದೇಶಿಕ ಸಿನಿಮಾಗಳ ತೀವ್ರ ಸ್ಪರ್ಧೆ ನಡುವೆಯೂ ದಿ ಸಾಬರಮತಿ ರಿಪೋರ್ಟ್ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ತನ್ನ ಉತ್ತಮ ಕಥೆ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿ ರಂಜಿಸುವಲ್ಲಿ ಸಕ್ಸಸ್ ಆಗಿದೆ. ಭಾರತದ ಐತಿಹಾಸಿಕ ಮಹತ್ವಪೂರ್ಣ ಮತ್ತು ಒಂದು ಸಂವೇದನಾಶೀಲ ಘಟನೆಯಾಧರಿತ ಸಿನಿಮಾ ಆಗಿದೆ. ವೀಕ್ಷಕರಿಂದ ಚಿತ್ರತಂಡಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಕಥೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾರಣದಿಂದ ದಿ ಸಾಬರಮತಿ ರಿಪೋರ್ಟ್ ಸಿನಿಮಾಗೆ ಮಧ್ಯಪ್ರದೇಶ, ಛತ್ತೀಸ್‌ಗಢ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಒಡಿಶಾ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನು ನೀಡಲಾಗಿದೆ. ಈ ಚಿತ್ರದ ಯಶಸ್ಸಿನ ಸೂತ್ರಧಾರರು ಏಕ್ತಾ ಕಪೂರ್ ಮತ್ತು ಬಾಲಾಜಿ ಟೆಲಿಫಿಲಂಸ್‌ಗೆ ತಂಡ. ಇವರೆಲ್ಲರ ಅಸಾಧಾರಣ ಪರಿಣಿತಿಯನ್ನು ಸ್ಕ್ರೀನ್ ಮೇಲೆ ಗಮನಿಸಬಹುದು.
ಇದನ್ನೂ ಓದಿ: 4 ದಿನದಲ್ಲಿ Rs 34984 ಕೋಟಿ ಕಳೆದುಕೊಂಡ ಭಾರತದ ಪ್ರಮುಖ ಸರ್ಕಾರಿ ಬ್ಯಾಂಕ್
ದಿ ಸಾಬರಮತಿ ರಿಪೋರ್ಟ್
ಬಾಲಾಜಿ ಟೆಲಿಫಿಲಂಸ್ ಲಿಮಿಟೆಡ್ ಮತ್ತು ವಿಕಿರ್ ಫಿಲಂಸ್ ಜೊತೆಯಾಗಿ 'ದಿ ಸಾಬರಮತಿ ರಿಪೋರ್ಟ್' ಸಿನಿಮಾವನ್ನು ನಿರ್ಮಾಣ ಮಾಡಿದೆ. ವಿಕ್ರಾಂತ್ ಮೆಸ್ಸಿ, ರಾಶಿ ಖನ್ನಾ, ರಿದ್ದಿ ಡೊಗ್ರಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದು, ನಿರ್ದೇಶಕ ಧೀರಜ್ ಸರ್ನಾ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಶೋಭಾ ಕಪೂರ್, ಏಕ್ತಾ ಕಪೂರ್, ಅಮೂಲ್ ವಿ. ಮೋಹನ್ ಮತ್ತು ಅಂಶುಲ್ ಮೋಹನ್ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.
ಇನ್ನು ಏಕ್ತಾ ಕಪೂರ್ ಅವರನ್ನು ಟೆಲಿವಿಷನ್ ಲೋಕದ ರಾಣಿ ಎಂದು ಕರೆಯಲಾಗುತ್ತದೆ. ಹಲವು ಸಿನಿಮಾ ಮತ್ತು ಧಾರಾವಾಹಿಗಳನ್ನು ಏಕ್ತಾ ಕಪೂರ್ ನಿರ್ಮಾಣ ಮಾಡಿದ್ದಾರೆ. ಏಕ್ತಾ ಕಪೂರ್ ಬಾಲಿವುಡ್‌ನ ಖ್ಯಾತ ನಟ ಜಿತೇಂದ್ರ ಕಪೂರ್ ಅವರ ಪುತ್ರಿಯಾಗಿದ್ದಾರೆ.
ಇದನ್ನೂ ಓದಿ: 1 ಷೇರು, 4 ವರ್ಷ; 5 ಲಕ್ಷಕ್ಕೆ ಸಿಕ್ಕಿದ್ದು 5 ಕೋಟಿ ರೂಪಾಯಿ, ಐಸ್‌ಕ್ರೀಂ ಮಾರಾಟಗಾರ ಇಂದು ಕೋಟ್ಯಧಿಪತಿ
Disclaimer: ಷೇರು/ಮ್ಯೂಚುವಲ್ ಫಂಡ್ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ, ದಯವಿಟ್ಟು ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಏಷ್ಯಾನೆಟ್ ಸುವರ್ಣನ್ಯೂಸ್ ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.