
ನವದೆಹಲಿ (ಏ.4): ಜೆಪಿ ಮಾರ್ಗನ್ ಕಂಪನಿಯ ಮಾಜಿ ಅನಾಲಿಸ್ಟ್‌ಗೆ ಬರೋಬ್ಬರಿ 35 ಮಿಲಿಯನ್ ಯುಎಸ್ ಡಾಲರ್ ಅಂದರೆ, 292 ಕೋಟಿ ರೂಪಾಯಿ ಪರಿಹಾರವನ್ನು ನೀಡಲಾಗಿದೆ. ನ್ಯೂಯಾರ್ಕ್ ಸಿಟಿಯಲ್ಲಿರುವ ಕಂಪನಿಯ ಬಿಲ್ಡಿಂಗ್‌ನ ದೊಡ್ಡ ಗಾಜಿನ ಡೋರ್ ಈಕೆಯ ಮೈಮೇಲೆ ಬಿದ್ದ ಕಾರಣದಿಂದಾಗಿ ಆದ ನಷ್ಟಕ್ಕೆ ಪರಿಹಾರ ಎನ್ನುವಂತೆ 292 ಕೋಟಿ ರೂಪಾಯಿ ಪರಿಹಾರ ನೀಡುವಂತೆ ತಿಳಿಸಲಾಗಿದೆ. 2015ರಲ್ಲಿ ನಡೆದ ಈ ಘಟನೆಯಲ್ಲಿ ಜೆಪಿ ಮಾರ್ಗನ್ ಕಂಪನಿಯ ಮಾಜಿ ಅನಾಲಿಸ್ಟ್ ಆಗಿದ್ದ ಮೇಘನ್ ಬ್ರೌನ್‌ಗೆ ಶಾಶ್ವತವಾಗಿ ಮೆದುಳಿನ ಡ್ಯಾಮೇಜ್ ಸಮಸ್ಯೆ ಉಂಟಾಗಿತ್ತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಇದರಲ್ಲಿ ಅಂದಾಜು7.5 ಫೀಟ್ ಎತ್ತರದ ಲಾಬಿ ಡೋರ್‌ಅನ್ನು ತೆರೆಯುವ ಹಂತದಲ್ಲಿ ಪುಡಿಪುಡಿಯಾಗಿ ಮೇಘನ್ ಬ್ರೌನ್ ಮೈಮೇಲೆ ಬಿದ್ದಿತ್ತು.
ಮ್ಯಾನಹಟನ್ ಸುಪ್ರೀಂ ಕೋರ್ಟ್‌ನ ವಿಚಾರಣೆಯ ವೇಳೆ ಮೇಘನ್ ಬ್ರೌನ್‌ಗೆ ಈ ಸಿಸಿಟಿವಿ ದೃಶ್ಯಾವಳಿಯನ್ನು ತೋರಿಸಲಾಯಿತು. 'ನಾನು ಗಾಜಿನ ಡೋರ್‌ಅನ್ನು ನೋಡಿದ್ದು ನೆನಪಿಸಿದೆ. ಲಾಬಿಯಲ್ಲಿ ನನ್ನ ಸನಿಹವೇ ಈ ಗಾಜಿನ ಡೋರ್ ಇತ್ತು' ಎಂದು ಹೇಳಿದ್ದಾರೆ. ಆದರೆ, ನನ್ನ ಮೇಲೆ ಗಾಜಿನ ಡೋರ್ ಬಿದ್ದ ಕ್ಷಣವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಒಳಗಿದ್ದೆ. ಫ್ಲೋರ್‌ನಲ್ಲಿದ್ದೆ. ಆ ಹಂತದಲ್ಲಿ ನನಗೆ ಸಹಾಯ ಮಾಡಲು ಹಲವು ಮಂದಿ ಬಂದಿದ್ದರು' ಎಂದು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ನನ್ನ ಮೆದುಳಿನ ಮೇಲೆ ಬಲವಾದ ಪ್ರಭಾವ ಬೀರಿತು. ಈ ಗಾಯದಿಂದಾಗಿ ಜೆಪಿ ಮೋರ್ಗಾನ್‌ನಲ್ಲಿ ಉನ್ನತ ಮಟ್ಟದ ಅನಾಲಿಸ್ಟ್ ಆಗಿದ್ದ ನನ್ನ ಕೆಲಸವನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ನನಗೆ ದೈನಂದಿನ ಕಾರ್ಯಗಳನ್ನು ಸಹ ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
"ನನ್ನ ಮೆದುಳಿನೊಂದಿಗೆ ನಾನು ಹೊಂದಿರುವ ದೊಡ್ಡ ಸಮಸ್ಯೆಯೆಂದರೆ ನಾನು ಅದನ್ನು ನಂಬಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು. ಮೇಘನ್ ಬ್ರೌನ್‌ಗೆ ಪಿಟಿಎಸ್‌ಡಿ ರೋಗನಿರ್ಣಯ ಮಾಡಲಾಗಿದೆ. ನನ್ನ ನೆನಪುಗಳು ನಿಧಾನವಾಗಿದೆ. ಏಕಾಗ್ರತೆಯೊಂದಿಗೆ ನನ್ನ ಮಾತಿನ ಶಬ್ದಕೋಶ ಕೂಡ ಬಹಳ ದುರ್ಬಲವಾಗಿದೆ ಎಂದು ವಿಚಾರಣೆಯ ವೇಳೆ ಅವರು ಹೇಳಿದ್ದಾರೆ. ಈ ಘಟನೆಯ ನಂತರ ನಾನಿ ಜೆಪಿ ಮೋರ್ಗನ್‌ಗೆ ವಾಪಾದ್ ಬಂದಿದ್ದೆ. ಆದರೆ, ನನ್ನ ಕೆಲಸದ ನಿರ್ವಹಣೆ ಮೊದಲಿನಂತೆ ಇದ್ದಿರಲಿಲ್ಲ. ಕೊನೆಗೆ 2021ರಲ್ಲಿ ನನಗೆ ಕಂಪನಿಯಿಂದ ಹೊರಕಳಿಸಲಾಯಿತು ಎಂದಿದ್ದಾರೆ.
ಧೋನಿ ಬೆರುಗುಗೊಳಿಸಿದ ಪತಿರಾನ ಕ್ಯಾಚ್, IPL 2024 ಅತ್ಯುತ್ತಮ ಕ್ಯಾಚ್ ಪಟ್ಟ!
ಅಂತಿಮವಾಗಿ ಈಕೆಯನ್ನು ಶಾಶ್ವತವಾಗಿ ಕೆಲಸದಿಂದ ಹೊರಹಾಕಲಾಯಿತು. ಆ ಬಳಿಕ ಈ ಇದೇ ರೀತಿಯ ಹೂಡಿಕೆ ಬ್ಯಾಂಕಿಂಗ್‌ನಲ್ಲಿ ಕೆಲಸ ಮಾಡಿಲ್ಲ. ಆದರೆ, ಆಕೆ ಮೊದಲಿನಂತೆ ಪ್ರಯತ್ನ ಮಾಡುತ್ತಲೇ ಇದ್ದರೂ, ಮೊದಲಿನ ರೀತಿ ನಿರ್ವಹಣೆ ಬರುತ್ತಿಲ್ಲ ಎಂದು ಮೇಘನ್ ಬ್ರೌನ್ ಪರ ವಕೀಲರು ತಿಳಿಸಿದ್ದಾರೆ.
ಈ ಫೋಟೋಗಳಲ್ಲಿ ಯಾವುದು ರಾಧಿಕಾ ಮರ್ಚೆಂಟ್, ಯಾವುದು ಅಲ್ಲ ಎಂದು ಕಂಡುಹಿಡಿಯಬಲ್ಲಿರಾ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.