
ನವದೆಹಲಿ: ಚಂಡೀಗಢ ಮೂಲದ ರತನ್ ಧಿಲ್ಲೋನ್ ಎಂಬವರಿಗೆ ಮನೆಯಲ್ಲಿ 30 ವರ್ಷದ ಹಿಂದೆ ಖರೀದಿಸಿದ್ದ ರಿಲಯನ್ಸ್ ಷೇರುಗಳ ದಾಖಲೆ ಸಿಕ್ಕಿತ್ತು. ಮನೆಯಲ್ಲಿ ಸಿಕ್ಕಿದ್ದ ಎರಡು ದಾಖಲೆಗಳ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ರತನ್ ಧಿಲ್ಲೋನ್, ನನಗೆ ಷೇರು ಮಾರುಕಟ್ಟೆಯ ಮಾಹಿತಿ ಇಲ್ಲ. ಷೇರು ಮಾರುಕಟ್ಟೆ ತಜ್ಞರು ನನಗೆ ಸಹಾಯ ಮಾಡುತ್ತೀರಾ ಎಂದು ಪೋಸ್ಟ್ ಮಾಡಿಕೊಂಡಿದ್ದರು. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ನೆಟ್ಟುಗರು, ಈ ದಾಖಲೆಗಳನ್ನು ಹೇಗೆ ಡಿಜಿಟಲೈಸ್ ಮಾಡಬೇಕು ಎಂಬುದನ್ನು ಹಂತ ಹಂತವಾಗಿ ವಿವರಿಸಿದ್ದರು. ಹಾಗೆ ರತನ್ ಧಿಲ್ಲೋನ್ ಓರ್ವ ಅದೃಷ್ಟವಂತ ಎಂದು ಹೊಗಳಿದ್ದರು. ಆದ್ರೆ ಇದೀಗ ಮನೆಯಲ್ಲಿ ಸಿಕ್ಕಿರುವ ಅಂದಾಜು 12 ಲಕ್ಷ ರೂ. ಮೌಲ್ಯದ ಷೇರುಗಳ ಹಣ ಪಡೆಯುವುದಿಲ್ಲ ಎಂದು ಬರೆದುಕೊಳ್ಳುವ ಅಚ್ಚರಿ ಮೂಡಿಸಿದ್ದಾರೆ.
ಹೌದು, ರತನ್ ಧಿಲ್ಲೋನ್ ಅಚ್ಚರಿಯ ಪೋಸ್ಟ್ ಕಂಡು ನೆಟ್ಟಿಗರು ಶಾಕ್ ಆಗಿದ್ದು, ಕೈಗೆ ಬಂದ ತುತ್ತು ಬಿಡೋದು ಅಂದ್ರೆ ಇದೇ ಇರಬೇಕು. ಮನೆಗೆ ಬಂದ ಲಕ್ಷ್ಮೀಯನ್ನು ಬರಮಾಡಿಕೊಳ್ಳುವ ಬದಲು, ಇದೆಂಥಾ ಹುಚ್ಚುತನ ಎಂದು ಕಮೆಂಟ್ ಮಾಡಿದ್ದಾರೆ. ಇಷ್ಟೊಂದು ಹಣ ಹಾಗೆ ಸುಮ್ಮನೇ ಬಂದು ಅಕೌಂಟ್‌ಗೆ ಬೀಳಲ್ಲ. ಅದಕ್ಕೆ ಸ್ವಲ್ಪ ಶ್ರಮಪಡಬೇಕಾಗುತ್ತದೆ ಎಂದು ನೆಟ್ಟಿಗರು ರತನ್ ಧಿಲ್ಲೋನ್ ಅವರಿಗೆ ಸಲಹೆ ನೀಡಿದ್ದಾರೆ.
ರತನ್ ಧಿಲ್ಲೋನ್ ಪೋಸ್ಟ್ ಏನು? ಯಾಕೆ ಈ ನಿರ್ಧಾರ?
ಧೀರೂಬಾಯಿ ಅಂಬಾನಿಯವರ ಸಹಿ ವ್ಯರ್ಥವಾದಂತೆ ತೋರುತ್ತಿದೆ. ಇದಕ್ಕೆ ಕಾರಣ ನಾನು ಈ ಷೇರುಗಳನ್ನು ಡಿಜಿಟಲೀಕರಣ ಮಾಡುತ್ತಿಲ್ಲ. ಈ ದಾಖಳೆಯಲ್ಲಿರುವ ಷೇರುಗಳನ್ನು ಡಿಜಿಟಲೀಕರಣ ಪ್ರಕ್ರಿಯೆ ತುಂಬಾ ದೀರ್ಘವಾಗಿದೆ. ಕಾನೂನು ಪ್ರಕಾರ ಉತ್ತರಾಧಿಕಾರಿ ಪ್ರಮಾಣ ಪಡೆಯಲು 6 ರಿಂದ 8 ತಿಂಗಳು ಬೇಕಾಗುತ್ತದೆ. ಹಾಗೆಯೇ IEPFA ಪ್ರಕ್ರಿಯೆಯು 2-3 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹಣ ಹೂಡಿಕೆ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಭಾರತ ನಿಜವಾಗಿಯೂ ತನ್ನ ದಾಖಲೆಗಳನ್ನು ಸರಳೀಕರಿಸುವ ಅಗತ್ಯವಿದೆ. ಸದ್ಯಕ್ಕೆ ಈ ಷೇರು ಪ್ರಮಾಣಪತ್ರಗಳನ್ನು ನನ್ನಲ್ಲಿಯೇ ಇರಿಸಿಕೊಳ್ಳುತ್ತೇನೆ ಎಂದು ರತನ್ ಧಿಲ್ಲೋನ್ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಎಷ್ಟೇ ಹುಡುಕಿದ್ರೂ ನೌಕರಿ ಸಿಗ್ತಿಲ್ಲವೇ? ಈ ಬ್ಯುಸಿನೆಸ್ ಮಾಡಿ ಪ್ರತಿದಿನ 2,000 ರೂ. ಗಳಿಸಿ
ಎಷ್ಟು ಷೇರುಗಳು?
1987 ಮತ್ತು 1992ರ ಅವಧಿ ನಡುವೆ ಧಿಲ್ಲೋನ್ ಕುಟುಂಬ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ 30 ಷೇರುಗಳನ್ನು ಎರಡು ಬಾರಿ ಖರೀದಿ ಮಾಡಿತ್ತು. 1987ರಲ್ಲಿ 20, 1992ರಲ್ಲಿ 10 ಷೇರುಗಳನ್ನು ಖರೀದಿಸಲಾಗಿತ್ತು,. ಈ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಒಂದು ಷೇರಿನ ಬೆಲೆ 10 ರೂಪಾಯಿ ಆಗಿತ್ತು. ಈ ಷೇರುಗಳು 30 ವರ್ಷಗಳ ಹಿಂದೆ ಖರೀದಿಸಲಾಗಿತ್ತು. ಅಂದು ಡಿಜಿಟಲ್ ಫಾರ್ಮೆಟ್ ಇಲ್ಲದ ಕಾರಣ ಷೇರು ಖರೀದಿದಾರಿಗೆ ಈ ರೀತಿಯ ದಾಖಲೆಗಳನ್ನು (ಬಾಂಡ್) ವಿತರಣೆ ಮಾಡಲಾಗುತ್ತಿತ್ತು. ಇಂದು ಈ ಷೇರುಗಳ ಮೌಲ್ಯ 11.88 ಲಕ್ಷ ರೂಪಾಯಿ ಏರಿಕೆಯಾಗಿತ್ತು. ಕಳೆದ ಮೂರು ದಶಕಗಳಲ್ಲಿ ಮೂರು ಬಾರಿ ರಿಲಯನ್ಸ್ ಷೇರುಗಳು ವಿಭಜನೆಗೊಂಡಿವೆ. ಹಾಗಾಗಿ ಷೇರುಗಳ ಸಂಖ್ಯೆ 10 ರಿಂದ 960 ಆಗಿದೆ.
ಇದನ್ನೂ ಓದಿ: ಸಿಂಪಲ್ ಬ್ಯುಸಿನೆಸ್, ಹೆಚ್ಚು ಹಣ: ದಿನಕ್ಕೆ 5 ರಿಂದ 6 ಗಂಟೆ ಕೆಲಸ; ಬರೋ ಲಾಭದಿಂದ ಮೂರೇ ವರ್ಷದಲ್ಲಿ ಮನೆ ಕಟ್ಕೊಬಹುದು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.