ಬ್ಯಾಂಕ್‌ ಆಫ್‌ ಮಹಾರಾಷ್ಟ್ರಕ್ಕೆ 840 ಕೋಟಿ ರು. ಲಾಭ

By Kannadaprabha News  |  First Published Apr 26, 2023, 1:49 PM IST

ವರ್ಷದ ಆಧಾರದಲ್ಲಿ ಗಮನಿಸಿದರೆ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ.125.96ರಷ್ಟು ಏರಿಕೆಯಾಗಿದೆ. 2022ರ ಮಾರ್ಚ್‌ಗೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ 1,152 ಕೋಟಿ ರು.ಗಳಿಸಿದ್ದರೆ, ಈ ವರ್ಷ 2,602 ಕೋಟಿ ರು. ಗಳಿಕೆ ಮಾಡಿದೆ. ಕೆಟ್ಟ ಸಾಲಗಳ ಪ್ರಮಾಣದಲ್ಲಿ ಇಳಿಕೆ ಮತ್ತು ಬಡ್ಡಿ ದರದಲ್ಲಿ ಹೆಚ್ಚಳವಾಗಿರುವುದು ಲಾಭಗಳಿಗೆ ಕಾರಣವಾಗಿದೆ.


ನವದೆಹಲಿ(ಏ.26): ಸರ್ಕಾರಿ ಸ್ವಾಮ್ಯದ ‘ಬ್ಯಾಂಕ್‌ ಆಫ್‌ ಮಹಾರಾಷ್ಟ್ರ’ ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ದುಪ್ಪಟ್ಟು ಲಾಭವನ್ನು ಗಳಿಸಿದ್ದು, ಒಟ್ಟು ಲಾಭ ಗಳಿಕೆ 840 ಕೋಟಿ ರು.ಗೆ ಏರಿಕೆಯಾಗಿದೆ. ಜೂನ್‌ ತ್ರೈಮಾಸಿಕದ ಅಂತ್ಯಕ್ಕೆ ಇದು 1 ಸಾವಿರ ಕೋಟಿ ರು.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸೋಮವಾರ ಬ್ಯಾಂಕ್‌ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ವರ್ಷದ ಆಧಾರದಲ್ಲಿ ಗಮನಿಸಿದರೆ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ.125.96ರಷ್ಟು ಏರಿಕೆಯಾಗಿದೆ. 2022ರ ಮಾರ್ಚ್‌ಗೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ 1,152 ಕೋಟಿ ರು.ಗಳಿಸಿದ್ದರೆ, ಈ ವರ್ಷ 2,602 ಕೋಟಿ ರು. ಗಳಿಕೆ ಮಾಡಿದೆ. ಕೆಟ್ಟಸಾಲಗಳ ಪ್ರಮಾಣದಲ್ಲಿ ಇಳಿಕೆ ಮತ್ತು ಬಡ್ಡಿ ದರದಲ್ಲಿ ಹೆಚ್ಚಳವಾಗಿರುವುದು ಲಾಭಗಳಿಗೆ ಕಾರಣವಾಗಿದೆ.

Tap to resize

Latest Videos

ತಾಮ್ರ ವ್ಯವಹಾರಕ್ಕೂ ಇಳಿದ ಅದಾನಿ, ಎಸ್‍ಬಿಐನಿಂದ 6071 ಕೋಟಿ ಸಾಲ!

ಅಲ್ಲದೇ ಒಟ್ಟು ಉದ್ಯಮ ಶೇ.21.23ರಷ್ಟು ಏರಿದ್ದು 4.09 ಲಕ್ಷ ಕೋಟಿ ರು.ಗೆ ತಲುಪಿದೆ. ಅದೇ ರೀತಿ ಒಟ್ಟು ಠೇವಣಿಯೂ ಶೇ.15.71ರಷ್ಟು ಏರಿದ್ದು, 2.34 ಲಕ್ಷ ಕೋಟಿ ರು.ಗೆ ಏರಿಕೆ ಕಂಡಿದೆ.

click me!