
ನವದೆಹಲಿ(ಆ.8): ಸ್ವಿಟ್ಜರ್ಲ್ಯಾಂಡ್ ಸರ್ಕಾರ 10 ದಿನಗಳಲ್ಲಿ ಹೆಚ್‌ಎಸ್‌ಬಿಸಿ ಖಾತೆಗಳ ವಿವರ ಹಂಚಿಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಸಿಟ್ಜರ್ಲ್ಯಾಂಡ್ ನ ಸುಪ್ರೀಂ ಕೋರ್ಟ್ ಈ ಕುರಿತು ಅಲ್ಲಿನ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಹೆಚ್‌ಎಸ್‌ಬಿಸಿ ಖಾತೆಗಳ ಮಾಹಿತಿ ಹಂಚಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸ್ವಿಟ್ಜರ್ಲ್ಯಾಂಡ್ ಸರ್ಕಾರ ಭಾರತದೊಂದಿಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಸಿದ್ಧವಿದೆ ಎಂದು ಪೀಯೂಷ್ ಗೋಯಲ್ ರಾಜ್ಯ ಸಭೆಗೆ ಮಾಹಿತಿ ನೀಡಿದರು. 2010-11 ಹಾಗೂ 2011-12 ರಿಂದ 2014 ರಲ್ಲಿ ಹೆಚ್‌ಎಸ್‌್ಬಿಸಿ ಪಟ್ಟಿ ಬಿಡುಗಡೆಯಾಗಿತ್ತು, ಭಾರತ ಸರ್ಕಾರ ಖಾತೆಗಳ ವಿವರಗಳನ್ನು ಪಡೆಯಲು ಯತ್ನಿಸಿತ್ತಾದರೂ, ಸ್ವಿಸ್ ಸರ್ಕಾರ ಅದಕ್ಕೆ ಅಡ್ಡಿ ಉಂಟು ಮಾಡಿತ್ತು.
ಆದರೆ ಈಗ ಸ್ವಿಸ್ ಸುಪ್ರೀಂ ಕೋರ್ಟ್ ಖಾತೆಗಳ ವಿವರ ಹಂಚಿಕೊಳ್ಳುವುದಕ್ಕೆ ಅನುಮತಿ ನೀಡಿದ್ದು, 10 ದಿನಗಳಲ್ಲಿ ಹೆಚ್‌ಎಸ್‌ಬಿಸಿ ಖಾತೆಯ ಗೌಪ್ಯ ವಿವರಗಳು ಭಾರತ ಸರ್ಕಾರದ ಕೈ ಸೇರಲಿವೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.