ಲಕ್ ಬದಲಿಸುತ್ತೆ ಚಿನ್ನದಷ್ಟೆ ಬೆಲೆ ಬಾಳುವ ಈ ಮರ, Business Idea ಇಲ್ಲಿದೆ!

By Suvarna News  |  First Published Aug 9, 2022, 5:25 PM IST

ಯಾವುದೇ ವ್ಯವಹಾರ ಶುರು ಮಾಡುವಾಗಲೂ ತಾಳ್ಮೆಯ ಅಗತ್ಯವಿದೆ. ಬೀಜ ಹಾಕಿದ ತಕ್ಷಣ ಚಿಗುರೊಡೆದು, ಹಣ್ಣು ಸಿಗಲು ಸಾಧ್ಯವಿಲ್ಲ. ಮರ ಬಲಿಷ್ಠವಾಗಿ ಬೆಳೆದ್ರೆ ಮಾತ್ರ ಜೇಬು ತುಂಬಲು ಸಾಧ್ಯ. ಹೆಚ್ಚು ಬೆಲೆ ಬಾಳುವ ಮರಗಳನ್ನು ನೀವೂ ಬೆಳೆಸಿ, ನೀವೂ ಕೋಟ್ಯಾಧಿಪತಿಯಾಗಿ.
 


ಫಲವತ್ತಾದ ಭೂಮಿಯಿಂದ ಉತ್ತಮ ಬೆಳೆ ತೆಗೆಯುವ ಜಾಣ್ಮೆ ಗೊತ್ತಿರಬೇಕು. ಭೂಮಿಯಲ್ಲಿ ಯಾವ ಬೆಳೆ ಬೆಳೆದ್ರೆ ಹೆಚ್ಚು ಲಾಭ ಪಡೆಯಬಹುದು ಎಂಬ ಸಂಗತಿ ರೈತನಿಗೆ ತಿಳಿದಿರಬೇಕು. ಕೆಲವೊಂದು ಬೆಳೆಗೆ ಹೆಚ್ಚಿನ ಆರೈಕೆ ಅಗತ್ಯವಿರುವುದಿಲ್ಲ. ಆದ್ರೆ ಹೆಚ್ಚಿನ  ತಾಳ್ಮೆಯ ಅಗತ್ಯವಿರುತ್ತದೆ. ಹಾಕಿದ ತಕ್ಷಣ ಬೆಳೆ ಬರಬೇಕೆಂದ್ರೆ ಸಾಧ್ಯವಿಲ್ಲ. ತಾಳಿದವನು ಬಾಲಿಯಾನು ಎಂಬ ಮಾತನ್ನು ನೀವು ಕೇಳಿರಬಹುದು. ಹಾಗೆಯೇ, ತಾಳ್ಮೆಯಿಂದ ಕಾದ್ರೆ ಮಾತ್ರ ಕೈತುಂಬ ಸಂಪಾದನೆ ಸಾಧ್ಯ.ಇಂದು ನಾವು ತಾಳ್ಮೆ ಇರುವವರಿಗೆ ಅನುಕೂಲಕರವಾದ ಹೂಡಿಕೆಗಳು ಸಾಕಷ್ಟಿದೆ. ಕೆಲವೊಂದು ಮರಗಳನ್ನು ಬೆಳೆಸುವ ಮೂಲಕ  ದೊಡ್ಡ ಮಟ್ಟದಲ್ಲಿ ಲಾಭ ಪಡೆಯಬಹುದು . ಒಂದು ಮರವು ಸಂಪೂರ್ಣವಾಗಿ ಬೆಳೆಯಲು ಕನಿಷ್ಠ 8-10 ವರ್ಷಗಳು ತೆಗೆದುಕೊಳ್ಳುತ್ತದೆ. ಒಮ್ಮೆ ಸಂಪೂರ್ಣವಾಗಿ ಬೆಳೆದರೆ ಇದರಿಂದ ಕೋಟಿಗಟ್ಟಲೆ ಆದಾಯ ಗಳಿಸಬಹುದು. ಇಂದು ನಾವು ಕಡಿಮೆ ವೆಚ್ಚದಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ನೀಡಬಲ್ಲ ಮರಗಳ ಬಗ್ಗೆ ವಿವರ ನೀಡ್ತೇವೆ.

ಕೈತುಂಬ ಆದಾಯ (Income) ನೀಡುತ್ತೆ ಈ ವೃಕ್ಷ (Tree) : 

Tap to resize

Latest Videos

ಶ್ರೀಗಂಧದ ಮರ (Sandalwood Tree):  ಕರ್ನಾಟಕ ಶ್ರೀಗಂಧದ ತವರು. ಶ್ರೀಗಂಧ ವಿಶ್ವದ ಅತ್ಯಂತ ದುಬಾರಿ ಮರಗಳಲ್ಲಿ ಒಂದು. ಒಂದು ಕೆಜಿ ಮರದ ಕೊರಡಿನ ಬೆಲೆ ಸುಮಾರು 27000 ರೂಪಾಯಿ. ಒಂದು ಶ್ರೀಗಂಧದ ಮರದಿಂದ 15-20 ಕೆಜಿ ಕೊರಡನ್ನು ತೆಗೆಯಲಾಗುತ್ತದೆ. ಮೊದಲೇ ಹೇಳಿದಂತೆ ನಿಮಗೆ ತಾಳ್ಮೆ ಇದ್ದರೆ, ಒಂದೇ ಒಂದು ಶ್ರೀಗಂಧದ ಮರ ಬೆಳೆಸಿಯೂ ನೀವು ಲಕ್ಷಾಧಿಪತಿಯಾಗಬಹುದು.

ತೇಗದ ಮರ : ಗಟ್ಟಿ ಮರಗಳ ಪಟ್ಟಿಯಲ್ಲಿ ತೇಗ ಮೊದಲ ಸ್ಥಾನದಲ್ಲಿದೆ. ಮನೆ ಸೇರಿದಂತೆ ಕಟ್ಟಡಗಳ ನಿರ್ಮಾಣದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.  ಆದ್ದರಿಂದ ಇದನ್ನು ಮರಗಳ ರಾಜ ಎಂದು ಕರೆಯಲಾಗುತ್ತದೆ.  12 ವರ್ಷದಲ್ಲಿ ಈ ಮರ 25-20 ಸಾವಿರ ರೂಪಾಯಿ ಬೆಲೆ ಬಾಳುತ್ತದೆ. 

ಬಿಳಿ ಮರ : ಈ ಮರವನ್ನು ನೆಡಲು ತಗಲುವ ವೆಚ್ಚ ತುಂಬಾ ಕಡಿಮೆ.  ಈ ಮರ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆಯೂ ಇರುವುದಿಲ್ಲ.   ಈ ಮರಕ್ಕೆ ಯಾವುದೇ ವಿಶೇಷ ಆರೈಕೆ ಮಾಡಬೇಕಾಗಿರುವುದಿಲ್ಲ.  ಈ ಮರವು ಕಟಾವಿಗೆ ಬರಲು 8-10 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರದಿಂದ  ಔಷಧೀಯ ತೈಲವನ್ನು ಹೊರತೆಗೆಯಲಾಗುತ್ತದೆ.

ಮಹೋಗಾನಿ : ಮಹೋಗಾನಿ ಮರವು ನೀರಿಗೆ ಬಿದ್ರೆ ಹಾಳಾಗುವುದಿಲ್ಲ.  ಈ ಗುಣಲಕ್ಷಣದಿಂದಾಗಿ ಮಾರುಕಟ್ಟೆಯಲ್ಲಿ ಇದ್ರ ಬೆಲೆ ತುಂಬಾ ದುಬಾರಿಯಾಗಿ.  ಇದರಿಂದ ತಯಾರಿಸಿದ ಪೀಠೋಪಕರಣಗಳ ಬೆಲೆಗಳು ತುಂಬಾ ಹೆಚ್ಚು. ಸದ್ಯ ಮಾರುಕಟ್ಟೆಯಲ್ಲಿ ಮಹೋಗಾನಿ ಮರದ ಬೆಲೆ ಕೆಜಿಗೆ 2000 ರಿಂದ 2500 ರೂಪಾಯಿ ಇದೆ.

ಗೃಹಸಾಲ ಪಡೆಯೋದು ಅಷ್ಟು ಸುಲಭನಾ? ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೀರಾ?

ದಾಳಿಂಬೆ ಮರ :  ಒಂದು ಎಕರೆ ಜಮೀನಿನಲ್ಲಿ ದಾಳಿಂಬೆ ಮರವನ್ನು ನೆಟ್ಟರೆ  ನೀವು ಸುಲಭವಾಗಿ 1 ಕೋಟಿ ರೂಪಾಯಿ ಸಂಪಾದನೆ ಮಾಡಬಹುದು. ಇದು ಔಷಧೀಯ ಮರವೂ ಹೌದು. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಈ ಮರಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮರಗಳು ತಮ್ಮ ಸುತ್ತಲಿನ ಭೂಮಿಯಲ್ಲಿ ಸಾರಜನಕ ಮತ್ತು ರಂಜಕದ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಬೆಳೆಗಳ ಇಳುವರಿ ಉತ್ತಮವಾಗಿರುತ್ತದೆ.

Earn Money: ದಿನದಲ್ಲಿ ಗಂಟೆ ಕೆಲಸ ಮಾಡಿ, ಹಣ ಗಳಿಸಿ

ಅಗರ್‌ವುಡ್ : ಅಗರ್ ವುಡ್ ಅನ್ನು ವುಡ್ ಆಫ್ ಗಾಡ್ ಎಂದು ಕರೆಯಲಾಗುತ್ತದೆ. ಅದರ ಮೋಡಿ ಮಾಡುವ ಸುಗಂಧ, ದೇವರನ್ನು ತನ್ನ ಕಡೆಗೆ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ಇದರ 1 ಕೆಜಿ ಎಣ್ಣೆ ಬೆಲೆ 36 ಲಕ್ಷಕ್ಕೂ ಹೆಚ್ಚು. ಇದರ ತೈಲವನ್ನು ಸಾಮಾನ್ಯ ಭಾಷೆಯಲ್ಲಿ ದ್ರವ ಚಿನ್ನ ಎಂದೂ ಕರೆಯುತ್ತಾರೆ. ಅಗರ್ವುಡ್ ಒಂದು ಪರಿಮಳಯುಕ್ತ ಮರವಾಗಿದ್ದು, ಇದನ್ನು ಧೂಪದ್ರವ್ಯದ ತುಂಡುಗಳು, ಸುಗಂಧ ದ್ರವ್ಯಗಳು ಮುಂತಾದ ಸುಗಂಧ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ.  ವಿದೇಶದಲ್ಲಿ ಹೆಚ್ಚು ಬೆಳೆಯುವ ಈ ಮರವನ್ನು ಭಾರತದ ಅಸ್ಸಾಂನಲ್ಲಿ ನೋಡಬಹುದು.  ಅಸ್ಸಾಂ ಅನ್ನು ಭಾರತದ ಅಗರ್‌ವುಡ್ ರಾಜಧಾನಿ ಎಂದು ಕರೆಯಲಾಗುತ್ತದೆ.
 

click me!