ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ಲಭ್ಯವಿದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ರೆ ಕೈ ತುಂಬ ಹಣ ಗಳಿಸುವ ಅವಕಾಶವಿದೆ. ದಿನಕ್ಕೆ ಕೆಲವು ಗಂಟೆ ಮಾತ್ರ ಕೆಲಸ ಮಾಡಿ, ಸಾಕಷ್ಟು ಆದಾಯ ಗಳಿಸುವ ಜನರಿದ್ದಾರೆ.
ದುಬಾರಿ ದುನಿಯಾದಲ್ಲಿ ಎಷ್ಟು ದುಡಿದ್ರೂ ಕಡಿಮೆ. ತಿಂಗಳ ಮೊದಲ ದಿನ ಬರುವ ಸಂಬಳ ತಿಂಗಳ ಮಧ್ಯದಲ್ಲಿಯೇ ಖಾಲಿಯಾಗಿರುತ್ತದೆ. ಮತ್ತೆ ಸಾಲಕ್ಕೆ ಕೈ ಒಡ್ಡೋದು ಅನಿವಾರ್ಯವಾಗುತ್ತದೆ. ಈ ಕಷ್ಟದಿಂದ ಹೊರ ಬರಲು ಅನೇಕರು ಪಾರ್ಟ್ ಟೈಂ ಕೆಲಸಕ್ಕೆ ಮುಂದಾಗ್ತಾರೆ. ಸಂಬಳದ ಜೊತೆ ಪಾರ್ಟ್ ಟೈಂ ಕೆಲಸದಲ್ಲಿ ಸ್ವಲ್ಪ ಸಂಪಾದನೆ ಮಾಡಿದ್ರೆ ಸಮಸ್ಯೆ ಕಡಿಮೆಯಾಗುತ್ತೆ ಎಂಬುದು ಅನೇಕರ ಅಭಿಪ್ರಾಯ. ಇದೇ ಕಾರಣಕ್ಕೆ ಅನೇಕರು ಪಾರ್ಟ್ ಟೈಂ ಕೆಲಸ ಹುಡುಕ್ತಾರೆ. ಆದ್ರೆ ಪಾರ್ಟ್ ಟೈಂ ಕೆಲಸ ಮಾಡೋದು ಸುಲಭವಲ್ಲ. ಕಚೇರಿ ಕೆಲಸ ಮುಗಿಸಿ ಮನೆಗೆ ಬಂದಾಗ ದಣಿಯುವ ಜನರು ಮತ್ತೆ ಕಚೇರಿಗೆ ಹೋಗಿ ಪಾರ್ಟ್ ಟೈಂ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದ್ರೆ ಈಗ ಕೆಲಸ ಮಾಡುವ ವಿಧಾನ ಸುಲಭವಾಗಿದೆ. ನೀವು ಪ್ರತಿ ದಿನ ಕಚೇರಿಗೆ ಹೋಗ್ಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಬೇರೆ ದೇಶದ ಕೆಲಸವನ್ನು ನೀವು ಆರಾಮವಾಗಿ ಮಾಡಬಹುದು. ನಾವಿಂದು ಮನೆಯಲ್ಲಿಯೇ ಮಾಡಬಹುದಾದ ಕೆಲ ಪಾರ್ಟ್ ಟೈಂ ಕೆಲಸಗಳ ಬಗ್ಗೆ ಹೇಳ್ತೇವೆ.
ಇ – ಮೇಲ್ (E-mail), ಎಸ್ ಎಂಎಸ್ (SMS) : ಇ-ಮೇಲ್ ಮತ್ತು ಎಸ್‌ಎಂಎಸ್ ಓದುವ ಮೂಲಕವೂ ನೀವು ಉತ್ತಮ ಹಣವನ್ನು ಗಳಿಸಬಹುದು. ಯಸ್, ಅಚ್ಚರಿಯಾದ್ರೂ ಇದು ಸತ್ಯ. ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಈ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳುತ್ತಿವೆ. ಈ ಕೆಲಸದ ವಿಶೇಷವೆಂದರೆ ಇದು ಅರೆಕಾಲಿಕ ಕೆಲಸ ಮತ್ತು ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಬಹುದು. ಅನೇಕ ವೆಬ್‌ಸೈಟ್ (Website) ಗಳು ಇ-ಮೇಲ್‌ಗಳು ಮತ್ತು ಎಸ್‌ಎಂಎಸ್ ಕಳುಹಿಸುತ್ತವೆ. ಅದನ್ನು ಓದಬೇಕು. ಮೇಲ್ ಅಥವಾ ಎಸ್ ಎಂಎಸ್ ಆಧಾರದ ಮೇಲೆ ಹಣ (Money) ವನ್ನು ಕಂಪನಿಗಳು ಪಾವತಿಸುತ್ತವೆ.
ಪ್ಯಾನ್ ಕಾರ್ಡ್ 10 ಡಿಜಿಟ್ಸ್ ನಲ್ಲಿ ಅಡಗಿದೆ ನಿಮ್ಮ ಗುಟ್ಟು,ಅದೇನದು? ಇಲ್ಲಿದೆ ಮಾಹಿತಿ
undefined
ಪೈಸಾ ಲೈವ್ ಡಾಟ್ ಕಾಮ್ (Paisalive.com) : ಈ ವೆಬ್‌ಸೈಟ್‌ನಲ್ಲಿ ನೀವು ಖಾತೆ ರಚಿಸಿದ ತಕ್ಷಣ 99 ರೂಪಾಯಿ ನಿಮ್ಮ ಖಾತೆ ಸೇರುತ್ತದೆ. ನಿಮ್ಮ 20 ಸ್ನೇಹಿತರ ಖಾತೆಯನ್ನು ನೀವು ರಚಿಸಿದರೆ ನಂತರ ನೀವು ಪ್ರತಿ ಖಾತೆಗೆ 20 ರೂಪಾಯಿಯಂತೆ ಗಳಿಸ್ತೀರಿ. ಈ ವೆಬ್‌ಸೈಟ್ ಇ-ಮೇಲ್ ಓದಲು 25 ಪೈಸೆಯಿಂದ 5 ರೂಪಾಯಿವರೆಗೆ ನೀಡುತ್ತದೆ. ವೆಬ್‌ಸೈಟ್ 15 ದಿನಗಳಲ್ಲಿ ಒಮ್ಮೆ ಚೆಕ್ ಮೂಲಕ ಹಣ ಪಾವತಿಸುತ್ತದೆ.
ಸೆಂಡರ್ ಅರ್ನಿಂಗ್ ಡಾಟ್ ಕಾಂ (Senderearning.com) : ಈ ವೆಬ್‌ಸೈಟ್‌ನಲ್ಲಿ ಖಾತೆಯನ್ನು ತೆರೆಯುವುದು ಕಡ್ಡಾಯವಾಗಿದೆ. ಇಲ್ಲಿ ನೀವು ಇಮೇಲ್ ಓದಲು ಒಂದು ಡಾಲರ್ ಪಡೆಯುತ್ತೀರಿ. ಆದರೆ ಈ ವೆಬ್‌ಸೈಟ್‌ಗೆ ನೀವು ನಿರಂತರ ಭೇಟಿ ನೀಡಬೇಕು. ಹಾಗೆ ಇ-ಮೇಲ್ ಅನ್ನು ಓದಬೇಕು. ಒಂದ್ವೆಳೆ ನೀವು 6 ತಿಂಗಳವರೆಗೆ ಈ ವೆಬ್ಸೈಟ್ ಗೆ ಭೇಟಿ ನೀಡಿಲ್ಲವೆಂದ್ರೆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಮ್ಯಾಟ್ರಿಕ್ಸ್ ಮೇಲ್ ಡಾಟ್ ಕಾಮ್ (Matrixmail.com) : ಮಾಧ್ಯಮ ವರದಿಗಳ ಪ್ರಕಾರ, ಈ ವೆಬ್‌ಸೈಟ್ 2002 ರಿಂದ ಕಾರ್ಯನಿರ್ವಹಿಸುತ್ತಿದೆ. ಈ ವೆಬ್‌ಸೈಟ್ ಮೂಲಕ ನೀವು ಸುಲಭವಾಗಿ 25 ಡಾಲರ್ (dollar) ನಿಂದ 50 ಡಾಲರ್ವರೆಗೆ ಗಳಿಸಬಹುದು. ಈ ವೆಬ್‌ಸೈಟ್ ಮೂಲಕ ಒಂದು ಗಂಟೆಯಲ್ಲಿ ಸುಮಾರು 3,000 ರೂಪಾಯಿಗಳನ್ನು ನೀವು ಗಳಿಸಬಹುದಾಗಿದೆ.
ಗೃಹಸಾಲ ಪಡೆಯೋದು ಅಷ್ಟು ಸುಲಭನಾ? ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೀರಾ?
ಆನ್ಲೈನ್ (Online) ಮೂಲಕ ಈಗ ಗಳಿಕೆ ಸುಲಭವಾಗಿದೆ. ಆದ್ರೆ ಅನೇಕ ಕಂಪನಿಗಳು ಎಸ್ ಎಂಎಸ್ ಹೆಸರಿನಲ್ಲಿ ಜನರಿಗೆ ಮೋಸ ಮಾಡ್ತಿವೆ. ಹಾಗಾಗಿ ಯಾವುದೇ ಜಾಬ್ (Job) ಆಯ್ಕೆ ಮಾಡಿಕೊಳ್ಳುವಾಗ್ಲೂ ಅದ್ರ ಪೂರ್ವಾಪರ ತಿಳಿದುಕೊಂಡು ಕೆಲಸಕ್ಕೆ ಒಪ್ಪಿಕೊಂಡ್ರೆ ಒಳ್ಳೆಯದು.