GST On Food Items:ಮೊಸರು, ಮೀನು, ಮಾಂಸ, ಪನ್ನೀರು ಇನ್ಮುಂದೆ ದುಬಾರಿ; ಪ್ರೀಪ್ಯಾಕ್ ಆಹಾರ ಪದಾರ್ಥಗಳಿಗೂ ಶೇ.5ರಷ್ಟು ಜಿಎಸ್ ಟಿ

By Suvarna News  |  First Published Jun 29, 2022, 3:35 PM IST

*ಇಷ್ಟು ದಿನ ಜಿಎಸ್ ಟಿ ವ್ಯಾಪ್ತಿಯಿಂದ ಹೊರಗಿದ್ದ ಪ್ಯಾಕ್ ಆಗಿರುವ  ಆಹಾರ ಪದಾರ್ಥಗಳು 
*ಚೆಕ್ ವಿತರಣೆ ಶುಲ್ಕದ ಮೇಲೂ ಜಿಎಸ್ ಟಿ
*ದಿನಕ್ಕೆ 1,000ರೂ.ಗಿಂತ ಕಡಿಮೆ ಬಾಡಿಗೆ ಹೊಂದಿರುವ ಹೋಟೆಲ್ ರೂಮ್ ಗಳಿಗೂ ಶೇ.12 ಜಿಎಸ್ ಟಿ
 


ನವದೆಹಲಿ (ಜೂ.29): ಪ್ಯಾಕ್ ಆಗಿರುವ (Pre-packed) ಹಾಗೂ ಲೇಬಲ್ ಹೊಂದಿರುವ (labelled) ಆಹಾರ ಪದಾರ್ಥಗಳಾದ ಮಾಂಸ (meat), ಮೀನು (fish), ಮೊಸರು (curd), ಪನ್ನೀರ್ (paneer) ಹಾಗೂ ಜೇನುತುಪ್ಪಕ್ಕೆ (honey) ಕೂಡ ಇನ್ಮುಂದೆ ಸರಕು ಮತ್ತು ಸೇವಾ ತೆರಿಗೆ (GST) ಅನ್ವಯವಾಗಲಿದೆ. ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ನೇತೃತ್ವದಲ್ಲಿ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ (GST Council meeting) ಇಂಥ ಆಹಾರ ಉತ್ಪನ್ನಗಳಿಗೆ ಶೇ.5ರಷ್ಟು ತೆರಿಗೆ (Tax) ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಮಂಗಳವಾರ ನಡೆದ ಜಿಎಸ್ ಟಿ ಮಂಡಳಿಯ  47ನೇ ಸಭೆಯಲ್ಲಿ ರಾಜ್ಯಗಳ ಸಚಿವರುಗಳ ಗುಂಪು ಈ ಶಿಫಾರಸ್ಸು ಮಂಡಿಸಿತ್ತು. ತೆರಿಗೆಯನ್ನು ಇನ್ನಷ್ಟು ತರ್ಕಬದ್ಧಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.

Tap to resize

Latest Videos

5 ವರ್ಷ ನಷ್ಟಭರಿಸಿ ಇಲ್ಲವೇ ಹಂಚಿಕೆ ನೀತಿ ಬದಲಾಯಿಸಿ!

ಜಿಎಸ್ ಟಿ ವ್ಯಾಪ್ತಿಗೊಳಪಡುವ ವಸ್ತುಗಳು 
1.ಮೊದಲೇ ಪ್ಯಾಕ್ ಮಾಡಲಾಗಿರುವ ಹಾಗೂ ಲೇಬಲ್ ಹೊಂದಿರುವ ಮಾಂಸ (ಶೀತಲೀಕರಿಸಿರೋದನ್ನು ಹೊರತುಪಡಿಸಿ)
2.ಮೀನು
3.ಮೊಸರು
4.ಜೇನುತುಪ್ಪ
5.ಒಣ ದ್ವಿದಳ ಧಾನ್ಯ
6.ಒಣ ಫಾಕ್ಸ್ ಸೀಡ್ ಅಥವಾ ಮಖಾನ (ತಾವರೆ ಬೀಜ)
7.ಗೋಧಿ ಹಾಗೂ ಇತರ ಧಾನ್ಯಗಳು 
8.ಗೋಧಿ ಹಿಟ್ಟು
9.ಬೆಲ್ಲ (Jaggery)
10.ಮಂಡಕ್ಕಿ (Puffed rice)

ಚೆಕ್ ವಿತರಣೆ ಶುಲ್ಕದ ಮೇಲೂ ಜಿಎಸ್ ಟಿ
ಚೆಕ್ ವಿತರಣೆಗೆ (ಬಿಡಿ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕುಗಳು ವಿಧಿಸುವ ಶುಲ್ಕದ ಮೇಲೆ ಕೂಡ ಇನ್ನು ಮುಂದೆ ಶೇ.18 ಜಿಎಸ್ ಟಿ (GST) ವಿಧಿಸಲಾಗುತ್ತದೆ. ಇನ್ನು ಅಟ್ಲಾಸ್ ಒಳಗೊಂಡಂತೆ ಮ್ಯಾಪ್ ಗಳು ಹಾಗೂ ಚಾರ್ಟ್ ಗಳ ಮೇಲೆ ಕೂಡ ಶೇ.12 ಜಿಎಸ್ ಟಿ ವಿಧಿಸಲಾಗುತ್ತದೆ.

ಹೋಟೆಲ್ ರೂಮ್ ಬಾಡಿಗೆ ಜಿಎಸ್ ಟಿ
ಪ್ಯಾಕ್ ಮಾಡಲಾಗದ, ಲೇಬಲ್ ಹಾಕಲಾಗದ ಹಾಗೂ ಬ್ರ್ಯಾಂಡೆಡ್ ಅಲ್ಲದ ಸರಕುಗಳು ಈ ಹಿಂದಿನಂತೆ ಜಿಎಸ್ ಟಿ ವ್ಯಾಪ್ತಿಯಿಂದ ಹೊರಗುಳಿಯಲಿವೆ. ಇನ್ನು ದಿನಕ್ಕೆ 1,000ರೂ.ಗಿಂತ ಕಡಿಮೆ ಬಾಡಿಗೆ ಹೊಂದಿರುವ ಹೋಟೆಲ್ ರೂಮ್ ಗಳಿಗೂ ಶೇ.12 ಜಿಎಸ್ ಟಿ ( GST) ವಿಧಿಸಲಾಗೋದು.

ಜಿಎಸ್ ಟಿಯಲ್ಲಿ ಬದಲಾವಣೆ
ಅಡುಗೆ ಎಣ್ಣೆ, ಕಲ್ಲಿದ್ದಲು, ಎಲ್ ಇಡಿ ಲ್ಯಾಂಪ್ಸ್, ಪ್ರಿಂಟಿಂಗ್ ಇಂಕ್, ಚಾಕುಗಳು ಹಾಗೂ ಸೋಲಾರ ವಾಟರ್ ಹೀಟರ್ ಗಳ ಮೇಲಿನ ಜಿಎಸ್ ಟಿ ಸ್ವರೂಪದಲ್ಲಿ ಬದಲಾವಣೆ ಮಾಡಲು ಜಿಎಸ್ ಟಿ ಮಂಡಳಿ ಒಪ್ಪಿಗೆ ನೀಡಿದೆ.ಇನ್ನು ಜಿಎಸ್ ಟಿ ಸರಾಸರಿ ದರವನ್ನು ಉತ್ತೇಜಿಸಲು ಜಿಎಸ್ ಟಿ ದರವನ್ನು ತರ್ಕಬದ್ಧಗೊಳಿಸೋದು ಅತ್ಯಂತ ಮುಖ್ಯವಾಗಿದೆ. ಜಿಎಸ್ ಟಿ ಸರಾಸರಿ ದರ ಬಿಡುಗಡೆ ಸಮಯದಲ್ಲಿ ಶೇ.14.4ರಷ್ಟಿದ್ದು, ಆ ಬಳಿಕ ಶೇ.11.6ಕ್ಕೆ ಇಳಿಕೆಯಾಗಿದೆ. 

ಕ್ರಿಪ್ಟೋಕರೆನ್ಸಿ ವಹಿವಾಟಿಗೆ ತೆರಿಗೆ; ವೈದ್ಯರಿಗೆ ಹೊಸ ಟಿಡಿಎಸ್ ನಿಯಮ; ಜುಲೈಯಲ್ಲಿ ಈ 8 ನಿಯಮಗಳಲ್ಲಿ ಬದಲಾವಣೆ

ರಾಜ್ಯಗಳಿಗೆ ಜಿಎಸ್ ಟಿ ಪರಿಹಾರದ ವಿಸ್ತರಣೆ, ಆನ್ ಲೈನ್ ಗೇಮ್ಸ್, ಕುದುರೆ ರೇಸ್, ಕ್ಯಾಸಿನೋಗೆ  ಶೇ. 28ರಷ್ಟು ತೆರಿಗೆ ವಿಧಿಸುವ ಕುರಿತು ಇಂದು (ಬುಧವಾರ)  ಜಿಎಸ್ ಟಿ ಮಂಡಳಿ ಸಭೆಯಲ್ಲಿ ಚರ್ಚೆಯಾಗಲಿದೆ.ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಸಚಿವರ ಸಮಿತಿಯು  ಮಂಗಳವಾರ ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ  ಕೆಳಮುಖ ತೆರಿಗೆ ರಚನೆಯಲ್ಲಿ ತಿದ್ದುಪಡಿ ಮತ್ತು ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವ ಶಿಫಾರಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಮಂಡಿಸಿದೆ.  ಈ ವರದಿಯನ್ನು ಸರ್ವಾನುಮತದಿಂದ ಸಭೆ ಅಂಗೀಕರಿಸಿದೆ. ಈ ಸಚಿವರ ಸಮಿತಿಗೆ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾಗಿದ್ದು, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ರಾಜಸ್ತಾನ, ಉತ್ತರಪ್ರದೇಶ ಮತ್ತು ಗೋವಾ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿದ್ದಾರೆ.

click me!