ಬೆಂಗಳೂರಿನ ಈ ಮನೆಗಳೂ ಸೇರಿ ₹4754 ಕೋಟಿಗೆ ಮಾರಾಟವಾದ 59 ಅಲ್ಟ್ರಾ ಐಷಾರಾಮಿ ಮನೆಗಳು!

By Sathish Kumar KH  |  First Published Jan 9, 2025, 7:29 PM IST

ಭಾರತದಲ್ಲಿ 2024ರಲ್ಲಿ 59 ಅಲ್ಟ್ರಾ ಐಷಾರಾಮಿ ಮನೆಗಳು ₹4754 ಕೋಟಿಗೆ ಮಾರಾಟವಾಗಿವೆ. ಈ ಪೈಕಿ 17 ಮನೆಗಳು ₹100 ಕೋಟಿಗೂ ಹೆಚ್ಚು ಮೌಲ್ಯದ್ದಾಗಿವೆ. ಇದರಲ್ಲಿ ಬೆಂಗಳೂರಿನ ಮನೆಗಳೂ ಸೇರಿವೆ.


ಭಾರತದಲ್ಲಿ ಕಳೆದ 2024ನೇ ವರ್ಷದಲ್ಲಿ 59 ಅಲ್ಟ್ರಾ ಐಷಾರಾಮಿ ಮನೆಗಳು ಮಾರಾಟವಾಗಿದ್ದು, ಇವುಗಳ ಪೈಕಿ ಬರೋಬ್ಬರಿ 17 ಮನೆಗಳು ಕನಿಷ್ಠ 100 ಕೋಟಿ ರೂ.ಗಿಂತ ಅಧಿಕ ಮೌಲ್ಯವನ್ನು ಹೊಂದಿದ ಮನೆಗಳಾಗುವೆ ಎಂಬುದು ತಿಳಿಬಂದಿದೆ. 

59 ಮನೆಗಳು.. ಈ ಮನೆಗಳಿಗೆ ಗರಿಷ್ಠ ಎಷ್ಟು ಬೆಲೆ ಇರಬಹುದು.. ಆದರೆ ಈ 59 ಮನೆಗಳು ₹4754 ಕೋಟಿಗೆ ಮಾರಾಟವಾಗಿವೆ. ದೇಶದಲ್ಲಿ ಕಳೆದ ವರ್ಷದ ಅತಿದೊಡ್ಡ ವಹಿವಾಟು ಎಂದು ಇದನ್ನು ಪರಿಗಣಿಸಲಾಗಿದೆ. ಕನಿಷ್ಠ ₹40 ಕೋಟಿ ಮೌಲ್ಯದ ಮನೆಗಳನ್ನು ಮಾತ್ರ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. 2023 ಕ್ಕಿಂತ ಇದು 17% ಹೆಚ್ಚಳವಾಗಿದೆ. 2024 ರಲ್ಲಿ ಮಾರಾಟವಾದ 59 ಅಲ್ಟ್ರಾ ಐಷಾರಾಮಿ ಮನೆಗಳಲ್ಲಿ 53 ಅಪಾರ್ಟ್‌ಮೆಂಟ್‌ಗಳಾಗಿದ್ದರೆ, 6 ಮಾತ್ರ ಬಂಗ್ಲಾಗಳಾಗಿವೆ. ಐಷಾರಾಮಿ ಮನೆಗಳ ಪಟ್ಟಿಯಲ್ಲಿ 52 ಮನೆಗಳು ಮುಂಬೈನಲ್ಲಿದ್ದವು. ಅಂದರೆ ಒಟ್ಟು ವಹಿವಾಟಿನ 88% ಮುಂಬೈನಲ್ಲಿ ನಡೆದಿದೆ.

Tap to resize

Latest Videos

2024 ರಲ್ಲಿ ಮಾರಾಟವಾದ 59 ಅಲ್ಟ್ರಾ ಐಷಾರಾಮಿ ಮನೆಗಳಲ್ಲಿ ಕನಿಷ್ಠ 17 ಮನೆಗಳು ತಲಾ ₹100 ಕೋಟಿಗೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಈ 17 ಮನೆಗಳ ಒಟ್ಟು ಮೌಲ್ಯ ₹2,344 ಕೋಟಿ. ಮುಂಬೈನ ಕಫ್ ಪರೇಡ್‌ನಲ್ಲಿರುವ ಒಂದು ಬಂಗ್ಲಾ ₹500 ಕೋಟಿಗೆ ಮಾರಾಟವಾಗಿದೆ. ಮಲಬಾರ್ ಹಿಲ್‌ನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳು ₹270 ಕೋಟಿಗೆ ಮತ್ತು ವರ್ಲಿಯಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳು ₹225 ಕೋಟಿಗೆ ಕಳೆದ ವರ್ಷ ಮಾರಾಟವಾಗಿವೆ.

ಇದನ್ನೂ ಓದಿ: 40 ಸಾವಿರ ಬಾಡಿಗೆ ಮನೆಗೆ 5 ಲಕ್ಷ ರೂ ಅಡ್ವಾನ್ಸ್, ಬೆಂಗಳೂರು ಮಾಲೀಕನ ಬೇಡಿಕೆಗೆ ಮಹಿಳೆ ಸುಸ್ತು!

ಇದೇ ಮುಂಬೈ ನಗರದ ವರ್ಲಿಯ ಲೋಧ ಸೀ ಫೇಸ್ ಅಪಾರ್ಟ್‌ಮೆಂಟ್‌ನ ಬೆಲೆ ₹185 ಕೋಟಿ. ಗುರುಗ್ರಾಮದಲ್ಲಿ ಎರಡು ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಮೂರು ಐಷಾರಾಮಿ ಮನೆಗಳ ಮಾರಾಟ ನಡೆದಿದೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ₹40 ಕೋಟಿಗೂ ಹೆಚ್ಚು ಮೌಲ್ಯದ ಎರಡು ಮನೆಗಳ ಮಾರಾಟ ನಡೆದಿದೆ. ಗುರುಗ್ರಾಮದ ಡಿಎಲ್‌ಎಫ್ ಕ್ಯಾಮೆಲಿಯಾಸ್‌ನಲ್ಲಿರುವ ಒಂದು ಅಪಾರ್ಟ್‌ಮೆಂಟ್ ₹190 ಕೋಟಿಗೆ ಮಾರಾಟವಾಗಿದೆ.

ಕೋವಿಡ್ ನಂತರ ಐಷಾರಾಮಿ ಮತ್ತು ಅಲ್ಟ್ರಾ ಐಷಾರಾಮಿ ಮನೆಗಳ ಬೇಡಿಕೆಯಲ್ಲಿ ಗಣನೀಯ ಏರಿಕೆಯಾಗಿದೆ. 2022, 2023 ಮತ್ತು 2024ರ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ, ದೇಶದ 7 ನಗರಗಳಲ್ಲಿ ₹9,987 ಕೋಟಿ ಮೌಲ್ಯದ ಕನಿಷ್ಠ 130 ಅಲ್ಟ್ರಾ ಐಷಾರಾಮಿ ಮನೆಗಳ ಮಾರಾಟ ನಡೆದಿದೆ.

ಇದನ್ನೂ ಓದಿ: ನಿಖಿಲ್ ಕಾಮತ್ ಮನೆ ಒಳಾಂಗಣ ವಿನ್ಯಾಸ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೋಲ್!

click me!