ಮುಂದಿನ ತಿಂಗಳು ರೈತರಿಗೆ ಡೀಸೆಲ್ ಸಬ್ಸಿಡಿ ಯೋಜನೆ, ತವರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕು
ಹಾವೇರಿ(ಡಿ25): ಗ್ರಾಮೀಣ ಗುಡಿ ಕೈಗಾರಿಕೆ ಪ್ರೋತ್ಸಾಹಿಸಲು ವಿವಿಧ ವೃತ್ತಿ ಕಸುಬುಗಳ ಪುನಶ್ಚೇತನಕ್ಕೆ ತಲಾ 50 ಸಾವಿರ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸವಣೂರು ತಾಲೂಕು ಕಾರಡಗಿ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ .3 ಕೋಟಿ ವೆಚ್ಚದ ಯಾತ್ರಿ ನಿವಾಸಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕುಂಬಾರ, ಬಡಗಿ, ಕಮ್ಮಾರ ಒಳಗೊಂಡ ವಿವಿಧ ಹದಿನೈದು ವೃತ್ತಿ ಕಸುಬುಗಳನ್ನು ಗುರುತಿಸಲಾಗಿದೆ. ಈ ವೃತ್ತಿಯಲ್ಲಿ ತೊಡಗಿರುವ ಗ್ರಾಮೀಣ ಕಸುಬುದಾರರಿಗೆ ತಲಾ .50 ಸಾವಿರ ನೆರವು ನೀಡುವ ಯೋಜನೆ ತರಲಾಗುವುದು ಎಂದರು.
ಗ್ರಾಮೀಣ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಎರಡು ಯುವ ಸಂಘಗಳನ್ನು ಗುರುತಿಸಿ ತಲಾ .5 ಲಕ್ಷ ನೀಡಲಾಗುವುದು. ಮುಂದಿನ ತಿಂಗಳು ರೈತರಿಗೆ ಡೀಸೆಲ್ ಸಬ್ಸಿಡಿ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದರು.
undefined
ಮತ್ತೆ ಕೊರೋನಾತಂಕ: ಹೊಸ ವರ್ಷಕ್ಕೆ ಮಾರ್ಗಸೂಚಿ, ಸಿಎಂ ಬೊಮ್ಮಾಯಿ
ದುಡಿಮೆದಾರರಿಂದ ಮಾತ್ರ ದೇಶಕಟ್ಟಲು ಸಾಧ್ಯ. ದುಡಿಮೆಯೇ ದೊಡ್ಡಪ್ಪ ಎನ್ನುವ ಈ ಕಾಲದಲ್ಲಿ ಜನರ ದುಡಿಮೆಯನ್ನು ಪೋ›ತ್ಸಾಹಿಸಲು ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬದುಕು ಸುಧಾರಿಸಲು ಸರ್ಕಾರ ಹತ್ತಾರು ಯೋಜನೆ ಜಾರಿಗೆ ತಂದಿದೆ. ಜನ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರೈತ ವಿದ್ಯಾನಿಧಿ ಯೋಜನೆಯ ಲಾಭವನ್ನು 12 ಲಕ್ಷ ಕಾರ್ಮಿಕರ ಮಕ್ಕಳು ಪಡೆದುಕೊಂಡಿದ್ದಾರೆ. ಕಾರ್ಮಿಕರು, ಮೀನುಗಾರರ ಮಕ್ಕಳಿಗೂ ಈ ಯೋಜನೆ ವಿಸ್ತರಿಸಲಾಗಿದೆ. ಗ್ರಾಮೀಣ ಶೈಕ್ಷಣಿಕ ಬೆಳವಣಿಗೆ ಪೋ›ತ್ಸಾಹಿಸಲು 8000 ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗಿದೆ. 20 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗಿದೆ, ಯಶಸ್ವಿನಿ ಯೋಜನೆ ಮರುಜಾರಿಗೆ ತರಲಾಗಿದೆ, ಹಾಲು ಉತ್ಪಾದಕರಿಗೆ ಪ್ರತ್ಯೇಕ ಕ್ಷೀರಬ್ಯಾಂಕ್ ಸ್ಥಾಪಿಸಲಾಗಿದೆ. 4000 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು
ಅಮ್ಮನ ತವರುಮನೆ:
ಕಾರಡಗಿ ನನ್ನ ತಂದೆಯವರು ಹುಟ್ಟಿದ ಊರು. ನನ್ನ ತಾಯಿ ತವರು ಮನೆ. ಇಲ್ಲಿ ಹುಟ್ಟಿದ ನನ್ನ ತಂದೆ ಮುಖ್ಯಮಂತ್ರಿಯಾಗಿ ಈ ಊರಿಗೆ ಭೇಟಿ ನೀಡಿ ಹಲವು ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ. ಶಾಸಕನಾಗಿ ನಾನು ಹಲವು ಅಭಿವೃದ್ಧಿ ಕಾರ್ಯ ಈ ಊರಿಗೆ ಮಾಡಿದ್ದೇನೆ. ಕಾರಡಗಿ ಮಣ್ಣಿನ ಆಶೀರ್ವಾದ ನನ್ನ ಮೇಲಿದೆ. ಈ ಊರಿನ ಸಮಗ್ರ ಅಭಿವೃದ್ಧಿ ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.