ಆಧಾರ್​ ಕಾರ್ಡ್​ನಿಂದ 50 ಸಾವಿರ ಶ್ಯೂರಿಟಿ ರಹಿತ ಸಾಲ- ಏನಿದು ಪಿಎಂ ಸ್ವನಿಧಿ ಯೋಜನೆ? ಡಿಟೇಲ್ಸ್​ ಇಲ್ಲಿದೆ

By Suchethana D  |  First Published Jan 7, 2025, 12:34 PM IST

 ಆಧಾರ್​ ಕಾರ್ಡ್​ನಿಂದ 50 ಸಾವಿರ ಶ್ಯೂರಿಟಿ ರಹಿತ ಸಾಲ ಸೌಲಭ್ಯ ಪಡೆಯುವ ಪಿಎಂ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಡಿಟೇಲ್ಸ್​ ಇಲ್ಲಿದೆ
 


ಮಹಿಳೆಯರು, ಯುವಕರು, ಸಣ್ಣ ಪುಟ್ಟ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ಬಗೆಯ ಜನರನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಇದಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ಸುಲಭದಲ್ಲಿ ಸಾಲ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಅದರಲ್ಲಿಯೂ ಚಿಕ್ಕ ಪುಟ್ಟ ವ್ಯಾಪಾರಿಗಳನ್ನು ಬೆಂಬಲಿಸುವ ಉದ್ದೇಶದಿಂದ, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಕೆಲವು ಯೋಜನೆ ಜಾರಿಗೆ ತಂದಿದೆ. ಅದರಲ್ಲಿ ಒಂದು ಪಿಎಂ ಸ್ವನಿಧಿ ಯೋಜನೆ (PM Svanidhi Yojana). ಈ ಯೋಜನೆಯನ್ನು COVID-19 ಇಡೀ ವಿಶ್ವವನ್ನು ಬಾಧಿಸಿದ್ದ ಸಮಯದಲ್ಲಿ, ಹಲವರ ಜೀವನ ಅಸ್ತವ್ಯಸ್ಥಗೊಂಡಿತ್ತು. ಅದರಲ್ಲಿಯೂ ಬೀದಿ ವ್ಯಾಪಾರಿಗಳ ಸ್ಥಿತಿಯೂ ಶೋಚನೀಯವಾಗಿತ್ತು. ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಅದೇ ಸಮಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇನ್ನೂ ಅದರ ಪ್ರಯೋಜನವನ್ನು ಮತ್ತಷ್ಟು ವಿಸ್ತರಿಸಲಾಗಿದೆ.
 
ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ, ಫಲಾನುಭವಿಗಳು ಆಧಾರ್ ಕಾರ್ಡ್‌ನೊಂದಿಗೆ ಖಾತರಿಯಿಲ್ಲದೆ ಅಂದರೆ ಶ್ಯೂರಿಟಿ ಇಲ್ಲದೇ ಸಾಲವನ್ನು ಪಡೆಯಬಹುದು. ಇದು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಅದರಲ್ಲಿಯೂ ಬೀದಿ ವ್ಯಾಪಾರಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಯೋಜನೆ. ಈ ಯೋಜನೆ ಕುರಿತು ಹೇಳುವುದಾದರೆ, ಇದರ ಅಡಿ, ಆರಂಭದಲ್ಲಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತದೆ. ಅವರು ಚಿಕ್ಕಪುಟ್ಟ ವ್ಯವಹಾರ ನಡೆಸಲು ಇದರಿಂದ ಅನುಕೂಲ ಆಗುತ್ತದೆ. ಅವರು ಈ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ, ಮುಂದಿನ ಬಾರಿ 20 ಸಾವಿರ ರೂಪಾಯಿಗಳನ್ನು ಪಡೆಯಲು ಅರ್ಹತೆ ಹೊಂದುತ್ತಾರೆ. ಇದನ್ನು ಕೂಡ ಸಕಾಲದಲ್ಲಿ ಮರು ಪಾವತಿ ಮಾಡಿದರೆ, ಕೊನೆಯಲ್ಲಿ  50 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.

ಪ್ರತಿ ತಿಂಗಳು 5 ಸಾವಿರ ಸೇವ್​ ಮಾಡಿ- 8.50 ಲಕ್ಷ ಪಡೆದುಕೊಳ್ಳಿ: ಪೋಸ್ಟ್​ ಆಫೀಸ್​ ಈ ಯೋಜನೆ ನೋಡಿ...
 
ಮೊದಲೇ ಹೇಳಿದಂತೆ ಇತರ ಸಾಲಗಳಂತೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಪಡೆಯಲು ಯಾರದ್ದೇ ಶ್ಯೂರಿಟಿ ಅಂದರೆ ಖಾತರಿಯ ಅಗತ್ಯವಿಲ್ಲ. ಆದರೆ ಸಾಲ ಪಡೆಯಲು ಆಧಾರ್ ಕಾರ್ಡ್ ಮಾತ್ರ ಕಡ್ಡಾಯವಾಗಿದೆ. ವ್ಯಾಪಾರಿಗಳು ಆಧಾರ್ ಕಾರ್ಡ್ ಬಳಸಿ ಸರ್ಕಾರಿ ಬ್ಯಾಂಕ್‌ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಸಾಲವನ್ನು 12 ತಿಂಗಳೊಳಗೆ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ, ಏಕೆಂದರೆ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಇ-ಕೆವೈಸಿ/ಆಧಾರ್ ಮೌಲ್ಯೀಕರಣಕ್ಕೆ ಇದು ಅಗತ್ಯವಾಗಿರುತ್ತದೆ.

Tap to resize

Latest Videos

 
 ಸಾಲಗಾರರು ಸರ್ಕಾರದ ಕಲ್ಯಾಣ ಯೋಜನೆಗಳಿಂದ ಭವಿಷ್ಯದ ಪ್ರಯೋಜನಗಳಿಗಾಗಿ ನಗರ ಸ್ಥಳೀಯ ಸಂಸ್ಥೆಗಳಿಂದ (ULB) ಶಿಫಾರಸು ಪತ್ರವನ್ನು ಪಡೆಯಬೇಕಾಗುತ್ತದೆ.  ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಮತ್ತು ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಿ. ಸಾಲ ಪಡೆಯುವವರು  ನೇರವಾಗಿ ಪೋರ್ಟಲ್‌ನಲ್ಲಿ ಅಥವಾ ತಮ್ಮ ಪ್ರದೇಶದ ಸಮೀಪವಿರುವ ಸಾಮಾನ್ಯ ಸೇವಾ ಕೇಂದ್ರ (CSC) ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕೆ ಬಡ್ಡಿಯ ಕುರಿತು ಹೇಳುವುದಾದರೆ, ನಿಗದಿತ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (RRB), ಸಣ್ಣ ಹಣಕಾಸು ಬ್ಯಾಂಕ್‌ಗಳು (SFB) ಮತ್ತು ಸಹಕಾರಿ ಬ್ಯಾಂಕ್‌ಗಳ ಬಡ್ಡಿದರಗಳು ಚಾಲ್ತಿಯಲ್ಲಿರುವ ದರಗಳಂತೆಯೇ ಇರುತ್ತವೆ. ಎನ್‌ಬಿಎಫ್‌ಸಿ, ಎನ್‌ಬಿಎಫ್‌ಸಿ-ಎಂಎಫ್‌ಐ ಇತ್ಯಾದಿಗಳಿಗೆ, ಬಡ್ಡಿದರಗಳು ಆಯಾ ಸಾಲದಾತ ವರ್ಗಕ್ಕೆ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಇರುತ್ತದೆ.  ಅರ್ಜಿ ಸಲ್ಲಿಸಲು ಮೇಲೆ ಕ್ಲಿಕ್​  ಮಾಡಿ, ಅಲ್ಲಿರುವ ಫಾರ್ಮ್​ ಭರ್ತಿ ಮಾಡಬೇಕು. 

ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್‌ ಅಂಚೆ ಇಲಾಖೆಯ ಎಫ್‌ಡಿ!

click me!