ಪಾನಿಪುರಿವಾಲನಿಗೆ 40 ಲಕ್ಷ ಆದಾಯ: ಹಲವರ ತಲೆ ಕೆಡಿಸಿರೋ GST ನೋಟಿಸ್​ ಹಿಂದಿರೋ ಸತ್ಯನೇ ಬೇರೆ!

Published : Jan 07, 2025, 12:06 PM ISTUpdated : Jan 07, 2025, 12:10 PM IST
ಪಾನಿಪುರಿವಾಲನಿಗೆ 40 ಲಕ್ಷ ಆದಾಯ: ಹಲವರ ತಲೆ ಕೆಡಿಸಿರೋ GST ನೋಟಿಸ್​ ಹಿಂದಿರೋ ಸತ್ಯನೇ ಬೇರೆ!

ಸಾರಾಂಶ

ತಮಿಳುನಾಡಿನ ಪಾನಿಪುರಿ ಮಾರಾಟಗಾರನಿಗೆ ಜಿಎಸ್​ಟಿ ನೋಟಿಸ್ ಬಂದ ಸುದ್ದಿ ವೈರಲ್ ಆಗಿದ್ದು, ಆತ ವಾರ್ಷಿಕ 40 ಲಕ್ಷ ರೂ. ವಹಿವಾಟು ನಡೆಸುತ್ತಿರುವ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ವಾಸ್ತವದಲ್ಲಿ, ಜಿಎಸ್​ಟಿ ನೋಂದಣಿಗೆ ಆತನಿಗೆ ನೋಟಿಸ್ ನೀಡಲಾಗಿದೆ. ಹೋಟೆಲ್​ ಒಂದಕ್ಕೆ ನೀಡಲಾದ ತೆರಿಗೆ ನೋಟಿಸ್​ ಜೊತೆಗೆ ಪಾನಿಪುರಿ ಮಾರಾಟಗಾರನ ನೋಟಿಸ್​ನ್ನು ಸೇರಿಸಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಮಾರಾಟಗಾರ ಜಿಎಸ್​ಟಿ ನೋಂದಣಿಗೆ ಒಪ್ಪಿಗೆ ಸೂಚಿಸಿದ್ದಾನೆ.

ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ಪಾನಿಪುರಿ ಮಾರಾಟಗಾರನ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. 40 ಲಕ್ಷ ರೂಪಾಯಿ ಆದಾಯ ಇರುವ ಈ ಮಾರಾಟಗಾರನಿಗೆ ಜಿಎಸ್​ಟಿ ನೋಟಿಸ್​ ಬಂದಿದ್ದು, ಜಿಎಸ್​ಟಿಯನ್ನು ಪಾವತಿಸುವಂತೆ ಹೇಳಲಾಗಿದೆ ಎನ್ನಲಾಗುತ್ತಿದೆ. ಸಾಫ್ಟ್​ವೇರ್​ ಎಂಜಿನಿಯರ್​ ಸೇರಿದಂತೆ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರು ಕೂಡ ಈ ಸುದ್ದಿ ಕೇಳಿ ಸುಸ್ತಾಗಿ ಹೋಗಿದ್ದೂ ಇದೆ. ಕೆಲವರಂತೂ ಜೀವಮಾನ ಇಡೀ ದುಡಿದರೂ ತಮಗೆ ಇಷ್ಟು ಆದಾಯ ಬರುವುದಿಲ್ಲ ಎಂದು ಹೇಳಿದವರೂ ಉಂಟು. ಇದೇ ಕಾರಣಕ್ಕೆ ಪಾನಿಪುರಿ ಮಾರಾಟಗಾರನ ಜಿಎಸ್​ಟಿ ನೋಟಿಸ್​ ಹಲ್​ಚಲ್​ ಸೃಷ್ಟಿಸುತ್ತಲೇ ಇದ್ದು, ಇದರ ಬಗ್ಗೆ ಇದಾಗಲೇ ಥಹರೇವಾರಿ ಕಮೆಂಟ್ಸ್​, ಮೀಮ್ಸ್​ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಅಷ್ಟಕ್ಕೂ ಇದನ್ನು ಮೊದಲು ಸ್ಟ್ಯಾಂಡ್-ಅಪ್ ಕಮಿಡಿಯನ್ ಜಗದೀಶ್ ಚತುರ್ವೇದಿ ಅವರು ಶೇರ್​ ಮಾಡಿದ್ದರು. "ಪಾನಿಪುರಿ ವಾಲಾ ವರ್ಷಕ್ಕೆ 40 ಲಕ್ಷ ಗಳಿಸುತ್ತಾನೆ ಮತ್ತು ಆದಾಯ ತೆರಿಗೆ ನೋಟಿಸ್ ಪಡೆಯುತ್ತಾನೆ" ಎಂದು ಅವರು ಬರೆದು ಕೊಂಡಿದ್ದರು.
 

ಆದರೆ ಇದರ ಸತ್ಯಾಂಶ ಈಗ ಬಯಲಾಗಿದೆ. ಇಂಡಿಯಾ ಟುಡೇ ಟಿವಿ ಈ ನೋಟೀಸ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. ಹಾಗೆಂದು ಈ ಸುದ್ದಿಯಲ್ಲಿ ಸತ್ಯಾಂಶ ಇಲ್ಲವೆಂದೇನಲ್ಲ. ಆದರೆ ಸ್ವಲ್ಪ ಕನ್​ಫ್ಯೂಸ್​ ಆಗಿದೆ ಅಷ್ಟೇ. ಅದೇನೆಂದರೆ, ಜಿಎಸ್​ಟಿ ನೋಟಿಸ್​ ಪಾನಿಪುರಿ ಮಾರಾಟಗಾರನಿಗೆ ಬಂದದ್ದು ನಿಜವೇ. ಆದರೆ ಆ ನೋಟಿಸ್​ ಈ ನೋಟಿಸ್​ ಎರಡನ್ನೂ ಮಿಕ್ಸ್​  ಮಾಡಿ ಎಡಿಟ್​ ಮಾಡಿ ವೈರಲ್​ ಮಾಡಲಾಗಿದೆ. ಅಸಲಿಗೆ ಜಿಎಸ್​ಟಿ ನೀಡುವಂತೆ ನೋಟಿಸ್​ ನೀಡಿದ್ದು,  ಕನ್ಯಾಕುಮಾರಿಯಲ್ಲಿರುವ  ಹೋಟೆಲ್ ಮಾರಾಟಗಾರನಿಗೆ ವಿನಾ ಜಿಎಸ್​​ಟಿ ಹಣ ಪಾವತಿಸುವಂತೆ ಪಾನಿಪುರಿವಾಲಾನಿಗೆ ನೋಟಿಸ್​ ನೀಡಲಿಲ್ಲ. ಹಾಗೆಂದು,  ಪಾನಿಪುರಿವಾಲಾನಿಗೆ ನೋಟಿಸ್​ ಬಂದಿಲ್ಲ ಎಂದಲ್ಲ. ಆತನಿಗೂ ನೋಟಿಸ್​ ಬಂದಿರುವುದು ನಿಜವೇ. 

ಟಿ.ವಿ ಪ್ರಿಯರಿಗೆ ಶಾಕ್​ ಕೊಟ್ಟ ಕೆಲ ಚಾನೆಲ್​ಗಳು: ಫೆ.1 ರಿಂದ ಟಿ.ವಿ ನೋಡುವುದು ಬಲು ದುಬಾರಿ- ಹೀಗಿವೆ ರೇಟ್​

ಆಗಿದ್ದೇನೆಂದರೆ, ಪಾನಿಪುರಿ  ಮಾರಾಟಗಾರರಿಗೆ ಜಿಎಸ್​ಟಿ ನೋಂದಣಿ ಪ್ರಮಾಣಪತ್ರವನ್ನು ಪಡೆಯಲು ಮತ್ತು ಜಿಎಸ್‌ಟಿ ವ್ಯಾಪ್ತಿಗೆ  ತನ್ನ ವ್ಯವಹಾರವನ್ನು ನೋಂದಾಯಿಸಲು ಜಿಎಸ್‌ಟಿ ಸಂಖ್ಯೆಯನ್ನು ಪಡೆಯಲು ನೋಟಿಸ್​ ನೀಡಲಾಗಿದೆ. ಇದರ   ಪ್ರಸ್ತುತ, GST ವಿನಾಯಿತಿ ಮಿತಿಯನ್ನು  ಸರಕುಗಳಿಗೆ 40 ಲಕ್ಷ ಮತ್ತು ರೂ. ಸೇವೆಗಳಿಗೆ 20 ಲಕ್ಷ ರೂಪಾಯಿಗಳು ಇವೆ. ಇದರ ಅರ್ಥ ಪಾನಿಪುರಿ ಮಾರಾಟಗಾರ ಪಾನಿಪುರಿ ಸಾಮಗ್ರಿ ಮಾರಾಟ ಮಾಡಿ 40 ಲಕ್ಷ ರೂಪಾಯಿ ಇಲ್ಲವೇ, ಪಾನಿಪುರಿ ಮಾರಿ 20 ಲಕ್ಷ ರೂಪಾಯಿಗಿಂತಲೂ ಅಧಿಕ ವ್ಯವಹಾರ ನಡೆಸುತ್ತಿರುವುದು ನಿಜವೇ. ಆದ ಕಾರಣ, ನಿಯಮದ ಅನ್ವಯ ಅವನಿಗೆ ಜಿಎಸ್​ಟಿಗೆ ವ್ಯವಹಾರವನ್ನು ನಿಯಮದ ಪ್ರಕಾರ ನೋಂದಾಯಿಸಿಕೊಳ್ಳಲು ಹೇಳಲಾಗಿದೆ. 
 
ಆದರೆ ಹೋಟೆಲ್​ಗೆ ನೀಡಿರುವ ನೋಟಿಸ್​ ಅನ್ನು ಪಾನಿಪುರಿವಾಲಾಗೆ ನೀಡಿರುವ ನೋಟಿಸ್​ಗೆ ಸೇರಿಸಿ ಅದನ್ನು ವೈರಲ್​ ಮಾಡಲಾಗುತ್ತಿದೆ.  ಮಾರಾಟಗಾರರಿಗೆ ನೋಂದಣಿ ಪ್ರಮಾಣಪತ್ರವನ್ನು ಪಡೆಯಲು ಮತ್ತು ಜಿಎಸ್‌ಟಿ ವ್ಯಾಪ್ತಿಗೆ ಬರಲು ತನ್ನ ವ್ಯವಹಾರವನ್ನು ನೋಂದಾಯಿಸಲು ಜಿಎಸ್‌ಟಿ ಸಂಖ್ಯೆಯನ್ನು ಪಡೆಯುವ ಮೂಲಕ ತಿಳಿಸುವುದಾಗಿ ಹೇಳಿದೆ. ಇದಕ್ಕೆ ಮಾರಾಟಗಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಚೆನ್ನೈನ ಅಧಿಕಾರಿಗಳೇ ತಿಳಿಸಿರುವುದಾಗಿ ವರದಿಯಾಗಿದೆ. ವರದಿಗಳ ಪ್ರಕಾರ, ಡಿಸೆಂಬರ್ 17 ರಂದು ತಮಿಳುನಾಡು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಮತ್ತು ಕೇಂದ್ರ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 70 ರ ಅಡಿಯಲ್ಲಿ ಮಾರಾಟಗಾರರಿಗೆ ಸಮನ್ಸ್ ನೀಡಲಾಗಿದೆ.  ಮಾರಾಟಗಾರನಿಗೆ ಸಮನ್ಸ್ ನೀಡಲಾಗಿದೆ ಮತ್ತು ಕಳೆದ ಮೂರು ವರ್ಷಗಳಿಂದ ಅವರ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಹಣಕಾಸಿನ ದಾಖಲೆಗಳನ್ನು ಹಾಜರುಪಡಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. 40 ಲಕ್ಷ ವಾರ್ಷಿಕ ವಹಿವಾಟು ನಡೆಸಿದ ನಂತರವೂ ಜಿಎಸ್‌ಟಿ ನೋಂದಣಿ ಇಲ್ಲದೆ ಸೇವೆಗಳನ್ನು ಒದಗಿಸುವುದು ಅಥವಾ ಸರಕುಗಳನ್ನು ಪೂರೈಸುವುದು ಅಪರಾಧ ಎಂದು ಅದು ಹೇಳಿದೆ. ಇದರ ಅರ್ಥ, ಆತ ಅಷ್ಟು ದುಡಿಮೆ ಮಾಡುತ್ತಿರುವುದಂತೂ ನಿಜ ಎನ್ನುವುದು ತಿಳಿದಿದೆ! ಆದ್ದರಿಂದ ತಲೆ ಕೆಡಿಸಿಕೊಳ್ಳುತ್ತಿರುವವರ ತಲೆ ಮತ್ತೂ ಕೆಡುವುದು ನಿಜ.
 

ಪ್ರತಿ ತಿಂಗಳು 5 ಸಾವಿರ ಸೇವ್​ ಮಾಡಿ- 8.50 ಲಕ್ಷ ಪಡೆದುಕೊಳ್ಳಿ: ಪೋಸ್ಟ್​ ಆಫೀಸ್​ ಈ ಯೋಜನೆ ನೋಡಿ...

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ