ಗೃಹ ಸಾಲದ EMI ಮೊತ್ತ ತಗ್ಗಿಸೋದು ಹೇಗೆ? ಇಲ್ಲಿದೆ ಮಾಹಿತಿ

By Suvarna NewsFirst Published Jul 31, 2021, 12:46 PM IST
Highlights

ಗೃಹ ಸಾಲ ದೀರ್ಘಾವಧಿಯದ್ದಾಗಿರೋ ಕಾರಣ ಇಎಂಐ ಮೊತ್ತ ಕೆಲವರಿಗೆ ದೊಡ್ಡ ಹೊರೆ ಅನಿಸಬಹುದು.ಆದ್ರೆ ಇಎಂಐ ಮೊತ್ತವನ್ನು ತಗ್ಗಿಸಲು ಕೂಡ ಕೆಲವು ಮಾರ್ಗಗಳಿವೆ.

ಸ್ವಂತ ಸೂರು ನಿರ್ಮಿಸೋದು ಪ್ರತಿಯೊಬ್ಬರ ಜೀವನದ ಬಹುದೊಡ್ಡ ಕನಸಾಗಿರುತ್ತದೆ. ಉಳಿಸಿದ ಒಂದೊಂದು ಪೈಸೆಯನ್ನು ಸೇರಿಸಿ ಜೊತೆಗೆ ಸಾಲ ಮಾಡಿ ಮನೆಯನ್ನೇನೋ ಖರೀದಿಸುತ್ತೇವೆ. ಆದ್ರೆ ಮುಂದೆ ಪ್ರತಿ ತಿಂಗಳು ಆದಾಯದಲ್ಲಿ ಒಂದಿಷ್ಟು ಭಾಗ ಇಎಂಐ ರೂಪದಲ್ಲಿ ಸಾಲಕ್ಕೆ ಸಂದಾಯವಾಗುತ್ತ ಹೋಗೋವಾಗ, ದುಡಿದ ದುಡ್ಡೆಲ್ಲ ಸಾಲಕ್ಕೇ ಹೋಗುತ್ತಿದೆ ಎಂಬ ಭಾವನೆ ಮೂಡೋದಂತೂ ಸುಳ್ಳಲ್ಲ. ಗೃಹ ಸಾಲ ಜೀವನದ ಅತೀ ದೀರ್ಘಾವಧಿ ಸಾಲವಾಗಿರೋ ಕಾರಣ ಸಾಲ ಪಡೆದವರು ಇಎಂಐ ಮೊತ್ತ ಕಡಿಮೆ ಮಾಡಿಕೊಳ್ಳೋ ಮಾರ್ಗದ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಗೃಹ ಸಾಲದ ಇಎಂಐ ಮೊತ್ತವನ್ನು ಕಡಿತಗೊಳಿಸೋ 6 ಮಾರ್ಗಗಳು ಇಲ್ಲಿವೆ. 

ಈ ದಾಖಲೆಗಳಿದ್ರೆ ಸಾಕು, ಅಂಚೆ ಕಚೇರಿಲೂ ಸಿಗುತ್ತೆ ಪಾಸ್‌ಪೋರ್ಟ್!

ಬಡ್ಡಿ ದರ ಬದಲಾಯಿಸಿಕೊಳ್ಳಿ
ಗೃಹ ಸಾಲ ಪಡೆದ ಬಹುತೇಕರು ಮಾಡೋ ದೊಡ್ಡ ತಪ್ಪೇನೆಂದ್ರೆ ಒಮ್ಮೆ ಸಾಲ ಮರುಪಾವತಿಸಲು ಪ್ರಾರಂಭಿಸಿದ ಬಳಿಕ ಇಎಂಐ ಸಂಯೋಜನೆಯನ್ನು ಪರಿಶೀಲಿಸಲು ಹೋಗೋದೇ ಇಲ್ಲ. ಉದಾಹರಣೆಗೆ ನೀವು ಗೃಹ ಸಾಲ ಪಡೆದು 10-12 ವರ್ಷಗಳಾಗಿದ್ರೆ, ಬ್ಯಾಂಕ್ ಬಡ್ಡಿ ದರ ವಿಧಿಸೋ ವಿಧಾನ ಈ ಅವಧಿಯಲ್ಲಿ ಸಾಕಷ್ಟು ಬದಲಾಗಿರುತ್ತದೆ. ಹಿಂದೆಲ್ಲ ಎಲ್ಲ ಸಾಲಗಳನ್ನು ಬೆಂಚ್‌ ಮಾರ್ಕ್ ಪ್ರೈಮ್  ಲೆಂಡಿಂಗ್ ರೇಟ್‌ (ಬಿಪಿಎಲ್‌ಆರ್‌)ಗೆ ಜೋಡಿಸಲಾಗಿತ್ತು. ಆದ್ರೆ ಆ ಬಳಿಕ ಅದು ಫ್ಲೋಟಿಂಗ್‌ ರೇಟ್‌ಗೆ ಬದಲಾಯ್ತು, ನಂತರ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಬೇಸ್ಡ್‌ ಲೆಂಡಿಂಗ್‌ ರೇಟ್‌ (ಎಂಸಿಎಲ್‌ಆರ್‌) ಗೆ ಜೋಡಿಸಲಾಯ್ತು. 2019ರಿಂದ ಇದನ್ನು ಎಕ್ಟ್ರನಲ್‌ ಬೆಂಚ್‌ ಮಾರ್ಕ್‌ ರೇಟ್‌ ( ಇಬಿಆರ್‌)ಗೆ ಬದಲಾಯಿಸಲಾಗಿದೆ. ಒಂದು ವೇಳೆ ನಿಮಗೆ ಈ ಬಗ್ಗೆ ಮಾಹಿತಿಯಿಲ್ಲದೆ ನೀವು ಹೊಸ ವಿಧಾನಕ್ಕೆ ಬಡ್ಡಿ ದರವನ್ನು ಬದಲಾಯಿಸಿಕೊಳ್ಳದಿದ್ರೆ, ಬ್ಯಾಂಕ್‌ ಈ ಮೊದಲಿನ ವಿಧಾನದಲ್ಲೇ ನಿಮ್ಮ ಸಾಲಕ್ಕೆ ಬಡ್ಡಿ ವಿಧಿಸುತ್ತದೆ. ನೀವು ಈಗಲೂ ಬಿಪಿಎಲ್‌ಆರ್‌, ಎಂಸಿಎಲ್‌ಆರ್‌ ವಿಧಾನದಲ್ಲೇ ಇದ್ರೆ ನೀವು ಇಬಿಆರ್‌ಗೆ ಹೋಲಿಸಿದ್ರೆ ಅತ್ಯಧಿಕ ಬಡ್ಡಿ ಕಟ್ಟುತ್ತಿದ್ದೀರಿ ಎಂದೇ ಅರ್ಥ. ಹೀಗಾಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಗಮನಿಸೋ ಜೊತೆಗೆ ಹಳೆಯ ವಿಧಾನದಿಂದ ಹೊಸ ವಿಧಾನಕ್ಕೆ ಬಡ್ಡಿ ದರ ಬದಲಾಯಿಸೋದು ಅಗತ್ಯ. ನೀವು ಬ್ಯಾಂಕ್‌ಗೆ ತೆರಳಿ ಈ ಬಗ್ಗೆ ಮನವಿ ಮಾಡಿದ್ರೆ, ಅವರು ನಿಮ್ಮ ಬಡ್ಡಿ ದರವನ್ನು ಈಗಿನ ವಿಧಾನಕ್ಕೆ ಬದಲಾಯಿಸುತ್ತಾರೆ. ಇದಕ್ಕೆ ನಿಗದಿತ ವರ್ಗಾವಣೆ ಶುಲ್ಕ ಪಾವತಿಸಿದ್ರೆ ಸಾಕು. ಆದ್ರೆ ಈ ಶುಲ್ಕ ದುಬಾರಿಯೇನೂ ಆಗಿರೋದಿಲ್ಲ. ಇದ್ರಿಂದ ನಿಮ್ಮ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗುತ್ತದೆ. ಹೀಗಾಗಿ ಸಹಜವಾಗಿ ನಿಮ್ಮ ಇಎಂಐ ಮೊತ್ತ ಕೂಡ ತಗ್ಗುತ್ತದೆ.

ಹೊಸ ಸಂಸ್ಥೆಗೆ ವರ್ಗಾಯಿಸಿ
ಅನೇಕ ಬ್ಯಾಂಕ್‌ಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳು ಗೃಹ ಸಾಲ ನೀಡುತ್ತಿವೆಯಾದ್ರೂ ಬಡ್ಡಿ ದರದಲ್ಲಿ ಸಂಸ್ಥೆಯಿಂದ ಸಂಸ್ಥೆಗೆ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಗೃಹ ಸಾಲ ತೆಗೆದುಕೊಳ್ಳೋ ಮುನ್ನ ಬಡ್ಡಿ ದರವನ್ನು ಹೋಲಿಕೆ ಮಾಡಿ ನೋಡೋದು ಅಗತ್ಯ. ಸಾಲ ತೆಗೆದುಕೊಂಡ ಬಳಿಕ ಕೂಡ ಕಡಿಮೆ ಬಡ್ಡಿ ದರ ಹೊಂದಿರೋ ಬ್ಯಾಂಕ್‌ ಅಥವಾ ಎಚ್‌ಎಫ್‌ಸಿಗಳಿಗೆ ಸಾಲವನ್ನು ವರ್ಗಾಯಿಸಲು ಅವಕಾಶವಿದೆ. ಒಂದು ವೇಳೆ ನೀವು ಅಧಿಕ ಬಡ್ಡಿ ಪಾವತಿಸುತ್ತಿದ್ರೂ ಕಡಿಮೆ ಬಡ್ಡಿದರ ಹೊಂದಿರೋ ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸಿ.  ಈ ಪ್ರಕ್ರಿಯೆಗೆ ಜಾಸ್ತಿ ವೆಚ್ಚ ಕೂಡ ಮಾಡಬೇಕಾಗಿಲ್ಲ. ಇದ್ರಿಂದ ನಿಮ್ಮ ಸಾಲದ ಮೇಲಿನ ಬಡ್ಡಿ ಇಳಿಯೋದ್ರಿಂದ ಇಎಂಐ ಮೊತ್ತ ಕಡಿಮೆಯಾಗುತ್ತದೆ.

ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ?

ಫಿಕ್ಸೆಡ್‌ನಿಂದ ಫ್ಲೋಟಿಂಗ್‌ ದರಕ್ಕೆ ಬದಲಾಗಿ
ಒಂದು ವೇಳೆ ನೀವು ಫಿಕ್ಸೆಡ್‌ ರೇಟ್‌ ಬಡ್ಡಿದರದಲ್ಲಿ ಗೃಹ ಸಾಲ ತೆಗೆದುಕೊಂಡಿದ್ರೆ, ನಿಮ್ಮ ಸಾಲದ ಅವಧಿಯುದ್ದಕ್ಕೂ ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. ಫ್ಲೋಟಿಂಗ್‌ ಬಡ್ಡಿ ಹೊಂದಿದ್ರೆ, ಅದು ಆರ್ಥಿಕ ನೀತಿ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಅಲ್ಲದೆ, ಫಿಕ್ಸೆಡ್‌ಗೆ ಹೋಲಿಸಿದ್ರೆ ಇದ್ರಲ್ಲಿ ಬಡ್ಡಿದರ ಕಡಿಮೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಬಡ್ಡಿ ದರ ಇಳಿಕೆ ಕಂಡಿರೋ ಕಾರಣ ಫಿಕ್ಸೆಡ್‌ನಿಂದ ಫ್ಲೋಟಿಂಗ್‌ ದರಕ್ಕೆ ಬದಲಾಯಿಸಿಕೊಳ್ಳೋದು ಉತ್ತಮ.
 

ಸಾಲದ ಸ್ವಲ್ಪ ಭಾಗ ಪಾವತಿಸಿ
ಸಾಲದ ಅರ್ಧ ಅಥವಾ ಅದಕ್ಕಿಂತಲೂ ಕಡಿಮೆ ಭಾಗವನ್ನು ಅವಧಿಗಿಂತ ಮುನ್ನ ಪಾವತಿಸೋದ್ರಿಂದ ಇಎಂಐ ಮೊತ್ತದಲ್ಲಿ ಕಡಿತವಾಗುತ್ತದೆ. ನಿಮ್ಮ ಸಾಲದ ಮೊತ್ತ ತಗ್ಗೋ ಕಾರಣ ಸಹಜವಾಗಿಯೇ ಇಎಂಐ ಕಡಿಮೆಯಾಗುತ್ತದೆ.

ಅವಧಿ ವಿಸ್ತರಿಸಿ
ಪ್ರಸಕ್ತ ಪಾವತಿಸುತ್ತಿರೋ ಇಎಂಐ ಮೊತ್ತ ನಿಮಗೆ ಹೆಚ್ಚೆಂದು ಅನಿಸುತ್ತಿದ್ರೆ ಅಥವಾ ಅದ್ರಿಂದಾಗಿ ಬೇರೆ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲವೆಂದಾದ್ರೆ ಸಾಲದ ಅವಧಿಯನ್ನು ವಿಸ್ತರಿಸುವಂತೆ ಬ್ಯಾಂಕ್‌ಗೆ ಮನವಿ ಮಾಡಿ. ಆದ್ರೆ ಇಲ್ಲಿ ನಿಮ್ಮ ವಯಸ್ಸು ಗಣನೆಗೆ ಬರುತ್ತದೆ. ಅಂದ್ರೆ 55 ನೇ ವಯಸ್ಸಿನಲ್ಲಿ ಸಾಲವನ್ನು 10 ವರ್ಷ ವಿಸ್ತರಿಸುವಂತೆ ಕೇಳಿದ್ರೆ, ಬ್ಯಾಂಕ್‌ಗಳು ಒಪ್ಪೋದಿಲ್ಲ. ಏಕೆಂದ್ರೆ 60 ನಿವೃತ್ತಿ ವಯಸ್ಸಾಗಿರೋ ಕಾರಣ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸೋದಿಲ್ಲ.
 

click me!