ಪಾನ್‌ ಮಸಾಲಾ ಗ್ರೂಪ್‌ ಮೇಲೆ ದಾಳಿ : 400 ಕೋಟಿ ಕಪ್ಪುಹಣ ಹಣ ಪತ್ತೆ

By Kannadaprabha NewsFirst Published Jul 31, 2021, 11:20 AM IST
Highlights
  • ಉತ್ತರ ಭಾರತ ಮೂಲದ ಪಾನ್‌ ಮಸಾಲಾ ತಯಾರಿಕಾ ಸಮೂಹದ ಮೇಲೆ  ಆದಾಯ ತೆರಿಗೆ ಇಲಾಖೆ ದಾಳಿ
  • ದಾಖಲೆ ಇಲ್ಲದೇ 400 ಕೋಟಿ ರು.ಗಿಂತಲೂ ಅಧಿಕ ಮೊತ್ತದ ವಹಿವಾಟು ನಡೆಸಿರುವುದು ಪತ್ತೆ 

ನವದೆಹಲಿ (ಜು.31): ಉತ್ತರ ಭಾರತ ಮೂಲದ ಪಾನ್‌ ಮಸಾಲಾ ತಯಾರಿಕಾ ಸಮೂಹದ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ, ಯಾವುದೇ ದಾಖಲೆ ಇಲ್ಲದೇ 400 ಕೋಟಿ ರು.ಗಿಂತಲೂ ಅಧಿಕ ಮೊತ್ತದ ವಹಿವಾಟು ನಡೆಸಿರುವುದನ್ನು ಪತ್ತೆ ಹಚ್ಚಿದೆ.

ಆದಾಯ ತೆರಿಗೆ ಭಾರ ತಗ್ಗಿಸೋ ಮಾರ್ಗಗಳು ಯಾವುವು? ಇಲ್ಲಿದೆ ಮಾಹಿತಿ

ಕಾನ್ಪುರ, ದೆಹಲಿ, ನೋಯ್ಡಾ, ಗಾಜಿಯಾಬಾದ್‌ ಮತ್ತು ಕೋಲ್ಕತಾ ಸೇರಿದಂತೆ ಸುಮಾರು 31 ಕಡೆಗಳಲ್ಲಿ ದಾಳಿ ನಡೆದಿದೆ. ಪ್ರಾಥಮಿಕ ತನಿಖೆಯ ವೇಳೆ 400 ಕೋಟಿ ರು.ಗಿಂತಲೂ ಅಧಿಕ ಮೊತ್ತದ ವಹಿವಾಟಿಗೆ ಯಾವುದೇ ದಾಖಲೆಗಳು ಇಲ್ಲದೇ ಇರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಸಿರಿನ ದುರ್ವಾಸನೆ ಓಡಿಸೋ ಪಾನ್‌ನಿಂದ ಪುರುಷರಿಗಿದೆ ಮತ್ತೊಂದು ಪ್ರಯೋಜನ!

ಪಾನ್‌ ಮಸಾಲಾ ಪದಾರ್ಥಗಳ ಅಕ್ರಮ ಮಾರಾಟ ಮತ್ತು ಅನಧಿಕೃತ ರಿಯಲ್‌ ಎಸ್ಟೇಟ್‌ ದಂಧೆಯ ಮೂಲಕ ಪಾನ್‌ ಮಸಾಲಾ ಗ್ರೂಪ್‌ ಭಾರೀ ಪ್ರಮಾಣ ಹಣ ಗಳಿಸುತ್ತಿತ್ತು. ದಾಳಿಯ ವೇಳೆ 52 ಲಕ್ಷ ರು. ನಗದು ಹಾಗೂ 7 ಕೆಜಿ ಚಿನ್ನ ಲಭ್ಯವಾಗಿದೆ. ಅಲ್ಲದೇ ದೇಶದೆಲ್ಲೆಡೆ ಬೋಗಸ್‌ ಕಂಪನಿಗಳ ಹೆಸರಿನಲ್ಲಿ ಜಾಲವನ್ನು ವಿಸ್ತರಿಸಿಕೊಂಡಿರುವುದು ಪತ್ತೆ ಆಗಿದೆ.

ಇನ್ನು ದಾಳಿ ವೇಳೆ ಹೊರ ಬಂದಿರುವ ವಿಚಾರವೇನೆಂದರು ಕಂಪನಿಯ ಆಡಳಿತ ಮಂಡಳಿಯಲ್ಲಿರುವ ಅನೇಕರು ತಮ್ಮ ಆದಾಯ ತೆರಿಗೆಯನ್ನೇ ಪಾವತಿಸಿಲ್ಲ. ಕೆಲವು ವ್ಯಕ್ತಿಗಳು ಪಾವತಿಸಿದ್ದರೂ ಅದು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎನ್ನುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಇನ್ನು ರಿಯಲ್ ಎಷ್ಟೇಟ್ ಅಕ್ರಮದಲ್ಲಿ ಭಾಗಿಯಾಗಿರುವ ಈ ಕಂಪನಿಯು    ಬರೋಬ್ಬರಿ ಹಣಕಾಸಿನ ಅವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ. 

click me!