2021 ಉದ್ಯಮ ವಲಯದಲ್ಲಿ ಅನೇಕ ಹೊಸ ಟ್ರೆಂಡ್ ಗಳನ್ನು ಸೃಷ್ಟಿಸಿದ ವರ್ಷ. ವರ್ಕ್ ಫ್ರಂ ಹೋಮ್ ನಿಂದ ಹಿಡಿದು ಹೊಸ ಉದ್ಯಮ ಅನ್ವೇಷಣೆ ತನಕ ಈ ವರ್ಷ ಉದ್ಯಮ ಕ್ಷೇತ್ರದಲ್ಲಿ ಟ್ರೆಂಡ್ ಸೃಷ್ಟಿಸಿದ ಸಂಗತಿಗಳ ಮಾಹಿತಿ ಇಲ್ಲಿದೆ.
Business Desk: 2021ನೇ ಸಾಲು ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಮನೆಯಿಂದಲೇ ಕೆಲಸ ಮಾಡೋದಾದ್ರೆ ಎಂದು ಚೆನ್ನಾಗಿರುತ್ತೆ ಎಂದು ಕನಸು ಕಂಡವರಿಗೆ ಅದು ನನಸಾದ ವರ್ಷ ಇದು ಎಂದು ಹೇಳಬಹುದು. ಅನೇಕ ಉದ್ಯೋಗಿಗಳು ಈ ವರ್ಷ ಆಫೀಸ್ ಮೆಟ್ಟಿಲನ್ನೇ ಹತ್ತಿಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಆಫೀಸ್ ಕೆಲ್ಸ ಮುಗಿಸಿದ್ದಾರೆ. ಕಂಪನಿಗಳು ಹಾಗೂ ಉದ್ಯೋಗಿಗಳ ಮಟ್ಟಿಗೆ ಇದು ಹೊಸ ಟ್ರೆಂಡ್. ಇದೇ ರೀತಿ 2021ರಲ್ಲಿ ಬ್ಯುಸಿನೆಸ್ ವಲಯದಲ್ಲಿ ಟ್ರೆಂಡ್ ಸೃಷ್ಟಿಸಿದ ಸಂಗತಿಗಳ ಮಾಹಿತಿ ಇಲ್ಲಿದೆ.
ನನಸಾದ ವರ್ಕ್ ಫ್ರಂ ಹೋಮ್ ಕನಸು
ಕೋವಿಡ್ ಕಾರಣಕ್ಕೆ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲ್ಸ ಮಾಡೋ ಅವಕಾಶವನ್ನು ಕಂಪನಿಗಳು ಒದಗಿಸಿವೆ. ಪ್ರಾರಂಭದಲ್ಲಿ ವರ್ಕ್ ಫ್ರಂ ಹೋಮ್(Work From Home) ಕುರಿತು ಕಂಪನಿಗಳಿಗೆ ಸಾಕಷ್ಟು ಅನುಮಾನಗಳಿದ್ದವು. ಮನೆಯಲ್ಲೇ ಇದ್ರೆ ಉದ್ಯೋಗಿಗಳು ನಿಗದಿತ ಕೆಲಸವನ್ನು ಮಾಡಿ ಮುಗಿಸುತ್ತಾರಾ ಎಂಬ ಪ್ರಶ್ನೆ ಇದ್ದೇಇತ್ತು. ಆದ್ರೆ ಬಹುತೇಕ ಕಂಪನಿಗಳು ಇಂದು ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಮಾರು ಹೋಗಿವೆ. ವರ್ಕ್ ಫ್ರಂ ಹೋಮ್ ನಿಂದ ಕಂಪನಿಗಳ ಉತ್ಪಾದಕತೆಯಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಉದ್ಯೋಗಿಗಳು ಆಫೀಸ್ ಗೆ ಏಕೆ ಬರಬೇಕು? ಮನೆಯಿಂದಲೇ ಕೆಲಸ ಮಾಡಲಿ ಎಂಬ ನಿರ್ಧಾರಕ್ಕೂ ಕೆಲವು ಕಂಪನಿಗಳು ಬಂದಿವೆ ಎನ್ನಲಾಗಿದೆ. ಕೆಲವೆಡೆ ಉದ್ಯೋಗಿಗಳು ಮಾತ್ರ ಆಫೀಸ್ ಇದ್ರೇನೆ ಕೆಲಸ ಮಾಡಲು ಅನುಕೂಲ ಎಂಬ ಭಾವನೆ ತಳೆದಿದ್ದರೆ. ಅದೇನೇ ಇರಲಿ, ವರ್ಕ್ ಫ್ರಂ ಹೋಮ್ ಈ ವರ್ಷದ ಟ್ರೆಂಡಿಂಗ್ ವಿಷಯಗಳಲ್ಲಿ ನಂ.1 ಸ್ಥಾನದಲ್ಲಿ ನಿಲ್ಲುತ್ತೆ.
Own Business : ಮನೆ ಮೂಲೆ ಸೇರಿರೋ ವಸ್ತುಗಳು ನಿಮ್ಮನ್ನು ಲಕ್ಷಾಧಿಪತಿ ಮಾಡ್ಬಹುದು..! ಹೇಗೆ ಗೊತ್ತಾ?
ಮಾಹಿತಿಯೇ(Data) ಆಸ್ತಿ
ಕಳೆದ ಕೆಲವು ವರ್ಷಗಳಲ್ಲಿ ಮಾಹಿತಿ( data) ಸಂಗ್ರಹಿಸೋ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಉದ್ಯಮಗಳು ಈ ಡೇಟಾವನ್ನು ತಮ್ಮ ಗ್ರಾಹಕರನ್ನು ಅರಿಯಲು ಹಾಗೂ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಬಳಸಿಕೊಳ್ಳುತ್ತಿವೆ. ಇ-ಕಾಮರ್ಸ್ ಉದ್ಯಮಗಳು 2021ರಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದು, ಡೇಟಾ ಸಂಗ್ರಹ ಈ ಕಂಪನಿಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಲು ನೆರವು ನೀಡಿದೆ. ಹೀಗಾಗಿ ಸಂಗ್ರಹಿಸಿದ ಡೇಟಾವನ್ನು ಮುಂದಿನ ವರ್ಷಕ್ಕೆ ಜೋಪಾನ ಮಾಡಿಕೊಂಡು ಹೋಗೋ ಜವಾಬ್ದಾರಿಯು ಕಂಪನಿಗಳ ಮೇಲಿದೆ.
ಬ್ಯುಸಿನೆಸ್ ಮಾಡೆಲ್ ಅನ್ವೇಷಣೆ
2021ರಲ್ಲಿ ಹೊಸ ಉದ್ಯಮ ಮಾಡೆಲ್ ಗಳು ಹಾಗೂ ಐಡಿಯಾಗಳು ಜನ್ಮತಾಳಿವೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ. ಇನ್ನು ಕೊರೋನಾ ಕಾರಣಕ್ಕೆ ಆನ್ ಲೈನ್, ಇ-ಕಾಮರ್ಸ್ ಉದ್ಯಮಗಳು ಸಾಕಷ್ಟು ಬೇಡಿಕೆ ಗಳಿಸಿಕೊಂಡಿವೆ. ಈ ಮಾದರಿಯಲ್ಲೇ ಸಾಕಷ್ಟು ಹೊಸ ಉದ್ಯಮಗಳ ಅನ್ವೇಷಣೆ ಹಾಗೂ ಆರಂಭ 2021ರಲ್ಲಿ ಆಗಿದೆ.
Tax Law Violation : Xiaomi, Oppo ಕಂಪನಿಗೆ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ದಂಡ?
ಗ್ಲೋಬಲ್ ಟು ಲೋಕಲ್
ಕೋವಿಡ್ -19 ಕಾರಣಕ್ಕೆ 2021ರಲ್ಲಿ ಅಂತಾರಾಷ್ಟ್ರೀಯ ಪೂರೈಕೆ ಸರಪಳಿಯಲ್ಲಿ ಸಾಕಷ್ಟು ವ್ಯತ್ಯಯಗಳಾದವು. ಹೀಗಾಗಿ ಕಂಪನಿಗಳು ಸ್ಥಳೀಯ ಉತ್ಪಾದನೆ ಹಾಗೂ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡಲಾರಂಭಿಸಿದವು.
ಡೋರ್ ಡೆಲಿವರಿ ಸೇವೆಗಳಿಗೆ ಬೇಡಿಕೆ
2021ರಲ್ಲಿ ಡೋರ್ ಡೆಲಿವರಿ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ಬಹುತೇಕ ಉದ್ಯಮಗಳು ಡೋರ್ ಡೆಲಿವರಿ ಸೇವೆಗಳಿಗೆ ಈ ವರ್ಷ ಒತ್ತು ನೀಡಿವೆ. ಉತ್ಪನ್ನಗಳು ಹಾಗೂ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸೋ ಮೂಲಕ ಉದ್ಯಮವನ್ನು ವಿಸ್ತರಿಸಿಕೊಂಡಿವೆ.