ಷೇರು ಮಾರುಕಟ್ಟೆಯ ಐತಿಹಾಸಿಕ ಸಾಧನೆ, 4 ಟ್ರಿಲಿಯನ್‌ ಡಾಲರ್‌ ಕ್ಲಬ್‌ ಸೇರಿದ ಭಾರತ!

Published : Nov 29, 2023, 08:21 PM IST
ಷೇರು ಮಾರುಕಟ್ಟೆಯ ಐತಿಹಾಸಿಕ ಸಾಧನೆ, 4 ಟ್ರಿಲಿಯನ್‌ ಡಾಲರ್‌ ಕ್ಲಬ್‌ ಸೇರಿದ ಭಾರತ!

ಸಾರಾಂಶ

ಭಾರತವು ಈಗ $4 ಟ್ರಿಲಿಯನ್ ಈಕ್ವಿಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ವಿಶ್ವದ ಐದನೇ ರಾಷ್ಟ್ರ ಎನಿಸಿಕೊಂಡಿದೆ. 2021ರ ಮೇ ತಿಂಗಳಿನಲ್ಲಿ ಭಾರತ 3 ಟ್ರಿಲಿಯನ್‌ ಡಾಲರ್‌ ಕ್ಲಬ್‌ಗೆ ಸೇರಿತ್ತು.

ನವದೆಹಲಿ (ನ.29): ದೇಶದ ಅತ್ಯಂತ ಹಳೆಯ ಹಾಗೂ ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಮಾಪನವು ಬುಧವಾರ ಮೊದಲ ಬಾರಿಗೆ 4 ಟ್ರಿಲಿಯನ್  ಯುಎಸ್‌ ಡಾಲರ್‌ ಮೈಲಿಗಲ್ಲನ್ನು ತಲುಪಿದೆ. 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ದಿನದ ಪ್ರಾರಂಭವನ್ನೇ ಸಕಾರಾತ್ಮಕವಾಗಿ ಮಾಡಿತ್ತು,  ನಂತರ ಆರಂಭಿಕ ವಹಿವಾಟಿನಲ್ಲಿ 305.44 ಪಾಯಿಂಟ್‌ಗಳ ಏರಿಕೆ ಕಂಡು 66,479.64 ಕ್ಕೆ ತಲುಪಿದೆ. ಈಕ್ವಿಟಿಗಳಲ್ಲಿನ ಜನರ ನಂಬಿಕೆಗಳು, ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಬೆಳಗಿನ ವಹಿವಾಟಿನಲ್ಲಿ ₹3,33,26,881.49 ಕೋಟಿಗಳನ್ನು ತಲುಪಿತು. 83.31 ರ ವಿನಿಮಯ ದರದಲ್ಲಿ ಇದು 4 ಟ್ರಿಲಿಯನ್‌ ಯುಎಸ್‌ಡಾಲರ್‌ನ ಗಡಿ ಮುಟ್ಟಿತ್ತು. ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಈ ವರ್ಷ ಇಲ್ಲಿಯವರೆಗೆ 5,540.52 ಪಾಯಿಂಟ್‌ಗಳು ಅಥವಾ ಶೇಕಡಾ 9.10 ರಷ್ಟು ಏರಿಕೆ ಕಂಡಿದ್ದರೆ, ಅದರ ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲಾ ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ (ಎಂ-ಕ್ಯಾಪ್) ಸುಮಾರು ₹50.81 ಲಕ್ಷ ಕೋಟಿಗಳಷ್ಟು ಜಿಗಿದಿದೆ.

ಈ ವರ್ಷದ ಸೆಪ್ಟೆಂಬರ್ 15 ರಂದು 30-ಷೇರ್ ಬೆಂಚ್‌ಮಾರ್ಕ್ ತನ್ನ ಸಾರ್ವಕಾಲಿಕ ಗರಿಷ್ಠ 67,927.23 ಅನ್ನು ತಲುಪಿತ್ತು. 4 ಟ್ರಿಲಿಯನ್‌ ಯುಎಸ್‌ ಡಾಲರ್‌ಗಿಂತ ಹೆಚ್ಚು ಮೌಲ್ಯದ ಇತರ ಮಾರುಕಟ್ಟೆಗಳೆಂದರೆ, ಅಮೆರಿಕ, ಚೀನಾ, ಜಪಾನ್ ಮತ್ತು ಹಾಂಕಾಂಗ್‌ ಆಗಿವೆ. 2021ರ ಮೇ 24 ರಂದು, ಬಿಎಸ್‌ಇಯಲ್ಲಿ ಎಲ್ಲಾ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು 3 ಟ್ರಿಲಿಯನ್‌ ಯುಎಸ್‌ ಡಾಲರ್‌ಗಳ ಗಡಿ ಮುಟ್ಟಿತ್ತು.

2007ರ ಮೇ 28 ರಂದು ಲಿಸ್ಟೆಡ್‌ ಆಗಿರುವ ಈ ಕಂಪನಿಗಳ ಮೌಲ್ಯಮಾಪನವು 1 ಟ್ರಿಲಿಯನ್‌ ಯುಎಸ್‌ ಡಾಲರ್‌ಗಳ ಗಡಿ ದಾಟಿತ್ತು. 1 ಟ್ರಿಲಿಯನ್‌ನಿಂದ 1.5 ಟ್ರಿಲಿಯನ್‌ವರೆಗಿನ ಪ್ರಯಾಣ ಏಳು ವರ್ಷಗಳ ಕಾಲ ನಡೆದಿತ್ತು. 2014ರ ಜೂನ್‌ 6 ರಂದು ಅಂದರೆ, 2566 ದಿನಗಳಲ್ಲಿ ಈ ಗಡಿ ಕ್ರಮಿಸಲಾಗಿತ್ತು.

ಬ್ಯಾಂಕ್ ಲಾಕರ್ ಒಪ್ಪಂದದಿಂದ ಆಧಾರ್ ಉಚಿತ ಅಪ್ಡೇಟ್ ತನಕ 8 ಕೆಲಸಗಳಿಗೆ ಡಿಸೆಂಬರ್ ಅಂತಿಮ ಗಡುವು

2017ರ ಜುಲೈ 10 ರಂದು ಅದರ ಲಿಸ್ಟೆಡ್‌ ಮಾಡಲಾದ ಮಿಡ್‌ ಕ್ಯಾಪ್‌ ಕಂಪನಿಗಳ ಮೌಲ್ಯ 2 ಟ್ರಿಲಿಯನ್ ತಲುಪಿತು.1.5-ಟ್ರಿಲಿಯನ್ ಮಟ್ಟದಿಂದ 2 ಟ್ರಿಲಿಯನ್‌ಗಾಗಿ 1,130 ದಿನಗಳನ್ನು ತೆಗೆದುಕೊಂಡಿತ್ತು. ಅಲ್ಲಿಂದ, 2016ರ ಡಿಸೆಂಬರ್ 16 ರಂದು  2.5-ಟ್ರಿಲಿಯನ್ ಮಾರ್ಕ್ ಅನ್ನು ದಾಟಲು 1,255 ದಿನಗಳನ್ನು ತೆಗೆದುಕೊಂಡಿತು.

ಜಗತ್ತಿನ ಅತ್ಯಂತ ದುಬಾರಿ ಸಸ್ಯವಿದು, 'ರೆಡ್‌ ಗೋಲ್ಡ್' ಹೆಸರಿನ ಈ ಮಸಾಲೆ ಬೆಳೆದ್ರೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದೇ ದಿನದಲ್ಲಿ $285 ಬಿಲಿಯನ್ ಸಾಫ್ಟ್‌ ವೇರ್ ಸ್ಟಾಕ್‌ ಉಡೀಸ್; ಶುರುವಾಯ್ತು SaaSpocalypse ಭಯ! ಏನಿದು ಘಟನೆ?
ದಿನಕ್ಕೆ ಕೇವಲ ₹8 ಖರ್ಚು, ವರ್ಷವಿಡೀ ಅನ್‌ಲಿಮಿಟೆಡ್‌ ಕಾಲ್, ಬಂಪರ್ ಡೇಟಾ! BSNLನ ಈ ಪ್ಲಾನ್ ನೋಡಿದ್ರಾ?