ಹಳ್ಳಿ ಹಳ್ಳಿ ತಲುಪಿದ UPI; ದೇಶಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ 10 ಸಾವಿರ ಪಾವತಿ ಸಾಧನ ಅಳವಡಿಸಿದ Paytm

By Suvarna News  |  First Published Nov 29, 2023, 5:54 PM IST

ಡಿಜಿಟಲ್ ಪಾವತಿ ವಿಧಾನ ಇಂದು ದೇಶದ ಹಳ್ಳಿ ಹಳ್ಳಿಗಳನ್ನು ತಲುಪುತ್ತಿದೆ.ಇದಕ್ಕೆ ಸಾಕ್ಷಿಯೆಂಬಂತೆ  ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್ ಪೇಟಿಎಂ ದೇಶಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ 10 ಸಾವಿರಕ್ಕೂ ಅಧಿಕ ಪೇಮೆಂಟ್ ಸಾಧನಗಳನ್ನು ಅಳವಡಿಸಿದೆ. 


ನವದೆಹಲಿ (ನ.29): ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ಜನಪ್ರಿಯತೆ ಗಳಿಸಿದೆ. ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಕೂಡ ನಡೆಯುತ್ತಿವೆ. ಅದರ ಭಾಗವಾಗಿಯೇ ದೇಶದ ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್ ಪೇಟಿಎಂ ಮಹತ್ವದ ಹೆಜ್ಜೆಯಿಟ್ಟಿದೆ. ದೇಶದ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ಪಾವತಿ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ದೇಶದ ವಿವಿಧ ರಾಜ್ಯಗಳ ಗ್ರಾಮ ಪಂಚಾಯಿತಿಗಳಲ್ಲಿ ಸೌಂಡ್ ಬಾಕ್ಸ್, ಕ್ಯುಆರ್ ಕೋಡ್ಸ್ ಹಾಗೂ ಕಾರ್ಡ್ ಮಷಿನ್ ಸೇರಿದಂತೆ 10,000 ಪಾವತಿ ಸಾಧನಗಳನ್ನು ಅಳವಡಿಸಿದೆ. ಆಂಧ್ರ ಪ್ರದೇಶದ 7,000ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಕ್ಯುಆರ್/ಕಾರ್ಡ್ ಮಷಿನ್ಸ್ ಹಾಗೂ ಸೌಂಡ್ ಬಾಕ್ಸ್ ಅಳವಡಿಸುವಂತೆ ಪೇಟಿಎಂಗೆ ಬೇಡಿಕೆ ಬಂದಿದೆ. ಎಚ್ ಡಿಎಫ್ ಸಿ, ಎಸ್ ಬಿಐ, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಹಾಗೂ ವಿವಿಧ ಪ್ರಾದೇಶಿಕ ಬ್ಯಾಂಕ್ ಗಳು ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಪೇಟಿಎಂ ಅನುಷ್ಠಾನಗೊಳಿಸುತ್ತಿದೆ. ಇನ್ನು ಉತ್ತರ ಪ್ರದೇಶ ಹಾಗೂ ಗೋವಾ ರಾಜ್ಯ ಸರ್ಕಾರ ಇಲಾಖೆಗಳಿಂದ ಕೂಡ ಅನೇಕ ಕಡೆಗಳಲ್ಲಿ ಪಾವತಿ ಸಾಧನಗಳನ್ನು ಅಳವಡಿಸುವಂತೆ ಪೇಟಿಎಂಗೆ ಮನವಿ ಬಂದಿದೆ.

ಡಿಜಿಟಲ್ ಪರಿವರ್ತನೆ ಕೇವಲ ಆಂಧ್ರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಗುಜರ್, ಅಂಡಮಾನ್ ಆಂಡ್ ನಿಕೋಬಾರ್ ದ್ವೀಪಗಳು, ಮಹಾರಾಷ್ಟ್ರ ಹಾಗೂ ಅಸ್ಸಾಂನಲ್ಲಿ 1,200ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಪೇಟಿಎಂ ಈಗಾಗಲೇ ಕ್ಯುಆರ್ ಕೋಡ್ ಹಾಗೂ ಸೌಂಡ್ ಬಾಕ್ಸ್ ಸಾಧನಗಳನ್ನು ಅಳವಡಿಸಿದೆ. 

Tap to resize

Latest Videos

ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಬಳಕೆದಾರರು ಪ್ರತಿದಿನ ಎಷ್ಟು ಯುಪಿಐ ಪಾವತಿ ಮಾಡ್ಬಹುದು?

ಈ ಎಲ್ಲ ಪ್ರಯತ್ನಗಳು ಗ್ರಾಮೀಣ ಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಪೇಟಿಎಂನ ಪ್ರಯತ್ನದ ಭಾಗವೇ ಆಗಿವೆ. ಪಾವತಿ ಸಾಧನಗಳ ಅಳವಡಿಕೆಗೆ ರಾಜ್ಯ ಸರ್ಕಾರಗಳು, ಸ್ಥಳೀಯ ಗ್ರಾಮ ಪಂಚಾಯಿತಿಗಳು ಹಾಗೂ ಬ್ಯಾಂಕಿಂಗ್ ಸಹಭಾಗಿತ್ವದೊಂದಿಗೆ ಪೇಟಿಎಂ ಕಾರ್ಯನಿರ್ವಹಿಸುತ್ತಿದೆ. 

ಭಾರತದ ಗ್ರಾಮ ಪಂಚಾಯಿತಿಗಳಲ್ಲಿ ಪಾವತಿ ಸಾಧನಗಳ ಅಳವಡಿಕೆ ಬಗ್ಗೆ ಮಾತನಾಡಿರುವ ಪೇಟಿಎಂ ಪೇಮೆಂಟ್ಸ್ ಮುಖ್ಯ ಉದ್ಯಮ ಅಧಿಕಾರಿ ಅಭಯ್ ಶರ್ಮಾ 'ಭಾರತದ ಪ್ರತಿ ಭಾಗದಲ್ಲಿ ಮೊಬೈಲ್ ಪಾವತಿಗಳಿಗೆ ಅವಕಾಶ ಸಿಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ಸೌಂಡ್ ಬಾಕ್ಸ್, ಕಾರ್ಡ್ ಮಷಿನ್ ಹಾಗೂ ಕ್ಯುಆರ್ ಮುಂತಾದ ನಮ್ಮ ವಿಶಿಷ್ಟ ಪಾವತಿ ಸಾಧನಗಳನ್ನು ಅಳವಡಿಸುವ ಮೂಲಕ ಭಾರತದ ಗ್ರಾಮ ಪಂಚಾಯಿತಿಗಳು ಹಾಗೂ ಗ್ರಾಮೀಣ ಭಾರತದ ಪರಿಕಲ್ಪನೆಗೆ ಹೊಸ ವ್ಯಾಖ್ಯಾನ ನೀಡುತ್ತಿದ್ದೇವೆ. ಆಸ್ತಿ ತೆರಿಗೆ, ವಾಟರ್ ಬಿಲ್ಸ್, ಎಲೆಕ್ಟ್ರಿಕ್ ಬಿಲ್ಸ್ ಹಾಗೂ ಇನ್ನೂ ಅನೇಕ ಕೆಲಸಗಳಿಗೆ ಶುಲ್ಕ ಸಂಗ್ರಹಿಸುವ ಕಾರ್ಯವನ್ನು ಇದು ಸರಳಗೊಳಿಸಲಿದೆ. 

ಪೇಮೆಂಟ್ಸ್ ಬ್ಯಾಂಕ್ ಅನ್ವಯ ಪಿಪಿಬಿಎಲ್ ಈ ತನಕ ಭಾರತದಾದ್ಯಂತ 1.75 ಕೋಟಿಗೂ ಹೆಚ್ಚಿನ ಫಾಸ್ಟ್ ಟ್ಯಾಗ್ಸ್ ವಿತರಿಸಿದೆ. ಹಾಗೆಯೇ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ 300ಕ್ಕೂ ಅಧಿಕ ಟೋಲ್ ಹಾಗೂ ಪಾರ್ಕಿಂಗ್ ಪ್ಲಾಜ್ ಗಳಲ್ಲಿ ಟೋಲ್ ಹಾಗೂ ಪಾರ್ಕಿಂಗ್ ಶುಲ್ಕವನ್ನು ಡಿಜಿಟಲ್ ಆಗಿ ಸಂಗ್ರಹಿಸಲು ನೆರವು ನೀಡಿದೆ.

ನಮೋ ಭಾರತ್ ಸ್ಟೇಷನ್ ಗಳಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಟ್ರಾನ್ಸಿಟ್ ಕಾರ್ಡ್ ಬಳಕೆಗೆ ಚಾಲನೆ ನೀಡಿದ ಪ್ರಧಾನಿ

ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್
ಡಿಜಿಟಲ್ ಇಂಡಿಯಾ ಹಾಗೂ 'ಒಂದು ದೇಶ ಒಂದು ಕಾರ್ಡ್' ಅಭಿಯಾನದ ಅಂಗವಾಗಿ ಬಹು ಉಪಯೋಗಿ 'ಪೇಟಿಎಂ ವಾಲೆಟ್ ಟ್ರಾನ್ಸಿಟ್ ಕಾರ್ಡ್' ಅನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪರಿಚಯಿಸಿದೆ. ಪೇಟಿಎಂ ವಾಲೆಟ್ ಜೊತೆಗೆ ಲಿಂಕ್ ಆಗಿರುವ ಈ ಕಾರ್ಡ್ ಅನ್ನು ದೇಶದ ಎಲ್ಲ ಬಸ್ , ರೈಲು ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಹಣಕಾಸು ಸಂಬಂಧಿ ವಹಿವಾಟುಗಳಿಗೆ ಬಳಸಬಹುದಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಹೆಚ್ಚುವರಿ ಖಾತೆ ತೆರೆಯಬೇಕಾದ ಅಗತ್ಯವಿಲ್ಲ. ವಾಲೆಟ್ ಟಾಪ್ ಅಪ್ ಮಾಡಿದರೆ ಸಾಕು. 
 

click me!