4 ಹೊಸ ತಾಲೂಕುಗಳು: ಯಾವ ಜಿಲ್ಲೆಯಲ್ಲಿ? ರಾಜ್ಯದಲ್ಲೆಷ್ಟಾಗುತ್ತೆ ತಾಲೂಕು?

By Web Desk  |  First Published Feb 8, 2019, 2:21 PM IST

ನಾಲ್ಕು ಜಿಲ್ಲೆಗಳಲ್ಲಿ ಹೊಸ ನಾಲ್ಕು ತಾಲೂಕುಗಳನ್ನು ರಚಿಸಲು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ನಿರ್ಧರಿಸಿದ್ದು, ಯಾವ ಜಿಲ್ಲೆಯಲ್ಲಿ ಹೊಸ ತಾಲೂಕುಗಳು ರಚನೆಯಾಗಲಿವೆ? ಅಲ್ಲಿಗೆ ರಾಜ್ಯದಲ್ಲಿ ಒಟ್ಟು ಎಷ್ಟು ತಾಲೂಕುಗಳಾಗಿವೆ ಎಂದು ತಿಳಿಯಲು ಓದಿ ಈ ಸುದ್ದಿ.


ಬೆಂಗಳೂರು (ಫೆ.8):  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2019-20ರ ಆಯವ್ಯಯ ಮಂಡಿಸುತ್ತಿದ್ದು, ನಾಲ್ಕು ಹೊಸ ತಾಲೂಕುಗಳನ್ನು ರಚಿಸುವುದಾಗಿ ಘೋಷಿಸಿದ್ದಾರೆ. 

ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೇಳೂರು, ಬಾಗಲಕೋಟೆಯ ತೇರದಾಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸವನ್ನು ಹೊಸ ತಾಲೂಕುಗಳನ್ನಾಗಿ ರಚಿಸುವುದಾಗಿ ಘೋಷಿಸಿದ್ದಾರೆ. 

Tap to resize

Latest Videos

ಇಲ್ಲಿದೆ ಕರ್ನಾಟಕ ಬಜೆಟ್ 2019 ಲೈವ್ ಮಾಹಿತಿ

ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಿದ್ದವು. ಚಿಕ್ಕಬಳ್ಳಾಪುರದಲ್ಲಿ ಚಿಕ್ಕಾಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ ಹಾಗೂ ಶಿಡ್ಲಘಟ್ಟ ತಾಲೂಕುಗಳಿದ್ದವು. 

ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ, ಜಮಖಂಡಿ, ಮುದೋಳ, ಬಾದಾಮಿ, ಬೀಳಗಿ, ಹುನಗುಂದ, ಇಳಕಲ್, ರಬಕವಿ ಬನಹಟ್ಟಿ, ಗುಳೇದಗುಡ್ಡ ತಾಲೂಕಿಗಳಿದ್ದವು. ಚಿಕ್ಕಮಗಳೂರಿನಲ್ಲಿ ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಶೃಂಗೇರಿ, ತರೀಕೆರೆ, ಅಜ್ಜಂಪುರ ತಾಲೂಕುಗಳಿದ್ದವು.

ಕರ್ನಾಟಕದಲ್ಲಿ ಒಟ್ಟು 227 ತಾಲೂಕುಗಳಿದ್ದು, ಈ ನಾಲ್ಕು ಸೇರಿದರೆ 231 ತಾಲೂಕುಗಳಾಗಿವೆ. 

ಅನ್ನದಾತನ ನೆರವಿಗೆ ಧಾವಿಸಿದ ಕುಮಾರಣ್ಣ

ಮೋದಿ ಯೋಜನೆಯೊಂದಿಗೆ HDK ಯೋಜನೆ ವಿಲೀನ
 

click me!