Tech Investments Bengaluru: ವಿಶ್ವದಲ್ಲೇ ಬೆಂಗಳೂರಿಗೆ ಟಾಪ್ 5 ಪ್ಲೇಸ್!

By Kannadaprabha News  |  First Published Jan 14, 2022, 4:29 AM IST

* ಟೆಕ್‌ ವೆಂಚರ್‌ ಕ್ಯಾಪಿಟಲ್‌ ಹೂಡಿಕೆ: ಬೆಂಗ್ಳೂರು ವಿಶ್ವ ನಂ.5

* 2021ರಲ್ಲಿ ಬೆಂಗಳೂರಲ್ಲಿ 1.40 ಲಕ್ಷ ಕೋಟಿ ಹೂಡಿಕೆ

* ಕಳೆದ ವರ್ಷ ಭಾರತದಲ್ಲಿ 5 ಲಕ್ಷ ಕೋಟಿ ಹಣ ಹೂಡಿಕೆ


ಲಂಡನ್‌ ( ಜ. 14) ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳಲ್ಲಿ (tech investments) ವೆಂಚರ್‌ ಕ್ಯಾಪಿಟಲ್‌ ಹೂಡಿಕೆಯಲ್ಲಿ ಬೆಂಗಳೂರು (Bengaluru) ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ ಎಂದು (Report) ವರದಿಯೊಂದು ಹೇಳಿದೆ. ಕಳೆದ ವರ್ಷ ಬೆಂಗಳೂರು 16  ಯೂನಿಕಾರ್ನ್‌ ಕಂಪನಿಗಳನ್ನು ಸೃಷ್ಟಿಸಿದೆ ಎಂದು ವರದಿ ಹೇಳಿದೆ.

ಲಂಡನ್‌ ಆ್ಯಂಡ್‌ ಪಾರ್ಟನ​ರ್‍ಸ್ ಮತ್ತು ಡೀಲ್‌ರೂಂ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆ ಅನ್ವಯ, 2020ನೇ ಸಾಲಿನಲ್ಲಿ ಟೆಕ್‌ ವಲಯದಲ್ಲಿ ವೆಂಚರ್‌ ಕ್ಯಾಪಿಟಲ್‌ ಹೂಡಿಕೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನಕ್ಕೆ ಏರಿದೆ. ದೇಶದಲ್ಲಿ ಹೂಡಿಕೆ ಪ್ರಮಾಣವು 1.11 ಲಕ್ಷ ಕೋಟಿ ರು.ನಿಂದ 5.06 ಲಕ್ಷ ಕೋಟಿ ರು.ಹೆಚ್ಚಿದೆ. ಇದೇ ವೇಳೆ 1.40 ಲಕ್ಷ ಕೋಟಿ ರು. ಹೂಡಿಕೆ ಮೂಲಕ ಬೆಂಗಳೂರು ವಿಶ್ವದಲ್ಲೇ ನಂ.5 ಸ್ಥಾನದಲ್ಲಿದೆ ಎಂದು ಹೇಳಿದೆ.

Latest Videos

undefined

ಕರ್ನಾಟಕಕ್ಕೆ ಹರಿದು ಬಂದ ಬಂಡವಾಳ,  FDI ಈಕ್ವಿಟಿ  ಶೇ. 112  ಏರಿಕೆ

ಈ ಬೆಳವಣಿಗೆಯ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಾಗುತ್ತಿರುವುದನ್ನು ಸೂಚಿಸುತ್ತದೆ. ಯೂನಿಕಾರ್ನ್‌ಗಳು, ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಬೆಂಗಳೂರಿನಲ್ಲಿ 16 ಹೊಸ ಯುನಿಕಾರ್ನ್‌ ಕಂಪನಿಗಳು ಆರಂಭವಾಗಿವೆ. ಉಳಿದಂತೆ ಟೆಕ್‌ ಹೂಡಿಕೆಯಲ್ಲಿ ಸ್ಯಾನ್‌ಫ್ರಾನ್ಸಿಸ್ಕೋ ಬೇ ಪ್ರದೇಶ ಟಾಪ್‌ನಲ್ಲಿದ್ದರೆ, ನ್ಯೂಯಾರ್ಕ್, ಗ್ರೇಟರ್‌ ಬೋಸ್ಟನ್‌ ಪ್ರದೇಶ, ಲಂಡನ್‌ ಕ್ರಮವಾಗಿ ನಂತರದ ಸ್ಥಾನದಲ್ಲಿವೆ ಎಂದು ವರದಿ ಹೇಳಿದೆ.

ಕಳೆದ ವರ್ಷದ ವರದಿ: ಕೇಂದ್ರ ಸರ್ಕಾರದ ನೀತಿಗಳು  ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮಹತ್ವದ ಬದಲಾವಣೆ ತಂದಿದೆ.  ಟ್ರೆಂಡ್ ಸಹ ಬದಲಾಗಿದೆ.  ಎಫ್‌ಡಿಐ ಒಳಹರಿವು ಹೆಚ್ಚಿದ್ದು ಭಾರತವನ್ನು ಕಂಪನಿಗಳು ಮೆಚ್ಚಿಕೊಂಡಿವೆ.  ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತವು ಒಟ್ಟು 27.37 ಶತಕೋಟಿ  ಡಾಲರ್(ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ  ಶೇ. 62 ಹೆಚ್ಚಳ) ಹೂಡಿಕೆ ಪಡೆದುಕೊಂಡಿದೆ.   ಎಫ್‌ಡಿಐ(FDI) ಈಕ್ವಿಟಿ ಒಳಹರಿವು ಶೇ. 112   ಏರಿಕೆಯಾಗಿದ್ದ ವರದಿ ಕಳೆದ ಸೆಪ್ಟೆಂಬರ್ ನಲ್ಲಿ ಹೊರಬಂದಿತ್ತು.

ಆಟೋಮೊಬೈಲ್ ಉದ್ಯಮ  ಅಗ್ರ ವಲಯವಾಗಿ ಹೊರಹೊಮ್ಮಿದೆ. 2021-22 ಒಟ್ಟು ಎಫ್‌ಡಿಐ ಈಕ್ವಿಟಿಯ ಒಳಹರಿವಿನ ಶೇ. 23 ಪಾಲನ್ನು ಪಡೆದುಕೊಂಡಿದೆ.  ಇನ್ನು  ಸಾಫ್ಟ್‌ವೇರ್  ವಲಯ (18%) ಮತ್ತು ಹಾರ್ಡ್‌ವೇರ್  (10%) ನಂತರದ ಸ್ಥಾನದಲ್ಲಿವೆ. 

`ಆಟೋಮೊಬೈಲ್ ಉದ್ಯಮ  ವಿಚಾರಕ್ಕೆ ಬರುವುದಾದರೆ ಕರ್ನಾಟಕ ದೇಶದಲ್ಲಿ ಅಗ್ರಗಣ್ಯನಾಗಿದೆ.  ಹಣಕಾಸು ವರ್ಷದ (2021-22) ಮೊದಲ ನಾಲ್ಕು ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಎಫ್‌ಡಿಐ ಇಕ್ವಿಟಿ ಒಳಹರಿವು . 87 ಹೆಚ್ಚಾಗಿದೆ.  ಶೇ. 45 ರಷ್ಟು ಹೂಡಿಕೆ ಕರ್ನಾಟಕದಲ್ಲಿಯೇ ಆಗಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (23%) ಮತ್ತು ದೆಹಲಿ (12%) ಇವೆ. 


ಮಾನವಸಹಿತ ಗಗನಯಾನದ ಎಂಜಿನ್‌ ಪರೀಕ್ಷೆ ಯಶಸ್ವಿ:   ಭಾರತದ ಮೊಟ್ಟಮೊದಲ ಮಾನವಸಹಿತ ಗಗನಯಾನ ಯೋಜನೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇನ್ನೊಂದು ಮಹತ್ವದ ಸಿದ್ಧತಾ ಘಟ್ಟವನ್ನು ಪೂರೈಸಿದ್ದು, ಗಗನಯಾನ ನೌಕೆಯ ಯೋಜನಿಕ್‌ ಎಂಜಿನ್‌ನ ಅರ್ಹತಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ನಿರಂತರ 720 ಸೆಕೆಂಡ್‌ಗಳ ಕಾಲ ಎಂಜಿನ್‌ನ ಪರೀಕ್ಷೆ ನಡೆಸಲಾಗಿದೆ.

ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ನಲ್ಲಿ ಮಾನವಸಹಿತ ಗಗನಯಾನ ನೌಕೆಯ ಎಂಜಿನ್‌ ಪರೀಕ್ಷೆ ಬುಧವಾರ ನಡೆದಿದೆ ಎಂದು ಇಸ್ರೋ ತಿಳಿಸಿದೆ. ‘ಈ ಯಶಸ್ವಿ ಪರೀಕ್ಷೆಯು ಮಾನವಸಹಿತ ಗಗನಯಾನ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಇದು ನಮ್ಮ ಕ್ರಯೋಜನಿಕ್‌ ಎಂಜಿನ್‌ನ ವಿಶ್ವಾಸಾರ್ಹತೆ ಮತ್ತು ದಕ್ಷತೆಯನ್ನು ಸಾಬೀತುಪಡಿಸಿದೆ. ಇನ್ನೂ ನಾಲ್ಕು ಬಾರಿ ಒಟ್ಟು 1810 ಸೆಕೆಂಡ್‌ಗಳ ಕಾಲ ಎಂಜಿನ್‌ ಪರೀಕ್ಷೆ ನಡೆಯಲಿದೆ. ನಂತರ ಇನ್ನೊಂದು ಎಂಜಿನ್ನನ್ನು ಎರಡು ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಆಗ ಕ್ರಯೋಜನಿಕ್‌ ಎಂಜಿನ್‌ ವ್ಯವಸ್ಥೆಯ ಪರೀಕ್ಷೆ ಸಂಪೂರ್ಣವಾಗಲಿದೆ’ ಎಂದು ಇಸ್ರೋ ಹೇಳಿದೆ.

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಈ ವರ್ಷದ ಆಗಸ್ಟ್‌ 15ರಂದು ನಡೆಯಲಿರುವ ದೇಶದ 75 ಸ್ವಾತಂತ್ರ್ಯೋತ್ಸವದ ಒಳಗೆ ಉಡ್ಡಯನ ಮಾಡಬೇಕೆಂದು ಇಸ್ರೋ ಯೋಜಿಸಿದೆ. ಆದರೆ, ಕೊರೋನಾವೈರಸ್‌ ಸಮಸ್ಯೆಯಿಂದಾಗಿ ಅದು ಮುಂದೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

 

click me!