
ನವದಹೆಲಿ: ಇಂದು ಬ್ಯಾಂಕಿಂಗ್ ಎಲ್ಲಾ ವ್ಯವಹಾರಗಳು ಆನ್‌ಲೈನ್ ಮೂಲಕವೇ ನಡೆಸಬಹುದು. ಹಣ ಡ್ರಾ ಮತ್ತು ಡೆಪಾಸಿಟ್ ಮಾಡಲು ಎಟಿಎಂ, ಸಿಡಿಎಂ (Cash Deposit Machines) ಯಂತ್ರಗಳಿವೆ. ಆದ್ರೂ ಕೆಲವೊಂದು ವ್ಯವಹಾರಗಳಿಗೆ ಬ್ಯಾಂಕ್ ಶಾಖೆಗಳಿಗೆ ಹೋಗಬೇಕಾಗುತ್ತದೆ. ಆದ್ದರಿಂದ ಬ್ಯಾಂಕ್ ರಜಾದಿನಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದ್ರೆ ರಜಾದಿನ ಬ್ಯಾಂಕಿಗೆ ಹೋಗಿ ಕೆಲಸವಾಗದೇ ಹಿಂದಿರುಗಬೇಕಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ತಮ್ಮ ಸೇವೆಗಳನ್ನು ಆನ್‌ಲೈನ್‌ನಲ್ಲಿ ನೀಡುತ್ತಿದ್ದರೂ ಇಂದಿಗೂ ಬಹುತೇಕರು ಬ್ಯಾಂಕ್‌ಗಳಿಗೆ ಹೋಗುತ್ತಾರೆ. ಮೇ ತಿಂಗಳಲ್ಲಿ ಯಾವುದೇ ವಿಶೇಷ ಹಬ್ಬಗಳು ಇಲ್ಲಿದಿದ್ದರೂ ಬ್ಯಾಂಕ್‌ಗಳು 12 ದಿನ ಮುಚ್ಚಲಿವೆ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಬ್ಯಾಂಕ್‌ಗಳ ಎಲ್ಲಾ ರಜಾದಿನಗಳನ್ನು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಧಾರ್ಮಿಕ ಹಬ್ಬಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಬಾರಿ ಭಾನುವಾರ ಮತ್ತು ಶನಿವಾರ ಹೊರತುಪಡಿಸಿ ಬ್ಯಾಂಕ್‌ಗಳು 6 ಹೆಚ್ಚುವರಿ ರಜೆಗಳನ್ನು ಹೊಂದಿವೆ. ಈ ಆರರ ಜೊತೆಯಲ್ಲಿ ನಾಲ್ಕು ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಮೇ 1 ಕಾರ್ಮಿಕ ದಿನವಾಗಿದ್ದು, ತಿಂಗಳ ಮೊದಲ ದಿನವೇ ಬ್ಯಾಂಕ್ ಕ್ಲೋಸ್ ಆಗಿರುತ್ತದೆ. ಬ್ಯಾಂಕ್‌ಗಳಿಗೆ ಸಂಬಂಧಿಸಿದ ರಜೆ ದಿನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮೇ 1 ರಿಂದ ಹಿರಿಯ ನಾಗರಿಕರಿಗೆ ನೆಮ್ಮದಿ, ಬದಲಾಗಲಿದೆ ಈ ಎಲ್ಲ ನಿಯಮ
ಮೇ-2025ರ ಬ್ಯಾಂಕ್ ರಜಾದಿನಗಳು
ಮೇ 1 (ಗುರುವಾರ): ಮಹಾರಾಷ್ಟ್ರ ದಿನಾಚರಣೆ, ಕಾರ್ಮಿಕರ ದಿನಾಚರಣೆ. ಈ ದಿನದಂದು ಬೇಲಾಪುರ, ಬೆಂಗಳೂರು, ಚೆನ್ನೈ, ಗುವಾಹಟಿ, ಹೈದರಾಬಾದ್ (ಆಂಧ್ರ ಪ್ರದೇಶ) ಇಂಫಾಲ್, ಕೊಚ್ಚಿ, ಕೋಲ್ಕತ್ತಾ, ಮುಂಬೈ, ನಾಗ್ಪುರ, ಪಣಜಿ, ಪಾಟ್ನ, ತಿರುವನಂತಪುರದಲ್ಲಿ ಬ್ಯಾಂಕ್ ಬಂದ್ ಇರುತ್ತದೆ.
ಮೇ 9 (ಶುಕ್ರವಾರ): ರವೀಂದ್ರನಾಥ್ ಟ್ಯಾಗೋರ್ ಜನ್ಮದಿನ. ಈ ದಿನದಂದು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ.
ಮೇ 12 (ಸೋಮವಾರ): ಬುದ್ಧ ಪೂರ್ಣಿಮಾ ನಿಮಿತ್ ಬ್ಯಾಂಕ್ ರಜೆ. ಅರ್ಗತಲಾ, ಐಜಾಲ್, ಬೋಪಾಲ್, ಡೆಹರಾಡೂನ್, ಇಟಾನಗರ,ಮ ಜಮ್ಮು, ಕಾನ್ಪುರ, ಕೋಲ್ಕತ್ತಾ, ಶಿಮ್ಲಾ, ನವದೆಹಲಿಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ,
ಮೇ 16 (ಶುಕ್ರವಾರ): ಸಿಕ್ಕಿಂ ರಾಜ್ಯ ದಿವಸ. ಈ ದಿನದಂದು ಸಿಕ್ಕಿಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
ಮೇ 26 (ಸೋಮವಾರ): ಖಾಜಿ ನಜರೂಲ್ಲಾ ಜನ್ಮದಿನ. ಈ ದಿವಸದಂದು ತ್ರಿಪುರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಮೇ 29 (ಗುರುವಾರ): ಮಹಾರಾಣಾ ಪ್ರತಾಪ್ ಜಯಂತಿ. ಈ ದಿನದಂದು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
4 ಭಾನುವಾರ ಮತ್ತು 2 ಶನಿವಾರ
ಮೇ 4, ಮೇ 11, ಮೇ 18 ಮತ್ತು ಮೇ 25ರಂದು ಭಾನುವಾರ ಆಗಿದ್ದು, ದೇಶದಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಮೇ 10 ಮತ್ತು ಮೇ 24ರಂದು ಎರಡು ಮತ್ತು ನಾಲ್ಕನೇ ಶನಿವಾರವಾಗಿದ್ದು, ಈ ದಿನವೂ ಬ್ಯಾಂಕ್‌ಗಳು ದೇಶದಲ್ಲಿ ಮುಚ್ಚಲ್ಪಟ್ಟಿರುತ್ತವೆ.
ಇದನ್ನೂ ಓದಿ: ಕೇವಲ 82 ರೂ ಪ್ಲಾನ್, 11 ತಿಂಗಳ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಘೋಷಿಸಿದ ಜಿಯೋ
ಬ್ಯಾಂಕ್ ರಜೆಗಳ ವರ್ಗೀಕರಣ
ಭಾರತದಲ್ಲಿ ಬ್ಯಾಂಕ್ ರಜಾದಿನಗಳನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ರಜಾದಿನಗಳು ಮತ್ತು ಬ್ಯಾಂಕ್‌ಗಳ ಖಾತೆಗಳ ಮುಕ್ತಾಯದ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಕೆಲವು ರಜಾದಿನಗಳು ರಾಷ್ಟ್ರವ್ಯಾಪಿ ಅನ್ವಯವಾಗಿದ್ದರೆ, ಇತರವು ಪ್ರಾದೇಶಿಕ ಆಚರಣೆಗಳ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ನಿರ್ದಿಷ್ಟವಾಗಿರುತ್ತವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.