
ಇಂದು ಸಾಕಷ್ಟು ಜನರು ಸ್ವಂತ ಉದ್ಯಮ ಕಟ್ಟಿಕೊಳ್ಳುವ ಆಸೆ ಹೊಂದಿರುತ್ತಾರೆ. ಅವರಿಗೆ ಸಾಲವೇ ಸಿಗೋದಿಲ್ಲ. ಇಂದು ಸಾಕಷ್ಟು ಕಲಾವಿದರು ಕೂಡ ನಮಗೆ ಸಾಲ ಸಿಗೋದಿಲ್ಲ ಎಂದು ಹೇಳೋದುಂಟು. ಇನ್ನು ಜನಸಾಮಾನ್ಯರ ಕಥೆಯೂ ಅಷ್ಟೇ. ಅಷ್ಟಾಗಿ ಆದಾಯ, ಆಸ್ತಿ ಇರದ ಕಾರಣ ಸಾಲ ಸಿಗೋದಿಲ್ಲ. ಆದರೆ ಪ್ರಧಾನಮಂತ್ರಿ ಅವರು ಆರಂಭಿಸಿದ ಹೊಸ ಯೋಜನೆಯಿಂದ ಶ್ಯೂರಿಟಿಯೇ ಇಲ್ಲದೆ ಸಾಲ ಸಿಗುವುದು.
ಎಷ್ಟು ಸಾಲ ನೀಡಲಾಗಿದೆ?
ಮುದ್ರಾ ಯೋಜನೆಯು ಪ್ರಾರಂಭ ಆದಾಗಿನಿಂದ ₹33 ಲಕ್ಷ ಕೋಟಿ ರೂಪಾಯಿ ಮೌಲ್ಯದ 52 ಕೋಟಿಗೂ ಹೆಚ್ಚು ಅಸುರಕ್ಷಿತ ಸಾಲಗಳನ್ನು ವಿತರಿಸಲಾಗಿದೆ. ಇದನ್ನು ಸುಮಾರು 70% ಮಹಿಳೆಯರು, 50% SC/ST/OBC ಉದ್ಯಮಿಗಳು ಪ್ರಯೋಜನವನ್ನು ಪಡೆದಿದ್ದಾರೆ. ಮೊದಲ ಬಾರಿಗೆ ವ್ಯಾಪಾರ ಮಾಡುವವರಿಗೆ ₹10 ಲಕ್ಷ ಕೋಟಿ ಸಾಲ ನೀಡುವುದರ ಜೊತೆಯಲ್ಲಿ ಮೊದಲ ಮೂರು ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಬಿಹಾರದಂತಹ ರಾಜ್ಯಗಳು ಸುಮಾರು 6 ಕೋಟಿ ಸಾಲಗಳನ್ನು ಮಂಜೂರು ಮಾಡಿವೆ. ಇದು ಭಾರತದಾದ್ಯಂತ ಉದ್ಯಮಶೀಲತೆಯ ಬಲವಾದ ಮನೋಭಾವವನ್ನು ತೋರಿಸುತ್ತದೆ. ಜೀವನವನ್ನು ಪರಿವರ್ತಿಸುವಲ್ಲಿ ಮುದ್ರಾ ಯೋಜನೆಯು ಪ್ರಮುಖ ಪಾತ್ರ ಹೊಂದಿದೆ ಎಂದು ಪ್ರಧಾನ ಮಂತ್ರಿ x ಖಾತೆಯಲ್ಲಿ ಹೇಳಿದ್ದಾರೆ.
ಯಾವ ರೀತಿ ಸಾಲ ನೀಡಲಾಗುವುದು?
ಪ್ರಧಾನ ಮಂತ್ರಿಗಳು ಪ್ರಮುಖವಾಗಿ ಸಣ್ಣ ವ್ಯವಹಾರಗಳು, ಸೂಕ್ಷ್ಮ ಉದ್ಯಮಗಳಿಗೆ ಸಹಾಯ ಮಾಡಲು ಪ್ರಾರಂಭಿಸಿದ ಪ್ರಮುಖ ಯೋಜನೆ ಇದಾಗಿದೆ. ಸುಲಭವಾಗಿ ಸಾಲ ಪಡೆಯಲು ಒದ್ದಾಡುತ್ತಿದ್ದವರಿಗೆ ಸಹಾಯ ಆಗಲೆಂದೇ ಈ ಯೋಜನೆ ಆರಂಭಿಸಲಾಗಿದೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಣ್ಣ ಅಂಗಡಿ ಮಾಲೀಕರು, ಬೀದಿ ವ್ಯಾಪಾರಿಗಳು, ಸ್ಥಳೀಯ ಸೇವಾ ಪೂರೈಕೆದಾರರು ಅಷ್ಟು ಆದಾಯ ಇಲ್ಲದ ಕಾರಣಕ್ಕೆ ಅಥವಾ ಭದ್ರತೆ ಇಲ್ಲದ ಕಾರಣ ಅವರ ವ್ಯವಹಾರಗಳನ್ನು ಇನ್ನಷ್ಟು ಬೆಳೆಸಲು ಸಾಧ್ಯವಾಗಿರಲಿಲ್ಲ. ಈಗ ಈ ಮುದ್ರಾ ಯೋಜನೆ ಮೂಲಕ ಯಾವುದೇ ಶ್ಯೂರಿಟಿಯ ಅಗತ್ಯವಿಲ್ಲದೆ ಸಾಲಗಳನ್ನು ನೀಡಲಾಗುವುದು. ಇದರಿಂದಾಗಿ ಸಾಕಷ್ಟು ಜನರು ತಮ್ಮ ಸಣ್ಣ ವ್ಯವಹಾರಗಳನ್ನು ಪ್ರಾರಂಭಿಸಲು, ಬೆಳೆಸಲು ಸಾಧ್ಯವಾಯಿತು ಎನ್ನಬಹುದು.
ಯಾವೆಲ್ಲ ಬ್ಯುಸಿನೆಸ್ ಗೆ ಸಿಗುತ್ತೆ ಮುದ್ರಾ ಯೋಜನೆ ಅಡಿ ಸಾಲ?
ಮುದ್ರಾ ಯೋಜನೆ ಪರಿಣಾಮ ಏನು?
ಕಳೆದ 10 ವರ್ಷಗಳಲ್ಲಿ, ಮುದ್ರಾ ಯೋಜನೆಯು ತಳಮಟ್ಟದ ಉದ್ಯಮಶೀಲತೆಗೆ ಬಲವಾದ ನೆಲೆಯನ್ನು ಸೃಷ್ಟಿಸಿದೆ. ಅಲ್ಲಿ ಜನರು ತಮ್ಮದೇ ಆದ ಉದ್ಯಮವನ್ನು ಆರಂಭಿಸಬಹುದು, ಇತರರಿಗೆ ಉದ್ಯೋಗಗಳನ್ನು ನೀಡಲು ಸೃಷ್ಟಿ ಮಾಡಲೂಬಹುದು.
ಬದುಕು ಬದಲಾಯಿಸಿಕೊಂಡವರು ಇವರು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.